Category Archives: Blog

Your blog category

ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ, ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ – Kannada News | Indian Student Suicide in US: Unemployment and Debt Burden Drive Tragedy

ಕರ್ನೂಲ್, ಮೇ 1: ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ  ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ  ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ.

ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಮತ್ತು ಕುಟುಂಬವು ಹೊಂದಿದ್ದ ಸಾಲದ ಹೊರೆಯು ಚಂದು ಅವರ ಮೇಲೆ ತೀವ್ರ ಭಾವನಾತ್ಮಕ ಒತ್ತಡ ಹೇರಿತ್ತು. ಈ ನಿರಂತರ ಒತ್ತಡ ತಾಳಲಾರದೆ ಅವರು ಅಮೆರಿಕದಲ್ಲಿರುವ ತಮ್ಮ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದು ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದ್ದು, ಬಡ ಕುಟುಂಬಕ್ಕೆ ಇದನ್ನು ಭರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದೆ. ಕಳೆದ ಎರಡು ದಿನಗಳಲ್ಲಿ ಈಗಾಗಲೇ 76,000 ಡಾಲರ್​ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದರಲ್ಲಿ ಚಂದು ಅವರ ಕುಟುಂಬ ಮಾಡಿರುವ ಸಾಲವನ್ನು ತೀರಿಸಲು 25,000 ಡಾಲರ್​ ಹಣವನ್ನು ಅವರ ಹೆತ್ತವರಿಗೆ ನೀಡಲು ನಿರ್ಧರಿಸಲಾಗಿದೆ.

ಮತ್ತಷ್ಟು ಓದಿ: ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ

ಈ ಘಟನೆಯ ಕುರಿತು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಸಂತಾಪ ಸೂಚಿಸಿದ್ದು, ಮೃತದೇಹವನ್ನು ತಾಯ್ನಾಡಿಗೆ ತರಲು ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರ ಸಹಾಯ ಕೋರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ರಾಮ್ ಮೋಹನ್ ನಾಯ್ಡು ಅವರು, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮುದಾಯದ ಸದಸ್ಯರ ಪ್ರಕಾರ, ಚಂದು ಕೇವಲ ಒಬ್ಬ ವಿದ್ಯಾರ್ಥಿಯಲ್ಲದೆ ತನ್ನ ಕಿರಿಯ ಸಹೋದರ ಮತ್ತು ಸ್ನೇಹಿತರಿಗೆ ಆಧಾರಸ್ತಂಭವಾಗಿದ್ದರು. ಆದರೆ ವಿಧಿಯಾಟದಿಂದ ಆತನ ಬದುಕಿನ ಮಹತ್ವಾಕಾಂಕ್ಷೆಗಳು ಅರ್ಧಕ್ಕೇ ಮೊಟಕುಗೊಂಡಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಣಮಳೆಗೆ ಬೆಂಗಳೂರಿನ ಜನ ಹೈರಾಣು: ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ! – Kannada News | Namma Metro Record: Over 12.85 Lakh Passengers Travel in a Single Day Due to Bengaluru Rains

ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ!

Image Credit source: google Gemini

ಬೆಂಗಳೂರು, ಮೇ 01: ಸಿಲಿಕಾನ್ ಸಿಟಿಯಲ್ಲಿ ಕಳೆದ ಬುಧವಾರ ಸುರಿದ ಭಾರೀ ಮಳೆ ಮತ್ತು ರಸ್ತೆಗಳಲ್ಲಾದ ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾದ ಜನರು ಅಕ್ಷರಶಃ ಮೆಟ್ರೋ (Namma Metro) ಮೊರೆ ಹೋಗಿದ್ದಾರೆ. ರಸ್ತೆಗಳೆಲ್ಲಾ ತುಂಬಿ ಮೊಣಕಾಲು ತನಕ ನೀರು ಬಂದಿತ್ತು. ಏಕಾಏಕಿ ಸುರಿದ ಮಳೆಗೆ ಅದೆಷ್ಟೋ ವಾಹನಗಳು ಕೈ ಕೊಟ್ಟ ಕಾರಣಕ್ಕೆ ಜನ ಓಲಾ, ಊಬರ್ ಕಡೆ ಮುಖ ಮಾಡಿದರೆ, ಹಲವರಿಗೆ ಬುಕಿಂಗ್ ಸಮಸ್ಯೆ ಎದುರಾಗಿತ್ತು. ಸರಿ, ಇದೆಲ್ಲರ ಸಹವಾಸವೇ ಬೇಡವೆಂದ ಬೆಂಗಳೂರಿಗರು ಕೊನೆಗೆ ಕಡೆ ಶಿಫ್ಟ್ ಆಗಿದ್ದರು. ಈ ಹಿನ್ನೆಲೆ ಅವತ್ತು ಒಂದೇ ದಿನ 12.85 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಏಪ್ರಿಲ್ 29ರಂದು ‘ನಮ್ಮ ಮೆಟ್ರೋ’ ಇತಿಹಾಸದಲ್ಲೇ ಅತ್ಯಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ದಾಖಲೆಯ ಪ್ರಯಾಣಿಕರ ಸಂಖ್ಯೆ

ಸಾಮಾನ್ಯವಾಗಿ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ, ಜನ ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕಾಗಿ ಮೆಟ್ರೋವನ್ನು ಆಯ್ದುಕೊಂಡಿದ್ದಾರೆ. ಅಂದು ಒಟ್ಟು 12,85,108 ಪ್ರಯಾಣಿಕರು ಮೆಟ್ರೋ ಬಳಸಿದ್ದು, ಇದು ಈ ಹಿಂದಿನ ಗರಿಷ್ಠ ದಾಖಲೆಯಾದ 10.87 ಲಕ್ಷವನ್ನು ಬೃಹತ್ ಅಂತರದಿಂದ ಹಿಂದಿಕ್ಕಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಬಿಸಿಲಿನ ತಾಪ ವಿಪರೀತವಾಗಿದ್ದ ಸಂದರ್ಭದಲ್ಲಿ, ಜನರು ಬೈಕ್ ಮತ್ತು ಸ್ಕೂಟರ್‌ಗಳನ್ನು ಬಿಟ್ಟು ಎಸಿ ಸೌಲಭ್ಯವಿರುವ ಬಿಎಂಟಿಸಿ ಬಸ್‌ಗಳು ಹಾಗೂ ಮೆಟ್ರೋದತ್ತ ಮುಖ ಮಾಡಿದ್ದರು.

ಇದನ್ನೂ ಓದಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!

ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜನಜಂಗುಳಿ

ಇದೇ ವೇಳೆ ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮತ್ತು ಆರ್.ವಿ. ರಸ್ತೆಯ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿತ್ತು. ಸುಮಾರು 2.52 ಲಕ್ಷ ಪ್ರಯಾಣಿಕರು ಈ ನಿಲ್ದಾಣಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಮಳೆಯ ಕಾರಣದಿಂದ ಆಟೋ ಮತ್ತು ಟ್ಯಾಕ್ಸಿಗಳ ದರ ಏರಿಕೆ ಹಾಗೂ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಜನರು ಮೆಟ್ರೋ ಕಡೆ ಮುಖ ಮಾಡಿದ್ದೇ ಈ ದಾಖಲೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು! ಪ್ರಿಯಕರನ ಮೇಲಿನ ಅನುಮಾನವೇ ಮುಳುವಾಯ್ತಾ? – Kannada News | Bengaluru Crime: Meghalaya Woman in Live in Relationship ends life Over Suspicion

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು!

ಬೆಂಗಳೂರು, ಮೇ 01: ನಗರದಲ್ಲಿ ಲಿವಿನ್ ರಿಲೇಷನ್‌ಶಿಪ್​ನಲ್ಲಿದ್ದ (Live-in Relationship) ಜೋಡಿಗಳ ಜಗಳ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಅನುಮಾನದಿಂದ ಮೇಘಾಲಯ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ಸಂಭವಿಸಿದೆ.

ಪ್ರೇಮಿಗಳ ನಡುವೆ 8 ವರ್ಷಗಳ ಅಂತರ

ಮೃತ ಯುವತಿಯನ್ನು ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಎಂದು ಗುರುತಿಸಲಾಗಿದೆ. ಈಕೆ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಳು. ಮಣಿಪುರ ಮೂಲದ ನವಾಜ್ ಶರೀಫ್ (26) ಎಂಬಾತನ ಜೊತೆ ಅಗತ ಕಳೆದ ಮೂರು ವರ್ಷಗಳಿಂದ ಸಂಜೀವಿನಿ ನಗರದ ಬಾಡಿಗೆ ಮನೆಯೊಂದರಲ್ಲಿ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಳು ಎಂದು ಹೇಳಲಾಗಿದೆ. ಅಗತ ಮತ್ತು ಆಕೆಯ ಬಾಯ್​ಫ್ರೆಂಡ್​ ನಡುವೆ 8 ವರ್ಷಗಳ ಅಂತರವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಹಾಗೂ ಗಲಾಟೆಗಳೂ ನಡೆಯುತ್ತಿದ್ದವು. ನವಾಜ್ ಶರೀಫ್ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಿದರೆ ಅಗತ ಅತಿಯಾಗಿ ಅನುಮಾನ ಪಡುತ್ತಿದ್ದರು ಎನ್ನಲಾಗಿದೆ.

ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಳೆದ ಬುಧವಾರ ರಾತ್ರಿ ನವಾಜ್ ಶರೀಫ್ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಅಗತ, ನೀನು ಯಾವುದೋ ಹುಡುಗಿ ಜೊತೆ ಮಾತನಾಡುತ್ತಿದ್ದೀಯಾ ಎಂದು ಜಗಳ ತೆಗೆದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ನವಾಜ್ ಶರೀಫ್ ಮನೆಯಿಂದ ಹೊರಗೆ ಹೋಗಿದ್ದಾನೆ. ಈ ವೇಳೆ ಅಗತ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವಾಜ್ ಶರೀಫ್ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ ಜೈಲಿನಲ್ಲಿದ್ದುಕೊಂಡೇ ಪತ್ನಿ ಜೊತೆ ವೀಡಿಯೋ ಕಾಲ್​ನಲ್ಲಿ ರೊಮ್ಯಾನ್ಸ್! ವೀಡಿಯೋ ವೈರಲ್

ಘಟನೆಗೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆಯೇ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ಪೊಲೀಸರು, ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅನುಮಾನದ ಸುಳಿಗೆ ಸಿಲುಕಿ ಮೂರು ವರ್ಷಗಳ ಸಂಬಂಧವೊಂದು ಹೀಗೆ ದುರಂತಮಯವಾಗಿ ಕೊನೆಗೊಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi Male: ತುಳಸಿ ಮಾಲೆಯ ಆಧ್ಯಾತ್ಮಿಕ ಮಹತ್ವ, ಧರಿಸುವ ವಿಧಾನ ಮತ್ತು ಪ್ರಯೋಜನಗಳು – Kannada News | Tulasi Mala: Spiritual Significance, Benefits and How to Wear for Peace

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ತುಳಸಿ ಸಸ್ಯವನ್ನು ‘ವಿಷ್ಣು ಪ್ರಿಯ’ ಎಂದು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದು, ತುಳಸಿ ಕಾಂಡಗಳಿಂದ ತಯಾರಿಸಿದ ಮಾಲೆಯನ್ನು ಧರಿಸುವುದು ಕೇವಲ ಒಂದು ಸಂಪ್ರದಾಯವಲ್ಲ; ಅದು ಮನಸ್ಸಿನ ಶಾಂತಿ ಮತ್ತು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ನಾಂದಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿ ನೆಲೆಸಿರುವ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ಬಲವಾದ ವಿಶ್ವಾಸವೂ ನಮ್ಮಲ್ಲಿದೆ.

ತುಳಸಿ ಮಾಲೆಯನ್ನು ಧರಿಸುವ ಪ್ರಕ್ರಿಯೆಯನ್ನು ಕೇವಲ ಆಭರಣದಂತೆ ನೋಡದೆ, ಒಂದು ಶಿಸ್ತುಬದ್ಧ ಆಧ್ಯಾತ್ಮಿಕ ಅಭ್ಯಾಸವಾಗಿ ಪರಿಗಣಿಸಬೇಕು. ಈ ಮಾಲೆಯನ್ನು ಧರಿಸುವ ವ್ಯಕ್ತಿಯು ತನ್ನ ದೈನಂದಿನ ಜೀವನದಲ್ಲಿ ಪೂರ್ಣ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ವಿಶೇಷವಾಗಿ ಮಾಂಸಾಹಾರ ಮತ್ತು ಮದ್ಯಪಾನದಂತಹ ತಾಮಸಿಕ ಅಭ್ಯಾಸಗಳಿಂದ ದೂರವಿದ್ದು, ಸಾತ್ವಿಕ ಮತ್ತು ಮಿತವಾದ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು.

ಮಾಲೆ ಧರಿಸಿದ ವ್ಯಕ್ತಿಯ ನಡವಳಿಕೆಯೂ ಅಷ್ಟೇ ಪವಿತ್ರವಾಗಿರಬೇಕು; ಮಾತಿನಲ್ಲಿ ಸದಾ ಪ್ರಾಮಾಣಿಕತೆ ಇರಬೇಕು ಮತ್ತು ಇತರರನ್ನು ನೋಯಿಸುವಂತಹ ಅಸಭ್ಯ ಮಾತುಗಳನ್ನು ಬಳಸಬಾರದು. ದೇವರ ನಾಮವನ್ನು ಸದಾ ಜಪಿಸುವುದು ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜೀವನದ ಏರಿಳಿತಗಳಲ್ಲಿ ಅಥವಾ ಅಶೌಚದ ಸಂದರ್ಭಗಳಲ್ಲಿ ಮಾಲೆಯನ್ನು ತಾತ್ಕಾಲಿಕವಾಗಿ ತೆಗೆದಿಡಬೇಕಾಗಿ ಬಂದರೆ, ಪುನಃ ಧರಿಸುವ ಮುನ್ನ ಶುದ್ಧೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಈ ಮಾಲೆಯ ನಿರ್ವಹಣೆಯ ಬಗ್ಗೆಯೂ ಶಾಸ್ತ್ರಗಳಲ್ಲಿ ಸ್ಪಷ್ಟ ನಿರ್ದೇಶನಗಳಿವೆ; ಮುರಿದ ಮಣಿಗಳು ಅಥವಾ ಹಾನಿಗೊಳಗಾದ ದಾರವಿರುವ ಮಾಲೆಗಳನ್ನು ಧರಿಸಬಾರದು. ಕುತ್ತಿಗೆಗೆ ಧರಿಸಲು ಅನಾನುಕೂಲವಾದರೆ ಕೈಯಲ್ಲಿಯೂ ಇದನ್ನು ಧರಿಸಬಹುದು, ಆದರೆ ಸದಾ ಗೌರವದಿಂದಲೇ ನಿರ್ವಹಿಸಬೇಕು. ಆಧ್ಯಾತ್ಮಿಕ ಗುರುಗಳಿಂದ ಅಥವಾ ಪವಿತ್ರ ಕ್ಷೇತ್ರಗಳಿಂದ ಪಡೆದ ಮಾಲೆಯನ್ನು ಧರಿಸುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.

ಪವಿತ್ರ ದಿನಗಳಾದ ಗುರುವಾರ, ಏಕಾದಶಿ ಅಥವಾ ಪೌರ್ಣಮಿಯಂದು ಸ್ನಾನದ ನಂತರ ಪ್ರಾರ್ಥನೆ ಸಲ್ಲಿಸಿ ಈ ಮಾಲೆಯನ್ನು ಧರಿಸುವುದು ಅತ್ಯಂತ ಶುಭಕರ. ಹೀಗೆ ಶ್ರದ್ಧೆಯಿಂದ ತುಳಸಿ ಮಾಲೆ ಧರಿಸುವುದರಿಂದ ವ್ಯಕ್ತಿಯ ಆಲೋಚನೆಗಳಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗಿ, ಭಕ್ತಿ ಮತ್ತು ಮಾನಸಿಕ ಶಾಂತಿ ವೃದ್ಧಿಸುತ್ತದೆ. ಇದು ಕೇವಲ ಧಾರ್ಮಿಕ ಚಿಹ್ನೆಯಲ್ಲ, ಬದಲಾಗಿ ವ್ಯಕ್ತಿಯನ್ನು ಉದಾತ್ತ ಮತ್ತು ಶಿಸ್ತುಬದ್ಧ ಜೀವನದತ್ತ ಕೊಂಡೊಯ್ಯುವ ಶಕ್ತಿಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್ – Kannada News | BESCOM Electricity Price Hike: Power Tariff Increased by 56 Paise per Unit in Bengaluru and 7 Other Districts from Today

ಬೆಂಗಳೂರು, ಮೇ 1: ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಇಂದಿನಿಂದ (ಮೇ 1) ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರಿಗೆ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ. ಈಗಾಗಲೇ ಗ್ಯಾಸ್ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರಿಗೆ ಈ ವಿದ್ಯುತ್ ದರ ಏರಿಕೆ ಮತ್ತೊಂದು ಹೊಡೆತವಾಗಿದೆ. ಬೆಸ್ಕಾಂ ಸಂಸ್ಥೆಯು ಸುಮಾರು 2000 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ (KERC) ಅಸ್ತು ಎಂದಿದೆ. ಇಂದಿನಿಂದ ಅನ್ವಯವಾಗುವಂತೆ ಮೀಟರ್ ರೀಡಿಂಗ್‌ಗೆ ಹೊಸ ದರಗಳು ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಓರ್ವಳ ನಂಬಿಸಿ ದೈಹಿಕ ಸಂಪರ್ಕ, ಈಗ ಮತ್ತೊಬ್ಬಳ ಜೊತೆ ನಿಶ್ಚಿರ್ತಾರ್ಥ: ಯುವತಿ ಬಾಳಲ್ಲಿ ಕಾಂಗ್ರೆಸ್​​ ನಾಯಕನ ಚೆಲ್ಲಾಟ? – Kannada News | Former T. Narasipura Municipal President Accused of Love, Physical Relationship and Dhoka

ಮೈಸೂರು, ಮೇ 1: ಟಿ. ನರಸೀಪುರ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್​​ ನಾಯಕ ಮದನ್ ರಾಜ್ ವಿರುದ್ಧ ಲವ್ ಸೆಕ್ಸ್ ದೋಖಾ ಆರೋಪದಡಿ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳು ಹಲವು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಮದನ್ ರಾಜ್ ದೈಹಿಕ ಸಂಬಂಧ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿರೋದಾಗಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಮದನ್​​ ರಾಜ್​​ ಈಗ ಮತ್ತೋರ್ವ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನೆಪ ಹೇಳಿ, ಇಬ್ಬರು ಜೊತೆಯಾಗಿ ವಿಷ ಕುಡಿಯೋಣ ಎಂದು ಹೇಳಿ ಯುವತಿಗೆ ವಿಷ ಕುಡಿಸಿದ್ದ ಆರೋಪವೂ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಂಗಾಳ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ದಿಢೀರ್ ಔಟ್, ಪ್ರದೀಪ್ ಗುಪ್ತಾ ನಿರ್ಧಾರದ ಹಿಂದೆ ಅಡಗಿದೆಯೇ ಸ್ಫೋಟಕ ಸತ್ಯ? – Kannada News | Mystery Behind Bengal Exit Poll Delay: Violence and Survey Challenges Revealed

ಮಮತಾ ಪ್ರಧಾನಿ ಮೋದಿImage Credit source: Awaz The Voice

ಕೋಲ್ಕತ್ತಾ, ಮೇ 1: ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ(West Bengal)ದ ಚುನಾವಣೋತ್ತರ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯು ಹಿಂದೆ ಸರಿದಿದೆ. ತಮಿಳುನಾಡು, ಆಸ್ಸಾಂ, ಪುದುಚೇರಿ ಹಾಗೂ ಕೇರಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಇದೇ ಸಂಸ್ಥೆಯು ತನ್ನ ಸಮೀಕ್ಷಾ ವರದಿಯನ್ನು ನೀಡಿದೆ. ಆದರೆ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿ ತೆಗೆದುಕೊಂಡ ತೀರ್ಮಾನವು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.

ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಪ್ರದೀಪ್‌ ಗುಪ್ತಾ ಅವರು ತಮ್ಮ ಸಮೀಕ್ಷಾ ವರದಿಯನ್ನು ತಡೆಹಿಡಿಯುವ ನಿರ್ಧಾರ ಮಾಡುವ ಮುನ್ನ ಎರಡು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದು ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಚುನಾವಣೆ ನಡೆಯುವ ನಾಲ್ಕು ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ರಾಜಕಿಯೇತರ ಸಮೀಕ್ಷೆಯೊಂದನ್ನು ಮಾಡುವಾಗ ತನ್ನ ಸಿಬ್ಬಂದಿಯನ್ನು ಜೈಲಿಗೆ ಹಾಕಲಾಗಿತ್ತು. ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಳ್ಳಬೇಕಾಯಿತು ಎಂದು ಪ್ರದೀಪ್‌ ಗುಪ್ತಾ ತಿಳಿಸಿದ್ದಾರೆ. ಇದಲ್ಲದೇ ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕIೈ ಮನಸ್ಥಿತಿ ಬಗ್ಗೆ ಇನ್ನೊಂದು ಅಂಶ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮತ ಎಣಿಕೆಗೂ ಮುನ್ನ ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ

ಸಮೀಕ್ಷೆಗೆ ಜನರನ್ನು ಭೇಟಿಯಾದಾಗ ಶೇ.70ಕ್ಕೂ ಅಧಿಕ ಜನರು ತಮ್ಮ ಅಭಿಪ್ರಾಯವನ್ನು ಹೇಳಲು ಹೆದರುತ್ತಿದ್ದರು ಅಥವಾ ಬಾಯಿ ಬಿಡುತ್ತಿರಲಿಲ್ಲ. ಹೌದು ಅಥವಾ ಇಲ್ಲ ಎನ್ನುವ ಪ್ರಶ್ನೆಗೂ ಉತ್ತರಿಸಲು ನಿರಾಕರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ನಾನು ಹೇಗೆ ವೈಜ್ಞಾನಿಕವಾದ ಸಮೀಕ್ಷೆಯನ್ನು ಸಿದ್ಧಪಡಿಸಲಿ ಎಂದು ಪ್ರದೀಪ್‌ ಗುಪ್ತಾ ಪ್ರಶ್ನಿಸಿದ್ದಾರೆ. ಇದೇ ಕಾರಣದಿಂದ ಅವರು ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷಾ ವರದಿಯನ್ನು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.

ಹೀಗಿರುವಾಗ ಚುನಾವಣೋತ್ತರ ಸಮೀಕ್ಷೆ ಹಾಗೂ ಪಶ್ಚಿಮ ಬಂಗಾಳದ ಬಗ್ಗೆ ಎರಡು ರೀತಿಯ ಪ್ರಶ್ನೆಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ಎಂದು ಭಾಷಣ ಮಾಡುವ ಮಮತಾ ಬ್ಯಾನರ್ಜಿ ಹಾಗೂ ಅವರ ಸಹೋದ್ಯೋಗಿ ರಾಜಕೀಯ ಪಕ್ಷಗಳು ತಮ್ಮದೇ ರಾಜ್ಯದಲ್ಲಿ ಇಂತಹ ಭಯಭೀತ ವಾತಾವರಣವನ್ನು ಹೊಂದಿದ್ದರೂ ಮೌನವಾಗಿರುವುದೇಕೆ? ಜನರ ವಾಕ್‌ ಸ್ವಾತಂತ್ರ್ಯಕ್ಕೂ ಬೆಲೆಯಿಲ್ಲದ ರೀತಿ ಆಡಳಿತ ನಡೆಸಲಾಗುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಇನ್ನೊಂದೆಡೆ ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಗೆ ಶೇ.70ರಷ್ಟು ಜನರು ಅಭಿಪ್ರಾಯ ನೀಡಲು ಹಿಂದೇಟು ಹಾಕಿದ್ದಾರೆ ಎನ್ನುವುದಾದರೆ, ಉಳಿದ ಸಂಸ್ಥೆಗಳು ಹೇಗೆ ಚುನಾವಣೋತ್ತರ ಸಮೀಕ್ಷೆ ನಡೆಸಿದವು ಹಾಗೂ ಅದರ ನಿಖರತೆ ಏನು ಎಂದು ಪ್ರಶ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು? – Kannada News | Michael movie collection report, how much it gets in India on first week

ಮೈಕಲ್ ಜಾಕ್ಸನ್ (Michael) ಅವರ ಜೀವನ ಆಧಾರಿಸಿದ ಸಿನಿಮಾ ‘ಮೈಕಲ್’ ಏಪ್ರಿಲ್ 24 ರಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು, ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದು, ಏಳು ದಿನಗಳಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದೆ. ಕೇವಲ ಏಳೇ ದಿನದಲ್ಲಿ ‘ಮೈಖಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲ ಭಾರತದಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದೆ ಈ ಸಿನಿಮಾ.

ಮೈಖಲ್ ಜಾಕ್ಸನ್ ಅವರ ಸಹೋದರನ ಪುತ್ರ ಜಫಾರ್ ಜಾಕ್ಸನ್ ತಮ್ಮ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೇವಲ ಏಳು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 2600 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ‘ಮೈಖಲ್’ ಸಿನಿಮಾ ಗಳಿಸಿದ್ದು, ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯನ್ನು ‘ಮೈಖಲ್’ ಸಿನಿಮಾ ಸಹ ಸೇರಿಕೊಂಡಿದ್ದು, ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಿನಿಮಾದ ಗಳಿಕೆ ದಿನೇ-ದಿನೇ ಹೆಚ್ಚಾಗುತ್ತಿದೆ. ಈ ಸಿನಿಮಾ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಬಹುದು ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇದನ್ನೂ ಓದಿ:ಮೂರೇ ದಿನಕ್ಕೆ 2100 ಕೋಟಿ ಗಳಿಸಿದ ‘ಮೈಖಲ್’: ಭಾರತದಲ್ಲಿ ಎಷ್ಟು?

ಭಾರತದಲ್ಲಿ ಸಹ ಮೈಖಲ್ ಜಾಕ್ಸನ್​​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗಾಗಿ ಭಾರತದಲ್ಲೂ ಸಹ ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ‘ಧುರಂಧರ್ 2’, ‘ಭೂತ್ ಬಂಗ್ಲ’ ಇನ್ನಿತರೆ ಸಿನಿಮಾಗಳ ಪ್ರಬಲ ಸ್ಪರ್ಧೆಯ ನಡುವೆಯೂ ಸಹ ‘ಮೈಖಲ್’ ಸಿನಿಮಾ ಭಾರತದಲ್ಲಿ ಒಂದು ವಾರಕ್ಕೆ 32 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ದೊಡ್ಡ ಮೊತ್ತ ಅಲ್ಲದಿದ್ದರೂ ಕಳಪೆ ಪ್ರದರ್ಶನವಂತೂ ಅಲ್ಲ. ‘ಸ್ಪೈಡರ್​​ಮ್ಯಾನ್’, ‘ಅವೇಂಜರ್ಸ್’ ಇನ್ನಿತರೆ ಕೆಲ ಸಿನಿಮಾಗಳು ಭಾರತದಲ್ಲಿ 100 ಕೋಟಿ, 200 ಕೋಟಿ ಗಳಿಸಿದ ಉದಾಹರಣೆಗಳೂ ಇವೆ. ಆದರೆ ‘ಮೈಖಲ್’ ಭಾರತದಲ್ಲಿ 150 ಕೋಟಿ ಗಳಿಕೆ ದಾಟುವುದು ತುಸು ಅನುಮಾನವೇ ಎನ್ನಲಾಗುತ್ತಿದೆ.

‘ಮೈಖಲ್’ ಸಿನಿಮಾವು ವಿಶ್ವ ವಿಖ್ಯಾತ ಪಾಪ್ ಸ್ಟಾರ್ ಮೈಖಲ್ ಜಾಕ್ಸನ್ ಜೀವನ ಕುರಿತ ಕತೆಯನ್ನು ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಸಿನಿಮಾನಲ್ಲಿ ಮೈಖಲ್ ಅವರ ಆರಂಭಿಕ ಜೀವನದ ಕತೆಯನ್ನಷ್ಟೆ ತೋರಿಸಲಾಗಿದೆ. ಮೈಖಲ್ ಅವರ ಹಲವು ಹಾಡುಗಳನ್ನು ಸಿನಿಮಾನಲ್ಲಿ ಬಳಸಿಕೊಳ್ಳಲಾಗಿದೆ. ಅವರ ಬಾಲ್ಯ, ಬಾಲ್ಯದಲ್ಲಿ ಅನುಭವಿಸಿದ ನೋವುಗಳು, ಸಂಗೀತದ ಬಗೆಗಿನ ಆಸಕ್ತಿ, ಸ್ಟಾರ್ ಆಗಿ ಬೆಳೆದ ರೀತಿ ಇನ್ನೂ ಹಲವು ವಿಷಯಗಳನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಸಿನಿಮಾದ ಎರಡನೇ ಭಾಗದಲ್ಲಿ ಮೈಖಲ್ ಅವರ ಜೀವನದ ಕರಾಳ ದಿನಗಳು, ಆ ಸಮಯದಲ್ಲಿ ಮೈಖಲ್ ಅನುಭವಿಸಿದ ನೋವು ಇನ್ನಿತರೆಗಳನ್ನು ತೋರಿಸಲಾಗುತ್ತದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬ್ರೌನ್ ಬಾಯ್ ಎಂದು ಕರೀತಿದ್ರು, ಜೆಪಿ ಮೋರ್ಗನ್ ಹಿರಿಯ ಮಹಿಳಾ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ – Kannada News | JPMorgan Controversy: Senior Executive Faces Harassment Lawsuit by Junior Colleague

ನ್ಯಾಯಾರ್ಕ್​, ಮೇ 01: ವಿಶ್ವದ ಅತಿದೊಡ್ಡ ಬ್ಯಾಂಕಿಂಗ್ ಸಮೂಹವಾದ ಜೆಪಿ ಮಾರ್ಗನ್ ಚೇಸ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದೆ. ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ ಅವರು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕಿರಿಯ ಸಹೋದ್ಯೋಗಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ನ್ಯೂಯಾರ್ಕ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. 37 ವರ್ಷದ ಲೋರ್ನಾ ಹಜ್ದಿನಿ ಅವರು ಬ್ಯಾಂಕಿನ ಲಿವರೇಜ್ಡ್ ಫೈನಾನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸಹೋದ್ಯೋಗಿಯೊಬ್ಬರು ನೀಡಿರುವ ದೂರಿನಲ್ಲಿ ಈ ಕೆಳಗಿನ ಗಂಭೀರ ಅಂಶಗಳನ್ನು ಉಲ್ಲೇಖಿಸಲಾಗಿದೆ.

ತಿಂಗಳುಗಳ ಕಾಲ ತಾವು ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳವನ್ನು ಅನುಭವಿಸಿದ್ದಾಗಿ ದೂರುದಾರರು ಆರೋಪಿಸಿದ್ದಾರೆ. ಬಡ್ತಿ ಮತ್ತು ವೃತ್ತಿಜೀವನದ ಬೆಳವಣಿಗೆಗೆ ಬದಲಾಗಿ ಲೋರ್ನಾ ಅವರು ಹಲವಾರು ಅವಿವೇಕದ ಬೇಡಿಕೆಗಳನ್ನು ಮುಂದಿಟ್ಟು ಒತ್ತಡ ಹೇರುತ್ತಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ದೂರುದಾರರು ಜನಾಂಗೀಯ ನಿಂದನೆ ಮತ್ತು ಅವಹೇಳನಕಾರಿ ಮಾತುಗಳನ್ನು ಎದುರಿಸಬೇಕಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.

ಬೇಡಿಕೆಗಳನ್ನು ವಿರೋಧಿಸಿದರೆ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ಕೆಲಸದಿಂದ ವಜಾಗೊಳಿಸುವ ಬೆದರಿಕೆಗಳನ್ನು ಹಾಕಲಾಗಿತ್ತು. ಪದೇ ಪದೇ ನಿರಾಕರಿಸಿದರೂ ಮಾನಸಿಕ ಒತ್ತಡ ಮುಂದುವರಿದ ಹಿನ್ನೆಲೆಯಲ್ಲಿ, ದೂರುದಾರರು ಬ್ಯಾಂಕ್ ತೊರೆದು ಬೇರೆಡೆ ಕೆಲಸ ಹುಡುಕಲು ಪ್ರಯತ್ನಿಸಿದ್ದರು. ಆದರೆ, ಆ ಸಂದರ್ಭದಲ್ಲಿಯೂ ಹೊಸ ಉದ್ಯೋಗ ದೊರೆಯದಂತೆ ಅಡ್ಡಿಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ: ಇಬ್ಬರು ಡೆಲಿವರಿ ಬಾಯ್ಸ್ ಅರೆಸ್ಟ್​​

ಈ ಎಲ್ಲಾ ಆರೋಪಗಳನ್ನು ಜೆಪಿ ಮೋರ್ಗನ್ ಚೇಸ್ ಸಾರಾಸಗಟಾಗಿ ನಿರಾಕರಿಸಿದೆ. ತನಿಖೆಗೆ ಹಲವಾರು ಉದ್ಯೋಗಿಗಳು ಸಹಕರಿಸಿದರೂ, ದೂರುದಾರರು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಕಂಪನಿ ಹೇಳಿದೆ.

ದೂರುದಾರರು ತಮಗೆ ಉಂಟಾದ ಮಾನಸಿಕ ಯಾತನೆ, ಆರ್ಥಿಕ ನಷ್ಟ ಮತ್ತು ಖ್ಯಾತಿಗೆ ಆದ ಹಾನಿಗಾಗಿ ದಂಡನಾತ್ಮಕ ಪರಿಹಾರವನ್ನು (Punitive Damages) ಕೋರಿದ್ದಾರೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಕೆಲಸದ ಸ್ಥಳದ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಕಾರ್ಪೊರೇಟ್ ವಲಯದಲ್ಲಿ ಉನ್ನತ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಚರ್ಚೆಗೆ ಈ ಪ್ರಕರಣವು ಹೊಸ ಆಯಾಮ ನೀಡಿದೆ. ಸಂಸ್ಥೆಯ ಪಾರದರ್ಶಕತೆ ಮತ್ತು ಉದ್ಯೋಗಿಗಳ ಸುರಕ್ಷತೆಯ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ಪ್ರಶ್ನೆಗಳು ಎದ್ದಿವೆ. ಇತ್ತೀಚೆಗಷ್ಟೇ ಭಾರತದದ ಟಿಸಿಎಸ್​ ಕಂಪನಿಯಲ್ಲೂ ಕೂಡ ಇಂಥದ್ದೇ ಪ್ರರಕಣ ದಾಖಲಾಗಿತ್ತು. ಹಲವು ಜನರನ್ನು ಮತಾಂತರಗೊಳಿಸಲು ಪ್ರಯತ್ನಿಸಿದ್ದರು, ಇನ್ನೊಂದಷ್ಟು ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ

ಕುರಿ ಪ್ರತಾಪ್ ಅವರು ‘ಜೋಡಿ ನಂಬರ್ 1’ ಶೋನಲ್ಲಿ ನಿರೂಪಕರಾಗಿದ್ದಾರೆ. ವೇದಿಕೆ ಮೇಲೆ ಅವರ ಮಗನಿಗೆ ಹೆಣ್ಣು ನೋಡುವ ಶಾಸ್ತ್ರ ನಡೆದಿದೆ. ಹುಡುಗಿ ರೂಪದಲ್ಲಿ ಬಂದಿದ್ದು ಮಿಮಿಕ್ರಿ ಗೋಪಿ ಅವರು.  ಫನ್ ರೂಪದಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಸಖತ್ ಫನ್ ರೂಪದಲ್ಲಿ ಈ ವಿಡಿಯೋ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link