Category Archives: Blog

Your blog category

ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಬಿಎನ್​​ಪಿಯ ತಾರಿಕ್ ರೆಹಮಾನ್ ಒಟ್ಟು ಆಸ್ತಿ ಎಷ್ಟು? – Kannada News | Bangladesh’s next PM Tarique Rahman: BNP Leader’s Assets and Election Victory Overview

ಢಾಕಾ, ಫೆಬ್ರವರಿ 13: ಬಾಂಗ್ಲಾದೇಶ(Bangladesh)ದಲ್ಲಿ ಅಶಾಂತಿ ನೆಲೆಸಿದೆ. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಚುನಾವಣಾ ಫಲಿತಾಂಶಗಳು ಸೂಚಿಸುತ್ತಿಚೆ. ಸುಮಾರು ಎರಡು ದಶಕಗಳ ನಂತರ ಬಿಎನ್‌ಪಿ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ಅವರ ಮೈತ್ರಿಕೂಟ ಈಗಾಗಲೇ ಬಹುಮತದ ಗಡಿ ದಾಟಿದೆ. ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಬಿಎನ್‌ಪಿ ಸರ್ಕಾರದಲ್ಲಿ ಪ್ರಧಾನಿಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. 17 ವರ್ಷಗಳ ವನವಾಸದ ನಂತರ ಬಾಂಗ್ಲಾದೇಶಕ್ಕೆ ಮರಳಿರುವ ತಾರಿಕ್ ರೆಹಮಾನ್, ಒಂದೂವರೆ ತಿಂಗಳಲ್ಲಿ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ. ಹಾಗಾದರೆ ಅವರ ಆಸ್ತಿಯ ಒಟ್ಟು ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಭ್ರಷ್ಟಾಚಾರದ ಆರೋಪದ ಮೇಲೆ ತಾರಿಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು.  ಈ ಘಟನೆ ನಡೆದಿದ್ದು 2008ರಲ್ಲಿ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಾರಿಕ್ ಚಿಕಿತ್ಸೆಗಾಗಿ ತನ್ನ ಕುಟುಂಬದೊಂದಿಗೆ ಲಂಡನ್​​ಗೆ ಹೋಗಿದ್ದರು. ಎಂದಿಗೂ ಹಿಂದಿರುಗಲಿಲ್ಲ. 17 ವರ್ಷಗಳ ಸ್ವಯಂ ಪ್ರೇರಿತ ಗಡಿಪಾರು ನಂತರ ತಾರಿಕ್ ರೆಹಮಾನ್ ಕಳೆದ ವರ್ಷ ಡಿಸೆಂಬರ್ 25ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಆ ಸಮಯದಲ್ಲಿ ಐದು ದಿನಗಳ ಬಳಿಕ ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್​ಪಿ ನಾಯಕಿ ಖಲೀದಾ ಜಿಯಾ ಅವರ ಮೃತಪಟ್ಟರು. ಪಕ್ಷದ ಜವಾಬ್ದಾರಿ ತಾರಿಕ್ ರೆಹಮಾನ್ ಅವರ ಹೆಗಲ ಮೇಲೆ ಬಿದ್ದಿತ್ತು.

ಬಾಂಗ್ಲಾದೇಶಕ್ಕೆ ಹಿಂದಿರುಗಿದ ನಂತರ, ತಾರಿಕ್ ಚುನಾವಣೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಅವರು ಬೊಗ್ರಾ -6 ಮತ್ತು ಢಾಕಾ -17 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದರು. ಅವರು ಎರಡೂ ಕ್ಷೇತ್ರಗಳನ್ನು ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ.

ತಾರಿಕ್ ರೆಹಮಾನ್ ಆಸ್ತಿ
ಚುನಾವಣಾ ಅಫಿಡವಿಟ್ ಪ್ರಕಾರ, 57 ವರ್ಷದ ತಾರಿಕ್ ರೆಹಮಾನ್ ಅವರ ಒಟ್ಟು ಆಸ್ತಿ 1.97 ಕೋಟಿ ಟಾಕಾ. ಅವರು ಬ್ಯಾಂಕ್ ಠೇವಣಿ, ಚಿನ್ನ ಮತ್ತು ಆಭರಣಗಳು, ಪೀಠೋಪಕರಣಗಳನ್ನು ಹೊಂದಿದ್ದಾರೆ, ಒಟ್ಟಾರೆಯಾಗಿ, ಅವರು 1.93 ಕೋಟಿ ಟಾಕಾ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಷೇರುಗಳಿಂದ ಬರುವ ಭಾರಿ ಆದಾಯವೂ ಸೇರಿದೆ.
ತಾರೊಕ್ ಅವರ ಬಳಿ 31 ಲಕ್ಷ 58 ಸಾವಿರ ಟಾಕ್ ಬ್ಯಾಂಕ್ ಠೇವಣಿ ಮತ್ತು ನಗದು ಇದೆ. ಅವರ ಬಳಿ 68 ಲಕ್ಷ ಒಂದೂವರೆ ಟಾಕಾ ಮೌಲ್ಯದ ಷೇರುಗಳಿವೆ.

ಅವರ ಬಳಿ 90 ಲಕ್ಷ 24 ಸಾವಿರ ಮೌಲ್ಯದ ಸ್ಥಿರ ಠೇವಣಿಗಳಿವೆ. 1 ಲಕ್ಷ 20 ಸಾವಿರ ಟಾಕಾ ಮೌಲ್ಯದ ಇತರ ಠೇವಣಿಗಳಿವೆ. ಪೀಠೋಪಕರಣಗಳ ಮೌಲ್ಯ ಸುಮಾರು 1 ಲಕ್ಷ 80 ಸಾವಿರ ಟಾಕಾ. ತಾರಿಕ್ ರೆಹಮಾನ್ ಅಪಾರ ಪ್ರಮಾಣದ ರಿಯಲ್ ಎಸ್ಟೇಟ್ ಹೊಂದಿದ್ದಾರೆ. ಅವರು ಎರಡು ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ, ಅದನ್ನು ಖರೀದಿಸುವ ಸಮಯದಲ್ಲಿ 345,000 ಟಾಕಾಗಳಿಗೆ ಖರೀದಿಸಲಾಗಿತ್ತು. ತಾರಿಕ್ ರೆಹಮಾನ್ ಮತ್ತು ಅವರ ಪತ್ನಿ ಮತ್ತು ಮಗಳು ಯಾವುದೇ ಸಾಲವನ್ನು ಹೊಂದಿಲ್ಲ. ಅವರು 2025-26 ರ ಹಣಕಾಸು ವರ್ಷದಲ್ಲಿ 1 ಲಕ್ಷ 1 ಸಾವಿರ 453 ಟಾಕಾ ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ.

ಮತ್ತೊಂದೆಡೆ, ತಾರಿಕ್ ರೆಹಮಾನ್ ವಿರುದ್ಧ ಪ್ರಸ್ತುತ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. 2004 ರಿಂದ ಅವರ ವಿರುದ್ಧ ದಾಖಲಾಗಿರುವ ಎಲ್ಲಾ 77 ಪ್ರಕರಣಗಳನ್ನು ಹಂತ ಹಂತವಾಗಿ ಪರಿಹರಿಸಲಾಗಿದೆ. ಕೆಲವರಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ, ಕೆಲವು ಪ್ರಕರಣಗಳಲ್ಲಿ ಹಿಂಪಡೆಯಲಾಗಿದೆ ಅಥವಾ ಕೆಲವು ಪ್ರಕರಣಗಳಲ್ಲಿ ವಜಾಗೊಳಿಸಲಾಗಿದೆ. ತಾರಿಕ್ ಅವರನ್ನು ಹಲವಾರು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ.

ಮತ್ತಷ್ಟು ಓದಿ: ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್​ಪಿ ಐತಿಹಾಸಿಕ ಗೆಲುವು ಸಾಧಿಸಿದರೂ ಖುಷಿಯ ಮೆರವಣಿಗೆಯೇ ಇಲ್ಲ

ಹೆಚ್ಚಿನ ಪ್ರಕರಣಗಳು 2004, 2007, 2014 ಮತ್ತು 2015 ರಲ್ಲಿ ದಾಖಲಾಗಿವೆ. ಮಾರ್ಚ್ 2007 ರಲ್ಲಿ ಹೊರಡಿಸಲಾದ ತುರ್ತು ಅಧಿಕಾರ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಒಂದು ಪ್ರಕರಣವನ್ನು ವಜಾಗೊಳಿಸಲಾಯಿತು ಮತ್ತು ಏಪ್ರಿಲ್ 16, 2009 ರಂದು ಖುಲಾಸೆಗೊಳಿಸಲಾಯಿತು.

ಅಫಿಡವಿಟ್ ಪ್ರಕಾರ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ತಾರಿಕ್ ರೆಹಮಾನ್ 42 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರು. 2014 ರಲ್ಲಿ ಒಂದು ಪ್ರಕರಣ, 2015 ರಲ್ಲಿ ಮೂರು, 2016 ರಲ್ಲಿ ಎಂಟು, 2017 ರಲ್ಲಿ ಆರು, 2018 ರಲ್ಲಿ ನಾಲ್ಕು, 2019 ರಲ್ಲಿ ಐದು, 2020 ರಲ್ಲಿ ಒಂದು, 2021 ರಲ್ಲಿ ಒಂದು ಮತ್ತು 2022 ರಲ್ಲಿ ಐದು ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್​ಫ್ಲೇಶನ್ ದಾಖಲು – Kannada News | Retail inflation at 2.8pc in January 2026, based on new CPI series with 2024 as base year

ನವದೆಹಲಿ, ಫೆಬ್ರುವರಿ 13: ಭಾರತದ ರೀಟೇಲ್ ಹಣದುಬ್ಬರ (Retail Inflation) ಜನವರಿಯಲ್ಲಿ ಶೇ. 2.8 ಎಂದು ದಾಖಲಾಗಿದೆ. ಬದಲಾವಣೆ ಮಾಡಲಾದ ಮಾನಕದ ಪ್ರಕಾರ ಹಣದುಬ್ಬರ ಲೆಕ್ಕಾಚಾರ ಮಾಡಲಾಗಿದೆ. ಮೂಲ ವರ್ಷ ಅಥವಾ ಬೇಸ್ ವರ್ಷವನ್ನು 2012ರಿಂದ 2024ಕ್ಕೆ ಬದಲಾಯಿಸಲಾಗಿದೆ. 2023-24ರ ಗೃಹ ಅನುಭೋಗ ಸಮೀಕ್ಷೆಯ ದತ್ತಾಂಶವನ್ನು ಬಳಸಿ ದೇಶಾದ್ಯಂತ ಅನುಭೋಗ ಮಾದರಿ (consumption pattern) ಆಗಿರುವ ಬದಲಾವಣೆಯನ್ನು ಗುರುತಿಸಲಾಗಿದೆ. ಹಣದುಬ್ಬರ ಲೆಕ್ಕಾಚಾರ ಪಟ್ಟಿಯಲ್ಲಿರುವ ಸರಕುಗಳಿಗೆ ಹೊಸ ಸೇರ್ಪಡೆ ಮತ್ತು ವೈಟೇಜ್ ಅನ್ನು ಕೊಡಲಾಗಿದೆ. ಆಹಾರಕ್ಕಿರುವ ವೈಟೇಜ್ ಅನ್ನು ಕಡಿಮೆ ಮಾಡಲಾಗಿದೆ. ಹೀಗೆ ವಿವಿಧ ಮಾನಕ ಬದಲಾವಣೆಗಳೊಂದಿಗೆ ದಾಖಲಾಗಿರುವ ಜನವರಿಯ ಹಣದುಬ್ಬರ ಹೆಚ್ಚು ನಿಖರ ಎಂದು ನಂಬಲಾಗಿದೆ.

ಒಟ್ಟಾರೆ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ 1.3 ಇತ್ತು. ಅದು 2012 ಅನ್ನು ಬೇಸ್ ಇಯರ್ ಆಗಿಸಿಕೊಂಡ ಹಳೆಯ ಸರಣಿಯ ಪ್ರಕಾರ ಲೆಕ್ಕಾಚಾರ ಮಾಡಲಾದ ಹಣದುಬ್ಬರ ದರವಾಗಿತ್ತು. ಜನವರಿಯಲ್ಲಿ ಹೊಸ ಸರಣಿಯ ಲೆಕ್ಕಾಚಾರ ನಡೆದಿದೆ. ಅದರ ಪ್ರಕಾರ, ಹಣದುಬ್ಬರ ಶೇ. 2.8 ಎಂದಿದೆ. ಇದರಲ್ಲಿ ಆಹಾರ ಹಣದುಬ್ಬರ ಶೇ. 2.1 ಇದೆ. ಗ್ರಾಮೀಣ ಹಣದುಬ್ಬರ ಶೇ. 2.7 ಇದ್ದರೆ, ನಗರದ ಹಣದುಬ್ಬರ ಶೇ. 2.8 ಇದೆ.

ಇದನ್ನೂ ಓದಿ: ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಪ್ಯಾನ್ ನಿಯಮಗಳ ಬದಲಾವಣೆ ಗಮನಿಸಿ…

ಒಡವೆಗಳ ಬೆಲೆಯಲ್ಲಿ ಭರ್ಜರಿ ಏರಿಕೆ..

ಚಿನ್ನ, ಬೆಳ್ಳಿ ಒಡವೆ, ಪರ್ಸನಲ್ ಕೇರ್, ಸಾಮಾಜಿಕ ರಕ್ಷಣೆ ಮತ್ತಿತರ ಸರಕುಗಳ ಬೆಲೆ ಏರಿಕೆ ಶೇ. 19 ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರಲ್ಲಿ ಬೆಳ್ಳಿ ಒಡವೆಯ ಹಣದುಬ್ಬರವೇ ಜನವರಿಯಲ್ಲಿ ಶೇ. 160 ಇದೆ.

ಬೆಳ್ಳಿ ಒಡವೆ, ಟೊಮೆಟೋ, ಕೊಬ್ಬರಿ, ಚಿನ್ನದ ಒಡವೆ, ಕೊಬ್ಬರಿ ಎಣ್ಣೆ ಬೆಲೆಗಳಲ್ಲಿ ಭರ್ಜರಿ ಏರಿಕೆ ಆಗಿದ್ದು ಜನವರಿಯಲ್ಲಿ ಹಣದುಬ್ಬರ ಹೆಚ್ಚಲು ಪ್ರಮುಖ ಕಾರಣವಾಗಿವೆ.

ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ಬಟಾಣಿ ಸೇರಿದಂತೆ ತರಕಾರಿಗಳ ಬೆಲೆ ಕಡಿಮೆಗೊಂಡಿದ್ದು ಹಣದುಬ್ಬರ ಮಿತಿಮೀರಿ ಹೋಗದಂತೆ ನಿಯಂತ್ರಣಗೊಂಡಿದೆ.

ತಂಬಾಕು, ರೆಸ್ಟೋರೆಂಟ್, ಹೋಟೆಲ್, ಉಡುಗೆ ತೊಡುಗೆ, ಶಿಕ್ಷಣ ಕ್ಷೇತ್ರಗಳಲ್ಲಿ ಹಣದುಬ್ಬರವು ಶೇ. 2.8ಕ್ಕಿಂತಲೂ ಹೆಚ್ಚಿದೆ.

ಹೊಸ ಸಿಪಿಐ ಸರಣಿಯಲ್ಲಿ ಬದಲಾವಣೆಗಳೇನು?

  • ಮೂಲ ವರ್ಷ 2012ರಿಂದ 2024ಕ್ಕೆ ಬದಲಾವಣೆ
  • ಸಿಪಿಐ ಸರಣಿಯಲ್ಲಿ ಗಣನೆಯಲ್ಲಿರುವ ಅಂಶಗಳ ಸಂಖ್ಯೆ 299ರಿಂದ 358ಕ್ಕೆ ಏರಿಕೆ.
  • ಸರಕುಗಳ ಸಂಖ್ಯೆ 259ರಿಂದ 308ಕ್ಕೆ ಏರಿಕೆ. ಸರ್ವಿಸ್ ಅಂಶಗಳು 40ರಿಂದ 50ಕ್ಕೆ ಏರಿಕೆ.

ಇದನ್ನೂ ಓದಿ: ಹೂಡಿಕೆಗಳು ಎತ್ತ..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್​ಗಳು; ಹಿಗ್ಗಿದ ಗೋಲ್ಡ್ ಇಟಿಎಫ್​ಗಳು

ಸಿಪಿಐ ಸರಣಿಗೆ ಹೊಸದಾಗಿ ಸೇರ್ಪಡೆಯಾದ ಅಂಶಗಳಿವು…

ಗ್ರಾಮೀಣ ವಸತಿ, ಆನ್ಲೈನ್ ಮೀಡಿಯಾ ಸರ್ವಿಸ್ ಪ್ರೊವೈಡರ್, ಸ್ಟ್ರೀಮಿಂಗ್ ಸರ್ವಿಸ್, ಮೌಲ್ಯ ವರ್ಧಿತ ಡೈರಿ ಉತ್ಪನ್ನಗಳು, ಬಾರ್ಲೆ ಉತ್ಪನ್ನಗಳು, ಪೆನ್ ಡ್​ರೈವ್, ಬಾಹ್ಯ ಹಾರ್ಡ್ ಡಿಸ್ಕ್, ಅಟೆಂಡೆಂಟ್, ಬೇಬಿಸಿಟ್ಟರ್, ವ್ಯಾಯಾಮ ಉಪಕರಣ ಮೊದಲಾದವು.

ಗಣನೆಯಿಂದ ಕೈಬಿಡಲಾದ ವಸ್ತುಗಳು

ವಿಸಿಆರ್, ವಿಸಿಡಿ, ಡಿವಿಡಿ ಪ್ಲೇಯರ್​ಗಳು, ರೇಡಿಯೋ, ಟೇಪ್ ರೆಕಾರ್ಡರ್, ಸೆಕೆಂಟ್ ಹ್ಯಾಂಡ್ ಬಟ್ಟೆ, ಕ್ಯಾಸೆಟ್, ಹಗ್ಗ ಇತ್ಯಾದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ! 47 ಎಕರೆ ಭೂಮಿ ವಸತಿ ವಲಯಕ್ಕೆ ಬದಲಿಸಲು ಹುನ್ನಾರ? – Kannada News | Corruption Allegations Persist in Mysuru Development Authority (MDA) Despite Rebranding

ಮೈಸೂರು, ಫೆಬ್ರವರಿ 13: ಮುಡಾ ಈಗ ಎಂಡಿಎ (MDA)ಆಗಿ ಹೆಸರು ಬದಲಾದರೂ ಅಕ್ರಮಗಳು ನಿಲ್ಲಲಿಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪಿಸಿದ್ದಾರೆ. 2025ರ ಆಗಸ್ಟ್ 8ರಂದು ನಡೆದ ಎಂಡಿಎ ಮೊದಲ ಸಭೆಯಲ್ಲೇ 4.27 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ 47 ಎಕರೆ ಕೃಷಿ ವಲಯದ ಭೂಮಿಯನ್ನು ವಸತಿ ವಲಯಕ್ಕೆ ಬದಲಿಸಲು ಹುನ್ನಾರ ನಡೆದಿದೆ ಎಂದು ದೂರಿದ್ದಾರೆ. ಮುಡಾ ಪ್ರಭಾರ ಆಯುಕ್ತ ರಕ್ಷಿತ್, ಪರಿಷತ್ ಸದಸ್ಯ ಮಧು ಮಾದೇಗೌಡ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಂಬಂಧಿಕರಿಗೆ ಅನುಕೂಲವಾಗಲು ಕಾನೂನು ಉಲ್ಲಂಘನೆ ನಡೆದಿದೆ ಎಂದು ಹೇಳಿ, ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

Kumbha Sankramana 2026: ಇಂದು ಕುಂಭ ರಾಶಿಗೆ ಸೂರ್ಯ ಪ್ರವೇಶ; ಮಾ.15 ರವರೆಗೆ ಈ ರಾಶಿಯವರು ಜಾಗರೂಕರಾಗಿರಿ – Kannada News | Kumbha Sankramana 2026: Auspicious and Inauspicious Effects on All Zodiac Signs

2026 ರ ಫೆಬ್ರವರಿ 13 ರಂದು, ಸಂಜೆ 4 ಗಂಟೆ 14 ನಿಮಿಷಕ್ಕೆ ಸೂರ್ಯ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದನ್ನು ಕುಂಭ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಚಾರವು ಮುಂದಿನ ತಿಂಗಳ ಮಾರ್ಚ್ 15 ರವರೆಗೆ ಮುಂದುವರೆಯಲಿದೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಮೇಲೆ ಸೂರ್ಯನ ಈ ಸಂಚಾರ ಯಾವ ರೀತಿ ಪ್ರಬಾವ ಬೀರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ:

ಮೇಷ ರಾಶಿಯವರಿಗೆ ಸೂರ್ಯನ ಈ ಸಂಚಾರವು 11ನೇ ಮನೆಯಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಬಹಳಷ್ಟು ಶುಭ ಫಲಗಳು ಲಭಿಸುತ್ತವೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಸೂರ್ಯನ 10ನೇ ಮನೆ, ಅಂದರೆ ಕರ್ಮಸ್ಥಾನದಲ್ಲಿ ಸಂಚಾರವು ಉದ್ಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಕೆಲಸಗಳಲ್ಲಿ ಶುಭವಾಗುತ್ತದೆ, ವ್ಯಾಪಾರದಲ್ಲಿ ಲಾಭ, ಹಳೆಯ ಬಾಕಿ ವಸೂಲಿ ಮತ್ತು ಸಾಲ ಮಂಜೂರಿಯಾಗುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣುತ್ತಾರೆ. ಆರೋಗ್ಯದ ವಿಷಯದಲ್ಲಿ ಉದಾಸೀನತೆ ಬೇಡ.

ಮಿಥುನ ರಾಶಿ:

ಮಿಥುನ ರಾಶಿಯವರಿಗೆ ಕುಂಭ ಸಂಕ್ರಮಣವು ಭಾಗ್ಯಸ್ಥಾನದಲ್ಲಿ ನಡೆಯುತ್ತದೆ. ಪ್ರವಾಸ ಯೋಗ ಕೂಡಿ ಬರುತ್ತದೆ. ತಂದೆ-ತಾಯಿಗಳ ಪರಿಪೂರ್ಣ ಆಶೀರ್ವಾದ ಸಿಗುತ್ತದೆ. ರೈತಾಪಿ ವರ್ಗದವರಿಗೆ ಒಳಿತಾಗುತ್ತದೆ. ಅದೃಷ್ಟವೂ ಜೊತೆಗೂಡಲಿದೆ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಸೂರ್ಯನ ಸಂಚಾರವಿರುತ್ತದೆ. ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ತರಬಹುದಾದ್ದರಿಂದ ಜಾಗರೂಕರಾಗಿರಬೇಕು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಸೂರ್ಯ ಸಂಚಾರವು ಪ್ರಾರಂಭವಾಗುತ್ತದೆ. ಇದು ಶನಿಯ ಮನೆಯಾಗಿರುವುದರಿಂದ ಗಂಡ-ಹೆಂಡತಿಯರ ಜಗಳ, ಪಾಲುದಾರಿಕೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಸ್ವಲ್ಪ ಜಾಗರೂಕರಾಗಿರಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಸೂರ್ಯನ ಸಂಚಾರವು ಆರನೇ ಮನೆಯಲ್ಲಿ ನಡೆಯುವುದರಿಂದ ತುಂಬಾನೇ ಅದೃಷ್ಟ ತರಲಿದೆ. ಸಾಕಷ್ಟು ಶುಭಫಲಗಳು ಸಿಗುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಔಷಧಿ ವ್ಯಾಪಾರಿಗಳಿಗೆ ಮತ್ತು ಆರೋಗ್ಯ ಇಲಾಖೆಯಲ್ಲಿರುವವರಿಗೆ ಬಹಳ ಉತ್ತಮವಾಗಿರುತ್ತದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಐದನೇ ಮನೆಯಲ್ಲಿ ಸೂರ್ಯನ ಸಂಚಾರವು ಮಿಶ್ರ ಫಲಗಳನ್ನು ಕೊಡುತ್ತದೆ. ಆದರೂ ಆರ್ಥಿಕವಾಗಿ, ಕೀರ್ತಿ ಮತ್ತು ಪ್ರತಿಷ್ಠೆಯ ವಿಷಯದಲ್ಲಿ ಉತ್ತಮ ಫಲಗಳು ಇರುತ್ತವೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ನಾಲ್ಕನೇ ಮನೆ, ಅಂದರೆ ಅರ್ಧಾಷ್ಟಮದಲ್ಲಿ ರವಿಯ ಸಂಚಾರವು ಮನೆ ಅಥವಾ ಸೈಟಿನ ವಿಚಾರದಲ್ಲಿ, ಸಣ್ಣಪುಟ್ಟ ಸಮಸ್ಯೆಗಳಲ್ಲಿ ಮತ್ತು ತಂದೆ-ತಾಯಿಗಳ ವಿಷಯದಲ್ಲಿ ಜಾಗರೂಕರಾಗಿರಲು ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು ಮತ್ತು ವಾಹನ ಚಾಲನೆಯಲ್ಲಿಯೂ ಜಾಗ್ರತೆ ವಹಿಸಬೇಕು.

ಧನುಸ್ಸು ರಾಶಿ:

ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸೂರ್ಯನ ಸಂಚಾರದಿಂದ ಬಹಳಷ್ಟು ಶುಭಫಲಗಳು ದೊರೆಯುವ ಸಾಧ್ಯತೆ ಇದೆ. ಅದೃಷ್ಟವೂ ಜೊತೆಗೂಡಲಿದೆ

ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ

ಮಕರ ರಾಶಿ:

ಮಕರ ರಾಶಿಯವರಿಗೆ ದ್ವಿತೀಯ ಸ್ಥಾನದಲ್ಲಿ ಸೂರ್ಯ ಭಗವಾನ್‌ರ ಸಂಚಾರವು ಭಯದ ವಾತಾವರಣವನ್ನು ದೂರ ಮಾಡುತ್ತದೆ. ಕೆಲಸಕಾರ್ಯಗಳಲ್ಲಿ ಶುಭವಾಗುತ್ತದೆ, ರೈತಾಪಿ ವರ್ಗದವರಿಗೆ ಒಳ್ಳೆಯದಾಗುತ್ತದೆ. ವ್ಯಾಪಾರ ವ್ಯವಹಾರಗಳು ಉತ್ತಮವಾಗಿರುತ್ತವೆ ಮತ್ತು ಕುಟುಂಬ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ.

ಕುಂಭ ರಾಶಿ:

ಕುಂಭ ರಾಶಿಯವರಿಗೆ ಜನ್ಮರಾಶಿಯಲ್ಲಿಯೇ ರವಿಯ ಸಂಚಾರದ ಫಲಾಫಲಗಳನ್ನು ನೋಡಿದಾಗ, ವಿವಾಹ ವಿಷಯಗಳಲ್ಲಿ ಶುಭವಾಗುತ್ತದೆ ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗುತ್ತದೆ. ಆದರೆ ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಭಯದ ವಾತಾವರಣವೂ ಉಂಟಾಗಬಹುದು.

ಮೀನ ರಾಶಿ:

ಮೀನ ರಾಶಿಯವರಿಗೆ 12ನೇ ಮನೆ, ಅಂದರೆ ದುಸ್ಥಾನದಲ್ಲಿ ರವಿಯ ಸಂಚಾರವಿರುವುದರಿಂದ ಅನಗತ್ಯ ಟೆನ್ಷನ್‌ಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಆದಷ್ಟು ಆರಾಮಾಗಿ, ಸಂತೃಪ್ತಿಯಿಂದ ಇರಬೇಕು. ಅಪವಾದಗಳು ಮತ್ತು ಕೆಟ್ಟ ಜನರ ಸಹವಾಸದಿಂದ ದೂರವಿದ್ದರೆ ಉತ್ತಮವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೋಗಿ 50ನೇ ಸಿನಿಮಾಗೆ ‘ಕಿಂಗ್’ ಟೈಟಲ್; ರಗಡ್ ಅವತಾರದಲ್ಲಿ ಬಂದ ಲೂಸ್ ಮಾದ – Kannada News | Yogi’s 50th Film ‘King’: Loose Maada Returns in Rugged Avatar, Teaser Creates Buzz

ಯೋಗಿ ಅವರ ವೃತ್ತಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಬೇರೆಯದೇ ಲೆಕ್ಕ ಶುರು ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅವರ ಐವತ್ತನೇ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘ಕಿಂಗ್’ ಟೈಟಲ್ ಇಡಲಾಗಿದೆ. ಈ ಸಿನಿಮಾ ಟೈಟಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಭಾರಿ ಬಜೆಟ್​​ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ವೃತ್ತಿ ಜೀವನದಲ್ಲಿ ಯೋಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈಗ ಅವರು ‘ಕಿಂಗ್’ ಸಿನಿಮಾದಲ್ಲಿ ಸಖತ್ ರಗಡ್ ಅವತಾರ ತಾಳಲು ರೆಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ರಾ ಆಗಿದೆ. ಶಿವರಾಜ್​ಕುಮಾರ್ ಅವರು ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.

‘ಯೋಗಿ ನಂಗೆ ತುಂಬಾನೇ ಆಪ್ತ. ಅವರು ನನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪುನೀತ್ ಜೊತೆ ತುಂಬಾನೇ ಆಪ್ತವಾಗಿದ್ದರು. ಹೀಗಾಗಿ, ಯೋಗಿನ ನೋಡಿದಾಗೆಲ್ಲ ಅಪ್ಪುನ ನೆನಪಾಗುತ್ತದೆ. ಈ ಸಿನಿಮಾ ಗೆಲ್ಲಲೇಬೇಕು. ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿ ಆಗುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

‘ಕಿಂಗ್’ ಚಿತ್ರದ ಬಜೆಟ್ ದೊಡ್ಡದು. ಈ ಬಗ್ಗೆ ಯೋಗಿ ಆತಂಕ ವ್ಯಕ್ತಪಡಿಸಿದರು. ಆದರೆ, ನಿರ್ಮಾಪಕರು ಧೈರ್ಯ ತುಂಬಿದರಂತೆ. ಹೀಗಾಗಿ, ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಮಾಡುವ ಆಲೋಚನೆ ಅವರಿಗೆ ಇದೆ.

ಇದನ್ನೂ ಓದಿ: ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಜಾಕ್ ಅವರು ‘ಕಿಂಗ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರವನ್ನು ಮಹೇಂದರ್, ಸಿದ್ದೇಶ್, ಸಂತೋಶ್ ಬಸವರಾಜ್ ಮೊದಲಾದವರು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಈ ಚಿತ್ರವನ್ನು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಾಗರ್ ಎಂಬ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಟೈಟಲ್ ಅಲ್ಲಿ ಬಾಲಿವುಡ್​​ನಲ್ಲೂ ಸಿನಿಮಾ ಬರುತ್ತಿದೆ. ‘ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾವು ಮೂರು ವರ್ಷಗಳ ಹಿಂದೆಯೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದೇವೆ’ ಎನ್ನುತ್ತಾರೆ ನಿರ್​ದೇಶಕ ಜಾಕ್. ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಶಾಂಘೈನಲ್ಲಿ ದೈತ್ಯ ಸಿಂಕ್​​ಹೋಲ್​​ ರಸ್ತೆಯನ್ನೇ ನುಂಗಿದ ಕ್ಷಣ – Kannada News | Shanghai Street Collapses as Massive Sinkhole Opens Without Warning

ಶಾಂಘೈ, ಫೆಬ್ರವರಿ 13: ಚೀನಾದ ಶಾಂಘೈನಲ್ಲಿ ರಸ್ತೆಯ ಒಂದು ಭಾಗದಲ್ಲಿ ವಾಹನಗಳು ಮತ್ತು ಕಟ್ಟಡಗಳನ್ನು ದೈತ್ಯ ಸಿಂಕ್​ಹೋಲ್ ನುಂಗುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ತುಂಬಾ ಭಯಾನಕವಾಗಿದೆ. ಗುರುವಾರ ಹತ್ತಿರದ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ರಸ್ತೆ ಹಠಾತ್ತನೆ ಕುಸಿದಿದೆ. ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವುನೋವು ವರದಿಯಾಗಿಲ್ಲ. ಜನವರಿ 2024 ರಲ್ಲಿ ಮಿನ್ಹಾಂಗ್ ಜಿಲ್ಲೆಯಲ್ಲಿ ಒಳಚರಂಡಿ ಪೈಪ್ ವೈಫಲ್ಯದ ನಂತರ ರಸ್ತೆಯ ಒಂದು ಭಾಗ ಹೀಗೆಯೇ ಕುಸಿದಿತ್ತು. ಆಗಸ್ಟ್ 2023 ರಲ್ಲಿ, ನಗರದ ಮತ್ತೊಂದು ಪ್ರದೇಶದಲ್ಲಿ 10 ಚದರ ಮೀಟರ್ ಸಿಂಕ್‌ಹೋಲ್ ಕಾಣಿಸಿಕೊಂಡಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಕುರ್ಚಿ ಕದನ: ಹೈಕಮಾಂಡ್​​ ಭೇಟಿ ಬಳಿಕವೂ ಡಿಕೆಶಿಗೆ ಸಿಕ್ಕಿಲ್ವಾ ಸ್ವಷ್ಟ ಚಿತ್ರಣ? – Kannada News | Karnataka Power Tussle: DK Shivakumars Delhi Hopes Dashed, Lack of Clarity Persists

ಬೆಂಗಳೂರು, ಫೆಬ್ರವರಿ 13: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ದೆಹಲಿ ಪ್ರವಾಸದ ಬಳಿಕವೂ ಅಧಿಕಾರ ಹಸಸ್ತಾಂತರದ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಡಿಕೆಶಿಪಾಳಯವು ಒಂದು ಮಹತ್ವದ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಆದರೆ ದೆಹಲಿ ಭೇಟಿಯು ಅಸ್ಸಾಂ ಚುನಾವಣೆ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಈ ಬಾರಿಯಾದರೂ ಗುಡ್ ನ್ಯೂಸ್ ಸಿಗುತ್ತದೆ ಎಂದು ಆಶಿಸಿದ್ದ ಬೆಂಬಲಿತ ಶಾಸಕರು ಮತ್ತೆ ನಿರಾಸೆಗೊಂಡಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದು, ಅಧಿಕಾರ ಹಂಚಿಕೆ ವಿಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಹೀಗಾಗಿ ಬಜೆಟ್ ಮುಂಚಿತವಾಗಿ ಈ ವಿಷಯ ಇತ್ಯರ್ಥವಾಗಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನು ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಇಂದು ಅಜ್ಜಯ್ಯನ ಮೊರೆ ಹೋಗಲಿದ್ದಾರೆ. ನೊಣವಿನಕೆರೆ ಅಜ್ಯಯ್ಯ ಸನ್ನಿಧಿಗೆ ತೆರಳಲಿರುವ ಡಿಸಿಎಂ, ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ; ಝೀರೋ ಟ್ರಾಫೀಕ್​ನಲ್ಲಿ ಕಿಡ್ನಿ ರವಾನೆ – Kannada News | Vijayapura’s First Organ Donation: Bike Accident Victim’s Kidneys Save Lives

ವಿಜಯಪುರ, ಫೆಬ್ರವರಿ 13: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಂಗಾಂಗ ದಾನ (Organ Donation) ಮಾಡಿದ ಮಹತ್ವದ ಘಟನೆ ನಡೆದಿದೆ. ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಬೈಕ್ ಅಪಘಾತದಲ್ಲಿ ಗಂಭೀರಗೊಂಡಿದ್ದ ವ್ಯಕ್ತಿ

ಬಾಗಲಕೋಟ ಮೂಲದ ಬಲರಾಮ (30) ಫೆಬ್ರವರಿ 9ರಂದು ನಡೆದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಲ್ಲಿ ಹಿಂಬದಿ ಸವಾರ ಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಬಲರಾಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು.

ಇದನ್ನೂ ಓದಿ ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ

ಈ ಸಂದರ್ಭದಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ತಡರಾತ್ರಿ ವೈದ್ಯರು ಅಂಗಾಂಗಗಳನ್ನು ಪಡೆದುಕೊಂಡಿದ್ದು, ಒಂದು ಕಿಡ್ನಿಯನ್ನು ಝಿರೋ ಟ್ರಾಫಿಕ್​​ನಲ್ಲಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮತ್ತೊಂದು ಕಿಡ್ನಿಯನ್ನು ಬಿಎಲ್ಡಿಇ ಆಸ್ಪತ್ರೆಯಲ್ಲಿರುವ ರೋಗಿಗೆ ಅಳವಡಿಸಲಾಗಿದೆ. ಇತರೆ ಅಂಗಾಂಗಗಳು ಹೊಂದಿಕೆಯಾಗದ ಕಾರಣ ಪಡೆದುಕೊಳ್ಳಲಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು, ಫೆಬ್ರವರಿ 13: ಮೃತರ ಕುಟುಂಬಕ್ಕೆ ಪರಿಹಾರ ನೀಡದ ಕಾರಣ ಕೋರ್ಟ್​​ ಸಿಬ್ಬಂದಿ ನಡು ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. 2023ರಲ್ಲಿ ನಡೆದ ಅಪಘಾತದಲ್ಲಿ ಬಸ್ ಡಿಕ್ಕಿಯಾಗಿ ರೇಣುಕಪ್ಪ ಹಾಗೂ ರವಿಕಿರಣ್ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 32 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕೆಎಸ್‌ಆರ್‌ಟಿಸಿಗೆ ಸೇರಿದ, ಚಿಕ್ಕಮಗಳೂರು ಡಿಪೋ ವ್ಯಾಪ್ತಿಯ ಯಾವುದೇ ಬಸ್‌ ಅನ್ನು ಜಪ್ತಿ ಮಾಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಬೆಂಗಳೂರು ಕಡೆಗೆ ತೆರಳುತ್ತಿದ್ದ KA 18 F1040 ಸಂಖ್ಯೆಯ ಬಸ್‌ನ್ನು ಕೋರ್ಟ್ ಸಿಬ್ಬಂದಿ ಮಧ್ಯರಸ್ತೆಯಲ್ಲೇ ಜಪ್ತಿ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ನಡು ರಸ್ತೆಯಲ್ಲಿ ಬಸ್ ಜಪ್ತಿ ಮಾಡಿದ ಕ್ರಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual Benefits: ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಯಾಕೆ ಹಾಕಬೇಕು ಗೊತ್ತಾ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ರಹಸ್ಯ ತಿಳಿಯಿರಿ – Kannada News | Unveiling the Scientific and Spiritual Benefits of Childrens Anklets

ಮಕ್ಕಳಿಗೆ ಕಾಲ್ಗೆಜ್ಜೆ ಹಾಕುವುದರ ಹಿಂದಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ರಹಸ್ಯಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮಕ್ಕಳಿಗೆ ಕಾಲ್ಗೆಜ್ಜೆಗಳನ್ನು ಹಾಕುವುದರ ಮಹತ್ವವನ್ನು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ಪರಿಶೀಲಿಸಿದಾಗ, ಹಲವು ವಿಶೇಷತೆಗಳು ಕಂಡುಬರುತ್ತವೆ. ವೈಜ್ಞಾನಿಕವಾಗಿ, ಈ ಕಾಲ್ಗೆಜ್ಜೆಗಳು ಮಗುವಿನ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ರೂಪಿಸುತ್ತವೆ. ಯಾವುದೇ ಋಣಾತ್ಮಕ ಶಕ್ತಿಗಳು ಮಗುವಿನ ದೇಹವನ್ನು ಪ್ರವೇಶಿಸದಂತೆ ಕಾಪಾಡುತ್ತವೆ. ಅಲ್ಲದೆ, ಪುಟ್ಟ ಮಕ್ಕಳ ಚರ್ಮ ಸೂಕ್ಷ್ಮವಾಗಿರುವುದರಿಂದ, ಸಣ್ಣ ಬ್ಯಾಕ್ಟೀರಿಯಾಗಳು ಅಥವಾ ಕ್ರಿಮಿಕೀಟಗಳು ಮಗುವನ್ನು ಸ್ಪರ್ಶಿಸದಂತೆ ಇವು ದೂರವಿಡಲು ಸಹಾಯಕವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಬೆಳ್ಳಿ ಚಂದ್ರನ ಲೋಹವಾಗಿದ್ದು, ಇದು ಮಗುವಿನ ಅಳು ಕಡಿಮೆ ಮಾಡಲು ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ ಎಂದು ನಂಬಲಾಗಿದೆ. ಆಯುರ್ವೇದದಲ್ಲೂ ಬೆಳ್ಳಿಯ ಬಳಕೆಗೆ ತನ್ನದೇ ಆದ ಮಹತ್ವವಿದೆ. ಕೈಗಳಿಗೆ ಕಪ್ಪು ಮಣಿಯ ಕಡಗಗಳಂತೆಯೇ ಕಾಲುಗಳಿಗೆ ಬೆಳ್ಳಿ ಚೈನುಗಳು ಧನಾತ್ಮಕ ಶಕ್ತಿಗಳನ್ನು ರವಾನಿಸುತ್ತವೆ.

ಧಾರ್ಮಿಕವಾಗಿ, ಕಾಲ್ಗೆಜ್ಜೆಗಳು ಬಹಳಷ್ಟು ಶುಭ ವಾತಾವರಣವನ್ನುಂಟು ಮಾಡುತ್ತವೆ. ಇವು ನಮ್ಮ ಸಂಪ್ರದಾಯ, ಪರಂಪರೆ ಮತ್ತು ಸನಾತನ ಧರ್ಮದ ಭಾಗವಾಗಿದೆ. ಮಗು ಮಲಗಿದಾಗ ಅಥವಾ ಚಲಿಸಿದಾಗ ಕಾಲ್ಗೆಜ್ಜೆಯ ಸದ್ದು ತಾಯಿಗೆ ಮಗು ಎದ್ದಿದೆಯೇ ಅಥವಾ ಸುರಕ್ಷಿತವಾಗಿದೆಯೇ ಎಂದು ಎಚ್ಚರಿಸಲು ಸಹಾಯಕ. ಇದು ಮಗುವಿನ ಸುರಕ್ಷತೆಗೆ ಪೂರಕವಾಗಿದೆ. ಪ್ರಥಮವಾಗಿ, ಮಗು ಈ ಸದ್ದನ್ನು ಕೇಳಿಸಿಕೊಳ್ಳುವ ಮೂಲಕ ಶ್ರವಣ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ. ಇದರ ಜೊತೆಗೆ, ದೃಷ್ಟಿಶಕ್ತಿಯೂ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆದರೆ, ಕಾಲ್ಗೆಜ್ಜೆಗಳನ್ನು ಆಯ್ಕೆ ಮಾಡುವಾಗ ಒಂದನ್ನು ಗಮನಿಸಬೇಕು. ಚಿಕ್ಕ ಗೆಜ್ಜೆಗಳಿರುವ ಕಾಲು ಚೈನುಗಳನ್ನು ಮಕ್ಕಳು ಬಾಯಿಗೆ ಹಾಕಿಕೊಂಡಾಗ ಗೆಜ್ಜೆಗಳು ದೇಹದೊಳಗೆ ಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಪುಟ್ಟ ಮಕ್ಕಳಿಗೆ ಸರಳವಾದ, ಗೆಜ್ಜೆಗಳಿಲ್ಲದ ಕಾಲು ಚೈನುಗಳನ್ನು ಹಾಕುವುದು ಉತ್ತಮ. ಕಾಲ್ಗೆಜ್ಜೆಗಳನ್ನು ದಾನ ಮಾಡುವುದರಿಂದಲೂ ಶುಭ ಫಲ ಸಿಗುತ್ತದೆ. ಮಕ್ಕಳಿಗೆ ಇದನ್ನು ಹಾಕುವುದರಿಂದ ಚೈತನ್ಯ ವೃದ್ಧಿಯಾಗಿ, ಶಕ್ತಿ ಬರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link