Category Archives: Blog

Your blog category

Optical Illusion: ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಗುರುತಿಸುವಿರಾ – Kannada News | Optical Illusion: find the cat hiding in the kitchen in 20 seconds

ಆಪ್ಟಿಕಲ್‌ ಇಲ್ಯೂಷನ್ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗಲ್ಲ. ಇದೀಗ ಮೆದುಳಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಅಡುಗೆ ಮನೆಯಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಕಂಡುಹಿಡಿಯುವ ಸವಾಲು ಇಲ್ಲಿದೆ. ಇಲ್ಲಿರುವ ವಸ್ತುಗಳ ನಡುವೆ ಅಡಗಿ ಕುಳಿತಿರುವುದರಿಂದ ಕಳ್ಳ ಬೆಕ್ಕನ್ನು ಕಂಡು ಹಿಡಿಯುವುದು  ಅಷ್ಟು ಸುಲಭವಲ್ಲ. ಇದೀಗ ಕೇವಲ 20 ಸೆಕೆಂಡುಗಳೊಳಗೆ ಈ ಮನೆಯ ಮುದ್ದಿನ ಸಾಕು ಪ್ರಾಣಿಯನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ವಸ್ತುಗಳನ್ನು, ಪ್ರಾಣಿ ಪಕ್ಷಿಗಳನ್ನು ಕಂಡು ಹಿಡಿಯುವುದು ಹೇಳುವಷ್ಟು ಸುಲಭವಲ್ಲ. ಈ ಚಿತ್ರ ನೋಡಿದಾಗ ನಿಮಗೆ ಅಡುಗೆ ಮನೆಯ ಸ್ಪಷ್ಟ ಚಿತ್ರಣವು ಕಾಣಿಸುತ್ತದೆ. ಈ ಅಡುಗೆ ಮನೆಯಲ್ಲಿ ಪಾತ್ರೆ, ಡೈನಿಂಗ್ ಟೇಬಲ್ ಸೇರಿದಂತೆ ವಿವಿಧ ವಸ್ತುಗಳಿವೆ. ನೀವು ಇಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಪತ್ತೆ ಹಚ್ಚಬೇಕು.

ಇದನ್ನೂ ಓದಿ: ದಟ್ಟವಾದ ಕಾನನದಲ್ಲಿ ಅಡಗಿ ಕುಳಿತಿರುವ ಚಿರತೆಯನ್ನು ಗುರುತಿಸಬಲ್ಲಿರಾ

ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

ಅಡುಗೆ ಮನೆಯಲ್ಲಿ ಅಡಗಿ ಕುಳಿತಿರುವ ಮನೆಯ ಮುದ್ದಿನ ಬೆಕ್ಕನ್ನು ಹುಡುಕುವುದು ಕಷ್ಟಕರ. ಹೌದು, ನೀವು ಕಣ್ಣು ಅಗಲಿಸಿ ನೋಡಿದರೂ ಕಳ್ಳ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಅಂದ್ರೆ ನಾವೇ ಈ ಸಾಕು ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಬೆಕ್ಕು ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ. ನೀವು ಈ ಸಾಕು ಪ್ರಾಣಿಯನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ‘ಟಾಕ್ಸಿಕ್’ – Kannada News | Toxic became India’s most anticipated movie beating Dhurandhar 2

ಯಶ್ (Yash) ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾದ ಇತರೆ ರಾಜ್ಯಗಳ ಬಿಡುಗಡೆ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗುತ್ತಿದೆ. ಕೇವಲ ಸಿನಿಮಾದ ಟೀಸರ್ ಇಂದಲೇ ಸಿನಿಮಾದ ಬಗ್ಗೆ ಬಹುದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಆದರೆ ‘ಟಾಕ್ಸಿಕ್’ ಬಿಡುಗಡೆ ಆಗುವ ದಿನವೇ ಹಿಂದಿಯ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ಎರಡೂ ಸಿನಿಮಾಗಳ ಬಗ್ಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ಸಿನಿಮಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ!

ಜನಪ್ರಿಯ ಮತ್ತು ವಿಶ್ವಾಸಾರ್ಹ ಸಿನಿಮಾ ಡೇಟಾಬೇಸ್ (ಮಾಹಿತಿ ಸಂಗ್ರಹ) ಜಾಲತಾಣವಾದ ಐಎಂಬಿಡಿ (IMDb) ಬಿಡುಗಡೆ ಮಾಡಿರುವ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅವರ ‘ಟಾಕ್ಸಿಕ್’ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ‘ಟಾಕ್ಸಿಕ್’ ಎದುರಾಳಿ ಎಂದು ಬಿಂಬಿತವಾಗುತ್ತಿರುವ ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ಹಿಂದಿಕ್ಕಿ ‘ಟಾಕ್ಸಿಕ್’ ಈ ಸಾಧನೆ ಮಾಡಿರುವುದು ವಿಶೇಷ. ವರದಿಗಳ ಪ್ರಕಾರ, ಐಎಂಡಿಬಿ ಬಳಕೆದಾರರ ಶೇ. 35 ರಷ್ಟು ಆಸಕ್ತಿಯೊಂದಿಗೆ ಯಶ್ ಸಿನಿಮಾ ಅಗ್ರಸ್ಥಾನದಲ್ಲಿದ್ದರೆ, ‘ಧುರಂಧರ್ 2’ ಶೇ. 26.6 ರಷ್ಟು ವೀಕ್ಷಕರ ಆಸಕ್ತಿಯೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಇದನ್ನೂ ಓದಿ:ಯಶ್, ರಣ್​​ಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ

ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಚಿತ್ರದಲ್ಲಿ ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಟೀಸರ್ ಈಗಾಗಲೇ ಭರ್ಜರಿ ವೈರಲ್ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿದೆ. ಸಿನಿಮಾನಲ್ಲಿ ದೇಶದ ಮತ್ತು ಹಾಲಿವುಡ್​​ನ ಕೆಲವು ಪ್ರಮುಖ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.

‘ಧುರಂಧರ್ 2’ ಸಿನಿಮಾ ‘ಟಾಕ್ಸಿಕ್’ಗೆ ಭರ್ಜರಿ ಎದುರಾಳಿ ಆಗುವ ಎಲ್ಲ ಲಕ್ಷಣಗಳನ್ನು ತೋರಿಸಿದೆ. ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ‘ಪುಷ್ಪ 2’ ಸಿನಿಮಾದ ದಾಖಲೆಯನ್ನು ಸಹ ಹಿಂದಿಕ್ಕಿದೆ. ‘ಧುರಂಧರ್’ ದೇಶ ಪ್ರೇಮವನ್ನು ಜಾಗೃತಗೊಳಿಸುವ ಸಿನಿಮಾ ಎಂಬ ಅಂಶವೂ ಸಿನಿಮಾದ ಬೆನ್ನಿಗಿದೆ. ಹೀಗಾಗಿ ಸಿನಿಮಾದ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ಹೆಚ್ಚು ಉತ್ಸುಕರಾಗಿದ್ದಾರೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಯಾವುದು ಹೆಚ್ಚು ಯಶಸ್ಸು ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

7.11 ಕೋಟಿ ದರೋಡೆ ಹಣ ಕ್ಯಾಸಿನೊಗೆ ಸುರಿಯಲು ಪ್ಲ್ಯಾನ್​! ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​​ – Kannada News | 7.11 Cr Cash Van Heist: Bengaluru Police Charge Sheet Exposes Goa Casino Spree Plot

ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ದರೋಡೆ ಕೇಸ್​Image Credit source: Google

ಬೆಂಗಳೂರು, ಫೆಬ್ರವರಿ 13: ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ದಕ್ಷಿಣ ಬೆಂಗಳೂರಿನಲ್ಲಿ ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಹಣ ಸಾಗಾಣಿಕೆ ವ್ಯಾನ್‌ನ್ನು ಅಡ್ಡಗಟ್ಟಿ, ಸಿಬ್ಬಂದಿಯನ್ನು ಬೆದರಿಸಿ 7.11 ಕೋಟಿ ಹಣ ದರೋಡೆ ಪ್ರಕರಣ ಸಂಬಂಧ ಸಿದ್ಧಾಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 2025ರ ನವೆಂಬರ್ 19ರಂದು ದೋಚಿದ್ದ ಹಣವನ್ನು ಆರೋಪಿಗಳು ಗೋವಾಕ್ಕೆ ತೆರಳಿ ಕ್ಯಾಸಿನೊಗಳಲ್ಲಿ ಖರ್ಚು ಮಾಡಲು ನಿರ್ಧರಿಸಿದ್ದರು ಎಂಬುದು ಈ ವೇಳೆ ಬೆಳಕಿಗೆ ಬಂದಿದೆ.

54 ಗಂಟೆಗಳಲ್ಲೇ ದರೋಡೆ ಕೇಸ್​ ಭೇದಿಸಿದ್ದ ಪೊಲೀಸರು ಇದೀಗ 1,328 ಪುಟಗಳ ಆರೋಪಪಟ್ಟಿಯಲ್ಲಿ ಹಲವಾರು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಒಂಭತ್ತು ಆರೋಪಿಗಳ ವಿರುದ್ಧ ದರೋಡೆ, ಅಕ್ರಮ ಬಂಧನ/ತಡೆ, ಸಾಕ್ಷ್ಯ ನಾಶಪಡಿಸುವುದು, ಅಪರಾಧ ಸಂಚು, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ

ಜಯನಗರ ಎಸಿಪಿ ಮತ್ತು ಅವರ ತಂಡ ವೈಜ್ಞಾನಿಕ ವಿಧಾನದಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿ, ಎ1 ಜೆ. ಜೇವಿಯರ್ ಈ ಸಂಚಿನ ಪ್ರಮುಖ ಸಂಚುಕೋರನಾಗಿದ್ದ. ಕಂಪನಿಯ ಎಲ್ಲಾ ವಿವರಗಳನ್ನೂ ಅವನು ಚೆನ್ನಾಗಿ ತಿಳಿದಿದ್ದ. ಅಲ್ಲದೆ ದರೋಡೆ ಗ್ಯಾಂಗ್ ಸ್ಪಷ್ಟವಾದ ಪರಾರಿ ಮಾರ್ಗ ಕೂಡ ರೂಪಿಸಿಕೊಂಡಿತ್ತು. ಕರ್ನಾಟಕದಿಂದ ಆಂಧ್ರ ಪ್ರದೇಶ ಪ್ರವೇಶಿಸಿ, ಅಲ್ಲಿಂದ ಉತ್ತರ ಪ್ರದೇಶದ ಮೂಲಕ ಅಥವಾ ನೇರವಾಗಿ ಗೋವಾಕ್ಕೆ ತೆರಳುವ ಯೋಜನೆ ಇವರದ್ದಾಗಿತ್ತು. ಅಂತಿಮವಾಗಿ ಗೋವಾಕ್ಕೆ ತೆರಳಿ ಕ್ಯಾಸಿನೊಗಳಲ್ಲಿ ಹಣ ವ್ಯಯಿಸುವ ಉದ್ದೇಶ ಇವರು ಹೊಂದಿದ್ದರು. ಸಾಲದ ಹಣ ತೀರಿಸುವ ಉದ್ದೇಶವೂ ಇವರಲ್ಲಿತ್ತು ಎಂಬ ಅಂಶವನ್ನು ಚಾರ್ಜ್​​ಶೀಟ್​​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಇನ್ನು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್, ಎ2 ಅಣ್ಣಪ್ಪ ನಾಯ್ಕ್ ಕೂಡ ಪ್ರಮುಖ ಪಾತ್ರ ವಹಿಸಿದ್ದ. ಎ4 ರವಿ ಕಾರ್ಯಾಚರಣೆ ಜಾರಿಗೊಳಿಸುವಲ್ಲಿ ಪಾತ್ರ ವಹಿಸಿದ್ದರೆ, ಆರೋಪಿ ಎ3 ಗೋಪಾಲ ಪ್ರಸಾದ್ ಅಲಿಯಾಸ್ ಗೋಪಿ ಲಾಜಿಸ್ಟಿಕ್ ಮಾಹಿತಿ ಒದಗಿಸಿದ್ದ ಎನ್ನಲಾಗಿದೆ. ತನಿಖಾ ತಂಡ ಒಟ್ಟು 129 ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಕಣ್ಣಾರೆ ಕಂಡ ಸಾಕ್ಷಿದಾರರ ಹೇಳಿಕೆಗಳು, ತಾಂತ್ರಿಕ ಹಾಗೂ ಫೊರೆನ್ಸಿಕ್ ಸಾಕ್ಷ್ಯಗಳು, ಬೆರಳಚ್ಚುಗಳ ಮೂಲಕ ಆರೋಪಿಗಳ ಗುರುತು ಸೇರಿದಂತೆ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:29 pm, Fri, 13 February 26

Source link

ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲು: ಸಂಜೀವಿನಿ ಗುಡ್ಡದೊಳಗೊಂದು ವಿಸ್ಮಯ ಲೋಕ – Kannada News | Gadag’s Sanjeevini Hill: Unveiling Ancient Gold Treasures and Hidden Mysteries

ಗದಗ, ಫೆಬ್ರವರಿ 13: ಐತಿಹಾಸಿ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ ಸಿಕ್ಕ ಬಳಿಕ ಸಂಪತ್ತಿನ ಖಜಾನೆಗಳ ಒಂದೊಂದು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿ ಸಂಪತ್ತನ್ನೂ ಮೀರಿಸುವ ಸಂಪತ್ತಿನ ಖಜಾನೆಗಳು ಗದಗ ಜಿಲ್ಲೆಯಲ್ಲಿವೆ. ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಬಗ್ಗೆಯೂ ಟಿವಿ9 ಇಂಚಿಂಚು ವರದಿ ಮಾಡಿದೆ. ಆದರೆ ಇದೀಗ ರಹಸ್ಯ ಗವಿಯೊಳಗೆ ಸಂಪತ್ತು ಸುದ್ದಿ ಕೇಳಿದರೆ ನೀವು ಬೆಚ್ಚಿಬೀಳ್ತೀರಾ. ಈ ಸಂಜೀವಿನಿ ಗುಡ್ಡದ (Sanjeevini Hill) ಗವಿಯೊಳಗೆ ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರವಿದೆಯಂತೆ.

ಲಕ್ಕುಂಡಿ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು, ರಾಷ್ಟ್ರಕೂಟರು ಆಳಿದ ನಾಡು. ಇದೇ ಲಕ್ಕುಂಡಿಯಲ್ಲಿ ಸಂಪತ್ತಿನ ಖಜಾನೆಯೇ ಇದೆ. ಚಿನ್ನದ ನಾಣ್ಯ ಟಂಕಿಸುತ್ತಿದ್ದ ಲಕ್ಕುಂಡಿ. ಇದೇ ಲಕ್ಕುಂಡಿಯಲ್ಲಿ ಜನೇವರಿ 10 ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 466 ಗ್ರಾಮ ಚಿನ್ನದ ನಿಧಿ ಸಿಕ್ಕಿದೆ. ಈ ಸಿಕ್ಕಿದ್ದೇ ತಡ ಐತಿಹಾಸಿಕ ಲಕ್ಕುಂಡಿಯ ಗತವೈಭ ರಹಸ್ಯಗಳು ನಿತ್ಯವೂ ಹೊರಬರ್ತಾಯಿವೆ. ಲಕ್ಕುಂಡಿ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಸಂಪತ್ತು ಆಯ್ತು. ಈಗ ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು?

ಕರಿಯಮ್ಮನ ಗುಡ್ಡದ ಈ ಗುಹೆಯೊಳಗಿನ ಸಂಪತ್ತಿನ ವಿಷಯ ಕೇಳಿದರೆ ನೀವು ದಂಗಾಗಿ ಹೋಗ್ತೀರಾ. ಐತಿಹಾಸಿಕ ಲಕ್ಕುಂಡಿ, ಕಪತ್ತಗುಡ್ಡದ ಚಿನ್ನದ ಗುಹೆಗಳಿಗೂ ಮೀರಿಸುವಂತಿದೆ ಈ ನಿಗೂಢ ಗವಿಯ ಸಂಪತ್ತು. ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರ ಸಂಪತ್ತು ಈ ಗವಿಯೊಳಗಿದೆಯಂತೆ. ಅತ್ತಿಕಟ್ಟಿ ಗ್ರಾಮದ ರವಿ ಚವ್ಹಾಣ, ವಿಷ್ಣು ಚವ್ಹಾಣ ರೋಚಕ, ವಿಸ್ಮಯ, ಕೌತಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಈ ರಹಸ್ಯ ಸಂಪತ್ತಿನ ಗವಿ ಇರುವ ಜಾಗಕ್ಕೆ ತಲುಪೋದು ರೋಚಕ, ಭಯಾನಕ.

ಕಪ್ಪತ್ತಗುಡ್ಡ ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ಒಟ್ಟು 34 ಹೇಕ್ಟರ್ ಪ್ರದೇಶ ವಿಸ್ತಾರ ಹೊಂದಿದೆ. ಕಪ್ಪತ್ತಗುಡ್ಡ ತನ್ನೊಡಲ್ಲಿ ಚಿನ್ನ, ಅದಿರು, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿ ಪಂಚ ಖನಿಜಗಳ ಸಂಪತ್ತೆ ತುಂಬಿಕೊಂಡಿದೆ. ಅಷ್ಟೇ ಅಲ್ಲ ಕಪ್ಪತ್ತಗುಡ್ಡ ಔಷಧಿಯ ಸಸ್ಯಗಳ ಕಾಶಿ. ಅಮೂಲ್ಯವಾದ ಆಯುರ್ವೇದಿಕ ಸಸ್ಯ ಸಂಪತ್ತು ಇದೆ. ಹೀಗಾಗಿ ಕಪ್ಪತ್ತಗುಡ್ಡ ಸಾಮಾನ್ಯ ಗುಡ್ಡವಲ್ಲ. ಆದರೆ ಈ ಗುಡ್ಡದೊಳಗೊಂದು ಸಂಜೀವಿನಿ ಗುಡ್ಡ ಇದೆ. ಹನುಮಂತ ಸಂಜೀವೀನಿ ಪರ್ವತ ತೆಗೆದುಕೊಂಡು ಹೋಗುವಾಗ ಪರ್ವತದ ತುಣುಕು ಬಿದ್ದ ಜಾಗವೇ ಈ ಸಂಜೀವಿನಿ ಪರ್ವತ.

ನೂರಾರು ವರ್ಷಗಳಿಂದ ಋಷಿಮುನಿ ತಪಸ್ಸು 

ಈ ಸಂಜೀವಿನಿ ಪರ್ವತದ ಗುಹೆಯೊಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ತಪಸ್ಸು ಮಾಡ್ತಾಯಿದ್ದಾರಂತೆ. ಬಂಗಾರದ ಶಿವಲಿಂಗಕ್ಕೆ ನಿತ್ಯ ಈ ಋಷಿಮುನಿಗಳು ಪೂಜೆ, ಪುನಸ್ಕಾರ ಮಾಡ್ತಾಯಿದ್ದಾರಂತೆ. ಸಂಜೀವಿನಿ ಪರ್ವದಲ್ಲಿರುವ ಗವಿಯೊಳಗೆ ಅಪಾರ ಶಕ್ತಿಯಿಂದೆಯಂತೆ. ನಿತ್ಯ ಪೂಜೆ ಮಾಡುವ ಋಷಿಮುನಿಗಳು ಲಿಂಗದಲ್ಲಿ ಬರುವ ಒಂಚೂರು ಸೂಸು ಮಣ್ಣು ತಿಂದರೆ ನೂರು ವರ್ಷ ಆಯಸ್ಸು ಹೆಚ್ಚಾಗುತ್ತಂತೆ. ಆ ಮಣ್ಣು ತಿಂದೇ ನೂರಾರು ವರ್ಷ ಋಷಿಮುನಿಗಳು ತಪ, ಜಪ ಮಾಡ್ತಾಯಿದ್ದಾರಂತೆ.

ಈ ಗುಹೆಯೊಳಗಿನ ಚಿನ್ನ, ವಜ್ರ ವೈಢೂರ್ಯಗಳ ಸಂಪತ್ತಿನ ಬಗ್ಗೆ ಕೇಳಿದರೆ ನೀವು ದಂಗಾಗಿ ಹೋಗ್ತೀರಾ.  ಚಿನ್ನದ ಬೃಹತ ರಥ, ಚಿನ್ನದ ಎತ್ತುಗಳು, ಚಿನ್ನ, ವಜ್ರಖಚಿತ ದೇವಿಮೂರ್ತಿ ಸೇರಿ ಅಪಾರ ಸಂಪತ್ತು ಇದೆ. ಈ ಸಂಪತ್ತಿನ ಬಗ್ಗೆ ಲೇಖನಿ ಇದೆ ಅಂತ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದರಂತೆ. ಈಗ ಆ ಅಧಿಕಾರಿ ಮೃತಪಟ್ಟಿದ್ದಾರೆ‌‌. ಈ ಗುಹೆಯ ಸಂಪತ್ತಿನ ಬಗ್ಗೆ ಆ ಅಧಿಕಾರಿ ಬಳಿ ಪುಸ್ತಕವೇ ಇದೆ ಅಂತ ಅತ್ತಿಕಟ್ಟಿ ಗ್ರಾಮಸ್ಥರು ಹೇಳಿದ್ದಾರೆ.

ಇನ್ನು 10 ವರ್ಷಗಳ ಹಿಂದೆ ಓರ್ವ ಸ್ವಾಮಿಜಿ ಬಂದು ಈ ಗವಿಯಲ್ಲಿ ತಪಸ್ಸು ಮಾಡಿದ್ದರು. ಈ ಗವಿಯ ಒಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ವಾಸವಾಗಿದ್ದಾರಂತೆ. ನನ್ನ ತಪಸ್ಸಿನ ಶಕ್ತಿಯಿಂದ ಅವರನ್ನ ಹೊರ ಕರೆದುಕೊಂಡು ಬರ್ತೀನಿ ಅಂತ ಸ್ವಾಮೀಜಿ ತಪಸ್ಸು ಕುಳಿತಿದ್ದರಂತೆ. ಹಣ್ಣು, ಹಾಲು ಇಟ್ಟು ಸ್ವಾಮೀಜಿ ರಾತ್ರಿಯೀಡಿ ತಪಸ್ಸು ಮಾಡ್ತಿದ್ರಂತೆ. ರಾತ್ರಿ ಕಾಡುಪ್ರಾಣಿಗಳು ಬಂದು ಹಣ್ಣುಗಳು ತಿದ್ದರೆ, ಬೃಹತ್ ಸರ್ಪ ಹಾಲು ಕುಡಿದು ಹೋಗ್ತಾಯಿತ್ತಂತೆ.

ಇಲ್ಲೊಂದು ಕರಿಯಮ್ಮನ ದೇವಸ್ಥಾನ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರಂತೆ. ಅದಕ್ಕೆ ಅತ್ತಿಕಟ್ಟಿ ಗ್ರಾಮಸ್ಥರೆಲ್ಲಾ ಒಪ್ಪಿದ್ದರು. ಆದರೆ ಆಗ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರನ್ನು ಕರೆತಂದು ಸ್ಮಾಮೀಜಿಗೆ ತಪಸ್ಸು ಮಾಡಲು ಬಿಡಲಿಲ್ಲ. ಗವಿಯಿಂದ ಸ್ವಾಮೀಜಿಯನ್ನು ಎಬ್ಬಿಸಿ ಕಳುಹಿಸಿದ್ದರು. ಆಗ ಅಂದಿನ ಅರಣ್ಯ ಇಲಾಖೆ ಅಧಿಕಾರಿ ಗ್ರಾಮಸ್ಥರಿಗೆ ಈ ಗವಿಯ ರಹಸ್ಯ ಹೇಳಿದರು. ಆ ಸ್ವಾಮೀಜಿ ಗುಹೆಯೊಳಗಿನ ಋಷಿಮುನಿಗೆ ಹೊರಕರೆತರಲು ಬಂದಿಲ್ಲ. ಬದಲಾಗಿ ಈ ಗುಹೆಯೊಳಗೆ ಅಪಾರ ಸಂಪತ್ತು ಇದೆ. ಅದನ್ನ ತೆಗೆದುಕೊಂಡು ಹೋಗಲು ಬಂದಿದ್ದಾನಂತೆ ಅಂತ ಹೇಳಿದ್ರು. ಆದ್ರೆ, ಇದನ್ನು ನಂಬದ ಗ್ರಾಮಸ್ಥರು ಪ್ರಶ್ನೆ ಮಾಡಿದ್ರು. ಇಲ್ಲಿ ಸಂಪತ್ತು ಎಲ್ಲಿಂದ ಬಂತು. ಯಾರ ಸಂಪತ್ತು ಅಂತ ಹತ್ತಾರು ಪ್ರಶ್ನೆ ಮಾಡಿದ್ದಾರೆ. ಆಗ ಅರಣ್ಯ ಅಧಿಕಾರಿ ಈ ಗುಹೆಯೊಳಗೆ ಚಿನ್ನದ ರಥ, ಎತ್ತುಗಳು, ದೇವಿಮೂರ್ತಿ ವಜ್ರ ವೈಢೂರ್ಯ ತುಂಬಿದೆ. ಅದಕ್ಕೆ ಲೇಖನಿ ಇದೆ ಅಂತ ನಮಗೂ ಹೇಳಿದ್ದಾರೆ. ನಮ್ಮ ಹಿರಿಯರೂ ಹೇಳುತ್ತಿದ್ದರು.

ರೊಚಕ ಸತ್ಯ ಬಿಚ್ಚಿಟ್ಟ ಅತ್ತಿಕಟ್ಟಿ ಗ್ರಾಮಸ್ಥರು

ಹತ್ತು ವರ್ಷಗಳ‌ ಹಿಂದೆ‌ ನಡೆದ ಘಟನೆಯ ರೊಚಕ ಸತ್ಯವನ್ನು ಅತ್ತಿಕಟ್ಟಿ ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮ ಕಣ್ಮುಂದೆಯೇ ಗವಿಯೊಳಗೆ ತಪಸ್ಸು‌ ಮಾಡ್ತಾಯಿದ್ದ ಸ್ವಾಮೀಜಿಯನ್ನು ಹೊತ್ತೊಯ್ಯೊದ್ರು. ಆ ಸ್ವಾಮೀಜಿ ಕೂಡ ಸಾಕಷ್ಟು ಪವಾಡ ಮಾಡಿ ತೋರಿಸಿದ್ರು. ಆ ಸ್ವಾಮೀಜಿಯನ್ನು ಚುಟ್ಟಾ (ಬೀಡಿ) ಸ್ವಾಮೀಜಿ ಅಂತಾನೆ ಕರೆಯುತ್ತಿದ್ದರು. ಏನೇ ಪವಾಡ ಮಾಡಬೇಕದರೂ ಮೊದಲು ಚುಟ್ಟಾ ಸೇದಿ ಆ ಮೇಲೆ‌ ಪವಾಡ ಮಾಡ್ತಾಯಿದ್ರು. ಹತ್ತು ವರ್ಷದ ಹಿಂದೆ ನಮ್ಮೂರಿಗೆ ಬರಗಾಲ ಬಿದ್ದಿತ್ತು. ಆಗ ಸ್ವಾಮೀಜಿಗೆ ಗ್ರಾಮಸ್ಥರು ಹೇಳಿದ್ರು. ಆಗ ಒಂದು ಚುಟ್ಟಾ ಹಚ್ಚಿ ಟೆಂಗಿನ ಕಾಯಿ ತಗೊಂಡು ಮೋಡ ಇರುವ ಕಡೆ ಮೂರು ಬಾರಿ ಇಳಿಸಿ ಅತ್ತಿಕಟ್ಟಿ ಗ್ರಾಮದ ಕಡೆ ಎಸೆದ್ರಂತೆ ಒಂದು ಗಂಟೆಯಲ್ಲಿ ಮಳೆ ಸುರಿಯಿತು ಅಂತ ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

ಸಂಜೀವಿನಿ ಗುಡ್ಡ ರಹಸ್ಯವೇ ರೋಚಕ, ವಿಸ್ಮಯ, ಕೌತುಕ. ಸಂಜೀವಿನಿ ಗವಿಯೊಳಗೊಂದು ಅದ್ಭುತ ಸಂಪತ್ತಿನ ಜಗತ್ತೇ ಇದೆಯಂತೆ. ಗವಿಯೊಳಗೆ ಹೋದರೆ ವಿಶಾಲವಾದ ಜಗತ್ತು ಇದೆಯಂತೆ. ಋಷಿಮುನಿ ತಪಸ್ಸು, ಸಂಪತ್ತಿನ ಪಕ್ಕ ನೀರು ಹರಿಯುತ್ತಿದೆಯಂತೆ. ಆ ಸಂಪತ್ತಿನ ಸ್ಥಳಕ್ಕೆ ಯಾರಿಗೂ ಹೋಗಲು ಆಗಲ್ವಂತೆ. ಇಲ್ಲೂ ಸರ್ಪಕಾವಲು ಇದೆ.

ಸಂಜೀವಿನಿ ಬೆಟ್ಟದ ಗುಹೆಯ ಬಗ್ಗೆ ಅತ್ತಿಕಟ್ಟಿ ಗ್ರಾಮಸ್ಥರು ಹೇಳೂ ಅದ್ಭುತ, ರೋಚಕ ಸಂಗತಿಗಳು ಮೈಜುಮ್ ಎನಿಸುತ್ತೆ. ಈ ರೀತಿಯ ಸಂಪತ್ತಿನ ಜಗತ್ತು ಇರೋಕೆ ಸಾಧ್ಯನಾ? ಗ್ರಾಮಸ್ಥರು ಹೇಳೋದು ಸತ್ಯವಾ ಅನ್ನೋ ಹತ್ತಾರು ಪ್ರಶ್ನೆಗಳು ಕಾಡುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಇನ್ಮುಂದೆ ಪ್ಯಾಂಟಿ ಹಾಕಲ್ಲ’; ಜ್ಯೋತಿಷಿ ಹೇಳಿದಂತೆ ನಡೆದುಕೊಂಡ ರಾಖಿ ಸಾವಂತ್ – Kannada News | Rakhi Sawant Will Not Wear Panty And Other innerwear Astrologer Suggested this

ರಾಖಿ ಸಾವಂತ್ ಅವರು ಸದಾ ಸುದ್ದಿಲ್ಲಿ ಇರಲು ಪ್ರಯತ್ನಿಸುತ್ತಾರೆ. ಅವರು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಸದಾ ಮುಂದಿರುತ್ತಾರೆ. ಈಗ ಅವರು ನೀಡಿರೋ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಅವರು ಇನ್ಮುಂದೆ ಒಳ ಉಡುಪು ಹಾಕುವುದಿಲ್ಲವಂತೆ. ಇದಕ್ಕೆ ಜ್ಯೋತಿಷಿಗಳು ಕೊಟ್ಟ ಸೂಚನೆಯೇ ಕಾರಣ ಎಂದು ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸುತ್ತಾ ಇದ್ದಾರೆ.

ರಾಖಿ ಸಾವಂತ್ ಅವರು ಓಪನ್ ಆಗಿ ಮಾತನಾಡುತ್ತಾರೆ. ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಅವರು ಅತಿಯಾಗಿ ನಡೆದುಕೊಳ್ಳುತ್ತಾರೆ. ಈಗ ಅವರು ಆಡಿದ ಮಾತು ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ‘ನಂಗೆ ಜ್ಯೋತಿಷಿ ಒಬ್ಬರು, ಒಂದು ವರ್ಷದವರೆಗೆ ಪ್ಯಾಂಟಿ, ಬನಿಯಾನ್ ಹಾಕುದಂತೆ ಸೂಚನೆ ನೀಡಿದ್ದಾರೆ. ಅದನ್ನು ಫಾಲೋ ಮಾಡ್ತೀನಿ. ಆಗ ನನ್ನ ವೃತ್ತಿ ಜೀವನ ಮೇಲೆ ಹೋಗಲಿದೆಯಂತೆ’ ಎಂದು ರಾಖಿ ಸಾವಂತ್ ಹೇಳಿದರು.

‘ಈಗಲೂ ಹಾಕಿಲ್ಲವೇ’ ಎಂದು ಅವರಿಗೆ ಕೇಳಲು ಆ್ಯಂಕರ್ ಮುಜುಗರ ಮಾಡಿಕೊಂಡರು. ಇದನ್ನು ಅರ್ಥ ಮಾಡಿಕೊಂಡ ರಾಖಿ ಸಾವಂತ್, ‘ಮುಜುಗರ ಮಾಡಿಕೊಳ್ಳದೆ ಕೇಳಿ’ ಎಂದು ಹೇಳಿದ್ದಾರೆ. ‘ನನ್ನ ಜೀವನ ಮತ್ತೊಂದು ಹಂತಕ್ಕೆ ಹೋಗುತ್ತದೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ. ಇದಕ್ಕಾಗಿ ಇದನ್ನು ಫಾಲೋ ಮಾಡ್ತಾ ಇದೀನಿ’ ಎಂಬುದು ರಾಖಿ ಸಾವಂತ್ ಮಾತು.

ಇದನ್ನೂ ಓದಿ: ‘ಮದುವೆ ಆಗಲ್ಲ’: ರಾಖಿ ಸಾವಂತ್​ಗೆ ಪ್ರಪೋಸ್ ಮಾಡಿ ಉಲ್ಟಾ ಹೊಡೆದ ಪಾಕ್ ಮಾಡೆಲ್

ರಾಖಿ ಸಾವಂತ್ ಮಾತಿಗೆ ಸದ್ಯ ಎಲ್ಲ ಕಡೆಗಳಿಂದ ಟೀಕೆಗಳು ಬಂದಿವೆ. ಅವರು ಈ ರೀತಿ ಹೇಳಿದ್ದು ಸರಿ ಅಲ್ಲ ಎಂದು ಸಾಕಷ್ಟು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಪಬ್ಲಿಸಿಟಿ ಸ್ಟಂಟ್ ಎಂಬುದು ಕೂಡ ಕೆಲವರ ಅಭಿಪ್ರಾಯ.

ಈ ಮೊದಲು ಅವರು ಮುಸ್ಲಿಂ ವ್ಯಕ್ತಿ ಮದುವೆ ಆಗಿದ್ದರು. ಇದಕ್ಕಾಗಿ ಅವರು ಮುಸ್ಲಿಂ ಆಗಿಯೂ ಮತಾಂತರಗೊಂಡಿದ್ದರು. ಆದರೆ, ವಿಚ್ಛೇದನದಲ್ಲಿ ಇದು ಕೊನೆಗೊಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Solar Eclipse 2026: ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Dr. Basavaraj Gurujis Predictions for Leo Zodiac Sign.

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿದೆ. ಈ ಗ್ರಹಣವು ಸಿಂಹ ರಾಶಿಯ ಕಳತ್ರ ಸ್ಥಾನದಲ್ಲಿ, ಅಂದರೆ ಏಳನೇ ಮನೆಯಲ್ಲಿ ಸಂಭವಿಸಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಖಾ, ಪುಬ್ಬಾ, ಉತ್ತರಾ ನಕ್ಷತ್ರದವರಿಗೆ ಈ ರಾಶಿಯ ಪ್ರಭಾವ ಇರುತ್ತದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ.

ಗ್ರಹಣದ ಪ್ರಭಾವ ಅಷ್ಟು ಶುಭಕರವಾಗಿಲ್ಲ ಎನ್ನಲಾಗಿದೆ. ಗಂಡ-ಹೆಂಡತಿಯರ ನಡುವೆ ಜಗಳ, ಕುಟುಂಬದಲ್ಲಿ ಅನಗತ್ಯ ತೊಂದರೆಗಳು, ರಾಜಕೀಯ ಅಪವಾದಗಳು ಮತ್ತು ಕೆಲವರಿಗೆ ಸ್ಥಾನ ನಷ್ಟವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸ್ವಲ್ಪ ನಷ್ಟಗಳು, ಆರೋಗ್ಯದಲ್ಲಿ ಏರುಪೇರು ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಶುಭಫಲವಿದ್ದರೂ, ಹೊಸ ಭೂಮಿ ಖರೀದಿಯಲ್ಲಿ ಎಚ್ಚರಿಕೆ ಅಗತ್ಯ. ವಿದೇಶ ಪ್ರಯಾಣ, ಮಕ್ಕಳಿಂದ ಸಂತೋಷ, ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಹಾಗೂ ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಗ್ರಹಣದ ದಿನ ಜಪತಪಗಳಿಗೆ ಪ್ರಾಶಸ್ತ್ಯ ನೀಡಿ, ನವಧಾನ್ಯ ಹಾಗೂ ಗೋಧಿ-ಬೆಲ್ಲ ದಾನ ಮಾಡುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ – Kannada News | Hubballi KIMS Implements QR Code for Enhanced Maternity Ward Security and Access

ಹುಬ್ಬಳ್ಳಿ, ಫೆ.13: ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಪ್ಲಾನ್ ಮಾಡಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ತಂದಿದೆ. ಇನ್ನು ಮುಂದೆ ಹೆರಿಗೆ ವಾರ್ಡ್ಗೆ ಬರಬೇಕಾದರೆ ಕ್ಯೂಆರ್​​ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್​​​​ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ ಕ್ಯೂಆರ್ ಕೋಡ್ ಜನರೇಟ್ ಮಾಡಿ ನೀಡುತ್ತಾರೆ. ಇದನ್ನು ಸ್ಕ್ಯಾನ್ ಮಾಡಿದ ನಂತರವೇ ಒಳಹೋಗಲು ಅವಕಾಶವಿರುತ್ತದೆ. ಸಾಮಾನ್ಯ ಹೆರಿಗೆಯಾದವರಿಗೆ 3 ದಿನಗಳ ಪಾಸ್ ಮತ್ತು ಸಿಸೇರಿಯನ್ ಆದವರಿಗೆ 7 ದಿನಗಳ ಪಾಸ್ ನೀಡಲಾಗುತ್ತದೆ. ಒಂದು ಪಾಸ್ ಬಳಸಿ ಒಬ್ಬರು ಒಳಹೋದರೆ, ಅದೇ ಪಾಸ್ ಅನ್ನು ಹೊರಗಿನವರಿಗೆ ನೀಡಿ ಅವರು ಒಳಬರಲು ಸಾಧ್ಯವಿಲ್ಲ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಕ್ಯಾಂಟರ್​ ಚಾಲಕ – Kannada News | Hosakote Highway Tragedy: Canter Driver Describes Deadly Hosakote Accident

ದೇವನಹಳ್ಳಿ, ಫೆಬ್ರವರಿ 13: ಹೊಸಕೋಟೆ-ದಾಬಸ್​​ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 7 ಜನ ದುರ್ಮರಣ ಹೊಂದಿದ್ದು, ಅಪಘಾತದಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ ಘಟನೆಯ ಕುರಿತು ವಿವರಿಸಿದ್ದಾರೆ. ಮಾಲೂರು ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನ ಕ್ಯಾಂಟರ್​​ಗೆ ಗುದ್ದಿದೆ. ಇದರಿಂದ ಕ್ಯಾಂಟರ್ ಪಲ್ಟಿಯಾಗಿದ್ದು, ಸ್ಥಳೀಯರು ಸಹಾಯಕ್ಕೆ ಬಂದು ತನ್ನನ್ನು ಮೇಲೆತ್ತಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಸ್ನೇಹಿತರಿಗೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Solar Eclipse 2026 Horoscope: ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ? – Kannada News | Solar Eclipse 2026: Astrological Impacts on Cancer Zodiac Sign by Dr. Basavaraj Guruji

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸಂಭವಿಸಲಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಚಂದ್ರ, ಸೂರ್ಯ, ರಾಹು, ಶುಕ್ರ ಮತ್ತು ಬುಧ ಗ್ರಹಗಳ ಭಾಗವಹಿಸುವಿಕೆಯಿಂದಾಗಿ ಕರ್ಕಾಟಕ ರಾಶಿಯವರು ಎಚ್ಚರದಿಂದ ಇರಬೇಕಾಗುತ್ತದೆ. ಆಕಸ್ಮಿಕ ಅನಾರೋಗ್ಯ, ದೃಷ್ಟಿದೋಷಗಳು, ಮತ್ತು ಶತ್ರು ಕಾಟದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಸ್ಥಿರತೆ, ಮಾನಸಿಕ ಯಾತನೆ ಹಾಗೂ ನಂಬಿಕೆ ದ್ರೋಹದಂತಹ ಸನ್ನಿವೇಶಗಳು ಇರಬಹುದು.

ಆದಾಗ್ಯೂ, ಕರ್ಕಾಟಕ ರಾಶಿಯವರಿಗೆ ಉತ್ತಮ ದೈವಬಲ ಇರುವುದು ಸಮಾಧಾನಕರ ಸಂಗತಿ. ಕೃಷಿ ಕ್ಷೇತ್ರಕ್ಕೆ ಲಾಭವಾಗಲಿದ್ದು, ದಿನಸಿ ವ್ಯಾಪಾರಿಗಳಿಗೆ ಒಳ್ಳೆಯದಾಗಲಿದೆ. ಮಹಿಳಾ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಶುಭ ಯೋಗವಿದೆ. ದುರ್ಗಾ ಸ್ತೋತ್ರ ಪಠಣ ಮತ್ತು ಓಂ ದುಂ ದುರ್ಗಾಯೈ ನಮಃ ಮಂತ್ರ ಜಪಿಸುವುದರಿಂದ ಈ ಗ್ರಹಣದ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು. ಸುಬ್ರಹ್ಮಣ್ಯನಿಗೆ ಐದು ತೆಂಗಿನಕಾಯಿಗಳನ್ನು ಅರ್ಪಿಸುವುದು ಕೂಡ ಶುಭಕರ ಎಂದು ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AUS vs ZIM: ಬಲಿಷ್ಠ ಆಸ್ಟ್ರೇಲಿಯಾಕ್ಕೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – Kannada News | Historic Upset: Zimbabwe Defeats Strong Australia in 2026 T20 World Cup Match

2026 ರ ಟಿ20 ವಿಶ್ವಕಪ್​ನ 19ನೇ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಗೆಲುವು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದ ಜಿಂಬಾಬ್ವೆ ಆಟಗಾರರು ಕೆಚ್ಚೆದೆಯ ಹೋರಾಟ ನೀಡಿ ಕಾಂಗರೂಗಳಿಗೆ ಮಣ್ಣು ಮುಕ್ಕಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಜಿಂಬಾಬ್ವೆ ಬೌಲರ್​ಗಳ ಯೋಜಿತ ದಾಳಿಗೆ ತತ್ತರಿಸಿ 146 ರನ್​ಗಳಿಸಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link