Category Archives: Blog

Your blog category

ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ನಕ್ಷೆಯಲ್ಲಿ ತೋರಿಸಿ ವಿವಾದಕ್ಕೀಡಾದ ನೇಪಾಳ ಏರ್​​​ಲೈನ್ಸ್ – Kannada News | Nepal Airlines shows Jammu and Kashmir as part of Pakistan in map apologises after backlash

ನವದೆಹಲಿ, ಏಪ್ರಿಲ್ 30: ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ನೆಟ್‌ವರ್ಕ್ ನಕ್ಷೆಯಲ್ಲಿ ಪಾಕಿಸ್ತಾನದ (Pakistan) ಭಾಗವೆಂದು ತೋರಿಸಿದ ನಂತರ ನೇಪಾಳ ಏರ್​ಲೈನ್ಸ್ ಟೀಕೆಗೆ ಗುರಿಯಾಗಿದೆ. ಬುಧವಾರ ಏರ್​ಲೈನ್ಸ್ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳನ್ನು ಪಾಕಿಸ್ತಾನದ ಪ್ರದೇಶದ ಭಾಗವಾಗಿ ತೋರಿಸಿರುವ ನಕ್ಷೆಯನ್ನು ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತು.

ಈ ಫೋಟೋ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಇದು ಭಾರತೀಯ ಬಳಕೆದಾರರಿಂದ ಟೀಕೆಗೆ ಗುರಿಯಾಯಿತು. ಈ ವಿಷಯ ವೈರಲ್ ಆದ ಕೂಡಲೆ ಸೋಷಿಯಲ್ ಮೀಡಿಯಾದಲ್ಲಿ #BoycottNepalAirlines ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬರಲು ಪ್ರಾರಂಭಿಸಿತು.

ಸೋಷಿಯಲ್ ಮೀಡಿಯಾ ಬಳಕೆದಾರರು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ವಿಮಾನಯಾನ ಸಚಿವಾಲಯವನ್ನು ನೇಪಾಳದೊಂದಿಗೆ ರಾಜತಾಂತ್ರಿಕ ಪ್ರತಿಭಟನೆ ಸಲ್ಲಿಸುವಂತೆ ಒತ್ತಾಯಿಸಿದರು. ಭಾರತ ಹಲವು ದಶಕಗಳಿಂದ ಲಕ್ಷಾಂತರ ನೇಪಾಳಿಗಳಿಗೆ ಉದ್ಯೋಗ ನೀಡುವ ಮೂಲಕ, ವ್ಯಾಪಾರ ಪ್ರವೇಶವನ್ನು ನೀಡುವ ಮೂಲಕ, ಇಂಧನ ನೀಡುವ ಮೂಲಕ, ವಿದ್ಯುತ್ ಯೋಜನೆಗಳಿಗೆ ಹಣಕಾಸು ಒದಗಿಸುವ ಮೂಲಕ ಮತ್ತು ವಿಪತ್ತು ಪರಿಹಾರವನ್ನು ಒದಗಿಸುವ ಮೂಲಕ ನೇಪಾಳದ ಆರ್ಥಿಕತೆಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಹಲವಾರು ಬಳಕೆದಾರರು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು! ವಿಡಿಯೋ ನೋಡಿ

ವಿಮಾನಯಾನ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ ಹಲವಾರು ಭಾರತೀಯ ಬಳಕೆದಾರರಲ್ಲಿ ಭೋಜ್‌ಪುರಿ ನಟ-ಗಾಯಕ ಖೇಸರಿಲಾಲ್ ಯಾದವ್ ಕೂಡ ಇದ್ದರು. ಅವರು ಇದು ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಉದ್ದೇಶಿಸಲಾದ ಕೃತ್ಯವಾಗಿರಬಹುದು ಎಂದು ಆರೋಪ ಮಾಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನೇಪಾಳ ಏರ್​ಲೈನ್ಸ್ ಪೋಸ್ಟ್ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿತು. ಅದು ನೇಪಾಳ ಅಥವಾ ಏರ್​ಲೈನ್ಸ್​​ನ ಅಧಿಕೃತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:35 pm, Thu, 30 April 26

Source link

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್ – Kannada News | Sacred thread Row: Plan to Re exam For Students Says Minister Sudhakar

ಬೆಂಗಳೂರು, (ಏಪ್ರಿಲ್ 30): ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ (sacred thread) ತೆಗೆಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಈಗಾಗಲೇ ತಪಿಸ್ಥತರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇನ್ನು ಜನಿವಾರವನ್ನು ಒತ್ತಾಯ ಪೂರ್ವಕವಾಗಿ ಕತ್ತರಿಸಿದ್ದರಿಂದ ಸರಿಯಾಗಿ ಪರೀಕ್ಷೆ ಬರೆದಿಲ್ಲ ಎಂದು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದು, ಈ ಸಂಬಂಧ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಖುದ್ದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸುಳಿವು ಕೊಟ್ಟಿದ್ದಾರೆ.

ಇಂದು (ಏಪ್ರಿಲ್ 30) ಟಿವಿ9 ಜೊತೆ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜನಿವಾರ ತೆಗೆದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕೆ ವಿದ್ಯಾರ್ಥಿಗಳು, ಪೋಷಕರು ಒಪ್ಪಿದ್ರೆ ಮರು ಪರೀಕ್ಷೆಗೆ ಅವಕಾಶ ನೀಡಲಾಗುವುದು. ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಓರ್ವ ವಿದ್ಯಾರ್ಥಿಯ ಜನಿವಾರ ತೆಗೆಸಲಾಗಿತ್ತು. ಹಾಗೇ ಚಿಕ್ಕಬಳ್ಳಾಪುರದ ಒಂದು ಕಾಲೇಜಿನಲ್ಲಿ ಹಿಜಾಬ್​ಗೆ ಅವಕಾಶ ನೀಡಿರಲಿಲ್ಲ. ಇದರಿಂದ ಓರ್ವ ವಿದ್ಯಾರ್ಥಿನಿ ಸಿಇಟಿ ಭೌತಶಾಸ್ತ್ರ ವಿಷಯದ ಪರೀಕ್ಷೆ ಬರೆದಿರಲಿಲ್ಲ. ಹೀಗಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Hindu Rituals: ಜನಿವಾರವನ್ನು ಎಲ್ಲೆಂದರಲ್ಲಿ ತೆಗೆಯಬಾರದು ಏಕೆ? ಯಜ್ಞೋಪವೀತ ಧಾರಣೆ ಮಹತ್ವ ಇಲ್ಲಿ ತಿಳಿಯಿರಿ

ಉದ್ದೇಶಪೂರ್ವಕವಾಗಿ ಜನಿವಾರ ತೆಗೆಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮತ್ತೊಂದು ಮರು ಪರೀಕ್ಷೆ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಪೋಷಕರ ಅಭಿಪ್ರಾಯ ಪಡೆದು ಮರು ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಇರುವ ಸಂಬಂಧ ಗೊತ್ತೆ? – Kannada News | Tamil Movie industry veteran Sujata is behind the India’s EVM invention

ಇವಿಎಂ ಅಥವಾ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಚುನಾವಣಾ ಅಕ್ರಮಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಡಿಮೆ ಮಾಡಿದೆ, ವಾರಗಳ ಗಟ್ಟಲೆ ನಡೆಯುತ್ತಿದ್ದ ಮತದಾನ ಮತ್ತು ಮತ ಎಣಿಕೆಯನ್ನು ಗಂಟೆಗಳಿಗೆ ಇಳಿಸಿದೆ. ಚುನಾವಣಾ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ನಡೆಯುವಂತೆ ಮಾಡಿದೆ ಇವಿಎಂ. ಕೆಲವರು ಇವಿಎಂ ಹ್ಯಾಕಿಂಗ್ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರಾದರೂ ಯಾವುದೂ ಸಹ ಈ ವರೆಗೆ ಸಾಬೀತಾಗಿಲ್ಲ. ಆದರೆ ಈ ಇವಿಎಂಗೂ ‘ರೋಬೊ’ ಸಿನಿಮಾಕ್ಕೂ ಅಥವಾ ತಮಿಳು ಚಿತ್ರರಂಗಕ್ಕೂ ದೂರದ ಸಂಬಂಧ ಇದೆ.

ಇವಿಎಂ ಅನ್ನು ಐಐಟಿ ಬಾಂಬೆಯಲ್ಲಿ ಫ್ರೊಫೆಸರ್​​ಗಳಾಗಿದ್ದ ಎಜಿ ರಾವ್ ಮತ್ತು ರವಿ ಪೂವಯ್ಯ ಡಿಸೈನ್ ಮಾಡಿದರು. ಅದಕ್ಕೆ ಒಪ್ಪಿಗೆ ನೀಡಿದ ಸರ್ಕಾರ ಮತ್ತು ಚುನಾವಣಾ ಆಯೋಗ 1980 ರಲ್ಲಿ ಇವಿಎಂಗಳನ್ನು ನಿರ್ಮಾಣ ಮಾಡುವ ಹೊಣೆಯನ್ನು ಬೆಂಗಳೂರಿನಲ್ಲಿ ಸ್ಥಿತವಾಗಿರುವ ಬಿಇಎಲ್​​ಗೆ (ಭಾರತ್ ಎಲೆಕ್ಟ್ರಾನಿಕ್ಸ್​) ನೀಡಿತು. ಎಂಜಿನಿಯರ್ ಎಸ್ ರಂಗರಾಜನ್ ಅವರ ನೇತೃತ್ವದಲ್ಲಿ ಇವಿಎಂ ನಿರ್ಮಾಣ ಆಯ್ತು, ಮಾತ್ರವಲ್ಲದೆ ಅವರದ್ದೇ ನೇತೃತ್ವದಲ್ಲಿ ಇವಿಎಂ ಮಾಡೆಲ್ ಹೆಚ್ಚು ಸುಧಾರಣೆಯಾಗಿ ಬಳಕೆಗೂ ಬಂದಿತು.

ಸರಿ, ‘ರೋಬೊ’ ಸಿನಿಮಾಕ್ಕೂ ಇವಿಎಂಗೂ ಏನು ಸಂಬಂಧ? ಎಸ್ ರಂಗರಾಜನ್ ನೇತೃತ್ವದಲ್ಲಿ ಭಾರತದಲ್ಲಿ ಇವಿಎಂ ನಿರ್ಮಾಣ ಆಯ್ತು, ಈ ಎಸ್ ರಂಗರಾಜನ್ ಅವರಿಗೆ ಮತ್ತೊಂದು ಹೆಸರು ಇದೆ. ಅದುವೇ ‘ಸುಜಾತ’. ಸಿನಿಮಾ ಪ್ರೇಮಿಗಳಿಗೆ ಈಗಾಗಲೇ ಗೊತ್ತಾಗಿರುತ್ತದೆ ಈ ‘ಸುಜಾತ’ ಯಾರೆಂಬುದು. ತಮಿಳಿನ ಖ್ಯಾತ ಕಾದಂಬರಿಕಾರ, ಕತೆಗಾರ ಮತ್ತು ಸಂಭಾಷಣೆಕಾರ ಇವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಎಸ್ ರಂಗರಾಜನ್ ಅವರು ‘ಸುಜಾತ’ ಕಾವ್ಯನಾಮದಲ್ಲಿ ಕತೆ, ಕಾದಂಬರಿ, ಸಿನಿಮಾ ಕತೆ, ಸಂಭಾಷಣೆ, ಹಾಡುಗಳನ್ನು ಬರೆಯುತ್ತಿದ್ದರು. ತಮಿಳಿನ ಹಲವಾರು ಸೂಪರ್ ಹಿಟ್ ಸಿನಿಮಾಗಳ ಹಿಂದೆ ಅವರ ಪ್ರತಿಭೆ ಇದೆ.

ಇದನ್ನೂ ಓದಿ:‘ಕೆಡಿ’ ಸಿನಿಮಾ ನೋಡಿ ಜನ ಹೇಳಿದ್ದೇನು? ವಿಡಿಯೋ ನೋಡಿ

ಮಣಿರತ್ನಂ ನಿರ್ದೇಶನದ ‘ರೋಜಾ’ ಸಿನಿಮಾಕ್ಕೆ ಸಂಭಾಷಣೆ ಮತ್ತು ಚಿತ್ರಕತೆಯನ್ನು ಸಹಾಯ ಮಾಡಿದ್ದರು. ರಾಜಮೌಳಿಗೆ ಮುಂಚೆ ಭಾರತದ ಸ್ಟಾರ್ ನಿರ್ದೇಶಕ ಆಗಿದ್ದ ಶಂಕರ್ ಅವರ ಹಲವಾರು ಸಿನಿಮಾಗಳಿಗೆ ಬೆನ್ನೆಲುಬಾಗಿದ್ದಿದ್ದು ಇದೇ ಸುಜಾತ. ‘ಇಂಡಿಯನ್’ ‘ಬಾಯ್ಸ್’, ‘ಶಿವಾಜಿ’, ‘ಮೊದಲ್ವನ್’, ‘ಅನ್ನಿಯನ್’, ‘ರೋಬೊ’ ಶಂಕರ್ ಅವರ ಇನ್ನೂ ಕೆಲವು ಸಿನಿಮಾಗಳಿಗೆ ಚಿತ್ರಕತೆ, ಸಂಭಾಷಣೆ ಬರೆದಿದ್ದು ಇದೇ ಸುಜಾತ. ಸುಜಾತ ಹೋದ ಬಳಿಕ ಶಂಕರ್ ಸಿನಿಮಾಗಳಲ್ಲಿ ಮೊದಲಿನ ಮೊನಚು ಉಳಿಯಲಿಲ್ಲ. ಮಣಿರತ್ನಂ ಅವರ ‘ರೋಜಾ’, ‘ತಿರುಡಾ ತಿರುಡಾ’, ಶಾರುಖ್ ನಟಿಸಿ ಮಣಿರತ್ನಂ ನಿರ್ದೇಶಿಸಿದ್ದ ‘ದಿಲ್ ಸೇ’ ಸಿನಿಮಾದ ತಮಿಳು ಆವೃತ್ತಿ ‘ಉಯಿರೆ’, ‘ಕಣ್ಣತ್ತಿ ಮುತ್ತಮಿತ್ತಾಳ್’, ‘ಯುವ’ ಮಣಿರತ್ನಂ ಅವರ ಇನ್ನೂ ಕೆಲ ಸಿನಿಮಾಗಳಿಗೆ ಸುಜಾತ ಸಂಭಾಷಣೆ ಮತ್ತು ಚಿತ್ರಕತೆಯನ್ನು ಒದಗಿಸಿದ್ದಾರೆ.

Sujatha

ತಮಿಳು ಮಾತ್ರವಲ್ಲ ಕನ್ನಡ ಚಿತ್ರರಂಗದಲ್ಲಿಯೂ ಸುಜಾತ ಕೆಲಸ ಮಾಡಿದ್ದಾರೆ. ರಮೇಶ್ ಅರವಿಂದ್ ಅಭಿನಯದ ಭಿನ್ನ ರೀತಿಯ ಥ್ರಿಲ್ಲರ್ ಕತೆಯುಳ್ಳ ‘ಆರ್ಯಭಟ’ ಯಾರಿಗೆಲ್ಲ ನೆನಪಿದೆ, ಆ ಸಿನಿಮಾದ ಕತೆ ಬರೆದಿದ್ದು ಸುಜಾತ. 1981 ರಲ್ಲಿ ಬಿಡುಗಡೆ ಆದ ‘ಒಂಟಿ ಧ್ವನಿ’ ಸಿನಿಮಾಕ್ಕೂ ಸುಜಾತ ಅವರದ್ದೇ ಕತೆ. ಸುಜಾತ ಅವರು ಕೊನೆಯದಾಗಿ ಕೆಲಸ ಮಾಡಿದ ಸಿನಿಮಾ ‘ರೋಬೊ’ ಅಥವಾ ‘ಎಂದಿರನ್’ ಸುಜಾತ 2008 ರಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅದಕ್ಕೆ ಮುಂಚೆಯೇ ಅವರು ‘ಎಂದಿರನ್’ ಕತೆ ಬರೆದಿದ್ದರು. ಅವರ ನಿಧನದ ಒಂದೂವರೆ ವರ್ಷದ ಬಳಿಕ ‘ರೋಬೊ’ ಸಿನಿಮಾ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ಚಿತ್ರರಂಗಕ್ಕೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಒದಗಿಸಿರುವ ವ್ಯಕ್ತಿ, ಭಾರತದ ಚುನಾವಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದವರಲ್ಲಿ ಒಬ್ಬರು ಎಂಬುದು ಆಶ್ಚರ್ಯಕರ ಅಲ್ಲವೆ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲ್ಡ್ ಡ್ರಿಂಕ್ ಜೊತೆ ಚಿಪ್ಸ್ ತಿನ್ನುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ – Kannada News | Cold Drink and Chips Side Effects: What AIIMS Nutrition Experts Say

ಬೇಸಿಗೆಯ (Summer) ತಾಪಮಾನ ಹೆಚ್ಚಾದಂತೆ ಜನ ತಂಪಾದ ಪಾನೀಯಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಮಾರುಕಟ್ಟೆಯಲ್ಲಿ ಬಗೆಬಗೆಯ ಕೋಲ್ಡ್ ಡ್ರಿಂಕ್‌ಗಳು ಇರುವುದರಿಂದ ಅದನ್ನು ಕುಡಿದು ಆನಂದಿಸುತ್ತಾರೆ. ಅದರಲ್ಲಿ ಕೆಲವರು ಅವುಗಳ ಜೊತೆ ಚಿಪ್ಸ್ ಕೂಡ ತಿನ್ನುತ್ತಾರೆ. ಇದು ಕೆಲವರಿಗೆ ಸಾಮಾನ್ಯ ಅಭ್ಯಾಸಗಳಲ್ಲಿ ಒಂದು. ಆದರೆ ಆರೋಗ್ಯ ತಜ್ಞರ ಪ್ರಕಾರ, ಈ ಆಹಾರ ಸಂಯೋಜನೆ ಒಳ್ಳೆಯದಲ್ಲ. ಇದು ದೇಹಕ್ಕೆ ಹಾನಿಕಾರಕವಾಗಬಹುದು ಎನ್ನುತ್ತಾರೆ. ಈ ರೀತಿ ಅಭ್ಯಾಸ ನಿಮಗೂ ಇದ್ದಲ್ಲಿ ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳಲೇಬೇಕು ಜೊತೆಗೆ ಈ ರೀತಿ ಕೋಲ್ಡ್ ಡ್ರಿಂಕ್‌ ಜೊತೆಗೆ ಚಿಪ್ಸ್ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ ಇದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೋಲ್ಡ್ ಡ್ರಿಂಕ್‌ ಜೊತೆಗೆ ಚಿಪ್ಸ್ ಯಾಕೆ ಒಳ್ಳೆಯದಲ್ಲ?

ಕೋಲ್ಡ್ ಡ್ರಿಂಕ್‌ಗಳಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಮತ್ತು ಕೆಲವೊಮ್ಮೆ ಕ್ಯಾಫಿನ್ ಇರುತ್ತದೆ. ಇದು ದೇಹದ ದಾಹವನ್ನು ತಾತ್ಕಾಲಿಕವಾಗಿ ತಣಿಸಿದರೂ, ವಾಸ್ತವದಲ್ಲಿ ದೇಹವನ್ನು ಡಿಹೈಡ್ರೇಟ್ ಮಾಡಬಹುದು. ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಹೈಡ್ರೇಶನ್ ಕಡಿಮೆಯಾಗುವುದರಿಂದ ದೌರ್ಬಲ್ಯ, ತಲೆಸುತ್ತು ಮತ್ತು ದೇಹದ ತಾಪಮಾನ ನಿಯಂತ್ರಣದಲ್ಲಿ ಸಮಸ್ಯೆಗಳು ಉಂಟಾಗಬಹುದು. ಜೊತೆಗೆ ಚಿಪ್ಸ್‌ಗಳಲ್ಲಿ ಹೆಚ್ಚಿನ ಉಪ್ಪು ಮತ್ತು ಟ್ರಾನ್ಸ್ ಫ್ಯಾಟ್ ಇರುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಹೆಚ್ಚಿಸುವುದರ ಜೊತೆಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಹಾಳುಮಾಡಬಹುದು. ಹೆಚ್ಚಾಗಿ ಉಪ್ಪಿನ ಸೇವನೆ ದಾಹವನ್ನು ಹೆಚ್ಚಿಸಿ, ಮತ್ತೆ ಮತ್ತೆ ಕೋಲ್ಡ್ ಡ್ರಿಂಕ್ ಸೇವನೆಗೆ ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ಅಸಮತೋಲನ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ

ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ?

ತಜ್ಞರು ಹೇಳುವಂತೆ, ಈ ಆಹಾರ ಸಂಯೋಜನೆ ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಳ, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ದೀರ್ಘಕಾಲದಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು. ವಿಶೇಷವಾಗಿ ಮಕ್ಕಳ ಮತ್ತು ಯುವಕರಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ.

ಉತ್ತಮ ಪರ್ಯಾಯಗಳು ಯಾವವು?

ಕೋಲ್ಡ್ ಡ್ರಿಂಕ್‌ಗಳ ಬದಲು ನೈಸರ್ಗಿಕ ಪಾನೀಯಗಳನ್ನು ಆಯ್ಕೆ ಮಾಡುವುದು ಉತ್ತಮ. ಉದಾಹರಣೆಗೆ, ನಿಂಬೆ ಹಣ್ಣಿನ ರಸ, ಮಜ್ಜಿಗೆ ಅಥವಾ ಎಳನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಚಿಪ್ಸ್ ಬದಲು ಹುರಿದ ಮಖಾನ, ಕಡಲೆಕಾಳು ಅಥವಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಒಟ್ಟಿನಲ್ಲಿ, ಬೇಸಿಗೆಯಲ್ಲಿ ದೇಹದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಹಾಗಾಗಿ ಆರೋಗ್ಯ ಹಾಳು ಮಾಡುವ ಆಹಾರಕ್ಕಿಂತ ಸಮತೋಲನವಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಖಾಕಿ: 1.26 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ – Kannada News | Gadag Betageri Theft Solved: Police Recover 1.26 Crore Gold and Silver, 11 Arrested

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರುImage Credit source: tv9 kannada

ಗದಗ, ಏಪ್ರಿಲ್​ 30: ಗದಗ ಮತ್ತು ಬೆಟಗೇರಿ (Gadag-Betageri) ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ (thieves) ಹಾವಳಿ ಹೆಚ್ಚಾಗಿತ್ತು. ಕೈಯಲ್ಲಿ ಆಯುಧ ಹಿಡಿದು ಓಡಾಡುತ್ತಿದ್ದ ಭಯಾನಕ ಕಳ್ಳರಿಂದ ಜನರು ಬೆಚ್ಚಿಬಿದ್ದಿದ್ದರು. ಕಳ್ಳರ ಪತ್ತೆಗೆ ಆಗ್ರಹಿವು ಕೇಳಿಬಂದಿತ್ತು. ಆ ಬೆನ್ನಲ್ಲೇ ಕೊನೆಗೂ ಖದೀಮರ ಗುಂಪನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 1 ಕೋಟಿ 26 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಗದಗ-ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವೆಸಗಿದ್ದ 11 ಜನ ಕಳ್ಳರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ​ ಸುರೇಶ್​, ನಾಗಪ್ಪ, ಶಿವು, ಶಂಕರ್​, ಮಂಜುನಾಥ್​, ಹುಲಗೆಪ್ಪ, ಆನಂದ್​ ಬಂಧಿತರು. ಆರೋಪಿಗಳು ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಮೂಲದವರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಪ್ಪಿಸಲು ಬಾಗಿಲು ತೆರೆದಿಟ್ಟು ಮಲಗಿದ್ದ ಮಹಿಳೆಗೆ ಕಾದಿತ್ತು ಶಾಕ್!

ಬೆಟಗೇರಿ ಬಡಾವಣೆ ಹಾಗೂ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ಭೇದಿಸಲಾಗಿದೆ. ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಳ್ಳರ ಪತ್ತೆಗಾಗಿ ಮೂರು ತಂಡಗಳಲ್ಲಿ ಕಾರ್ಯಚರಣೆ ಮಾಡಲಾಗಿದೆ. 14 ಮನೆಗಳ್ಳತನ ಮಾಡಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1 ಕೋಟಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೀಗ ಹಾಕಿದ ಮನೆಗಳೇ ಟಾರ್ಗೆಟ್

ಇನ್ನು ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡು, ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್​​ ಮಾಡುತ್ತಿದ್ದರು.  ಈ ಕಿಲಾಡಿ ಕಳ್ಳರು ರಾತ್ರೋರಾತ್ರಿ ಬಂದು ನಗರದ ಹೊರಗಡೆ ವಾಹನಗಳನ್ನು ನಿಲ್ಲಿಸಿ, ಯಾವುದೇ ಸುಳಿವು ಬಿಡದೇ ತಮ್ಮ ಕೈಚಳಕ ತೋರಿಸಿ ಪರಾರಿ ಆಗುತ್ತಿದ್ದರು. ಆದರೆ ಕಳ್ಳರು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗಿ, ಆರೋಪಿಗಳನ್ನು ಹಿಡಿಮುರಿ ಕಟ್ಟಿದ್ದಾರೆ. ಸದ್ಯ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

ಸಾಕಷ್ಟು ಆತಂಕ ಸೃಷ್ಟಿಸಿದ್ದ ಮುಸುಕುದಾರಿ ಕಳ್ಳರ ಗ್ಯಾಂಗ್ ಪತ್ತೆ ಮಾಡಿದ ಪೊಲೀಸರಿಗೆ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ. ಕಳೆದ ಆರೇಳು ತಿಂಗಳಿಂದ ಅವಳಿ ನಗರದ ಜನರ ಭಯವನ್ನು ದೂರ ಮಾಡಿದ್ದಾರೆ. ಒಟ್ಟಿನಲ್ಲಿ ಕಳ್ಳರ ಬಂಧನ ಬೆನ್ನಲ್ಲೇ ಅವಳಿ ನಗದರ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು – Kannada News | Car plunged into deep gorge near Chintpuri Himachal Pradesh 2 people dead

ಚಿಂತ್​ಪುರಿ, ಏಪ್ರಿಲ್ 30: ಹಿಮಾಚಲ ಪ್ರದೇಶದ ಉನಾದಲ್ಲಿ ಕಾರು ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಅಪಘಾತದಲ್ಲಿ (Road Accident) ಸಾವನ್ನಪ್ಪಿದ್ದಾರೆ. ಕಾರು ಕಣಿವೆಗೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

ಭರ್ವೈನ್-ಹೋಶಿಯಾರ್‌ಪುರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಕಾರಿನೊಳಗೆ ಇಬ್ಬರು ಇದ್ದರು. ಆ ಕಾರು ಲುಧಿಯಾನದ ನೋಂದಣಿ ಸಂಖ್ಯೆಯ ಪ್ಲೇಟ್ ಅನ್ನು ಹೊಂದಿತ್ತು. ಕಾರು ಆಳವಾದ ಕಂದಕಕ್ಕೆ ಬಿದ್ದ ತಕ್ಷಣ, ಅದು ಬೆಂಕಿಗೆ ಆಹುತಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯನ್ನೇ ಅತ್ಯಾಚಾರಗೈದು ಹತ್ಯೆಗೈದಿದ್ದ ಪ್ರಿಯಕರನಿಗೆ ಜೈಲಲ್ಲೇ ಕೊಳೆಯುವ ಶಿಕ್ಷೆ – Kannada News | Hassan Lover Murder Case: Boy friend gets Life Imprisonment

ಹಾಸನ, (ಏಪ್ರಿಲ್ 30): ಬೇಲೂರು ತಾಲ್ಲೂಕಿನ ಯುವತಿಯನ್ನ ಪ್ರೀತಿಸೋದಾಗಿ (Love) ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಪ್ರಿಯಕರಿನಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರೇಮಿ ಪ್ರವೀಣ್ ಗೆ ಜೀವಾವದಿ ಶಿಕ್ಷೆ ವಿಧಿಸಿ ಹಾಸನದ (Hassan) 3ನೇ ಅಧಿಕ ಸಷೆನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಸಾಕ್ಷಿನಾಶ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ. ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2018 ರ ಏಪ್ರಿಲ್ 22ರಂದು ತನ್ನ‌ ಹುಟ್ಟು ಹಬ್ಬ ಆಚರಣೆ ಮಾಡಲು ಬಂದ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಪ್ರವೀಣ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

2018 ರ ಏಪ್ರಿಲ್ 22 ರಂದು ಹಾಸನ‌ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಹಾಡ್ಲಗೆರೆಯ ಪ್ರವೀಣ್, ತನ್ನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಬಳಿಕ ಕೋರ್ಟ್​​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಬಳಿಕ ಹಾಸನದ 3ನೇ ಅಧಿಕ ಸಷೆನ್ಸ್ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಅಂತಿಮವಾಗಿ ಪ್ರಿಯಕರ ಪ್ರವೀಣ್​​ಗೆ ಜೀವಾವಧಿ ಶಿಕ್ಷೆ ಹಾಗೂ ಸಾಕ್ಷಿನಾಶ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಸಿನಿಮಾ ನೋಡಿ ಜನ ಹೇಳಿದ್ದೇನು? ವಿಡಿಯೋ ನೋಡಿ – Kannada News | KD Movie release here is audience reaction after watching movie

ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾ ಇಂದು (ಏಪ್ರಿಲ್ 30) ಬಿಡುಗಡೆ ಆಗಿದೆ. ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ಈ ಸಿನಿಮಾಕ್ಕಾಗಿ ಧ್ರುವ ಸರ್ಜಾ ಮತ್ತು ಪ್ರೇಮ್ ಹಾಗೂ ಇತರರು ವ್ಯಯಿಸಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುಂಚೆ ಹಾಡಿನಿಂದ ಕೆಲ ವಿವಾದಗಳು ಸಹ ಆಗಿದ್ದವು. ಇನ್ನೂ ಕೆಲವು ಕಾರಣಗಳಿಗೆ ಸಿನಿಮಾದ ಮೇಲೆ ಎಲ್ಲರ ಕಣ್ಣಿತ್ತು, ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಅನ್ನು ನೋಡಿದ ಜನ ನೀಡಿದ ಅಭಿಪ್ರಾಯ ಏನು? ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ – Kannada News | Gangavathi BJP Leader Venkatesh kurubar murder case: death sentence to 6 convicts

ಕೊಪ್ಪಳ, (ಏಪ್ರಿಲ್ 30): ಗಂಗಾವತಿ (Gangavathi) ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ (Venkatesh Kurbur Murder Case) ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ. ಯಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಎಪ್ರಿಲ್ 30) ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಆರು ಜನರಿಗೆ ತಲಾ ಮೂರು ಲಕ್ಷ ದಂಡ ವಿಧಿಸಿದ್ದಾರೆ. ರವಿ , ವಿಜಯ್ ಅಲಿಯಾದ್ ಮೈಲಾರಿ, ಧನರಾಜ್, ಭೀಮ್‌ ಅಲಿಯಾದ್ ಭರತ್, ಸಲೀಮ್ ಮಹಮ್ಮದ್ ರಫೀಕ್, ಗಂಗಾಧರ ಗೌಳಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು.

ಮೊದಲಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಫೂಟೇಜ್​ಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಅಪರಾಧಿಗಳು ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಗಂಗಾವತಿ: ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ

ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಹಿನ್ನೆಲೆ ಪರಿಗಣಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಕೊಪ್ಪಳ ಎಸ್ಪಿ ಹೇಳಿದ್ದಿಷ್ಟು

ವೆಂಕಟೇಶ ಕುರುಬರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಸಂಬಂಧ
ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ವೆಂಕಟೇಶ ಕುರುಬರ ಕೊಲೆ ಕೇಸ್ ನ ಗಂಗಾವತಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಈ ಕೇಸ್ ಸಾಕಷ್ಟು ಚ್ಯಾಲೆಂಜಿಂಗ್ ಆಗಿತ್ತು ಪೊಲೀಸರು ಈ ಕೇಸ್ ಗೆ ನ್ಯಾಯ ಕೊಟ್ಟಿದ್ದಾರೆ. ಇಬ್ಬರು ಜೊತೆಯಲ್ಲೆ ಇದ್ದವರು, ಆದ್ರೆ ನಂತರ ವೈಷಮ್ಯ ಬಂದ ಬೇರೆಯಾಗಿದ್ದರು ಎಂದು ಮಾಹಿತಿ ನೀಡಿದರು.

ಎ1 ಆರೋಪಿ ರವಿ ಮೇಲೆ 17 ಪ್ರಕರಣಗಳು ದಾಖಲಾಗಿದ್ವು, ಗಂಗಾಧರ ಮೇಲೆ 4 ಪ್ರಕರಣಗಳು ಸೇರಿ ಎಲ್ಲರ ಮೇಲೂ ಪ್ರಕರಣಗಳಿವೆ. ಆರೋಪಿ ರವಿ ಮೇಲೆ ಸಾಕಷ್ಟು ಕೇಸ್ ಗಳು ದಾಖಲಾಗಿದ್ವು ಅವರು ನಡೆದುಕೊಂಡ ರೀತಿಯನ್ನ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಅವರ ನಡುವಳಿಕೆ ಇದರಲ್ಲಿ ಗೊತ್ತಾಗತ್ತೆ ಎಂದು ಆದೇಶದಲ್ಲಿ ನ್ಯಾಯಾಲಯ ಉಲ್ಲೇಖ ಮಾಡಿದೆ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ

ಗಂಗಾವತಿ ನಗರದ ಹೊರ ವಲಯದಲ್ಲಿರುವ ರಾಣಾ ಪ್ರತಾಪ್​ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ 2025ರ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು.

ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು. ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಕೊಲೆ ಕೇಸ್ ಗೆ ಸಂಭಂದಿಸಿದಂತೆ ಗಂಗಾವತಿ ನಗರ ಪೊಲೀಸರು, 12 ಜನರನ್ನು ಬಂಧಿಸಿದ್ದು, ಸುಮಾರು 927 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹಳೆಯ ದ್ವೇಷ ಮತ್ತು ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾಗಿದ್ದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Thu, 30 April 26

Source link

ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್! – Kannada News | Bengaluru Bowring Hospital Wall Collapse: No Business on Footpaths; Says DK Shivakumar

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಏಪ್ರಿಲ್​ 30: ಬುಧವಾರ ಸಂಜೆ 1 ಗಂಟೆ ಅಬ್ಬರಿಸಿದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ (Rain) ಬೆಂಗಳೂರಿನಲ್ಲಿ ಸಾಲು ಸಾಲು ಅವಘಡಗಳನ್ನು ಸೃಷ್ಟಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಒಂದು ಮಗು ಸೇರಿ 7 ಮಂದಿ ಉಸಿರು ಚೆಲ್ಲಿದ್ದಾರೆ. ವ್ಯಾಪಾರ ಮಾಡ್ತಿದ್ದವರು, ಖರೀದಿ ಮಾಡಲು ಬಂದಿದ್ದವರು ಸಾವಿನ ಮನೆ ಸೇರಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಖಡಕ್​ ಸೂಚನೆ ನೀಡಿದ್ದಾರೆ. ​

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಸ್ತೆ ಮೇಲೆ ಬಿದ್ದಿರುವ ಮರದ ಕೊಂಬೆ ತೆರವು ಮಾಡಲು ಪೊಲೀಸರಿಗೆ ಈಗಾಗಲೇ ನಿರ್ದೇಶನವನ್ನೂ ನೀಡಿದ್ದೇನೆ. ಈಗಾಗಲೇ ನಗರದಾದ್ಯಂತ ಇರುವ ಸಮಸ್ಯೆ ಪಟ್ಟಿ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನ ಈಗ ಕಂಟ್ರೋಲ್ ರೂಂನಲ್ಲಿ ಕಲೆ ಹಾಕಿದ್ದಾರೆ. ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ. ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಸೂಚಿಸಿದ್ದೇನೆ ಎಂದರು.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ

ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ, ಆದರೆ ಇನ್ಮುಂದೆ ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಮೊದಲೇ ಗುರುತಿಸಲು ಸೂಚಿಸಿದ್ದೇನೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಫುಟ್‌ಪಾತ್‌ಗಳ ಮೇಲೆ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ. ಮುಖ್ಯವಾಗಿ ವಾಜಪೇಯಿ ಆಸ್ಪತ್ರೆ ಪಕ್ಕದಂತಹ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಳೆ ಹಾನಿ ಸಂಬಂಧ ಸಿಎಂ ಸಭೆ ಕರೆದಿದ್ದಾರೆ. ನಾನು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಬೆಂಗಳೂರು ನಗರದ ಎಲ್ಲೆಲ್ಲಿ ರಸ್ತೆಗೆ ಅಡ್ಡ ಇರುವ ಕೊಂಬೆಗಳ ಬಗ್ಗೆ ಪಟ್ಟಿ ಮಾಡಲು ಸೂಚಿಸಿದ್ದೇನೆ. ಒಣಗಿರುವ ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಆಗಿದೆ. ಹೀಗಾಗಿ ಕೊಂಬೆ ತೆರವು ಮಾಡಿ ಸಂಚಾರಕ್ಕೆ‌ ಅನುವು ಮಾಡಲು ಹೇಳಿದ್ದೇನೆ. ನೀರು ಬ್ಲಾಕ್ ಆಗಿದ್ರೆ ಅದನ್ನು ಕ್ಲೀನ್ ಮಾಡೋಕೆ ಹೇಳಿದ್ದೇನೆ ಎಂದಿದ್ದಾರೆ.

ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ

ಈ ರೀತಿಯ ಗೋಡೆಗಳನ್ನು ಗುರುತು ಮಾಡಲು ತಿಳಿಸಿದ್ದೇನೆ. ಮಳೆ ಜಾಸ್ತಿ ಬಂದಾಗ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಳೆಯ ಪ್ರಮಾಣ ಕುಸಿಯಲಿದೆ ಅನ್ನೋ ವರದಿಗಳು ಬಂದಿವೆ. ಮಳೆ ಕಡಿಮೆಯಾದರೆ ವಿದ್ಯುತ್‌ಗೂ ಸಮಸ್ಯೆ ಉಂಟಾಗಲಿದೆ. ಡ್ಯಾಂಗಳಿಗೂ ಸಮಸ್ಯೆ ಆಗುತ್ತದೆ. ಶರಾವತಿಯಲ್ಲಿ ಈಗಾಗಲೇ ಆ ರೀತಿ ಕಾಣಿಸುತ್ತಿದೆ. ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

ನಾಳೆ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ 

ಇನ್ನ ನಗರದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನಾಳೆ ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಲಿರುವ ಡಿಕೆ ಶಿವಕುಮಾರ್​, ಮಳೆಯಿಂದಾದ ಸಮಸ್ಯೆ, ಅವಾಂತರಗಳನ್ನು ವೀಕ್ಷಿಸಲಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link