ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದ ಕಾರ್ಯಕ್ರಮವೊಂದರಲ್ಲಿ ಹಳದಿ ಸೀರೆಯಲ್ಲಿ ಕಂಗೊಳಿಸಿದ ಸಮಂತಾ, ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಸೀಟಿ, ಚಪ್ಪಾಳೆ ಮುಗಿಲು ಮುಟ್ಟಿತ್ತು. ಇದೇ ಖುಷಿಯಲ್ಲಿ ಮಾತನಾಡಿದ ಸಮಂತಾ, ತಮ್ಮ ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾ ತೆಲುಗಿನಲ್ಲಿ ಖಡಕ್ ಡೈಲಾಗ್ ಒಂದನ್ನು ಹೊಡೆದಿದ್ದಾರೆ. ‘ಈ ಸಿನಿಮಾದಿಂದ ನಾವು ಒಬ್ಬೊಬ್ಬರಿಗೂ ಕೊಡ್ತೀವಿ ನೋಡಿ (ಒಕ್ಕೊಕ್ಕರಿನಿ ಕೊಡ್ತಾಮ್ ಚೂಡು)’ ಎಂದು ಸಮಂತಾ ಮಾಸ್ ಶೈಲಿಯಲ್ಲಿ ಡೈಲಾಗ್ ಹೇಳಿದ್ದಾರೆ. ತಕ್ಷಣವೇ ನಗುತ್ತಾ, ‘ಪ್ರೀತಿಯಿಂದ ಅಪ್ಪಾ’ಎಂದು ಹೇಳುವ ಮೂಲಕ ಅಲ್ಲಿದ್ದವರ ಮುಖದಲ್ಲಿ ನಗು ತರಿಸಿದ್ದಾರೆ. (Source: Maa Inti Bangaram Team)
ಮೈಸೂರು, ಜೂನ್ 16: ಆರ್‌ಎಸ್‌ಎಸ್ ಸದಸ್ಯರು ಹಿಂದುಗಳಲ್ಲ, ಬದಲಿಗೆ ಹಿಂದುತ್ವವಾದಿಗಳು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುವಂತಿಲ್ಲ. ಆರ್‌ಎಸ್‌ಎಸ್ ಅನ್ನು ಕೇವಲ ಸಾಂಸ್ಕೃತಿಕ ಸಂಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬದಲಾಗಿ, ಇದು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುವ ರಾಜಕೀಯ ಸಂಸ್ಥೆಯಾಗಿದೆ. ಆರ್‌ಎಸ್‌ಎಸ್ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮತ್ತು ಹಣಕಾಸು ವ್ಯವಹಾರಗಳನ್ನು ಹೊಂದಿದೆ. ಈ ಆರ್ಥಿಕ ವ್ಯವಹಾರಗಳಿಗೆ ಲೆಕ್ಕಪತ್ರವನ್ನು ನೀಡಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು. ಯಾವುದೇ ಸಂಘಟನೆ ತನ್ನನ್ನು ‘ಹಿಂದೂ ಧರ್ಮ’ದ ನೆರಳಲ್ಲಿ ಬಚ್ಚಿಟ್ಟುಕೊಂಡು, ಕಾನೂನಿನಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಗೃಹ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನೋಂದಣಿಗೆ ಕೇಳಿರುವುದು ಕಾನೂನು ಪ್ರಕಾರ ಸರಿಯಾಗಿದೆ. ಆರ್‌ಎಸ್‌ಎಸ್ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ಅದೊಂದು ರಾಜಕೀಯ ಸಂಘಟನೆ. ಅದು ಪ್ರತಿಯೊಂದು ಚುನಾವಣೆಯಲ್ಲಿಯೂ ಬಿಜೆಪಿ ಪರವಾಗಿ ಕೆಲಸ ಮಾಡುತ್ತದೆ. ಆದ್ದರಿಂದ, ಆರ್‌ಎಸ್‌ಎಸ್ ದೇಶದ ಕಾನೂನುಗಳನ್ನು ಪಾಲಿಸಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಒಂದು ಸ್ಮರಣೀಯ ಹಾಗೂ ವಿವಾದಾತ್ಮಕ ಅಧ್ಯಾಯವಾಗಿ ಉಳಿಯುವಂತಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯವು ಅಂತಿಮವಾಗಿ ಸೂಪರ್ ಓವರ್‌ಗೆ ತಲುಪಿದಾಗ, ಅಲ್ಲಿ ನಡೆದ ಘಟನೆಗಳು ಕೇವಲ ಕ್ರಿಕೆಟ್ ಆಟವಾಗಿ ಉಳಿಯದೆ, ಆಟಗಾರರ ನಡುವಿನ ಮಾನಸಿಕ ಯುದ್ಧವಾಗಿ ಮಾರ್ಪಟ್ಟಿತು. ಹೀಗಾಗಿಯೇ ಈ ಪಂದ್ಯವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಬಣ್ಣಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರು ಈ ಮ್ಯಾಚ್ ಅನ್ನು “ಅತ್ಯುತ್ತಮ ನಾಟಕೀಯ ರಂಗಭೂಮಿ” ಎಂದು ಕರೆಯಲು ಮುಖ್ಯ ಕಾರಣ ಪಂದ್ಯದ ವೇಳೆ ಕಂಡು ಬಂದ ಟ್ವಿಸ್ಟ್ ಹಾಗೂ ಅವ್ಯವಸ್ಥೆ.
ಏಕೆಂದರೆ ಈ ಪಂದ್ಯವು ಟೈ ಆಗಿ ಸೂಪರ್ ಓವರ್‌ಗೆ ತಲುಪಿದಾಗ ಉಭಯ ತಂಡಗಳಲ್ಲಿ ತೀವ್ರ ಒತ್ತಡವಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಮತ್ತು ವೀಕ್ಷಕರಿಗೆ ಇದು ಯಾವುದೇ ರೋಮಾಂಚಕ ನಾಟಕ ಅಥವಾ ಸಿನಿಮಾಗೆ ಕಮ್ಮಿ ಇರಲಿಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಅದರಲ್ಲೂ ಸೂಪರ್ ಓವರ್‌ನಲ್ಲಿ ಬಂದ ‘ನೋ ಬಾಲ್’ ತೀರ್ಪು ಪಂದ್ಯದ ಅತಿ ದೊಡ್ಡ ಟ್ವಿಸ್ಟ್ ಆಗಿತ್ತು. ಯಾವುದೇ ನಿಖರ ತಂತ್ರಜ್ಞಾನವಿಲ್ಲದೆ ಅಂಪೈರ್ ನೀಡಿದ ಈ ತೀರ್ಪು ನಾಟಕವೊಂದರ ವಿವಾದಾತ್ಮಕ ಸನ್ನಿವೇಶದಂತೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಎಂಬುದು ಅಶ್ವಿನ್ ಅವರ ಅಭಿಪ್ರಾಯ.
ಇನ್ನು ಕತ್ತಲಾಗುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ಶ್ರೀಲಂಕಾ ಆಟಗಾರರು ಕ್ರೀಸ್‌ಗೆ ಬರಲು ತಡ ಮಾಡಿದ್ದು ಪಕ್ಕಾ ಚಿತ್ರಕಥೆಯ ವಿಲನ್ ತಂತ್ರಗಳಂತೆ ಕಾಣಿಸಿತು. ಇದು ಭಾರತೀಯ ಆಟಗಾರರಲ್ಲಿ ತೀವ್ರ ಹತಾಶೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿತು.
ಹಾಗೆಯೇ ಪಂದ್ಯದ ಕ್ಲೈಮ್ಯಾಕ್ಸ್‌ನಲ್ಲಿ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಾಗೆ ಪರಸ್ಪರ ಮೈದಾನದಲ್ಲೇ ತಳ್ಳಾಡಿಕೊಂಡಿದ್ದು ಆಟದಲ್ಲಿದ್ದ ತೀವ್ರ ಮಾನಸಿಕ ಒತ್ತಡ ಮತ್ತು ಭಾವನೆಗಳ ಸ್ಫೋಟವನ್ನು ತೋರಿಸಿದೆ ಎಂದು ಅಶ್ವಿನ್ ಹೇಳಿದ್ದಾರೆ.
ಕ್ರೀಡಾ ಸ್ಫೂರ್ತಿಯ ದೃಷ್ಟಿಯಿಂದ ಇದು ಸರಿಯಲ್ಲದಿದ್ದರೂ, ವೀಕ್ಷಕರಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಇದೊಂದು ಮರೆಯಲಾಗದ, ಅತ್ಯಂತ ರೋಮಾಂಚಕ “ನಾಟಕೀಯ ಪಂದ್ಯವಾಗಿತ್ತು” ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 49.2 ಓವರ್ಗಳಲ್ಲಿ 265 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಎ ತಂಡ 50 ಓವರ್ಗಳಲ್ಲಿ 265 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡರು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಬಾರಿಸಿದರು. 17 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ 7 ರನ್ಗಳಿಂದ ಸೋಲೊಪ್ಪಿಕೊಂಡಿತು.
ಹುಬ್ಬಳ್ಳಿ, ಜೂನ್ 16: ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏಕಾಏಕಿ ಬೀಸಿದ ಭಾರೀ ಗಾಳಿಗೆ ಶಾಲೆಯ ಮೇಲ್ಚಾವಣಿಯ ಶೀಟ್‌ಗಳು ಹಾರಿಹೋಗಿವೆ. ಅದೃಷ್ಟವಶಾತ್, ಶಾಲೆ ಮುಗಿದ ಹತ್ತೇ ನಿಮಿಷಗಳಲ್ಲಿ ಈ ಘಟನೆ ಸಂಭವಿಸಿದ್ದರಿಂದ 200ಕ್ಕೂ ಹೆಚ್ಚು ಮಕ್ಕಳು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಸಂಜೆ 4:50 ರಿಂದ 5 ಗಂಟೆಯ ಸಮಯದಲ್ಲಿ (ಶಾಲೆ ಬಿಟ್ಟ ನಂತರ) ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಬಿರುಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಶಾಲೆಯ ಎಲ್ಲಾ ಕೊಠಡಿಗಳ ಮೇಲ್ಚಾವಣಿ ಶೀಟ್‌ಗಳು ಹಾರಿಹೋಗಿದ್ದು, ಸುಮಾರು 300-400 ಮೀಟರ್ ದೂರದವರೆಗೆ ಬಿದ್ದಿವೆ. ಕೆಲವು ವಸ್ತುಗಳು ಸುತ್ತಮುತ್ತಲಿನ ಮನೆಗಳು ಮತ್ತು ಮರಗಳ ಮೇಲೆ ಬಿದ್ದಿವೆ. ಶಾಲೆಯ ಆವರಣದಲ್ಲಿದ್ದ ಅನೇಕ ವಸ್ತುಗಳು ಹಾನಿಗೊಳಗಾಗಿವೆ. ಸಮಯಕ್ಕೆ ಸರಿಯಾಗಿ ಮಕ್ಕಳು ಶಾಲೆ ಬಿಟ್ಟು ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂನ್ 16: 66 ನಟೋರಿಯಸ್ ರೌಡಿಶೀಟರ್‌ಗಳಿಗೆ ಪಟ್ಟಿಯಿಂದ ಮುಕ್ತಿ ನೀಡುವ ವಿಚಾರ ಗಮನಕ್ಕೆ ಬಂದಿದ್ದು, ಅದಕ್ಕೆ ತಡೆ ನೀಡಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ವಿಷಯ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿ, ಎಡವಟ್ಟು ಹೇಗೆ ಸಂಭವಿಸಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದಿರುವ ಖರ್ಗೆ, ಲೋಪವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ 66 ರೌಡಿಶೀಟರ್‌ಗಳ ಪಟ್ಟಿಯಲ್ಲಿ 8 ಜನರು ಬಿಜೆಪಿ ಕಾರ್ಯಕರ್ತರು ಎಂದು ಗೃಹ ಸಚಿವರು ಉಲ್ಲೇಖಿಸಿದ್ದಾರೆ. ಸೈಲೆಂಟ್ ಸುನೀಲ ಎಂಬ ರೌಡಿಶೀಟರ್‌ನ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಅವರು, ಪೊಲೀಸ್ ಇಲಾಖೆಯ ಕಾರ್ಯವೈಖರಿಯಲ್ಲಿನ ಈ ಲೋಪವನ್ನು ಸರಿಪಡಿಸಲು ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಕೈಬಿಟ್ಟಿರುವ ಪೈಕಿ ಬೆಂಗಳೂರಿನ 7 ರೌಡಿಶೀಟರ್ಗಳಿದ್ದಾರೆ. ಉಳಿದವರು ಬೇರೆ ಬೇರೆ ಜಿಲ್ಲೆಯ ರೌಡಿಶೀಟರ್ಗಳು. ಕಾನೂನು ರೀತ್ಯಾ ಹಿನ್ನೆಲೆಯನ್ನು ಪರಿಶೀಲನೆ ಮಾಡುತ್ತೇವೆ. ಮತ್ತೊಮ್ಮೆ ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂನ್ 16: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ ತುಂಬಾ ಕಷ್ಟಕರ. ಬೆಂಗಳೂರಿನಲ್ಲಿ (Bengaluru) ವಸತಿ ವೆಚ್ಚಗಳು ಮತ್ತು ಜೀವನಶೈಲಿ ವೆಚ್ಚಗಳು ಏರುತ್ತಲೇ ಇರುವುದರಿಂದ, ನಗರದಲ್ಲಿ ಆರಾಮವಾಗಿ ಬದುಕಲು ಕಷ್ಟವಾಗುತ್ತಿದೆ. ಈ ನಗರದಲ್ಲಿ ವಾಸಿಸುತ್ತಿರುವ ಜನರು ಎಷ್ಟೇ ದುಡಿದ್ರೂ ಸಾಕಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಾಸಿಕ ಖರ್ಚು ವೆಚ್ಚದ ಬಗ್ಗೆ ಮಾತನಾಡಿದ್ದಾರೆ. ಮೇ ತಿಂಗಳಲ್ಲಿ 1.84 ಲಕ್ಷ ರೂ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದ್ದು ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
@bloomingalchemy_nee ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಮಹಿಳೆ ಬೆಂಗಳೂರಿನಲ್ಲಿ ನನ್ನ ಖರ್ಚುಗಳು – ಮೇ 2026 ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಮೇ ತಿಂಗಳಿನ ತನ್ನ ಪ್ರಮುಖ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
2 ಬಿಹೆಚ್ ಕೆ ಅಪಾರ್ಟ್‌ಮೆಂಟ್‌ನ ಬಾಡಿಗೆಗೆ 45,000 ರೂ, ವಿದ್ಯುತ್‌ಗೆ 3,250 ರೂ, ಸ್ವಿಗ್ಗಿ ಆರ್ಡರ್‌ಗಳಿಗೆ 7,500 ರೂ, ಅಡುಗೆಯವರಿಗೆ 6,000 ರೂ, ಮನೆಕೆಲಸದಾಕೆಗೆ 4,000 ರೂ ಹಾಗೂ ಉಬರ್ ಸವಾರಿಗಳಿಗೆ 8,000 ರೂ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಿದ್ದಾರೆ. ಕೆಫೆಗಳು ಹಾಗೂ ಸುತ್ತಾಟಗಳಿಗೆ 60,000 ರೂ ಹಾಗೂ ಶಾಪಿಂಗ್‌ಗೆ 50,000 ರೂ ಖರ್ಚು ತಗಲುತ್ತದೆ. ಹೂಡಿಕೆಗಳನ್ನು ಹೊರತುಪಡಿಸಿ, ತಿಂಗಳಿಗೆ ಅವರ ಒಟ್ಟು ಖರ್ಚು 1,83,750 ರೂ ಆಗಿದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಒಳ್ಳೆಯದು ಎಂದಿದ್ದಾರೆ. ಇನ್ನೊಬ್ಬರು, ನೀವು ಪ್ರತಿ ತಿಂಗಳು ಊಟ ಹಾಗೂ ಶಾಪಿಂಗ್‌ಗೆ 1.1 ಲಕ್ಷ ಖರ್ಚು ಮಾಡುತ್ತೀರಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳಿಗೆ ಲಗಾಮು ಹಾಕೋದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶಿವರಾಜ್ ಕುಮಾರ್ (Shiva Rajkumar) ಕನ್ನಡದ ಸ್ಟಾರ್ ನಟ, ಅವರು ನಟನೆಯಿಂದ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವದಿಂದಲೂ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಹತ್ತಿರವಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ನೆರೆಯ ಚಿತ್ರರಂಗಗಳಲ್ಲಿಯೂ ಶಿವಣ್ಣನಿಗೆ ಬಹಳ ಒಳ್ಳೆಯ ಹೆಸರಿದೆ. ಇದೇ ಕಾರಣಕ್ಕೆ ಪರ ಭಾಷೆ ಸಿನಿಮಾಗಳಿಂದಲೂ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ಆಫರ್ಗಳು ಬರುತ್ತಲೇ ಇರುತ್ತವೆ. ಶಿವಣ್ಣ ಸಹ ಗೌರವಪೂರ್ವಕವಾಗಿ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿರುತ್ತಾರೆ. ಇತ್ತೀಚೆಗಷ್ಟೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಶಿವಣ್ಣ ನಟಿಸಿದ್ದು, ಸಿನಿಮಾ ಜೊತೆಗೆ ಪಾತ್ರವೂ ಹಿಟ್ ಆಗಿದೆ.
ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪುತ್ರ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಬಗ್ಗೆ ಮಾತನಾಡುತ್ತಾ ಶಿವಣ್ಣ ಅವರನ್ನು ಕೊಂಡಾಡಿದ್ದಾರೆ. ‘ಶಿವರಾಜ್ ಕುಮಾರ್, ನಮ್ಮ ಶಿವಣ್ಣ ಆ ಪಾತ್ರವನ್ನು ಒಪ್ಪಿಕೊಂಡು, ನಟಿಸುತ್ತೀನಿ ಎಂದಿದ್ದೇ ನಮ್ಮ ಪಾಲಿಗೆ ಮೊದಲ ಯಶಸ್ಸು, ಅದು ನಿನ್ನ ಅದೃಷ್ಟ’ ಎಂದು ನಿರ್ದೇಶಕ ಬುಚ್ಚಿಬಾಬು ಸನಾಗೆ ಚಿರಂಜೀವಿ ಹೇಳಿದ್ದಾರೆ.
‘ಅವರೊಬ್ಬ ಅದ್ಭುತವಾದ ನಟ, ಅಷ್ಟೇ ಅದ್ಭುತವಾದ ವ್ಯಕ್ತಿ. ಪಾತ್ರವೇ ಅವರಾಗಿ ಅವರು ನಟಿಸಿದ್ದಾರೆ. ಚರಣ್ ಅನ್ನು ಗದರಿಸುವುದಾಗಲಿ, ಬೈಯ್ಯುವುದಾಗಲಿ ಮಾಡಬೇಕು ಎಂದರೆ ಅದಕ್ಕೆ ಒಳ್ಳೆಯ ಖಡಕ್ ಆದ ನಟನೆ ಆಗಿರಬೇಕು, ಶಿವಣ್ಣ ಆ ಸಿನಿಮಾನಲ್ಲಿ ರಾಮ್ ಚರಣ್ ಪಾತ್ರವನ್ನು ಬೈಯ್ಯುತ್ತಿದ್ದರೆ ಒಬ್ಬ ತಂದೆಯೇ ಮಗನನ್ನು ಬೈಯ್ಯುತ್ತಿರುವಂತೆ ಶಿಸ್ತು ಕಲಿಸುತ್ತಿರುವಂತೆ ಕಾಣುತ್ತದೆ, ಬಹಳ ಚೆನ್ನಾಗಿ ಅವರಿಬ್ಬರ ಸೀನ್ಗಳು ಮೂಡಿ ಬಂದಿವೆ’ ಎಂದಿದ್ದಾರೆ ಚಿರಂಜೀವಿ.
ಚಿರಂಜೀವಿ ಅವರು ದಶಕಗಳಿಂದಲೂ ದೊಡ್ಮನೆಯೊಟ್ಟಿಗೆ ಆಪ್ತ ಬಂಧ ಹೊಂದಿರುವವರು. ರಾಜ್ಕುಮಾರ್ ಅವರೊಟ್ಟಿಗೆ ಚಿರಂಜೀವಿ ಅವರಿಗೆ ಆಪ್ತ ಬಂಧವಿತ್ತು. ಈಗ ಶಿವಣ್ಣ ತೆಲುಗಿನಲ್ಲಿ ನಟಿಸಿರುವಂತೆ ಚಿರಂಜೀವಿ ಸಹ ಕನ್ನಡದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ನಟನೆಯ ‘ಸಿಪಾಯಿ’ ಮತ್ತು ಅರ್ಜುನ್ ಸರ್ಜಾ ನಟನೆಯ ‘ಶ್ರೀ ಮಂಜುನಾಥ’ ಸಿನಿಮಾಗಳಲ್ಲಿ ಚಿರಂಜೀವಿ ಅವರು ಅತಿಥಿ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಇಲ್ಲಿಯೂ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಶಿವರಾಜ್ ಕುಮಾರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ಗೌರ ನಾಯ್ಡು ಹೆಸರಿನ ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಚರಣ್ಗೆ ಕುಸ್ತಿ ಹೇಳಿಕೊಟ್ಟು ಆ ಪಾತ್ರದ ವ್ಯಕ್ತಿತ್ವ ಬದಲಿಸುವ ಪಾತ್ರ ಶಿವಣ್ಣ ಅವರದ್ದು. ಶಿವಣ್ಣನಿಗೆ ಕೆಲವು ಮಾಸ್ ಸೀನ್ಗಳ ಜೊತೆಗೆ ಭಾವುಕ ದೃಶ್ಯಗಳು ಸಹ ಸಿನಿಮಾನಲ್ಲಿ ಇವೆ. ‘ಪೆದ್ದಿ’ ಶಿವಣ್ಣ ನಟಿಸಿರುವ ಎರಡನೇ ತೆಲುಗು ಸಿನಿಮಾ. ಈ ಹಿಂದೆ ‘ಗೌತಮಿ ಪುತ್ರ ಶಾತಕರ್ಣಿ’ ಸಿನಿಮಾನಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಮೈಸೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಮಹತ್ವದ ಸಿಹಿ ಸುದ್ದಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ನೇತೃತ್ವದಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ಮತ್ತು ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳು ಪಿರಿಯಾಪಟ್ಟಣ ಇವರ ಜಂಟಿ ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಈ ಮೇಳವು ಒಂದು ಅತ್ಯುತ್ತಮ ವೇದಿಕೆಯಾಗಲಿದ್ದು, ಪ್ರವೇಶ ಸಂಪೂರ್ಣ ಉಚಿತವಾಗಿರುತ್ತದೆ.
ಉದ್ಯೋಗ ಮೇಳದ ಸಂಪೂರ್ಣ ವಿವರಗಳು:
ದಿನಾಂಕ: 24-06-2026 (ಬುಧವಾರ)
ಸಮಯ: ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ
ಸ್ಥಳ: ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಗಳು, ಅಬ್ಬೂರು ಗ್ರಾಮ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ.
ಅರ್ಹತೆ ಮತ್ತು ವಯೋಮಿತಿ:
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಡಿಪ್ಲೋಮಾ, ಐಟಿಐ (ITI), ಯಾವುದೇ ಪದವಿ (Graduate) ಮತ್ತು ಸ್ನಾತಕೋತ್ತರ ಪದವಿ (Post Graduate) ಪಡೆದವರು ಭಾಗವಹಿಸಬಹುದು. 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು.
ನವದೆಹಲಿ, ಜೂನ್ 16: ಇನ್ನುಮುಂದೆ ಮೆಡಿಕಲ್ ಶಾಪ್ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್(Cough Syrup) ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಮತ್ತು ಕೆಮ್ಮಿನ ಸಿರಪ್ಗಳ ಅತಿಯಾದ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಇನ್ನುಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ಶೀತ ಹಾಗೂ ಜ್ವರಕ್ಕೆ ಸಿರಪ್ ಪಡೆದುಕೊಳ್ಳಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರವು 1945ರ ಹಳೆಯ ಔಷಧ ನಿಯಮಗಳ ವೇಳಾಪಟ್ಟಿ ಕೆ ಸಿರಪ್ ಪದವನ್ನು ಅಧಿಕೃತವಾಗಿ ತೆಗೆದುಹಾಕಿದೆ. ಈ ಹಿಂದೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿಗಳಲ್ಲಿ ಕೆಮ್ಮಿನ ಸಿರಪ್‌ಗಳನ್ನು ಮಾರಾಟ ಮಾಡಲು ಕೆಲವು ಪರವಾನಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಸಣ್ಣ ಹಳ್ಳಿಗಳಲ್ಲೂ ಪರವಾನಗಿ ಇಲ್ಲದೆ ಸಿರಪ್ ಮಾರಾಟ ಮಾಡುವಂತಿಲ್ಲ.
ಹೊಸ ಬದಲಾವಣೆಯ ನಂತರ, ಎಲ್ಲಾ ರೀತಿಯ ಕೆಮ್ಮಿನ ಸಿರಪ್‌ಗಳನ್ನು 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಗ್ರಾಹಕರು ವೈದ್ಯರ ಚೀಟಿಯನ್ನು ತೋರಿಸುವುದು ಈಗ ಕಡ್ಡಾಯವಾಗಿದೆ.
ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಮತ್ತು ದೇಶಾದ್ಯಂತ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
500, 1000, 2000 ಮತ್ತು 14000… ಇವು ಕೇವಲ ಅಂಕಿ-ಅಂಶಗಳಲ್ಲ, ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಮುಂದಿರುವ ದಾಖಲೆಗಳು! ಒಂದು ಕಡೆ ಕಿವೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸುವ ವಿಶ್ವದ ಮೊದಲ ಬ್ಯಾಟರ್ ಆಗುವ ಸನಿಹದಲ್ಲಿರುವ ರೂಟ್, ಮತ್ತೊಂದೆಡೆ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ನಾಯಕತ್ವದ ಜವಾಬ್ದಾರಿಯೊಂದಿಗೆ ಮೈದಾನಕ್ಕಿಳಿಯಲಿರುವ ಜೋ ರೂಟ್ ಕಣ್ಣಿಟ್ಟಿರುವ ಪ್ರಮುಖ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
2000 ರನ್ ಗಳ ಐತಿಹಾಸಿಕ ಮೈಲಿಗಲ್ಲು: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇದುವರೆಗೆ ಆಡಿದ 22 ಟೆಸ್ಟ್ ಪಂದ್ಯಗಳಿಂದ 1,934 ರನ್ ಗಳಿಸಿದ್ದಾರೆ. ಇನ್ನು ಕೇವಲ 66 ರನ್ ಗಳಿಸಿದರೆ, ಕಿವೀಸ್ ವಿರುದ್ಧ ಟೆಸ್ಟ್ ಇತಿಹಾಸದಲ್ಲೇ 2,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರೂಟ್ ಪಾತ್ರರಾಗಲಿದ್ದಾರೆ. ಈಗಾಗಲೇ ಜಾವೇದ್ ಮಿಯಾಂದಾದ್ (1,919 ರನ್) ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿರುವ ರೂಟ್ ಲೀಡ್ಸ್ನಲ್ಲಿ ಹೊಸ ಇತಿಹಾಸ ಬರೆಯುವುದನ್ನು ಎದುರು ನೋಡಬಹುದು.
1000 ರನ್ಗಳ ಸರದಾರ: ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ನಲ್ಲಿ 1000 ರನ್ ಕಲೆಹಾಕಿದ ದಾಖಲೆ ಬರೆಯಲು ಜೋ ರೂಟ್ಗೆ ಬೇಕಿರುವುದು ಕೇವಲ 72 ರನ್ಗಳು ಮಾತ್ರ. ಈಗಾಗಲೇ ಇಂಗ್ಲೆಂಡ್ ಪಿಚ್ನಲ್ಲಿ ಕಿವೀಸ್ ವಿರುದ್ಧ 928 ರನ್ ಕಲೆಹಾಕಿರುವ ರೂಟ್ ಈ ಬಾರಿ ಸಾವಿರ ರನ್ ಸರದಾರ ಎನಿಸಿಕೊಳ್ಳುವ ನಿರೀಕ್ಷೆಯಿದೆ.
14000 ಟೆಸ್ಟ್ ರನ್: ಜೋ ರೂಟ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 14,000 ಟೆಸ್ಟ್ ರನ್ ಗಳ ಬೃಹತ್ ಮೈಲಿಗಲ್ಲನ್ನು ತಲುಪುವ ಸನಿಹದಲ್ಲಿದ್ದಾರೆ. ಈಗಾಗಲೇ 13,952 ರನ್ ಗಳಿಸಿರುವ ರೂಟ್ 2ನೇ ಟೆಸ್ಟ್ನಲ್ಲಿ 48 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
500 ಟೆಸ್ಟ್ ರನ್: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡದ ನಾಯಕನಾಗಿ ತಮ್ಮ ಏಳನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ . ಈ ಹಿಂದೆ ಆಡಿರುವ ಆರು ಟೆಸ್ಟ್‌ಗಳಲ್ಲಿ, ಅವರು 43.45 ರ ಸರಾಸರಿಯಲ್ಲಿ 478 ರನ್ ಗಳಿಸಿದ್ದಾರೆ. ಇನ್ನು 22 ನೇ ರನ್ ಗಳಿಸಿದರೆ ನ್ಯೂಝಿಲೆಂಡ್ ವಿರುದ್ಧ 500 ರನ್ ಕಲೆಹಾಕಿದ ಇಂಗ್ಲೆಂಡ್ ನಾಯಕ ಎನಿಸಿಕೊಳ್ಳಲಿದ್ದಾರೆ.
ಕ್ಯಾಪ್ಟನ್ ರೂಟ್:
ಮೊದಲ ಟೆಸ್ಟ್ ಪಂದ್ಯದ ಬಳಿಕ ತಡರಾತ್ರಿಯ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಇಂಗ್ಲೆಂಡ್ ತಂಡದಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ 2ನೇ ಟೆಸ್ಟ್ ಪಂದ್ಯಕ್ಕೆ ಜೋ ರೂಟ್ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಲಾಗಿದೆ.
ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೂಟ್ 27 ಮ್ಯಾಚ್ಗಳಲ್ಲಿ ಜಯ ತಂದು ಕೊಟ್ಟಿದ್ದರು. ಇನ್ನು ರೂಟ್ ನಾಯಕತ್ವದಲ್ಲಿ ಆಂಗ್ಲ ಪಡೆ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 26 ಮ್ಯಾಚ್ಗಳಲ್ಲಿ ಸೋಲನುಭವಿಸಿತ್ತು. ಇದೀಗ 65ನೇ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯಲು ಜೋ ರೂಟ್ ಸಿದ್ಧರಾಗಿದ್ದು, ಈ ಬಾರಿ ಮತ್ತೊಮ್ಮೆ ತಮ್ಮ ನಾಯಕತ್ವದ ಕಮಾಲ್ ಮಾಡಲಿದ್ದಾರಾ ಕಾದು ನೋಡಬೇಕಿದೆ.