IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಿಂಕು ಸಿಂಗ್ (Rinku Singh) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರಿನಲ್ಲಿದ್ದ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Your blog category
IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಿಂಕು ಸಿಂಗ್ (Rinku Singh) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮಹೇಂದ್ರ ಸಿಂಗ್ ಧೋನಿ (MS Dhoni) ಹೆಸರಿನಲ್ಲಿದ್ದ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದ ಕಾಲೇಜಿಗೆ ಬಿಗ್ ಶಾಕ್
ಬೆಂಗಳೂರು, ಏಪ್ರಿಲ್ 27: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ (Bengaluru) ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಈ ನಡುವೆ ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕಾಲೇಜು ಪರವಾನಗಿ ರದ್ದುಪಡಿಸಿ 25 ಲಕ್ಷ ರೂ.ದಂಡ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿ ಆಗ್ರಹಿಸಿತ್ತು. ಆ ಬೆನ್ನಲ್ಲೇ ಕೃಪಾನಿಧಿ ಕಾಲೇಜಿಗೆ ಬಿಗ್ ಶಾಕ್ ಸಿಕ್ಕಿದೆ. ಈ ಕಾಲೇಜಿನಲ್ಲಿ ಇನ್ಮುಂದೆ ಸರ್ಕಾರಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಸೋದಾಗಿ ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರ ಸಂಬಂಧ ಕೃತ್ಯ ಎಸಗಿರೋದು ಯಾರು ಎಂಬ ಬಗ್ಗೆ ತನಿಖೆ ಮಾಡಲಾಗಿದೆ. ವಸ್ತ್ರಸಂಹಿತೆ ಬಗ್ಗೆ ತರಬೇತಿ ನೀಡಿದ್ದರೂ ಇಷ್ಟೆಲ್ಲ ಸಮಸ್ಯೆಯಾಗಿದೆ. ಜನಿವಾರ ಘಟನೆಯಲ್ಲಿ ಕರ್ತವ್ಯ ಲೋಪವಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ಮುಮುಂದೆ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಪರೀಕ್ಷಾರ್ಥಿಗಳ ಜನಿವಾರvನ್ನು ಉದ್ದೇಶಪೂರ್ವಕವಾಗಿ ತೆಗಿಸಲಾಗಿರುವ ಕಾರಣ ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಪರೀಕ್ಷಾ ಕೇಂದ್ರ ನೀಡದಂತೆ ವರದಿ ನೀಡುತ್ತೇವೆ ಎಂದು ಬೆಂಗಳೂರು ನಗರ ಡಿಸಿ ಜಗದೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು
2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು KEA ಕೂಡ ಆಗ್ರಹಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಭೀಮಗಢ ಅಭಯಾರಣ್ಯದಲ್ಲಿರುವ ಕುಗ್ರಾಮImage Credit source: Deccan herald
ಬೆಳಗಾವಿ, ಏಪ್ರಿಲ್ 27: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ಹಾಗೂ ಹುಲಿ-ಆನೆಗಳ ಪ್ರಮುಖ ಸಂಚಾರಿ ಪಥವಾಗಿರುವ ಬೆಳಗಾವಿಯ (Belagavi) ಭೀಮಗಢ ವನ್ಯಜೀವಿ ಅಭಯಾರಣ್ಯದಿಂದ ಸ್ವಯಂಪ್ರೇರಿತವಾಗಿ ಹೊರಬರಲು ಅರ್ಜಿ ಸಲ್ಲಿಸಿರುವ 450ಕ್ಕೂ ಹೆಚ್ಚು ಕುಟುಂಬಗಳು ಕಳೆದ ಒಂದು ವರ್ಷದಿಂದ ಸರ್ಕಾರದ ಮುಂದಿನ ಕ್ರಮಕ್ಕಾಗಿ ಕಾಯುತ್ತಿವೆ.
ಕಳೆದ ಮೇ ತಿಂಗಳಿನಲ್ಲಿ ತಾಳೇವಾಡಿ ಗ್ರಾಮದ 27 ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಮೊದಲ ಕಂತಿನ ಚೆಕ್ ವಿತರಿಸಲಾಗಿತ್ತು. ಆದರೆ, ಉಳಿದ ಕುಟುಂಬಗಳ ಅರ್ಜಿ ಪ್ರಕ್ರಿಯೆ ಇನ್ನೂ ಕುಂಟುತ್ತಾ ಸಾಗಿದೆ. ಅರಣ್ಯ ಇಲಾಖೆಯ ಪ್ರಕಾರ, ಸ್ಥಳಾಂತರಗೊಳ್ಳುವ ಕುಟುಂಬಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಹೊಂದಿಕೆಯಾಗುವ ಸೂಕ್ತ ಭೂಮಿಯನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ.
ಅಭಯಾರಣ್ಯದ ಒಟ್ಟು 13 ಹಳ್ಳಿಗಳ ಪೈಕಿ 9 ಹಳ್ಳಿಗಳ ಜನರು ತಕ್ಷಣ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ. ಆದರೆ, ಪ್ರಸ್ತುತ ನೀಡಲಾಗುತ್ತಿರುವ 15 ಲಕ್ಷ ರೂಪಾಯಿಗಳ ಪರಿಹಾರ ಮೊತ್ತ ಸಾಲುತ್ತಿಲ್ಲ ಎಂಬುದು ಇವರ ವಾದ. ಬದುಕನ್ನು ಕಟ್ಟಿಕೊಳ್ಳಲು ಕೃಷಿ ಭೂಮಿ ಮತ್ತು ಮನೆಯನ್ನು ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಿಗದಿಪಡಿಸಿದ 15 ಲಕ್ಷ ರೂ.ಗಳ ಪ್ಯಾಕೇಜ್‌ನ್ನೇ ಪರಿಗಣಿಸಿದೆ.
ಅಭಯಾರಣ್ಯದ ಒಳಗಿನ ಬದುಕು ಸುಲಭವಲ್ಲ. ತುರ್ತು ಚಿಕಿತ್ಸೆಗೆ ಸುಮಾರು 25 ಕಿ.ಮೀ ದೂರ ಕ್ರಮಿಸಬೇಕು. ಮಳೆಗಾಲದಲ್ಲಂತೂ ಇಲ್ಲಿನ 11 ಹಳ್ಳಿಗಳಲ್ಲಿನ ಹಳ್ಳ-ಕೊಳ್ಳಗಳು ತುಂಬಿ ಹರಿಯುವುದರಿಂದ ಓಡಾಟಕ್ಕೆ ಅಡೆತಡೆ ಉಂಟಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕಾಡು ಬಿಟ್ಟು ಕದಲುವುದಿಲ್ಲ ಎಂದು ಪಾಸ್ಟೋಲಿ ಗ್ರಾಮದ ಸುಮಿತ್ರಾ ಗೌಡ ಹೇಳಿದ್ದಾರೆ.
ಇನ್ನೊಂದೆಡೆ, ಗವಳಿ ಗ್ರಾಮದಂತಹ ಕೆಲವು ಹಳ್ಳಿಗಳಲ್ಲಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿದೆ. ನಮ್ಮ ದೇವತೆಯನ್ನು ಬಿಟ್ಟು ಹೋಗಲಾರೆವು ಎಂದು ಅರ್ಚಕರು ಹೇಳುತ್ತಿದ್ದು, ಸ್ಥಳಾಂತರ ಮಾಡುವ ಬದಲು ಸೇತುವೆಗಳನ್ನು ನಿರ್ಮಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇದರ ನಡುವೆ, ಈ ಸ್ಥಳಾಂತರ ಪ್ರಕ್ರಿಯೆಯು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಯೂ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗುImage Credit source: MediaForge AI
ಮಡಿಕೇರಿ, ಏಪ್ರಿಲ್ 27: ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರು 2000 ಅಕ್ರಮ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೋಂಸ್ಟೇ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕುಟ್ಟದಲ್ಲಿ ನೋಂದಾಯಿತ ಹೋಂಸ್ಟೇಯೊಂದರಲ್ಲಿ ಪ್ರವಾಸಕ್ಕೆಂದು ಬಂದಿದ್ದ ಅಮೆರಿಕನ್ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ (US woman assault) ನಡೆದ ಘಟನೆ ಬಳಿಕ ಈ ಬೇಡಿಕೆ ತೀವ್ರಗೊಂಡಿದೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷೆ ಮೊಂತಿ ಗಣೇಶ್, ಪ್ರವಾಸೋದ್ಯಮ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆ ಹಲವು ತಿಂಗಳುಗಳಿಂದ ಖಾಲಿ ಇರುವುದೇ ಅಕ್ರಮ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದೆ. ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿ ಉದ್ಯಮಿಗಳಿಗೆ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಘದ ಸದಸ್ಯ ಕೆ.ಎಂ. ಕರುಂಬಯ್ಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2,470 ಹೋಂಸ್ಟೇಗಳು ಅಧಿಕೃತವಾಗಿ ನೋಂದಾಯಿತವಾಗಿವೆ. ಆದರೆ, ಇನ್ನೂ 2,000ಕ್ಕೂ ಹೆಚ್ಚು ಹೋಂಸ್ಟೇಗಳು ಯಾವುದೇ ಅನುಮತಿ ಇಲ್ಲದೆ ನಡೆಯುತ್ತಿವೆ. ಬಸ್ ನಿಲ್ದಾಣದ ಬಳಿ ಬ್ರೋಕರ್‌ಗಳು ಪ್ರವಾಸಿಗರನ್ನು ದಾರಿ ತಪ್ಪಿಸಿ ಇಂತಹ ಅಕ್ರಮ ತಾಣಗಳಿಗೆ ಕರೆದೊಯ್ಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು
ಈ ಮಧ್ಯೆ, ಕೊಡಗು ಎಸ್‌ಪಿ ಕೆ. ಬಿಂದು ಮಣಿ ಅವರು ಹೋಟೆಲ್ ಮತ್ತು ಹೋಂಸ್ಟೇ ಮಾಲೀಕರ ಸಭೆ ನಡೆಸಿ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆದರೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೆಹ್ರಾನ್, ಏಪ್ರಿಲ್ 27: ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯುವ ಮೂಲಕ ಸಮರಕ್ಕೆ ಪೂರ್ಣವಿರಾಮ ಹಾಕಲು ಇರಾನ್(Iran) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಯುದ್ಧದ ಕಾರ್ಮೋಡಗಳ ನಡುವೆ ಶಾಂತಿಯ ಕಿರಣ ಮೂಡಿದೆ.
ಇರಾನ್‌ನ ಈ ಪ್ರಸ್ತಾವನೆಯ ಅತ್ಯಂತ ಪ್ರಮುಖ ಅಂಶವೆಂದರೆ ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದು. ವಿಶ್ವದ ತೈಲ ಪೂರೈಕೆಯ ಬಹುಪಾಲು ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಇರಾನ್‌ನ ಈ ನಿರ್ಧಾರವು ಜಾಗತಿಕ ತೈಲ ಬೆಲೆ ಇಳಿಕೆಗೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಪರಮಾಣು ಮಾತುಕತೆಗಳಿಗಿಂತ ಮೊದಲು ವ್ಯಾಪಾರ ಮಾರ್ಗವನ್ನು ಸುಗಮಗೊಳಿಸಲು ಇರಾನ್ ಬಯಸಿದೆ.
ಕೇವಲ ರಸ್ತೆಯನ್ನು ತೆರೆಯುವುದಷ್ಟೇ ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಸಂಘರ್ಷಕ್ಕೆ ಶಾಶ್ವತ ಅಂತ್ಯ ಹಾಡುವ ಅಥವಾ ದೀರ್ಘಾವಧಿಯ ಕದನ ವಿರಾಮವನ್ನು ಘೋಷಿಸುವ ಪ್ರಸ್ತಾವನೆಯನ್ನೂ ಇರಾನ್ ಮುಂದಿಟ್ಟಿದೆ. ದಿಗ್ಬಂಧನ ತೆರವುಗೊಂಡ ನಂತರವೇ ಪರಮಾಣು ಮಾತುಕತೆಗಳನ್ನು ಆರಂಭಿಸೋಣ ಎಂಬುದು ಇರಾನ್‌ನ ನಿಲುವಾಗಿದೆ.
ಮತ್ತಷ್ಟು ಓದಿ: ಅಮೆರಿಕ-ಇರಾನ್ ನಡುವೆ ಶಾಂತಿ ಮಾತುಕತೆಯ ಪಾಕ್ ಪ್ರಯತ್ನ ವಿಫಲ; ಯುಎಸ್ ನಿಯೋಗದ ಭೇಟಿಗೆ ಒಪ್ಪದ ಟೆಹ್ರಾನ್
ಈ ಯೋಜನೆಯನ್ನು ಯಶಸ್ವಿಗೊಳಿಸಲು ಇರಾನ್ ಈಗಾಗಲೇ ಈಜಿಪ್ಟ್, ಟರ್ಕಿ ಮತ್ತು ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಈ ಕುರಿತು ಮಧ್ಯವರ್ತಿಗಳಿಗೆ ಮಾಹಿತಿ ನೀಡಿದ್ದಾರೆ. ಇರಾನ್‌ನ ಒಳಗೂ ಕೆಲವು ಭಿನ್ನಾಭಿಪ್ರಾಯಗಳಿದ್ದರೂ, ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನಗಳು ತೀವ್ರಗೊಂಡಿವೆ.
ಇರಾನ್‌ನ ಈ ಪ್ರಸ್ತಾವನೆಯು ಈಗಾಗಲೇ ಶ್ವೇತಭವನವನ್ನು ತಲುಪಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉನ್ನತ ಮಟ್ಟದ ಭದ್ರತಾ ತಂಡದೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಇರಾನ್‌ನ ಮೇಲೆ ಕಠಿಣ ನಿಲುವು ಹೊಂದಿದ್ದರೂ, ಟ್ರಂಪ್ ಅವರು ಮಾತುಕತೆಯ ಬಾಗಿಲನ್ನು ಮುಕ್ತವಾಗಿಟ್ಟಿರುವುದು ಒಪ್ಪಂದದ ಭರವಸೆಯನ್ನು ಹೆಚ್ಚಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಾಂದರ್ಭಿಕ ಚಿತ್ರ (ಎಐ)Image Credit source: Google Gemini
ಬೆಂಗಳೂರು, ಏಪ್ರಿಲ್ 27: ಆರ್ಸಿಬಿ (RCB) ಹಾಗೂ ಗುಜರಾತ್ ಟೈಟನ್ಸ್ (RCB vs GT) ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿರುವುದು ಪೊಲೀಸರಲ್ಲಿ ದೊಡ್ಡ ಆತಂಕ ಮೂಡಿಸಿತ್ತು. ಇದು ಯಾವುದೋ ವಿಧ್ವಂಸಕ ಕೃತ್ಯವಿರಬಹುದು ಎಂಬ ಅನುಮಾನದಲ್ಲಿ ತನಿಖೆ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಈಗ ತೀರಾ ವೈಯಕ್ತಿಕ ಮತ್ತು ವಿಚಿತ್ರ ಕಾರಣವೊಂದು ತಿಳಿದುಬಂದಿದೆ.
ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. ಆರೋಪಿಗಳಿಬ್ಬರಿಗೂ ಕಂಪನಿಯಿಂದ ಬರಬೇಕಿದ್ದ ಸಂಬಳ ಬಾಕಿ ಇತ್ತು. ಎಷ್ಟು ಕೇಳಿದರೂ ಕಂಪನಿ ಸಂಬಳ ನೀಡದಿದ್ದಕ್ಕೆ ಕೋಪಗೊಂಡಿದ್ದ ಈ ಸಿಬ್ಬಂದಿಗಳು, ಸಂಸ್ಥೆಗೆ ಮತ್ತು ಪೊಲೀಸರಿಗೆ ಪಾಠ ಕಲಿಸಲು ನಿರ್ಧರಿಸಿ ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದರು!
ಪಂದ್ಯದ ವೇಳೆ ಭದ್ರತೆ ಎಷ್ಟು ಮುಖ್ಯವೋ ಈ ಆರೋಪಿಗಳಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ, ಯಾರಿಗೂ ಅನುಮಾನ ಬಾರದಂತೆ ಹೋಗಿ ಪ್ರಮುಖ ಕೇಬಲ್‌ಗಳನ್ನೇ ಕಟ್ ಮಾಡಿದ್ದರು. ಪಂದ್ಯದ ಸಂಜೆಯ ಹೊತ್ತಿಗೆ ಸಿಸಿಟಿವಿ ಫೀಡ್ ಸ್ಥಗಿತಗೊಂಡಾಗ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಂಗಾಲಾಗಿದ್ದರು. ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಕೇಬಲ್ ಕಟ್ ಆಗಿರುವುದು ಪತ್ತೆಯಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಂತ್ರಿಕ ಆಧಾರದ ಮೇಲೆ ಮಂಜುನಾಥ್ ಮತ್ತು ಅಬ್ದುಲ್ ಕಲಾಂನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಆರ್ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು!
ಪಂದ್ಯದ ದಿನವೇ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಭಾರಿ ಆತಂಕ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಮಾಡಿದ್ದರು. ಭದ್ರತಾ ಲೋಪದ ನಡುವೆಯೂ ಪೊಲೀಸರು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ತಿಂಗಳು ಬಿಡುಗಡೆಯಾದ ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತು. ಬಿಡುಗಡೆಯ ಹಿಂದಿನ ದಿನ ಪೇಯ್ಡ್ ಪ್ರಿವ್ಯೂದಿಂದಲೇ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಡಿಸೆಂಬರ್ 5 ರಂದು ಬಿಡುಗಡೆಯಾದ ಧುರಂಧರ್ ಚಿತ್ರವನ್ನು ಜನರು ಕೊಂಡಾಡಿದರು. ಈ ಸಿನಿಮಾ ವಿಶ್ವಾದ್ಯಂತ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ.
‘ಧುರಂಧರ್ 2 ದಿ ರಿವೆಂಜ್’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಸಿನಿಮಾ ಏಪ್ರಿಲ್ 26ರಂದು 39 ದಿನವನ್ನು ಪೂರೈಸಿದೆ. ಧುರಂಧರ್ ಪ್ರಸ್ತುತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಚಿತ್ರವು ಪ್ರೇಕ್ಷಕರು ಸಿನಿಮಾವನ್ನು ನೋಡುವ ವಿಧಾನವನ್ನು ಬದಲಾಯಿಸಿದೆ.
ಧುರಂಧರ್ 2 ಚಿತ್ರವು ಇಲ್ಲಿಯವರೆಗೆ ವಿಶ್ವಾದ್ಯಂತ 1772.94 ಕೋಟಿ ರೂ. ಗಳಿಸಿದೆ. ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ 2’ ಚಿತ್ರದ ಜಾಗತಿಕ ಗಳಿಕೆಯನ್ನು ಮೀರಿಸಲು ಈ ಚಿತ್ರಕ್ಕೆ ಇನ್ನೂ 15.72 ಕೋಟಿ ರೂ. ಅಗತ್ಯವಿದೆ. ‘ಬಾಹುಬಲಿ 2’ ವಿಶ್ವಾದ್ಯಂತ 1788.06 ಕೋಟಿ ರೂ. ಗಳಿಸಿದೆ.
ಇದನ್ನೂ ಓದಿ: ‘ಧುರಂಧರ್’ ಚಿತ್ರಕ್ಕೆ ತಿರುಗೇಟು ನೀಡಲು ‘ಮೇರಾ ಲಿಯಾರಿ’ ಸಿನಿಮಾ ಮಾಡಿದ ಪಾಕಿಸ್ತಾನ
ತೆಲುಗು ನಟ ಅರ್ಜುನ್ ಅವರ ‘ಪುಷ್ಪ 2’ ದೇಶಾದ್ಯಂತ ಭಾರಿ ಹಿಟ್ ಆಯಿತು. ಇದು ಪುಷ್ಪ ಚಿತ್ರದ ಎರಡನೇ ಭಾಗವಾಗಿತ್ತು. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ಗೆ ಇನ್ನೂ 106 ಕೋಟಿ ಗಳಿಕೆ ಅಗತ್ಯವಿದೆ. ಭಾರತದಲ್ಲಿ ‘ಪುಷ್ಪ 2’ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಅಥವಾ ಇದು ಅಸಾಧ್ಯ ಆಗಬಹುದು.
‘ಧುರಂದರ್ 2’ ಸಿನಿಮಾ ರಿಲೀಸ್ ಆದ 2 ತಿಂಗಳ ಬಳಿಕ ಒಟಿಟಿಗೆ ಬರಹುದು ಎಂದು ಊಹಿಸಲಾಗಿದೆ. ಜಿಯೋ ಹಾಟ್ಸ್ಟಾರ್ ಮೂಲಕ ಸಿನಿಮಾ ಪ್ರಸಾರ ಆರಂಭಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಸ್ಲಾಮಾಬಾದ್, ಏಪ್ರಿಲ್ 27: ಪಾಕಿಸ್ತಾನ(Pakistan)ದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿಯನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಸುರಕ್ಷಿತ ತಾಣಗಳಲ್ಲಿ ಅಡಗಿರುವ ಉಗ್ರರ ಮೇಲೆ ನಡೆಯುತ್ತಿರುವ ದಾಳಿಗಳ ಸರಣಿ ಮತ್ತೊಂದು ತಿರುವು ಪಡೆದಿದೆ.
ಆರಂಭಿಕ ವರದಿಗಳ ಪ್ರಕಾರ, ಅಫ್ರಿದಿ ಮೇಲೆ ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅಮೆರಿಕದಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಅಫ್ರಿದಿ ಪ್ರಮುಖ ಕೊಂಡಿಯಾಗಿದ್ದ. ತನಿಖಾಧಿಕಾರಿಗಳ ಪ್ರಕಾರ, ಇದು ಪಕ್ಕಾ ಯೋಜಿತ ‘ಟಾರ್ಗೆಟೆಡ್ ಕಿಲ್ಲಿಂಗ್’ ಆಗಿದ್ದು, ದಾಳಿಕೋರರು ಅಫ್ರಿದಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ.
ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕರಿಗೆ ಕಾಲ ಕೂಡಿ ಬಂದಂತಿದೆ, ಕಳೆದ ತಿಂಗಳು ಲಾಹೋರ್‌ನಲ್ಲಿ ಲಷ್ಕರ್ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸಹೋದರ ತಾಹಿರ್ ಅನ್ವರ್ ಕೂಡ ನಿಗೂಢ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.ರಿಯಾಸಿ ದಾಳಿಯ ಮಾಸ್ಟರ್‌ಮೈಂಡ್ ಕತಲ್ ಸಿಂಧಿಯನ್ನು ಕಳೆದ ವರ್ಷ ಝೇಲಂನಲ್ಲಿ ಹತ್ಯೆ ಮಾಡಲಾಗಿತ್ತು.
ಮತ್ತಷ್ಟು ಓದಿ: ಇರಾನ್ ವಿರುದ್ಧದ ದಾಳಿಗೆ ಸದ್ಯಕ್ಕೆ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಟ್ರಂಪ್
2023 ರಿಂದ ಪ್ರಾರಂಭವಾದ ಈ ಮಾದರಿಯ ಹತ್ಯೆಗಳು 2026 ರಲ್ಲಿ ತೀವ್ರಗೊಂಡಿವೆ. ಕೇವಲ ಈ ವರ್ಷವೊಂದರಲ್ಲೇ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಭಯೋತ್ಪಾದಕರನ್ನು ಲಾಹೋರ್, ಕರಾಚಿ ಮತ್ತು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ಈ ‘ಅಪರಿಚಿತ ಬಂದೂಕುಧಾರಿಗಳು’ ಯಾರು ಎಂಬುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಿಯಾಸಿ ದಾಳಿ ಮತ್ತು ಮುಂಬೈ ದಾಳಿಯ ಸಂಚುಕೋರರಿಗೆ ಆಪ್ತರಾಗಿದ್ದ ಕಮಾಂಡರ್‌ಗಳು ಒಬ್ಬೊಬ್ಬರಾಗಿ ಹತರಾಗುತ್ತಿರುವುದು ಲಷ್ಕರ್ ಮತ್ತು ಜೈಶ್‌ನಂತಹ ಸಂಘಟನೆಗಳ ಬೆನ್ನೆಲುಬು ಮುರಿದಂತಿದೆ. ಪಾಕಿಸ್ತಾನದ ನೆಲದಲ್ಲಿ ತಮಗೆ ರಕ್ಷಣೆ ಇಲ್ಲ ಎಂಬ ಸತ್ಯ ಈಗ ಭಯೋತ್ಪಾದಕರಿಗೆ ಅರಿವಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಟಿ20 ಲೀಗ್‌ನಲ್ಲಿ ಹೊಸ ತಂಡವೊಂದು ಕಣಕ್ಕಿಳಿದಾಗ ಅಲ್ಲಿ ಸಂಭ್ರಮವಿರುತ್ತದೆ, ಅದರೊಂದಿಗೆ ಹೊಸ ಇತಿಹಾಸ ಬರೆಯುವ ಹಂಬಲವಿರುತ್ತದೆ. ಆದರೆ 2026ರ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ರಾವಲ್ಪಿಂಡೀಸ್ ತಂಡದ ಪಾಲಿಗೆ ಎಲ್ಲವೂ ಉಲ್ಟಾ ಪಲ್ಟಾ. ಏಕೆಂದರೆ ಆಡಿದ ಚೊಚ್ಚಲ ಟೂರ್ನಿಯಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಅದು ಸಹ ಬರೋಬ್ಬರಿ 9 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ.
ಮೊಹಮ್ಮದ್ ರಿಝ್ವಾನ್ ನೇತೃತ್ವದಲ್ಲಿ ಕಣಕ್ಕಿಳಿದ ರಾವಲ್ಪಿಂಡೀಸ್ ತಂಡವು ಟೂರ್ನಿಯ ಆರಂಭದಲ್ಲೇ ಸತತ 7 ಪಂದ್ಯಗಳನ್ನು ಸೋಲನುಭವಿಸಿತ್ತು. ಈ ಸೋಲಿನೊಂದಿಗೆ ಆರಂಭದಲ್ಲೇ ನಾಕೌಟ್ ರೇಸ್ನಿಂದ ಹೊರಬಿದ್ದಿದ್ದರು. ಹೀಗೆ ಮೊದಲಾರ್ಧದಲ್ಲೇ ಹೊರಬಿದ್ದ ಮೊದಲ ತಂಡ ಎಂಬ ಅಪಖ್ಯಾತಿಗೂ ರಾವಲ್ಪಿಂಡಿ ತಂಡ ಗುರಿಯಾಯಿತು.
ಹೀಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಏಪ್ರಿಲ್ 23 ರಂದು ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ನಡೆದ ಪಂದ್ಯವು ತುಸು ನಿರಾಳತೆ ನೀಡಿತು. ಈ ಪಂದ್ಯದಲ್ಲಿ ಇಸ್ಲಾಮಾಬಾದ್ ನೀಡಿದ್ದ 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾವಲ್ಪಿಂಡಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಇಡೀ ಟೂರ್ನಿಯಲ್ಲಿ ರಾವಲ್ಪಿಂಡಿ ತಂಡಕ್ಕೆ ಲಭಿಸಿದ ಏಕೈಕ ಗೆಲುವಾಗಿದೆ.
ಅಂದರೆ ಆಡಿದ 10 ಪಂದ್ಯಗಳಲ್ಲಿ ರಾವಲ್ಪಿಂಡೀಸ್ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಇನ್ನುಳಿದ 9 ಪಂದ್ಯಗಳಲ್ಲಿ ಹೀನಾಯ ಸೋಲುಂಡು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ರಾವಲ್ಪಿಂಡಿ ತಂಡದ ಪ್ರದರ್ಶನದ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ…
ರಾವಲ್ಪಿಂಡೀಸ್ ತಂಡದಲ್ಲಿ ಅನುಭವವಿರುವ ಆಟಗಾರರಿದ್ದರೂ, ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಒತ್ತಡ ನಿಭಾಯಿಸಲು ವಿಫಲರಾದದ್ದು ದೊಡ್ಡ ಹಿನ್ನಡೆಯಾಯಿತು. ವಿಶೇಷವಾಗಿ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವುದು ಮತ್ತು ಬೌಲಿಂಗ್‌ನಲ್ಲಿ ರನ್ ನಿಯಂತ್ರಿಸಲು ಸಾಧ್ಯವಾಗದಿದ್ದುದು ತಂಡದ ಸೋಲಿಗೆ ಕಾರಣವಾಯಿತು. ಪರಿಣಾಮ ಬ್ಯಾಕ್ ಟು ಬ್ಯಾಕ್ 8 ಮ್ಯಾಚ್ಗಳಲ್ಲಿ ಸೋಲನುಭವಿಸಿದ್ದಾರೆ. ಇದಾದ ಬಳಿಕ ಒಂದು ಮ್ಯಾಚ್ ಗೆದ್ದರೂ ಕೊನೆಯ ಪಂದ್ಯಗಳಲ್ಲಿ ಮತ್ತೆ ಮುಗ್ಗರಿಸಿದ್ದಾರೆ.
ಇದನ್ನೂ ಓದಿ: RCB ಪಾಲಿಗೆ ಕನ್ನಡಿಗನೇ ಕಂಟಕ..!
ರಾವಲ್ಪಿಂಡೀಸ್ ತಂಡ: ಮೊಹಮ್ಮದ್ ರಿಝ್ವಾನ್ (ನಾಯಕ), ನಸೀಮ್ ಶಾ, ಡೇರಿಲ್ ಮಿಚೆಲ್,
ಸ್ಯಾಮ್ ಬಿಲ್ಲಿಂಗ್ಸ್, ಜಲತ್ ಖಾನ್, ಯಾಸಿರ್ ಖಾನ್, ರಿಶಾದ್ ಹೊಸೈನ್, ಮೊಹಮ್ಮದ್ ಅಮೀರ್, ಅಬ್ದುಲ್ಲಾ ಫಜಲ್, ಅಮದ್ ಬಟ್, ಡಯಾನ್ ಫಾರೆಸ್ಟರ್, ಲಾರಿ ಇವಾನ್ಸ್, ಆಸಿಫ್ ಅಫ್ರಿದಿ, ಕಮ್ರಾನ್ ಗುಲಾಮ್, ಫವಾದ್ ಖಾನ್, ಫವಾದ್ ಅಮಿರ್ ಮೆಕಾಂಚಿ, ಸಾದ್ ಮಸೂದ್.
ಬೆಂಗಳೂರು (ಏ. 27): ನೀವು ನಿಮ್ಮ ಫೋನ್ ಅನ್ನು ರೀಚಾರ್ಜ್ ಮಾಡಿದಾಗ ಅದು ತಪ್ಪು ಸಂಖ್ಯೆಗೆ ರೀಚಾರ್ಜ್ ಆಗಿದೆಯೇ? ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ನೂರಾರು ರೂಪಾಯಿಗಳು ವ್ಯರ್ಥವಾಗುತ್ತವೆ. ಏಕೆಂದರೆ ರೀಚಾರ್ಜ್ ಮಾಡಬೇಕಾದ ವ್ಯಕ್ತಿಯ ಬದಲಿಗೆ, ನೀವು ಬೇರೆಯವರಿಗೆ ರೀಚಾರ್ಜ್ ಮಾಡಿರುತ್ತೀರಿ. ಆದಾಗ್ಯೂ, ಈಗ ಅಂತಹ ತಪ್ಪಿನ ನಂತರವೂ, ನಿಮ್ಮ ಹಣ ವ್ಯರ್ಥವಾಗುವುದಿಲ್ಲ ಏಕೆಂದರೆ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ವಿಶೇಷ ವೈಶಿಷ್ಟ್ಯವನ್ನು ತಂದಿದೆ, ಇದರ ಮೂಲಕ ತಪ್ಪು ರೀಚಾರ್ಜ್ ಅನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರೆ ಹಣವನ್ನು ಮರುಪಡೆಯಬಹುದು. ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ನಿರ್ದಿಷ್ಟ ಸಮಯದೊಳಗೆ ನಿಮ್ಮ ಹಣವನ್ನು ಮರುಪಾವತಿಸಲಾಗುತ್ತದೆ.
ಈ ವೈಶಿಷ್ಟ್ಯದ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಆಕಸ್ಮಿಕವಾಗಿ ಯಾರಿಗಾದರೂ ರೀಚಾರ್ಜ್ ಮಾಡಿದರೆ, ಅವರೊಂದಿಗೆ ಮಾತನಾಡದೆಯೇ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಇದಕ್ಕೆ ಒಂದೇ ಷರತ್ತು ಎಂದರೆ ನಿಮ್ಮ ರೀಚಾರ್ಜ್ ಅನ್ನು MyJio ಆ್ಯಪ್ ಮೂಲಕ ಮಾಡಿರಬೇಕು. ನೀವು Paytm, PhonePe, ಅಥವಾ Google Pay ನಂತಹ ಇತರ ಅಪ್ಲಿಕೇಶನ್‌ಗಳ ಮೂಲಕ ತಪ್ಪಾಗಿ ರೀಚಾರ್ಜ್ ಮಾಡಿದರೆ ನಿಮಗೆ ಮರುಪಾವತಿ ಸಿಗುವುದಿಲ್ಲ.
WhatsApp Plus: ಬರುತ್ತಿದೆ ಹೊಸ ವಾಟ್ಸ್ಆ್ಯಪ್ ಪ್ಲಸ್: ಇದಕ್ಕೆ ಹಣ ಪಾವತಿಸಬೇಕೇ?, ಏನೆಲ್ಲ ಫೀಚರ್ಸ್ ಇದೆ ನೋಡಿ
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ