Category Archives: Blog

Your blog category

ಕರ್ನಾಟಕ ಸಿಎಂ ರೇಸ್​​ನಲ್ಲಿದ್ದಾರಾ ಮಲ್ಲಿಕಾರ್ಜುನ ಖರ್ಗೆ?: ಸ್ವತಃ ಎಐಸಿಸಿ ಅಧ್ಯಕ್ಷರಿಂದಲೇ ಸಿಕ್ಕು ಸ್ಪಷ್ಟನೆ – Kannada News | Mallikarjuna Kharge Addresses Karnataka CM Change Speculation Amidst Political Buzz

ಕಲಬುರಗಿ, ಏಪ್ರಿಲ್​​ 30: ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ನಾಯಕತ್ವ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಹರಿದಾಡುತ್ತಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿನ ಗೊಂದಲಗಳನ್ನು ಆದಷ್ಟು ಬೇಗನೆ ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚೆಗೆ ಕಾಂಗ್ರೆಸ್‌ನ 40-50 ಶಾಸಕರು ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಖರ್ಗೆ ಅವರೇ ಸಿಎಂ ಆದರೆ ಉತ್ತಮ ಎಂಬ ಗೃಹ ಸಚಿವ ಪರಮೇಶ್ವರ್​​ ಹೇಳಿಕೆಗೂ ಉತ್ತರಿಸಿದ ಅವರು, ನಾನಾದರೆ ಉತ್ತಮ ಅಂತ ನೀವು ಹೇಳ್ತೀರಿ, ಅವರು ಹೇಳ್ತಾರೆ, ಮೇಲಿನವರು ಹೇಳ್ತಾರೆ. ಈಗಾಗಲೇ ಇಲ್ಲಿ ಚೀಫ್ ಮಿನಿಸ್ಟರ್ ಇದ್ದಾರೆ. ಬದಲಾವಣೆ ಆಗಬೇಕೆಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ನಾವು ಸೇರಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ, ನೋಡೋಣ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕಾಂಪೌಂಡ್ ಬಳಿ ಕೂತು ವ್ಯಾಪಾರ ಮಾಡಬೇಡಿ’: ಬೌರಿಂಗ್ ಆಸ್ಪತ್ರೆ ದುರಂತದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ನೋಡಿ – Kannada News | Bowring Hospital Tragedy: AICC President Mallikarjun Kharge Urges Vendors to Avoid Sitting Near Walls

ಕಲಬುರಗಿ, ಏಪ್ರಿಲ್ 30: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದುಬಿದ್ದು ಏಳು ಮಂದಿ ಮೃತಪಟ್ಟ ಘಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಪೌಂಡ್ ಹಳೆಯದಾಗಿತ್ತು ಅಥವಾ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತಿದೆ ಎಂದರು. ಕುಸಿದ ಕಾಂಪೌಂಡ್ ಸರಿಪಡಿಸಲು ಮತ್ತು ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ಕಾಂಪೌಂಡ್‌ಗಳ ಬಳಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರದು. ಕಾಂಪೌಂಡ್​ಗಳ ಬಳಿ ಯಾರೂ ಮಾರಾಟ ಮಾಡಬೇಡಿ ಎಂದು ಖರ್ಗೆ ಮನವಿ ಮಾಡಿದರು. ಪುಟ್ಪಾತ್ ಮೇಲೆ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಸಮಸ್ಯೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರನ್ನು ಅಲ್ಲಿಂದ ತೆರವುಗೊಳಿಸಲು ಹೋದರೆ, ‘ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಿ’ ಎನ್ನುತ್ತಾರೆ. ಆದರೆ ನಗರದ ನಾಗರಿಕರಿಗೆ ಅನಾನುಕೂಲವಾಗಬಾರದು. ಮುನ್ಸಿಪಾಲಿಟಿಗಳು ಅವರಿಗೆ ಯೋಗ್ಯವಾದ ಸ್ಥಳಗಳನ್ನು ಒದಗಿಸಬೇಕು. ಇಂದು ಬೆಂಗಳೂರಿನಲ್ಲಿ ನಡೆದಂತೆ ನಾಳೆ ಇನ್ನೊಂದು ಕಡೆ ಆಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಿಗ್ ವರ್ಕರ್‌ಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಬೇಕು ಎಂದು ಖರ್ಗೆ ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ ಬ್ಲಾಕ್​​ಬಸ್ಟರ್​’; ಪ್ರೇಮ್ ನಿರ್ದೇಶನಕ್ಕೆ ಮೆಚ್ಚುಗೆ, ಕಿಚ್ಚನ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ – Kannada News | KD Blockbuster Review: Prem’s Direction and Kichcha Sudeep’s Entry Impress

‘ಕೆಡಿ’ ಸಿನಿಮಾ ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಕೆವಿಎನ್ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ. ಪ್ರೇಮ್ ಅವರ ಹಳೆಯ ಖದರ್ ಮರಳಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಇದು ಆರಂಭದ ವಿಮರ್ಶೆ ಮಾತ್ರ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.

‘ಮಾರ್ಟಿನ್’ ಸೋಲಿನ ಬಳಿಕ ಧ್ರುವ ಸರ್ಜ ಅವರ ‘ಕೆಡಿ’ ಸಿನಿಮಾ ರಿಲೀಸ್ ಆಗಿದೆ. ಈ ಕಾರಣಕ್ಕೆ ಅವರ ವೃತ್ತಿಜೀವನದ ದೃಷ್ಟಿಯಿಂದ ಈ ಸಿನಿಮಾ ತುಂಬಾನೇ ಮುಖ್ಯ ಎನಿಸಿಕೊಂಡಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಜನರು ಸಿನಿಮಾಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

‘ಕೆಡಿ’ ಸಿನಿಮಾದ ಮೊದಲಾರ್ಧವನ್ನು ಜನರು ಸಮಾಧಕರ ಎಂದು ಕರೆದಿದ್ದಾರೆ. ಸಿನಿಮಾದ ಪಾತ್ರಗಳ ಪರಿಚಯದ ಮೇಲೆ ಮೊದಲಾರ್ಧ ಸಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ತಿಳಿಸಿದವರು ಹೇಳಿದ್ದಾರೆ. ಸಿನಿಮಾದ ಅಸಲಿ ಕಥೆ ಆರಂಭ ಆಗೋದು ದ್ವೀತೀಯಾರ್ಧದಲ್ಲಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಜನರು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ‘ಕೆಡಿ’ ಸಿನಿಮಾ ರಿಲೀಸ್​​ಗೂ ಮೊದಲು ತಲೆ ಎತ್ತಿತು ಬೃಹತ್​ ಕಟೌಟ್

ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಸಿನಿಮಾನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಸಿನಿಮಾನ ಜನರು ಒಟ್ಟಾರೆಯಾಗಿ ಇಷ್ಟಪಟ್ಟಿದ್ದಾರೆ. ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಸಿನಿಮಾ ಸಹಕಾರಿ ಆಗಲಿದೆ ಎಂದು ಅನೇಕರು ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಡ್ಯ ವಿವಿಯ ಯುವಸಂಭ್ರಮಕ್ಕೆ ವರುಣನ ಅಡ್ಡಿ: ಮಳೆ ಅಬ್ಬರಕ್ಕೆ ವೇದಿಕೆಯೇ ನೆಲಸಮ – Kannada News | Mandya University Yuvasambrama Postponed After Storm Damages Event Stage

ಮಂಡ್ಯ, ಏಪ್ರಿಲ್​​ 30: ನಿನ್ನೆ (ಏಪ್ರಿಲ್​ 29) ರಾತ್ರಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ನವ ವಸಂತ ಯುವಸಂಭ್ರಮ ಕಾರ್ಯಕ್ರಮಕ್ಕೂ ಮಳೆ ಅಡ್ಡಿಯಾಗಿದೆ. ಕಳೆದ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕಾರ್ಯಕ್ರಮಕ್ಕಾಗಿ ನಿರ್ಮಿಸಿದ್ದ ಬೃಹತ್ ಪೆಂಡಾಲ್ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಸಕ ರವಿ ಗಣಿಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ಕಾರ್ಯಕ್ರಮವನ್ನು ಮುಂದೊಂದು ದಿನ ನಡೆಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ, ತಾತ್ಕಾಲಿಕವಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ಐವರು ಸಜೀವದಹನ – Kannada News | Five Killed After Car Catches Fire on Delhi–Mumbai Expressway in Rajasthan

ಜೈಪುರ, ಏಪ್ರಿಲ್ 30: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅಲ್ವಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮೌಜ್‌ಪುರ ಬಳಿ, ಚಲಿಸುತ್ತಿದ್ದ ಕಾರೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ. ಮೃತರನ್ನು ಮಧ್ಯಪ್ರದೇಶದ ಶಿಯೋಪುರದವರು ಎಂದು ಗುರುತಿಸಲಾಗಿದ್ದು, ಇವರಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದ್ದಾರೆ.
ಕೋಟಾ ಕಡೆಗೆ ಪ್ರಯಾಣಿಸುತ್ತಿದ್ದ ವಾಹನದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿಯಿತು.

ಅಪಘಾತದ ಸಮಯದಲ್ಲಿ ಚಾಲಕ ವಿನೋದ್ ಕುಮಾರ್ ಮೆಹರ್ ವಾಹನದಿಂದ ಹೊರಕ್ಕೆ ಜಿಗಿದು ಬದುಕುಳಿದಿದ್ದರೂ, ಶೇ. 80ರಷ್ಟು ಸುಟ್ಟ ಗಾಯಗಳಾಗಿರುವುದರಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗಂಭೀರ ಆರೋಪ: ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ‘AI ಚಿಪ್’ ಇದೆ!  – Kannada News | Vaibhav Sooryavanshi Reacts to Pakistani Expert’s Bat Chip Allegation

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಗೈಯುತ್ತಿರುವ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಮೂಡಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ಅರಗಿಸಿಕೊಳ್ಳಲಾಗದ ಪಾಕಿಸ್ತಾನದ ವಿಶ್ಲೇಷಕರೊಬ್ಬರು “ಇವರ ಬ್ಯಾಟ್‌ನಲ್ಲಿ AI ಚಿಪ್ ಇದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ಸೂರ್ಯವಂಶಿ ನೀಡಿರುವ ‘ಕ್ಲಾಸ್’ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಈ 15 ವರ್ಷದ ಹುಡುಗ ಹೊಡೆಯುವ ಹೊಡೆತಗಳು ಮನುಷ್ಯನಿಂದ ಸಾಧ್ಯವಿಲ್ಲದಂತಿದೆ. ವೈಭವ್ ಅವರ ಬ್ಯಾಟ್ ಅನ್ನು ವಾಡಾ (WADA) ಪರೀಕ್ಷೆಗೆ ಒಳಪಡಿಸಿದಂತೆ ಲ್ಯಾಬ್‌ನಲ್ಲಿ ಪರೀಕ್ಷಿಸಬೇಕು. ಅವರ ಬ್ಯಾಟ್‌ನಲ್ಲಿ ಯಾವುದೋ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಚಿಪ್ ಇದೆ ಎಂದೆನಿಸುತ್ತಿದೆ” ಎಂದು ಹೇಳಿದ್ದರು.

ಬ್ಯಾಟ್​ನಲ್ಲಿ ಎಐ ಚಿಪ್ ಇರುವ ಕಾರಣ ವೈಭವ್ ಆ ರೀತಿಯಾಗಿ ಬ್ಯಾಟ್ ಮಾಡುತ್ತಿದ್ದಾನೆ. ಇಲ್ಲದಿದ್ದರೆ ಈ ವಯಸ್ಸಿಗೆ ಅಂತಹ ಆಟ ಆಡಲು ಸಾಧ್ಯವಿಲ್ಲ. ಹೀಗಾಗಿ ಅವರ ಬ್ಯಾಟ್​ ಅನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ನೌಮಾನ್ ನಿಯಾಝ್ ಆಗ್ರಹಿಸಿದ್ದರು.

ವೈಭವ್ ಸ್ಮಾರ್ಟ್ ಉತ್ತರ!

ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ, ಅತ್ಯಂತ ವಿನಮ್ರವಾಗಿ ಮತ್ತು ತಮಾಷೆಯಾಗಿ ಉತ್ತರಿಸಿದ್ದಾರೆ.

“ನನ್ನ ಬ್ಯಾಟ್‌ನಲ್ಲಿ ಚಿಪ್ ಏನಾದರೂ ಇದ್ದರೆ ಅದನ್ನು ದೇವರೆ ಅಳವಡಿಸಿ ಕಳುಹಿಸಿದ್ದಾರೆ. ದೇವರು ಮೇಲಿಂದಲೇ ಹೇಳಿದ್ದ, ನಿನ್ನ ಬ್ಯಾಟ್‌ನಲ್ಲಿ ಒಂದು ವಿಶೇಷ ಶಕ್ತಿ ನೀಡುತ್ತಿದ್ದೇನೆ ಎಂದು. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೇ,” ಎಂದು ವೈಭವ್ ನಗುತ್ತಾ ಹೇಳಿದ್ದಾರೆ. ಅವರ ಈ ಸಮಯಪ್ರಜ್ಞೆಯ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ವೈಭವ್ ಬ್ಯಾಟ್ ಮೇಲೆ ಸಂದೇಹ ವ್ಯಕ್ತಪಡಿಸಲು ಮುಖ್ಯ ಕಾರಣ ಯುವ ದಾಂಡಿಗನ ಆರ್ಭಟ. ಅಂದರೆ ಪ್ರಸ್ತುತ ಐಪಿಎಲ್​ನಲ್ಲಿ ವೈಭವ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

  • ವೇಗದ 400 ರನ್: ಐಪಿಎಲ್ ಇತಿಹಾಸದಲ್ಲಿ ಕೇವಲ 167 ಎಸೆತಗಳಲ್ಲಿ 400 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
  • ಅಬ್ಬರದ ಶತಕ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.
  • ಕೊನೆಯ ಪ್ರದರ್ಶನ: ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಇದನ್ನೂ ಓದಿ: IPL 2026: ಬ್ಯಾಟಿಂಗ್, ಬೌಲಿಂಗ್ ಮಾಡದೇ ದಾಖಲೆ ಬರೆದ ಶಾರ್ದೂಲ್ ಠಾಕೂರ್..!

ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ವೈಭವ್ ಸೂರ್ಯವಂಶಿ ತಮ್ಮ ಮೇಲೆ ಕೇಳಿ ಬರುತ್ತಿರುವ ಟೀಕೆ ಮತ್ತು ವಿಲಕ್ಷಣ ವಾದಗಳಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸುತ್ತಿದ್ದಾರೆ. ಈ ಉತ್ತರದಿಂದಾಗಿ ಬೌಲರ್​ಗಳು ಕಂಗೆಟ್ಟಿರುವುದಂತು ಸುಳ್ಳಲ್ಲ!

Source link

ಬೆಂಗಳೂರಲ್ಲಿ ದಾಖಲೆ ಬರೆದ ವರುಣ: ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ – Kannada News | Bengaluru Records Historic Rainfall in April: Yellow Alert Issued for Karnataka

ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಆಲಿಕಲ್ಲು, ಗುಡುಗು ಮತ್ತು ಮಿಂಚಿನ ಸಹಿತ ನಿನ್ನೆ (ಏಪ್ರಿಲ್​​ 29) ಧಾರಾಕಾರವಾಗಿ ಸುರಿದ ಮಳೆ ರಾಜಧಾನಿಯ ಏಪ್ರಿಲ್ ತಿಂಗಳ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದೆ. ನಿನ್ನೆ ಸಂಜೆ 111 ಮೀಲಿ‌ ಮೀಟರ್ ಮಳೆಯಾಗಿದ್ದು, 2001ರಲ್ಲಿಯೂ ಇದೇ ರೀತಿಯ ಮಳೆ ಆಗಿತ್ತು. ಇನ್ನು ಈ ನಡುವೆ ಬೆಂಗಳೂರಿನಲ್ಲಿ‌ ಇನ್ನೂ ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗ ದಲ್ಲಿ ಗಾಳಿ ಬಿಸಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.

ಬೆಂಗಳೂರಿನ ವಿವಿಧೆಡೆ ಮಳೆಯ ಪ್ರಮಾಣ

  • ಸಂಪಂಗಿರಾಮನಗರ- 39 ಮಿಲಿ ಮೀಟರ್
  • ಪುಲಕೇಶಿನಗರ- 36.50 ಮಿಲಿ ಮೀಟರ್
  • ಬೊಮ್ಮನಹಳ್ಳಿ- 31 ಮಿಲಿ ಮೀಟರ್
  • ಕಾಟನ್​ಪೇಟೆ- 29 ಮಿಲಿ ಮೀಟರ್
  • HAL ವಿಮಾನ ನಿಲ್ದಾಣ- 25 ಮಿಲಿ ಮೀಟರ್
  • ಬಿಟಿಎಂ ಲೇಔಟ್​- 22.50 ಮಿಲಿ ಮೀಟರ್
  • ಮಾರತ್ತಹಳ್ಳಿ- 18.50 ಮಿಲಿ ಮೀಟರ್

ಇದನ್ನೂ ಓದಿ: ದಾಖಲೆ ಮಟ್ಟದಲ್ಲಿ ಬತ್ತಿದ ಕೆಆರ್​​ಎಸ್​​ ಡ್ಯಾಂ; ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಂಕಷ್ಟ!

ಮುಕ್ಕಾಲು ಭಾಗ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆ ಮೂರು ದಿನ ಬೆಂಗಳೂರಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ಅದರಂತೆ ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಬಿಎಗೆ ಸಿಎಂ ಸೂಚನೆ

ನಿನ್ನೆ ಸುರಿದ ಮಳೆಗೆ ಅವಾಂತರಗಳಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ನಗರದ ಮ್ಯಾನ್​ಹೋಲ್​ಗಳು ಬ್ಲಾಕ್ ಆಗಿದ್ರೆ ಕೂಡಲೇ ಸರಿಪಡಿಸಿ, ಬೀಳುವ ಹಂತದಲ್ಲಿರುವ ಮರದ ಕೊಂಬೆಗಳ ತೆರವು ಮಾಡಿ ಎಂದು ಜಿಬಿಎ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜೊತೆಗೆ ನಗರದಲ್ಲಿ ಈಗ ಬಿದ್ದಿರುವ ಮರದ ಕೊಂಬೆಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಿ. ಅಂಡರ್​ಪಾಸ್​ಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಿ. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಬೌರಿಂಗ್ ಆಸ್ಪತ್ರೆ ರೀತಿ ದುರ್ಘಟನೆ ನಡೆಯದಂತೆ ಗಮನಹರಿಸಿ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:59 am, Thu, 30 April 26

Source link

ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸಮಗ್ರ ಪರಿಶೀಲನೆಗೆ ಆದೇಶ: ಬೌರಿಂಗ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ – Kannada News | After Bowring Hospital Tragedy, Karnataka Government Orders Safety Audit of All Government Hospitals in Bengaluru

ಬೆಂಗಳೂರು, ಏಪ್ರಿಲ್ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ದುರಂತದಲ್ಲಿ ಏಳು ಅಮಾಯಕರು ಮೃತಪಟ್ಟ ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಮಗ್ರ ಪರಿಶೀಲನೆಗೆ ಆದೇಶ ನೀಡಿದ್ದಾರೆ. ಬೌರಿಂಗ್, ವಿಕ್ಟೋರಿಯಾ, ಕೆಸಿ ಜನರಲ್ ಮತ್ತು ಸಿವಿ ರಾಮನಗರ ಆಸ್ಪತ್ರೆ ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಸಮಸ್ಯೆಗಳ ಕುರಿತು ಪೂರ್ವಭಾವಿ ಎಚ್ಚರಿಕೆ ವಹಿಸುವುದನ್ನು ಬಿಟ್ಟು, ದೊಡ್ಡ ದುರಂತಗಳು ಸಂಭವಿಸಿದ ನಂತರವೇ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ: ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿ ಸಾವು – Kannada News | Bengaluru Rain Havoc: Death Toll Hits 10 After Fresh Fatality; Past Tragedies Detailed

ಹಾರಿಬಿದ್ದಿರುವ ಮನೆಯ ಶೀಟ್​​ಗಳುImage Credit source: Tv9 Kannada

ಬೆಂಗಳೂರು, ಏಪ್ರಿಲ್​​ 30: ಮಳೆಯ ಅವಾಂತರಕ್ಕೆ ಬೆಂಗಳೂರಿನಲ್ಲಿ (Bengaluru) ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್​ ಎಂದು ಗುರುತಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಮಂಜುನಾಥ್​ ಮೃತದೇಹ ಶಿಫ್ಟ್ ಮಾಡಲಾಗಿದೆ. ಮನೆಯ ಮೇಲಿನ ಶೀಟ್​​ ಹಾರದಂತೆ ಕಲ್ಲು ಇಡಲಾಗಿತ್ತು. ಗಾಳಿ ಮಳೆಗೆ ಶೀಟ್​​ ಬಿದ್ದಿದ್ದು ಈ ವೇಳೆ ಶೀಟ್​​ ಮೇಲಿಟ್ಟಿದ್ದ ಕಲ್ಲು ಮನೆಯಲ್ಲಿ ಮಲಗಿದ್ದ ಮಂಜುನಾಥ್​​ ಮೇಲೆ ಬಿದ್ದ ಪರಿಣಾಮ ಸಾವು ಸಂಭವಿಸಿದೆ.

ಸಾಲು ಸಾಲು ಬಲಿ

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮಗು ಸೇರಿ ಒಟ್ಟು 7 ಜನ ದಾರುಣವಾಗಿ ಮೃತಪಟ್ಟಿದ್ದರು. ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6), ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಮತ್ತು ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಅವಘಡದಲ್ಲಿ ಪ್ರಾಣಬಿಟ್ಟಿದ್ದರು. ಗಾಳಿ ಮಳೆಯ ಕಾರಣಕ್ಕೆ ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು. ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿದವರ ಪೈಕಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಬರೆದ ವರುಣ; ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ

ಯಾರಬ್ ನಗರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ನಿನ್ನೆ ಸಂಜೆ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ತನ್ನ ಬೈಕ್ ಪಾರ್ಕ್ ಮಾಡಲು ಸೈಯದ್ ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಆತ ಪ್ರಾಣಕಳೆದುಕೊಂಡಿದ್ದ. ಮತ್ತೊಂದೆಡೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತಹುದ್ದೇ ಘಟನೆ ನಡೆದಿತ್ತು. ಮಳೆಯ ನಡುವೆ ಸಂಚರಿಸುತ್ತಿದ್ದಾಗ, ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ (ವೈರ್) ಟಚ್ ಆದ ಪರಿಣಾಮ ಸುಮಾರು 30-35 ವರ್ಷ ವಯಸ್ಸಿನ ರಘು ಎಂಬುವವರು ಜೀವ ಬಿಟ್ಟಿದ್ದರು.ಜೆ.ಪಿ. ನಗರದ ಮಿನಿ ಫಾರೆಸ್ಟ್​​ನ 15ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ – Kannada News | Udaipur Revenge Killing: Daughter’s Family Abducts, Murders Son in Law After Her Death

ಉದಯಪುರ, ಏಪ್ರಿಲ್ 30:ಚಿಕಿತ್ಸೆ ಫಲಕಾರಿಯಾಗದೆ ಮಗಳು ಸತ್ತಿದ್ದಕ್ಕೆ, ಆಕೆಯ ಕುಟುಂಬದವರು ಅಳಿಯನನ್ನು ಅಪಹರಿಸಿ ಹತ್ಯೆ(Murder) ಮಾಡಿರುವ ಘಟನೆ ಉದಯಪುರದಲ್ಲಿ ನಡೆದಿದೆ. ಚೋಖಲಬಾರ ಗ್ರಾಮದ ಪಿಂಟೂಲಾಲ್ ವಡೇರಾ ಅವರ ಪತ್ನಿ ಪರು (25) ಏಪ್ರಿಲ್ 28 ರಂದು ಉದಯಪುರದ ಆಸ್ಪತ್ರೆಯಲ್ಲಿ ನಿಧನರಾದರು.

ಏಪ್ರಿಲ್ 24 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಾಗ, ಆಕೆಯ ತವರು ಮನೆಯಾದ ಅಂಬಾವಿ ಗ್ರಾಮದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.

ಮಗಳ ಸಾವಿನ ಸುದ್ದಿ ತಿಳಿದು ಪಿಂಟೂಲಾಲ್ ಕುಟುಂಬಕ್ಕೆ ಮಾಹಿತಿ ನೀಡಿದ ಬೆನ್ನಲ್ಲೇ, ಮಂಗಳವಾರ ಸಂಜೆ ಆಕೆಯ ಸಂಬಂಧಿಕರು ಶಸ್ತ್ರಾಸ್ತ್ರಗಳೊಂದಿಗೆ ಚೋಖಲಬಾರ ಗ್ರಾಮಕ್ಕೆ ನುಗ್ಗಿದ್ದಾರೆ. ಅಳಿಯನ ಕುಟುಂಬವೇ ಮಗಳ ಕೊಲೆ ಮಾಡಿದೆ ಎಂದು ಆರೋಪಿಸಿದ ಆ ಗುಂಪು, ಪಿಂಟೂಲಾಲ್ ಮನೆಯನ್ನು ಧ್ವಂಸ ಮಾಡಿ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು.

ಮತ್ತಷ್ಟು ಓದಿ: ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಗ್ರಾಮಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗಲಿಲ್ಲ. ಪ್ರಾಣಭಯದಿಂದ ಪಿಂಟೂಲಾಲ್ ಮತ್ತು ಅವರ ಕುಟುಂಬಸ್ಥರು ಸ್ಥಳದಿಂದ ಪಲಾಯನ ಮಾಡಿದರು. ಆದರೆ, ಮರುದಿನ ಬೆಳಿಗ್ಗೆ ಪತ್ನಿಯ ಸಹೋದರ ಕರಣ್ ತನ್ನ ಸಹಚರರೊಂದಿಗೆ ಮರಳಿ ಬಂದು, ಪತಿಯನ್ನು ಬಂದೂಕು ತೋರಿಸಿ ಎಲ್ಲರ ಸಮ್ಮುಖದಲ್ಲೇ ಅಪಹರಿಸಿ ಅಂಬಾವಿಗೆ ಕರೆದೊಯ್ದರು.

ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ರಕ್ಷಿಸುವ ಮೊದಲೇ, 26 ವರ್ಷದ ಪಿಂಟೂಲಾಲ್ ಅವರನ್ನು ಮಹಿಳೆಯ ಕುಟುಂಬಸ್ಥರು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಮಗಳ ಸಾವಿಗೆ ಅಳಿಯನೇ ಕಾರಣ ಎಂಬ ಅನುಮಾನದ ಮೇಲೆ ನಡೆದ ಈ ಸೇಡಿನ ಹತ್ಯೆಯು ಈಗ ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯಲ್ಲಿ ಭಾಗಿಯಾದವರಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link