Category Archives: Blog

Your blog category

Solar Eclipse 2026: ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Dr. Basavaraj Gurujis Predictions for Leo Zodiac Sign.

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಲಿದೆ. ಈ ಗ್ರಹಣವು ಸಿಂಹ ರಾಶಿಯ ಕಳತ್ರ ಸ್ಥಾನದಲ್ಲಿ, ಅಂದರೆ ಏಳನೇ ಮನೆಯಲ್ಲಿ ಸಂಭವಿಸಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮಖಾ, ಪುಬ್ಬಾ, ಉತ್ತರಾ ನಕ್ಷತ್ರದವರಿಗೆ ಈ ರಾಶಿಯ ಪ್ರಭಾವ ಇರುತ್ತದೆ. ಸಿಂಹ ರಾಶಿಯವರು ಈ ಅವಧಿಯಲ್ಲಿ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ.

ಗ್ರಹಣದ ಪ್ರಭಾವ ಅಷ್ಟು ಶುಭಕರವಾಗಿಲ್ಲ ಎನ್ನಲಾಗಿದೆ. ಗಂಡ-ಹೆಂಡತಿಯರ ನಡುವೆ ಜಗಳ, ಕುಟುಂಬದಲ್ಲಿ ಅನಗತ್ಯ ತೊಂದರೆಗಳು, ರಾಜಕೀಯ ಅಪವಾದಗಳು ಮತ್ತು ಕೆಲವರಿಗೆ ಸ್ಥಾನ ನಷ್ಟವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸ್ವಲ್ಪ ನಷ್ಟಗಳು, ಆರೋಗ್ಯದಲ್ಲಿ ಏರುಪೇರು ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಶುಭಫಲವಿದ್ದರೂ, ಹೊಸ ಭೂಮಿ ಖರೀದಿಯಲ್ಲಿ ಎಚ್ಚರಿಕೆ ಅಗತ್ಯ. ವಿದೇಶ ಪ್ರಯಾಣ, ಮಕ್ಕಳಿಂದ ಸಂತೋಷ, ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಹಾಗೂ ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಗ್ರಹಣದ ದಿನ ಜಪತಪಗಳಿಗೆ ಪ್ರಾಶಸ್ತ್ಯ ನೀಡಿ, ನವಧಾನ್ಯ ಹಾಗೂ ಗೋಧಿ-ಬೆಲ್ಲ ದಾನ ಮಾಡುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ – Kannada News | Hubballi KIMS Implements QR Code for Enhanced Maternity Ward Security and Access

ಹುಬ್ಬಳ್ಳಿ, ಫೆ.13: ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಪ್ಲಾನ್ ಮಾಡಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ತಂದಿದೆ. ಇನ್ನು ಮುಂದೆ ಹೆರಿಗೆ ವಾರ್ಡ್ಗೆ ಬರಬೇಕಾದರೆ ಕ್ಯೂಆರ್​​ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್​​​​ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ ಕ್ಯೂಆರ್ ಕೋಡ್ ಜನರೇಟ್ ಮಾಡಿ ನೀಡುತ್ತಾರೆ. ಇದನ್ನು ಸ್ಕ್ಯಾನ್ ಮಾಡಿದ ನಂತರವೇ ಒಳಹೋಗಲು ಅವಕಾಶವಿರುತ್ತದೆ. ಸಾಮಾನ್ಯ ಹೆರಿಗೆಯಾದವರಿಗೆ 3 ದಿನಗಳ ಪಾಸ್ ಮತ್ತು ಸಿಸೇರಿಯನ್ ಆದವರಿಗೆ 7 ದಿನಗಳ ಪಾಸ್ ನೀಡಲಾಗುತ್ತದೆ. ಒಂದು ಪಾಸ್ ಬಳಸಿ ಒಬ್ಬರು ಒಳಹೋದರೆ, ಅದೇ ಪಾಸ್ ಅನ್ನು ಹೊರಗಿನವರಿಗೆ ನೀಡಿ ಅವರು ಒಳಬರಲು ಸಾಧ್ಯವಿಲ್ಲ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಕ್ಯಾಂಟರ್​ ಚಾಲಕ – Kannada News | Hosakote Highway Tragedy: Canter Driver Describes Deadly Hosakote Accident

ದೇವನಹಳ್ಳಿ, ಫೆಬ್ರವರಿ 13: ಹೊಸಕೋಟೆ-ದಾಬಸ್​​ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 7 ಜನ ದುರ್ಮರಣ ಹೊಂದಿದ್ದು, ಅಪಘಾತದಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ ಘಟನೆಯ ಕುರಿತು ವಿವರಿಸಿದ್ದಾರೆ. ಮಾಲೂರು ಕಡೆಯಿಂದ ತುಮಕೂರಿಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನ ಕ್ಯಾಂಟರ್​​ಗೆ ಗುದ್ದಿದೆ. ಇದರಿಂದ ಕ್ಯಾಂಟರ್ ಪಲ್ಟಿಯಾಗಿದ್ದು, ಸ್ಥಳೀಯರು ಸಹಾಯಕ್ಕೆ ಬಂದು ತನ್ನನ್ನು ಮೇಲೆತ್ತಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಸ್ನೇಹಿತರಿಗೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Solar Eclipse 2026 Horoscope: ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ? – Kannada News | Solar Eclipse 2026: Astrological Impacts on Cancer Zodiac Sign by Dr. Basavaraj Guruji

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸಂಭವಿಸಲಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಚಂದ್ರ, ಸೂರ್ಯ, ರಾಹು, ಶುಕ್ರ ಮತ್ತು ಬುಧ ಗ್ರಹಗಳ ಭಾಗವಹಿಸುವಿಕೆಯಿಂದಾಗಿ ಕರ್ಕಾಟಕ ರಾಶಿಯವರು ಎಚ್ಚರದಿಂದ ಇರಬೇಕಾಗುತ್ತದೆ. ಆಕಸ್ಮಿಕ ಅನಾರೋಗ್ಯ, ದೃಷ್ಟಿದೋಷಗಳು, ಮತ್ತು ಶತ್ರು ಕಾಟದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಸ್ಥಿರತೆ, ಮಾನಸಿಕ ಯಾತನೆ ಹಾಗೂ ನಂಬಿಕೆ ದ್ರೋಹದಂತಹ ಸನ್ನಿವೇಶಗಳು ಇರಬಹುದು.

ಆದಾಗ್ಯೂ, ಕರ್ಕಾಟಕ ರಾಶಿಯವರಿಗೆ ಉತ್ತಮ ದೈವಬಲ ಇರುವುದು ಸಮಾಧಾನಕರ ಸಂಗತಿ. ಕೃಷಿ ಕ್ಷೇತ್ರಕ್ಕೆ ಲಾಭವಾಗಲಿದ್ದು, ದಿನಸಿ ವ್ಯಾಪಾರಿಗಳಿಗೆ ಒಳ್ಳೆಯದಾಗಲಿದೆ. ಮಹಿಳಾ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಶುಭ ಯೋಗವಿದೆ. ದುರ್ಗಾ ಸ್ತೋತ್ರ ಪಠಣ ಮತ್ತು ಓಂ ದುಂ ದುರ್ಗಾಯೈ ನಮಃ ಮಂತ್ರ ಜಪಿಸುವುದರಿಂದ ಈ ಗ್ರಹಣದ ದುಷ್ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು. ಸುಬ್ರಹ್ಮಣ್ಯನಿಗೆ ಐದು ತೆಂಗಿನಕಾಯಿಗಳನ್ನು ಅರ್ಪಿಸುವುದು ಕೂಡ ಶುಭಕರ ಎಂದು ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AUS vs ZIM: ಬಲಿಷ್ಠ ಆಸ್ಟ್ರೇಲಿಯಾಕ್ಕೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – Kannada News | Historic Upset: Zimbabwe Defeats Strong Australia in 2026 T20 World Cup Match

2026 ರ ಟಿ20 ವಿಶ್ವಕಪ್​ನ 19ನೇ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಗೆಲುವು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದ ಜಿಂಬಾಬ್ವೆ ಆಟಗಾರರು ಕೆಚ್ಚೆದೆಯ ಹೋರಾಟ ನೀಡಿ ಕಾಂಗರೂಗಳಿಗೆ ಮಣ್ಣು ಮುಕ್ಕಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಜಿಂಬಾಬ್ವೆ ಬೌಲರ್​ಗಳ ಯೋಜಿತ ದಾಳಿಗೆ ತತ್ತರಿಸಿ 146 ರನ್​ಗಳಿಸಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

ಬೆಂಗಳೂರಿಗರೇ ಗಮನಿಸಿ: ಫೆ. 14ರಂದು ಈ ಪ್ರದೇಶಗಳಲ್ಲಿ ವಿದ್ಯುತ್​​ ವ್ಯತ್ಯಯ; ಇಲ್ಲಿದೆ ಮಾಹಿತಿ – Kannada News | Bengaluru Power Cut February 14: BESCOM Announces Scheduled Outages in Various Areas

ಬೆಂಗಳೂರು, ಫೆಬ್ರವರಿ 13: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 14 ಶನಿವಾರದಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ತುಮಕೂರಿನ  ಶಿರಾ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿಯೂ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್​​ ವ್ಯತ್ಯಯ

  • ಜಾಲಹಳ್ಳಿ: ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ, ಬಾಹುಬಲಿ ನಗರ, ಬ್ಲೂಮ್‌ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಪ್ರೆಸ್ಟೀಜ್ ಕೆನ್ಸಿಂಗ್ಟನ್, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್​​ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.
  • ದೊಮ್ಮಲೂರು: ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ ಹಂತ (6ನೇ ಮೇನ್​ ವರೆಗೆ), ಇಎಸ್‌ಐ ಆಸ್ಪತ್ರೆ, 100 ಅಡಿ ರಸ್ತೆ, ಸಲಾರ್ಪುರಿಯಾ ಜಿಆರ್ ಟೆಕ್ ಪಾರ್ಕ್, ಜೆಆರ್‌ಆರ್ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.
  • ಮೈಸೂರು ರಸ್ತೆ: ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್‌ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗ ವಿದ್ಯುತ್​​ ಸರಬರಾಜು ಇರಲ್ಲ.
  • ನೃಪತುಂಗ ರಸ್ತೆ: ಕುಬ್ಬನ್‌ಪೇಟೆ 3ನೇ, 4ನೇ, 5ನೇ, 6ನೇ ಕ್ರಾಸ್, 13ನೇ, 14ನೇ ಮತ್ತು 15ನೇ ಕ್ರಾಸ್, ಆರ್‌ಬಿಐ, ಯು‌ವಿ‌ಸಿ‌ಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಸೇಂಟ್ ಮಾರ್ತಾ ಆಸ್ಪತ್ರೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆಎಎಸ್ ಲೇನ್, ಕೆಜಿ ರಸ್ತೆ, ಓಟಿಸಿ ರಸ್ತೆ, ಶಾರದಾ ಥಿಯೇಟರ್, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ ಪ್ರದೇಶದಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:30 pm, Fri, 13 February 26

Source link

ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ – Kannada News | Meat Sale Banned in Bengaluru on Maha Shivaratri: Greater Bengaluru Authority Issues Order

ಬೆಂಗಳೂರು, ಫೆಬ್ರವರಿ 13: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆಬ್ರವರಿ 15 ರಂದು ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಆದೇಶ ಹೊರಡಿಸಿದೆ. ಜಿಬಿಎ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಈ ಆದೇಶವನ್ನು ಹೊರಡಿಸಿದ್ದು, ಫೆಬ್ರವರಿ 15 ರಂದು ಮಹಾಶಿವರಾತ್ರಿ ಹಬ್ಬವಿರುವ ಕಾರಣ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಹಬ್ಬದ ದಿನದಂದು ಪ್ರಾಣಿ ವಧೆ ಮಾಡುವುದಾಗಲಿ ಅಥವಾ ಮಾಂಸ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಲಿ ಸಂಪೂರ್ಣವಾಗಿ ನಿಷಿದ್ಧವಾಗಿದೆ. ನಾಗರಿಕರು ಆದೇಶವನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ – Kannada News | Bengaluru RTO Scam: 10,000+ FCs Issued Without Inspection at Koramangala

ಬಗೆದಷ್ಟು ಬಯಲಾಗುತ್ತಿದೆ RTO ಅಧಿಕಾರಿಗಳ ಭ್ರಷ್ಟಾಚಾರ! ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗ

ಬೆಂಗಳೂರು, ಫೆಬ್ರವರಿ 13: ಕೆಲ ದಿನಗಳ ಹಿಂದಷ್ಟೇ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಸದ್ದು ಮಾಡಿತ್ತು. ವಾಹನಗಳನ್ನು ತಪಾಸಣೆ ಮಾಡದೇ ಸಾವಿರಾರು ಹೊರ ರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ (ಎಫ್‌ಸಿ) ನೀಡಿರುವುದು ರಾಜ್ಯ ಸಾರಿಗೆ ಇಲಾಖೆ ಗಮನಕ್ಕೆ ಬಂದಿದ್ದಲ್ಲದೇ ಇದೀಗ ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗಗೊಂಡಿದೆ.

40 ಅಲ್ಲ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಅನಧಿಕೃತ ಎಫ್‌ಸಿ

ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 10,022 ವಾಹನಗಳಿಗೆ ಕಳೆದ ಆರು ತಿಂಗಳಲ್ಲಿ ಅನಧಿಕೃತವಾಗಿ ಎಫ್‌ಸಿ ನೀಡಲಾಗಿದೆ ಎಂದು ಟಿವಿ9 ಗೆ ದಾಖಲೆಗಳು ದೊರೆತಿದ್ದು, ಈ ಅಕ್ರಮದಲ್ಲಿ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಭಾಗಿಯಾಗಿರುವುದು ದೃಢಪಟ್ಟಿದೆ.

ಕಳೆದ ತಿಂಗಳು ಗುಜರಾತಿನ 41 ಶಾಲಾ ವಾಹನಗಳಿಗೆ ಎಫ್‌ಸಿ ನೀಡುವ ವೇಳೆ ತಪಾಸಣೆ ಮಾಡದೇ ಅನಧಿಕೃತ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ನಿಸಾರ್ ಅಹಮದ್ ಅಮಾನತುಗೊಂಡಿದ್ದರು. ಆದರೆ ಇದೀಗ ಬೆಳಕಿಗೆ ಬಂದ ದಾಖಲೆಗಳ ಪ್ರಕಾರ, ಕೇವಲ 41 ವಾಹನಗಳಷ್ಟೇ ಅಲ್ಲ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ವಾಹನಗಳಿಗೆ ಸಹ ತಪಾಸಣೆ ನಡೆಸದೆ ಎಫ್‌ಸಿ ನೀಡಲಾಗಿದೆ. ಈ ಎಲ್ಲಾ ಅಕ್ರಮಗಳ ಕುರಿತು ವಕೀಲ ನಟರಾಜ್ ಶರ್ಮಾ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು

 ಕೋರಮಂಗಲ ಆರ್ಟಿಓದಲ್ಲಿ ತಪಾಸಣೆ ಮಾಡದೆ ಎಫ್ಸಿ ನೀಡಿದ ದಾಖಲೆ

  1.  2025ರ ಆಗಸ್ಟ್ ನಲ್ಲಿ – 646 ವಾಹನಗಳಿಗೆ ಎಫ್ಸಿ ನೀಡಲಾಗಿದೆ.
    ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್- ಮಹಾರಾಷ್ಟ್ರಮತ್ತು ಗುಜರಾತಿನ 636 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
    ಎ.ಎ. ಖಾನ್.( ಹಿರಿಯ ಮೋಟಾರು ವಾಹನ ನಿರೀಕ್ಷಕ ) ಮಹಾರಾಷ್ಟ್ರದ 10 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  2.  ಸೆಪ್ಟೆಂಬರ್ – 1,168 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
    ನಿಸಾರ್ ಅಹಮದ್, (ಮಹಾರಾಷ್ಟ್ರ, ಗುಜರಾತ್- 1149 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
    ಎ.ಎ. ಖಾನ್- ( ಮಹಾರಾಷ್ಟ್ರ,ಕೇರಳ, ಗುಜರಾತ್ – 19 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  3.  ಅಕ್ಟೋಬರ್- 1,813 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
    ನಿಸಾರ್ ಅಹಮದ್- (ಮಹಾರಾಷ್ಟ್ರ ಮತ್ತು ಗುಜರಾತ್ -1802 ವಾಹನಗಳಿಗೆ ಎಫ್ಸಿ ನೀಡಿದ್ರೆ,
    ಎ.ಎ.ಖಾನ್ ( ಕೇರಳ ಮತ್ತು ಮಹಾರಾಷ್ಟ್ರದ – 11 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  4.  ನವೆಂಬರ್- 3,383 ವಾಹನಗಳಿಗೆ ಎಫ್ಸಿ ನೀಡಲಾಗಿದೆ.
    ನಿಸಾರ್ ಅಹಮದ್- ( ಮಹಾರಾಷ್ಟ್ರ, ಗುಜರಾತ್ -3381 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
    ನರಸಿಂಹ ರೆಡ್ಡಿ- ಮೋಟಾರು ವಾಹನ ನಿರೀಕ್ಷಕ.
    ( ಮಹಾರಾಷ್ಟ್ರದ – 2 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  5.  ಡಿಸೆಂಬರ್- 2,057 ವಾಹನಗಳಿಗೆ ಎಫ್ಸಿ ನೀಡಲಾಗಿದೆ.
    ನಿಸಾರ್ ಅಹಮದ್- 2,054 ( ಮಹಾರಾಷ್ಟ್ರ, ಗುಜರಾತ್ )
    ಎ.ಎ. ಖಾನ್ – 1 ( ಕೇರಳ )
    ಹೆಚ್.ಎಂ ಮಂಜುನಾಥ್- 2 ( ಮಹಾರಾಷ್ಟ್ರ,)
  6.  2026- ಜನವರಿ- 955 ವಾಹನಗಳಿಗೆ ಎಫ್ಸಿ ನೀಡಲಾಗಿದೆ.
    ನಿಸಾರ್ ಅಹಮದ್- 952 ( ಮಹಾರಾಷ್ಟ್ರ, ಗುಜರಾತ್ )
    ಎ.ಎ. ಖಾನ್- 3 ( ಮಹಾರಾಷ್ಟ್ರ ಮತ್ತು ಕೇರಳ, )

ಈ ಪ್ರಕರಣವು ಆರ್‌ಟಿಒ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಹಣದಾಸೆಗೆ ಸಂಬಂಧಿಸಿದ ಅಕ್ರಮ ಕಾರ್ಯಪ್ರವೃತ್ತಿಗಳನ್ನು ಬಹಿರಂಗಪಡಿಸುತ್ತದೆ. ಸಾರಿಗೆ ಇಲಾಖೆ ಮತ್ತು ಅಧಿಕಾರಿಗಳು ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಬಹುದಾಗಿದೆ ಎಂದು ವಕೀಲರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ – Kannada News | India to buy fighter jets missiles and other war items worth over rs 3 6 crore

ನವದೆಹಲಿ, ಫೆಬ್ರುವರಿ 13: ರಷ್ಯಾದಿಂದ ಸುಮಾರು 10,000 ಕೋಟಿ ರೂ ಮೌಲ್ಯದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿದೆ. ಮೊನ್ನೆಯಷ್ಟೇ ಸರ್ಕಾರವು 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿರುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ 3.6 ಲಕ್ಷ ಕೋಟಿ ರೂ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳನ್ನು ಭಾರತ ಖರೀದಿಸಲು ಹೊರಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಡಿಎಸಿ ನಿನ್ನೆ ಗುರುವಾರ (ಫೆ. 12) ವಿವಿಧ ಖರೀದಿಗಳಿಗೆ ಎಒಎನ್ (ಅವಶ್ಯಕವೆಂದು ಮಾನ್ಯತೆ) ನೀಡಿದೆ.

ರಷ್ಯಾದಿಂದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ 120 ಕಿರು ಶ್ರೇಣಿಯ ಕ್ಷಿಪಣಿಗಳು, 168 ದೂರ ಶ್ರೇಣಿಯ ಕ್ಷಿಪಣಿಗಳು ಸೇರಿವೆ. ಇವನ್ನು ವೇಗದ ಪ್ರಕ್ರಿಯೆಯಲ್ಲಿ (ಎಫ್​ಟಿಪಿ) ತ್ವರಿತವಾಗಿ ಖರೀದಿಸಲಾಗುತ್ತದೆ.

ಆ್ಯಂಟಿ ಟ್ಯಾಂಕ್ ಮೈನ್​ಗಳು (ವಿಭವ್, ಟಿ-72 ಟ್ಯಾಂಕ್​ಗಳು, ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್​ಗಳು ಮೊದಲಾದವು ಈ ಪಟ್ಟಿಯಲ್ಲಿ ಇವೆ. ನೌಕಾಸೇನೆಗೆ 4 ಎಂಡಬ್ಲ್ಯು ಮರೈನ್ ಗ್ಯಾಸ್ ಟರ್ಬೈನ್ ಆಧಾರಿತ ಎಲೆಕ್ಟ್ರಿಕ್ ಪವರ್ ಜನರೇಟರ್, ಪಿ-8ಐ ಲಾಂಗ್ ರೇಂಜ್ ರೀಕಾನೈಸಾನ್ಸ್ ಏರ್​ಕ್ರಾಫ್ಟ್ ಖರೀದಿ ಮಾಡಲಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್​ಫ್ಲೇಶನ್ ದಾಖಲು

ಕರಾವಳಿ ಕಾವಲು ಪಡೆಗೆ ಅದರ ಡಾರ್ನಿಯರ್ ವಿಮಾನಕ್ಕಾಗಿ ಎಲೆಕ್ಟ್ರೋ ಆಪ್ತಿಕಲ್ ಸಿಸ್ಟಂ, ಇನ್​ಫ್ರಾ ರೆಡ್ ಸಿಸ್ಟಂಗಳನ್ನು ಖರೀದಿಸಲು ಒಪ್ಪಲಾಗಿದೆ. ಇದರಿಂದ ಸಾಗರ ರಕ್ಷಣೆಯ ಕಾರ್ಯಕ್ಕೆ ಹೊಸ ಬಲ ಸಿಗುತ್ತದೆ.

ರಫೇಲ್ ಯುದ್ಧವಿಮಾನಗಳು

ಭಾರತೀಯ ವಾಯುಪಡೆಗೆ ಎಸ್-400 ಕ್ಷಿಪಣಿಗಳ ಜೊತೆಗೆ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೂ ಅನುಮೋದನೆ ಸಿಕ್ಕಿದೆ. ಈ ಪೈಕಿ 90 ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸಲಾಗುವುದು. ಈ ರಫೇಲ್ ಜೆಟ್​ಗಳು ಭಾರತದ ವಾಯು ರಕ್ಷಣೆಯನ್ನು ಇನ್ನಷ್ಟು ಬಲಗೊಳಿಸಲಿವೆ.

ಇದನ್ನೂ ಓದಿ: ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…

ಎಸ್-400 ಮಿಸೈಲ್ ಸಿಸ್ಟಂ

ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳ ದಾಳಿಯನ್ನು ಭಾರತದ ಎಸ್-400 ಟ್ರಯಂಫ್ ಡಿಫೆನ್ಸ್ ಸಿಸ್ಟಂ ಬಲವಾಗಿ ತಡೆದಿತ್ತು. ಈ ರಷ್ಯನ್ ನಿರ್ಮಿತ ಡಿಫೆನ್ಸ್ ಸಿಸ್ಟಂನಲ್ಲಿ ವಿವಿಧ ಶ್ರೇಣಿಯ ಕ್ಷಿಪಣಿಗಳ ಸಂಯೋಜನೆ ಇರುತ್ತದೆ. 40-400 ಕಿಮೀ ಶ್ರೇಣಿಯಲ್ಲಿ ಗುರಿ ಹೊಡೆದುರುಳಿಸಬಲ್ಲ ವಿವಿಧ ಕ್ಷಿಪಣಿಗಳ ವ್ಯವಸ್ಥೆಯಾದ ಇದು ವಿಶ್ವದ ಅತ್ಯಂತ ಪ್ರಬಲ ಏರ್ ಡಿಫೆನ್ಸ್ ಸಿಸ್ಟಂಗಳಲ್ಲಿ ಒಂದೆನಿಸಿದೆ.

ಆಪರೇಷನ್ ಸಿಂದೂರ್ ಸಮಯದಲ್ಲಿ ಸಾಕಷ್ಟು ಕ್ಷಿಪಣಿಗಳ ಬಳಕೆಯಾಗಿ ಹೋಗಿತ್ತು. ಅದನ್ನು ಭರ್ತಿ ಮಾಡಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಈ ಕೆರೆಗಳಲ್ಲಿ ಇನ್ನು ಬೋಟಿಂಗ್ ಮಾಡಬಹುದು! ಕೆರೆಗಳ ನಿರ್ವಹಣೆಗೆ ಜಿಬಿಎ ಹೊಸ ಪ್ಲ್ಯಾನ್ – Kannada News | Boating Soon in Bengaluru Lakes! GBA Plans Tourism Boost Across City Waterbodies

ಕೆರೆಗಳ ನಿರ್ವಹಣೆಗೆ ಜಿಬಿಎ ಹೊಸ ಪ್ಲ್ಯಾನ್Image Credit source: tv9

ಬೆಂಗಳೂರು, ಫೆಬ್ರವರಿ 13: ಬೆಂಗಳೂರು (Bangalore) ಒಂದು ಕಾಲದಲ್ಲಿ ಕೆರೆಗಳಿಂದಲೇ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕೆರೆಗಳು ನಿರ್ವಹಣೆಯ ಕೊರತೆಯಿಂದ ಕಲುಷಿತಗೊಂಡು, ಡ್ರೈನೇಜ್ ನೀರು ಸೇರಿ ಅವನತಿಯ ಹಾದಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ, ಜಿಬಿಎ (GBA) ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಈ ಯೋಜನೆಯು ನಗರದ ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಹೊಂದಿದೆ.

ಬೆಂಗಳೂರು ನಗರದಲ್ಲಿ ಒಟ್ಟು 183 ಕೆರೆಗಳಿದ್ದು, ಜಿಬಿಎ ಆರಂಭಿಕ ಹಂತದಲ್ಲಿ ಹಲಸೂರು ಲೇಕ್, ಕಗ್ಗದಾಸಪುರ ಕೆರೆ, ನಾಯಂಡಹಳ್ಳಿ, ಸ್ಯಾಂಕಿ, ಯಲಹಂಕ, ರಾಚೇನಹಳ್ಳಿ, ವೆಂಗಯ್ಯನಕೆರೆ, ಬೇಗೂರು, ರಾಮಪುರ ಮತ್ತು ಮಡಿವಾಳ ಕೆರೆಗಳನ್ನು ಬೋಟಿಂಗ್ ಯೋಜನೆಗೆ ಆಯ್ಕೆ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಬಿಎ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಪರಿಸರಸ್ನೇಹಿ ಬೋಟಿಂಗ್​ಗೆ ಆದ್ಯತೆ

ಈ ಬೋಟಿಂಗ್ ವ್ಯವಸ್ಥೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ, ಅಂದರೆ ಇಂಧನ ರಹಿತ ಮತ್ತು ಮಾಲಿನ್ಯ ರಹಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಕೆರೆಗಳಲ್ಲಿರುವ ಜಲಚರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಕೆರೆಗಳಿಗೆ ಹೆಚ್ಚಿನ ಜನರು ಭೇಟಿ ನೀಡುವಂತೆ ಮಾಡಿ ಅವುಗಳ ನಿರ್ವಹಣೆಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಲ್ಲೇಶ್ವರಂನ ಐತಿಹಾಸಿಕ ಸ್ಯಾಂಕಿ ಕೆರೆಯಲ್ಲೂ ಬೋಟಿಂಗ್ ವ್ಯವಸ್ಥೆಗೆ ಜಿಬಿಎ ಸಿದ್ಧತೆ ನಡೆಸುತ್ತಿದೆ.

ಆದರೆ, ಈ ಪ್ರಸ್ತಾಪದ ಕುರಿತು ಸಾರ್ವಜನಿಕ ವಲಯದಲ್ಲಿ ಕೆಲವು ಪ್ರಶ್ನೆಗಳು ಮೂಡಿವೆ. ಬೆಂಗಳೂರಿನ ಕೆರೆಗಳ ನಿರ್ವಹಣೆ ಕಾರ್ಯವನ್ನು ಪಾಲಿಕೆಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ಹಲವು ಕೆರೆಗಳಲ್ಲಿ ಸಾಕಷ್ಟು ನೀರು ಲಭ್ಯವಿಲ್ಲದೆ, ಬೇಸಿಗೆಯಲ್ಲಿ ಬತ್ತಿ ಹೋಗುವ ಸ್ಥಿತಿ ಇದೆ. ಕೆಲವು ಕೆರೆಗಳಲ್ಲಿ ನೀರಿದ್ದರೆ, ಇನ್ನೊಂದೆಡೆ ಸಂಪೂರ್ಣವಾಗಿ ಖಾಲಿಯಾಗಿರುವ ದೃಶ್ಯ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು, ಕೆರೆಗಳಲ್ಲಿನ ನೀರಿನ ಗುಣಮಟ್ಟ ಮತ್ತು ಲಭ್ಯತೆ ಸುಧಾರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ:  ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್

ಯಲಹಂಕ ಕೆರೆಯಂತಹ ದೊಡ್ಡ ಕೆರೆಗಳಲ್ಲೂ ಬೋಟಿಂಗ್ ಆರಂಭಿಸಲು ಯೋಜಿಸಲಾಗಿದ್ದರೂ, ಶುದ್ಧ ನೀರಿಲ್ಲದ ಕೆರೆಗಳಲ್ಲಿ ಬೋಟಿಂಗ್ ಎಷ್ಟು ಸೂಕ್ತ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಒಟ್ಟಾರೆ, ಜಿಬಿಎ ಜನರ ಆಸಕ್ತಿಗಾಗಿ ಈ ಯೋಜನೆಯನ್ನು ತರುತ್ತಿದ್ದರೂ, ಕೆರೆಗಳ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link