Category Archives: Blog

Your blog category

ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆ ಇಳಿಯಲಿದೆ 2866 ಹೊಸ ವಾಹನಗಳು – Kannada News | Bengaluru Traffic Crisis: Daily 2,866 New Vehicles Worsen City Congestion

ಬೆಂಗಳೂರು, ಏ.26: ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾಡುವುದು ಅಂದರೆ ಅದೊಂದು ದೊಡ್ಡ ಸಾಹಸವೇ ಸರಿ. ಈಗಾಗಲೇ ವಿಶ್ವದ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಈಗ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿದೆ. ನಗರದ ಸಂಚಾರ ದಟ್ಟಣೆಗೆ ತುಪ್ಪ ಸುರಿಯುವಂತೆ ಪ್ರತಿದಿನ ಸಾವಿರಾರು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರತಿದಿನ 2,866 ಹೊಸ ವಾಹನಗಳ ಸೇರ್ಪಡೆಯಾಗುತ್ತಿದೆ.

ಪ್ರತಿದಿನ 1,910 ಹೊಸ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯುತ್ತಿದೆ. ಪ್ರತಿದಿನ 564 ಹೊಸ ಕಾರುಗಳು ಬರುತ್ತಿದೆ. ಕಳೆದ 7 ತಿಂಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 3.40 ಕೋಟಿ ವಾಹನಗಳಿದ್ದರೆ, ಅದರಲ್ಲಿ ಸಿಂಹಪಾಲು ಅಂದರೆ ಬರೋಬ್ಬರಿ 1 ಕೋಟಿ 22 ಲಕ್ಷ ವಾಹನಗಳು ಬೆಂಗಳೂರಿನಲ್ಲಿಯೇ ಇವೆ. ಅಕ್ಕಪಕ್ಕದ ಜಿಲ್ಲೆ ಹಾಗೂ ಹೊರರಾಜ್ಯದ ವಾಹನಗಳನ್ನು ಸೇರಿಸಿದರೆ ಪ್ರತಿದಿನ ನಗರದ ರಸ್ತೆಗಳಲ್ಲಿ ಸುಮಾರು ಒಂದೂವರೆ ಕೋಟಿ ವಾಹನಗಳು ಸಂಚರಿಸುತ್ತಿವೆ. ಕೇವಲ 40 ಸಾವಿರ ವಾಹನಗಳು ಓಡಾಡಬೇಕಾದ ಸಾಮರ್ಥ್ಯವಿರುವ ರಸ್ತೆಗಳಲ್ಲಿ ಕೋಟಿಗೂ ಅಧಿಕ ವಾಹನಗಳು ಜಿಗಿಯುತ್ತಿರುವುದು ಟ್ರಾಫಿಕ್ ಸಮಸ್ಯೆಯನ್ನು ಜಟಿಲಗೊಳಿಸಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ‘ಅಂಬಾರಿ’ ದರ್ಬಾರ್: ಬಿಸಿಲಲ್ಲೂ ಡಬಲ್ ಡೆಕ್ಕರ್ ಬಸ್ ಏರಿ ಸಿಟಿ ಬ್ಯೂಟಿ ನೋಡಲು ಜನವೋ ಜನ!

“ಇದೇ ವೇಗದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದರೆ ಮುಂದಿನ ಮೂರು ವರ್ಷಗಳಲ್ಲಿ ಕೇವಲ ದ್ವಿಚಕ್ರ ವಾಹನಗಳ ಸಂಖ್ಯೆಯೇ ಒಂದು ಕೋಟಿ ದಾಟಲಿದೆ” ಎಂದು ಟ್ರಾಫಿಕ್ ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ (BMTC) ಮತ್ತು ಮೆಟ್ರೋ (Namma Metro) ಬಳಸಬೇಕು ಎಂದು ಸಲಹೆ ನೀಡಿದ್ದಾರೆ.ಈಗಾಗಲೇ ಟ್ರಾಫಿಕ್ ಕಿರಿಕಿಯಿಂದ ಹೈರಾಣಾಗಿರುವ ಬೆಂಗಳೂರಿಗರಿಗೆ ಪ್ರತಿದಿನ ರಸ್ತೆಗಿಳಿಯುವ ಈ 3 ಸಾವಿರ ಹೊಸ ವಾಹನಗಳು ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ – Kannada News | Allu Arjun Sets A Strict 200 Days Rule this will save theaters

ಚಿತ್ರಮಂದಿರಗಳು (Theater) ಸಂಕಷ್ಟದಲ್ಲಿವೆ. ಇದು ಒಂದು ರಾಜ್ಯದ ಸಮಸ್ಯೆಯಲ್ಲ, ಭಾರತದ ಬಹುತೇಕ ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಯಾವುದೇ ದೊಡ್ಡ ಸಿನಿಮಾಗಳು ಬಂದಾಗ ಮಾತ್ರ ಚಿತ್ರಮಂದಿರಗಳಲ್ಲಿ ತುಸು ಜೀವ ಬರುತ್ತದೆ. ಆ ನಂತರ ಮತ್ತೆ ಅದೇ ಸ್ಥಿತಿ. ಸಣ್ಣ ಮತ್ತು ಮಧ್ಯಮ ಬಜೆಟ್​​ನ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿವೆ. ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವೇ ಸ್ಟಾರ್ ಅಲ್ಲದವರ ಸಿನಿಮಾಗಳು ಸಹ ಆಗೊಮ್ಮೆ ಈಗೊಮ್ಮೆ ಹಿಟ್ ಆಗುತ್ತಿವೆ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್ಟಾರ್ ನಟರುಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದೀಗ ನಿರ್ಧಾರವೊಂದನ್ನು ತಳೆದಿದ್ದು, ಚಿತ್ರರಂಗದ ಉಳಿವಿಗೆ, ವಿಶೇಷವಾಗಿ ಚಿತ್ರಮಂದಿರಗಳ ಉಳಿವಿಗೆ ಈ ನಿರ್ಧಾರ ನೆರವಾಗಲಿದೆ.

ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ಆಗೊಮ್ಮೆ-ಈಗೊಮ್ಮೆ ಎಂಬಂತಾಗಿದೆ. ಅಲ್ಲು ಅರ್ಜುನ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಈಗ ಅಲ್ಲು ಅರ್ಜುನ್ ತಮ್ಮ ಶೈಲಿ ಬದಲಿಸಿದ್ದು, ಇನ್ನು ಮುಂದೆ ಒಂದು ಸಿನಿಮಾಕ್ಕೆ ಕೇವಲ 200 ದಿನಗಳ ಕಾಲ್​​ಶೀಟ್ ಮಾತ್ರವೇ ಕೊಡುವ ನಿರ್ಧಾರ ಮಾಡಿದ್ದಾರೆ.

ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಇನ್ನು ಮುಂದೆ ಅಲ್ಲು ಅರ್ಜುನ್ ಅವರು ನಿರ್ಮಾಪಕರಿಗೆ 200 ದಿನಗಳ ಕಾಲ್​​ಶೀಟ್ ಮಾತ್ರವೇ ನೀಡಲಿದ್ದು, ಅಷ್ಟರಲ್ಲಿ ಸಿನಿಮಾ ಮುಗಿಸುವ ಷರತ್ತು ಹಾಕಲಿದ್ದಾರಂತೆ. ಅದು ಮಾತ್ರವೇ ಅಲ್ಲದೆ, ಒಂದು ಸಮಯದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುವ ತೀರ್ಮಾನವನ್ನು ಸಹ ಅಲ್ಲು ಅರ್ಜುನ್ ಮಾಡಿದ್ದಾರಂತೆ. ಈ ಮೊದಲೆಲ್ಲ ಒಂದು ಸಿನಿಮಾ ಮುಗಿದ ಬಳಿಕವಷ್ಟೆ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಆದರೆ ಆ ನಿಯಮವನ್ನು ಸಹ ಮುರಿಯಲಿದ್ದು, ಅದೂ ಸಹ ಚಿತ್ರಮಂದಿರದ ಒಳಿತಿಗಾಗಿಯೇ ಆಗಿದೆ.

ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಪ್ರಸ್ತುತ ನಟ ಪ್ರಭಾಸ್ ಸಹ ಈ ನಿಯಮ ಅನುಸರಿಸುತ್ತಿದ್ದಾರೆ. ಎರಡೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಪ್ರಭಾಸ್. ಒಂದು ಸಿನಿಮಾದ ಶೆಡ್ಯೂಲ್ ಬ್ರೇಕ್ ಇದ್ದಾಗ ಮತ್ತೊಂದು ಸಿನಿಮಾನಲ್ಲಿ ಹೀಗೆ ಕಾಲ್​ ಶೀಟ್ ಅನ್ನು ಸಹ ಒಟ್ಟಿಗೆ ಎರಡು ಸಿನಿಮಾಗಳಿಗೆ ನೀಡುತ್ತಿದ್ದಾರೆ ಅದೂ ಶೂಟಿಂಗ್​ಗೆ ಸಮಸ್ಯೆ ಆಗದಂತೆ. ಇದರಿಂದ ಕಡಿಮೆ ಅವಧಿಯಲ್ಲಿ ಸಿನಿಮಾ ಮಾಡಿದಂತಾಗುತ್ತದೆ. ಮತ್ತು ಸಿನಿಮಾಗಳಿಂದ ಸಿನಿಮಾಕ್ಕೆ ದೊಡ್ಡ ಗ್ಯಾಪ್ ಸಹ ಆಗುವುದಿಲ್ಲ.

ಅಲ್ಲು ಅರ್ಜುನ್ ಪ್ರಸ್ತುತ ಬರೋಬ್ಬರಿ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅಟ್ಲಿ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ಜೊತೆಗೆ ಹೊಸ ಸಿನಿಮಾ ಆರಂಭವಾಗಲಿದೆ. ಅದರ ಜೊತೆಗೆ ಮಲಯಾಳಂನ ಬಾಸಿಲ್ ಜೋಸೆಫ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ಜೊತೆಗೆ ಒಂದು ಸಿನಿಮಾ ಬಳಿಕ ಮತ್ತೆ ಸುಕುಮಾರ್ ಜೊತೆಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಲೈನ್ ಅಪ್ ಹೆಚ್ಚಾಗಿರುವ ಕಾರಣ ಒಟ್ಟಿಗೆ ಎರಡು ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಮತ್ತು ಬೇಗ ಬೇಗನೆ ಸಿನಿಮಾಗಳನ್ನು ಮುಗಿಸಲು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಅವರು ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಇತಿಹಾಸದಲ್ಲಿ ಈ ರೀತಿಯಾಗಿ ಔಟಾದ ಮೊದಲ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ – Kannada News | IPL 2026: Angkrish Raghuvanshi’s Historic ‘Obstructing the Field’ Out vs LSG

ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಗೆ ಸಾಕ್ಷಿಯಾಗಿದೆ. ಎದುರಾಳಿ ತಂಡದ ಫಿಲ್ಡಿಂಗ್​​ಗೆ ಅಡ್ಡಿಪಡಿಸಿದ್ದಕ್ಕಾಗಿ ಕೆಕೆಆರ್ ತಂಡದ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಫಿಲ್ಡಿಂಗ್​​ಗೆ ಅಡ್ಡಿಪಡಿಸಿದ್ದಕ್ಕಾಗಿ ಔಟಾದ ಮೊದಲ ಬ್ಯಾಟರ್ ಎಂಬ ಅನಗತ್ಯ ದಾಖಲೆ ಅಂಗ್‌ಕ್ರಿಶ್ ರಘುವಂಶಿ ಪಾಲಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್​​ಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ತಂಡವು ಒತ್ತಡಕ್ಕೆ ಒಳಗಾಯಿತು. ಹೀಗಾಗಿ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಅಂಗ್‌ಕ್ರಿಶ್ ರಘುವಂಶಿ ಮತ್ತು ಕ್ಯಾಮರೂನ್ ಗ್ರೀನ್‌ ಮೇಲೆ ಉತ್ತು. ಕೆಕೆಆರ್ ಅಭಿಮಾನಿಗಳು ಈ ಜೋಡಿಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಇಬ್ಬರೂ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ತಂಡದ ಮೊತ್ತ 27 ರನ್‌ಗಳಿದ್ದಾಗ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣದಿಂದಾಗಿ ಔಟಾದರು.

ಪ್ರಿನ್ಸ್ ಯಾದವ್ ಬೌಲ್ ಮಾಡಿದ ಐದನೇ ಓವರ್‌ನ ಕೊನೆಯ ಎಸೆತವನ್ನು ಅಂಗ್‌ಕ್ರಿಶ್ ರಘುವಂಶಿ ಮಿಡ್-ಆನ್ ಕಡೆಗೆ ಹೊಡೆದು ರನ್ ಮಾಡಲು ಮುಂದಾದರು. ಆದರೆ ನಾನ್-ಸ್ಟ್ರೈಕ್‌ನಲ್ಲಿರುವ ಕ್ಯಾಮರೂನ್ ಗ್ರೀನ್ ಅದಕ್ಕೆ ನಿರಾಕರಿಸಿದರು. ಆದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗುವುದನ್ನು ಬಿಟ್ಟು ಅಂಗ್‌ಕ್ರಿಶ್​ಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ಅಂಗ್‌ಕ್ರಿಶ್ ಸ್ಟ್ರೈಕ್‌ಗೆ ಹಿಂತಿರುಗುವ ಯತ್ನ ಮಾಡಿದರು. ಇತ್ತ ಚೆಂಡನ್ನು ಹಿಡಿದ ಶಮಿ, ಚೆಂಡನ್ನು ವಿಕೆಟ್​ನತ್ತ ಎಸೆದರು. ಈ ಹಂತದಲ್ಲಿ ಚೆಂಡು ಅಂಗ್‌ಕ್ರಿಶ್ ಅವರ ದೇಹಕ್ಕೆ ಬಡಿಯಿತು. ಇದನ್ನು ಗಮನಿಸಿದ ಶಮಿ, ಅಂಗ್‌ಕ್ರಿಶ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ ಎಂದು ಅಂಪೈರ್ ಬಳಿ ಮನವಿ ಮಾಡಿದರು. ಹೀಗಾಗಿ ಅಂಪೈರ್‌ಗಳು ಕೂಡ ಮೂರನೇ ಅಂಪೈರ್​ಗೆ ಮೇಲ್ಮನವಿ ಸಲ್ಲಿಸಿದರು. ಇದನ್ನು ಮರುಪರಿಶೀಲನೆ ಮಾಡಿದ ಮೂರನೇ ಅಂಪೈರ್, ಅಂಗ್‌ಕ್ರಿಶ್ ಔಟೆಂದು ತೀರ್ಪು ನೀಡಿದರು. ಇದರಿಂದ ಅಂಗ್‌ಕ್ರಿಶ್ ತುಂಬಾ ಅಸಮಾಧಾನಗೊಂಡು ತಮ್ಮ ಆಕ್ರೋಶ ಹೊರಹಾಕಿದರು.

Source link

ಸಿನಿಮಾ ನಿರ್ಮಾಣ ಪ್ರಾರಂಭಿಸಿದ್ದೇಕೆ? ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ಟರು ಉತ್ತರ – Kannada News | Lakshmi Hebbalkar started movie production with Anna from Mexico movie

ಲಕ್ಷ್ಮಿ ಹೆಬ್ಬಾಳ್ಕರ್ (lakshmi Hebbalkar) ಕರ್ನಾಟಕದ ಜನಪ್ರಿಯ ಮಹಿಳಾ ರಾಜಕಾರಣಿಗಳಲ್ಲಿ ಒಬ್ಬರು. ಪ್ರಸ್ತುತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಲವು ವರ್ಷಗಳಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಪಕಿಯೂ ಆಗುತ್ತಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಿನಿಮಾ ನಿರ್ಮಾಣ ಪ್ರಾರಂಭಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಿರ್ಮಾಣ ಸಂಸ್ಥೆಗೆ ಐರಾ ಫಿಲಮ್ಸ್ ಎಂದು ಹೆಸರಿಟ್ಟಿದ್ದಾರೆ. ನಿರ್ಮಾಪಕಿಯಾಗಿ ‘ಅಣ್ಣಾ ಫ್ರಂ ಮೆಕ್ಸಿಕೊ’ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಸಿನಿಮಾ ಆಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಅನಾವರಣ ಆಗಿದೆ.

‘ಅಣ್ಣಾ ಫ್ರಂ ಮೆಕ್ಸಿಕೊ’ ಸಿನಿಮಾನಲ್ಲಿ ಡಾಲಿ ಧನಂಜಯ್ ನಾಯಕ ಆಗಿದ್ದು, ಈ ಹಿಂದೆ ಡಾಲಿಯ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ಅವರು ಈ ಸಿನಿಮಾವನ್ನೂ ನಿರ್ದೇಶಿಸಲಿದ್ದಾರೆ. ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಾವು ಸಿನಿಮಾ ನಿರ್ಮಾಣಕ್ಕೆ ಬಂದಿದ್ದೇಕೆ ಎಂಬುದನ್ನು ಚುಟುಕಾಗಿ ವಿವರಿಸಿದರು.

ಸಿನಿಮಾದ ಟೀಸರ್ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ‘ಟೀಸರ್ ಬಹಳ ಚೆನ್ನಾಗಿತ್ತು, ಬಹಳ ರಿಚ್ ಆಗಿತ್ತು. ಅದರಲ್ಲೂ ಧನಂಜಯ್ ಅವರ ಕೊರಳಿನಲ್ಲಿದ್ದ ಕರ್ನಾಟಕದ ಲಾಕೆಟ್ ನೋಡಿ ಬಹಳ ಖುಷಿ ಆಯ್ತು. ಟೀಸರ್ ನೋಡಿದರೆ ಸಿನಿಮಾ ಎಷ್ಟು ರಿಚ್ ಆಗಿರಬಹುದು ಎಂಬ ಅಂದಾಜು ಸಿಗುತ್ತಿದೆ. ಡಾಲಿ ಪ್ರತಿಬಾರಿಯಂತೂ ಅದ್ಭುತವಾಗಿ ನಟಿಸಿದ್ದಾರೆ’ ಎಂದರು.

ಇದನ್ನೂ ಓದಿ:‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ

‘ಚಿತ್ರರಂಗ ಹೊಸದು ನನಗೆ, ಚಿಕ್ಕಂದಿನಿಂದಲೂ ಚಿತ್ರರಂಗದ ಬಗ್ಗೆ ಆಸೆ, ಕುತೂಹಲ ಇದ್ದೇ ಇದೆ. ಬಹಳ ದೊಡ್ಡ ದೊಡ್ಡ ನಟರನ್ನು ನೋಡಿಕೊಂಡು ಬೆಳೆದು ಬಂದವಳು. ರಾಜ್​ಕುಮಾರ್, ವಿಷ್ಣುವರ್ಧನ್, ಅನಂತ್​​ನಾಗ್, ಶಂಕರ್​ನಾಗ್, ಜಯಮಾಲ, ಜಯಪ್ರಧಾ ಇನ್ನೂ ಹಲವರನ್ನು ನೋಡಿ ಬೆಳೆದವಳು. ನಾನೂ ಸಹ ಎಲ್ಲರಂತೆ ಮಧ್ಯಮ ವರ್ಗದಿಂದ ಬಂದವಳು, ಕನ್ನಡ ಚಿತ್ರರಂಗಕ್ಕೆ ಏನಾದರೂ ಮಾಡಬೇಕು, ಅಲ್ಲಿಯೂ ಕೆಲಸ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ನನಗೆ ಇತ್ತು. ಈಗ ಡಾಲಿ ಧನಂಜಯ್ ಅವರು ಒಳ್ಳೆಯ ಕತೆ ಹಿಡಿದುಕೊಂಡು ಬಂದರು. ನೀವು ನಿರ್ಮಾಣ ಮಾಡಲೇ ಬೇಕು ಎಂದಾಗ ಇಲ್ಲ ಎನ್ನಲಾಗಲಿಲ್ಲ’ ಎಂದಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್.

‘ಕನ್ನಡ ಚಿತ್ರರಂಗದ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ಕನ್ನಡ ಪ್ರೇಕ್ಷಕರು ಇದ್ದಾರೆ. ಹಾಗಾಗಿ ಇದು ಒಳ್ಳೆಯ ಸಂದರ್ಭ ಎಂಬ ಕಾರಣಕ್ಕೆ ನಾವು ಇನ್ನು ಕೆಲವರೊಟ್ಟಿಗೆ ಸೇರಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ನನ್ನ ಸಹೋದರ ಚನ್ನರಾಜ್ ಹಟ್ಟಿಜೋಳಿ ಅವರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಇನ್ನೊಂದು ಸಿನಿಮಾ ಅನ್ನೂ ಸಹ ಮಾಡಲಿದ್ದೇವೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊಡಗು: ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ; ಜನಗಣತಿ ಒತ್ತಡಕ್ಕೊಳಗಾಗಿ ಹೀಗೆ ಮಾಡಿಕೊಂಡ್ರಾ? – Kannada News | Kodagu: Teacher commits suicide by shooting herself in madikeri

ಕೊಡಗು, ಏಪ್ರಿಲ್​26: ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಶಿಕ್ಷಕಿಯೊಬ್ಬರ (Teacher)  ದುಡುಕಿನ ನಿರ್ಧಾರ ಸದ್ಯ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಎ.ರೋಹಿಣಿ(51) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಎ.ರೋಹಿಣಿ ಅವರು ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು. 25 ವರ್ಷ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ದಾರಿದೀಪವಾಗಿದ್ದರು.‌ ಆದರೆ ಏನಾಯಿತೋ ಏನೋ, ಒಂಟಿ‌ ನಳಿಗೆ ಕೋವಿಯಿಂದ ತಮ್ಮ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡಿ ಮಲಗಿದ್ದ ಅವರು ಮುಂಜಾನೆ 5 ಗಂಟೆ ವೇಳೆಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಜನಗಣತಿ ಕಾರ್ಯಕ್ಕೆ ಅಡ್ಡಿ: ಮಹಿಳಾ ಸಿಬ್ಬಂದಿಗೆ ಅವಮಾನ; ನಿವಾಸಿ ವಿರುದ್ಧ ಎಫ್​ಐಆರ್​ ದಾಖಲು

ಗುಂಡು ಸಿಡಿದ ಶಬ್ಧ ಕೇಳುತ್ತಿದ್ದಂತೆ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಅವರ ಪತಿ ಕರುಂಬಯ್ಯ ಹಾಗೂ ಮಗಳು ಎದ್ದು ಹೋಗಿ ನೋಡಿದಾಗ ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಭಾಗಮಂಡಲ ಠಾಣೆ ಪೊಲೀಸರು ಮೃತದೇಹವನ್ನು ಕೊಡಗು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಜನಗಣತಿ ಕೆಸಲ ಒತ್ತಡ: ಪತಿ ಹೇಳಿದ್ದೇನು? 

ಇನ್ನು ಈ ಬಗ್ಗೆ ಮೃತ ರೋಹಿಣಿ ಪತಿ ಕರುಂಬಯ್ಯ ಮಾತನಾಡಿದ್ದು, ಯಾವಗಲೂ ಟೆನ್ಷನ್ ಎಂದು ಹೇಳುತ್ತಿದ್ದರು. ಜನಗಣತಿ ಆರಂಭವಾದ ಬಳಿಕ ಎಲ್ಲಾ ಕೆಲಸ ಮುಗಿಸಿ ಮಲಗುವುದು ರಾತ್ರಿ 12 ಗಂಟೆಯಾಗುತ್ತಿತ್ತು. ಇವರಿಗೆ 250ಕ್ಕೂ ಹೆಚ್ಚು ಮನೆಗಳ ಜನಗಣತಿ ಮಾಡಲು ಕೊಟ್ಟಿದ್ದರು. ಅದು ಸಾಧ್ಯವಾಗದೆ ಮತ್ತೊಬ್ಬ ಸಹಾಯಕರನ್ನು ಕೊಡುವಂತೆ ತಹಶೀಲ್ದಾರ್​​ಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಈ ಒತ್ತಡದಿಂದ ಅವರು ಸಾವನ್ನಪ್ಪಿರಬಹುದು ಎಂದಿದ್ದಾರೆ.

ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದರು: ಮೋಹನ್ ಪೆರಾಜೆ

ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದ್ದು, ಇಲಾಖೆ ಎಂದ ಮೇಲೆ ಒತ್ತಡಗಳು ಇರುತ್ತವೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಒತ್ತಡಗಳು ಇರಲಿಲ್ಲ. ರೋಹಿಣಿ ಅವರು ತುಂಬಾ ಧೈರ್ಯವಂತೆಯಾಗಿದ್ದವರು. ಎಂತಹದ್ಧೇ ಕೆಲಸಗಳನ್ನು ವಹಿಸಿದ್ದರೂ ಕೆಲಸದಿಂದ ಹಿಂದೆ ಸರಿಯುತ್ತಿರಲಿಲ್ಲ. ಹೀಗಾಗಿ ಜನಗಣತಿ ಕಾರ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸದ್ಯ ಶಿಕ್ಷಕಿ ರೋಹಿಣಿ ಅವರ ಪತಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:52 pm, Sun, 26 April 26

Source link

ಏಪ್ರಿಲ್​​​​​​​ ತಿಂಗಳ ಕೊನೆಯಲ್ಲಿ ಈ ರಾಶಿಗೆ ಅದ್ಭುತ ಅದೃಷ್ಟ! ಎಚ್ಚರ ಈ ಮೂವರಿಂದ ಅದೆಲ್ಲವನ್ನು ಕಳೆದುಕೊಳ್ಳಬಹುದು – Kannada News | Karkataka Rashi April 2026 Forecast: Astrological Insights for Finance, Health and Career

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಆಧಾರದ ಮೇಲೆ ಕರ್ಕಾಟಕ ರಾಶಿಯವರಿಗೆ ಅಂದರೆ ಪುನರ್ವಸು ನಾಲ್ಕನೇ ಪಾದ, ಪುಷ್ಯ, ಆಶ್ಲೇಷ ನಕ್ಷತ್ರಗಳ ನಾಲ್ಕೂ ಪಾದಗಳು ಇರಲಿದ್ದು ಅತಿ ಹೆಚ್ಚು ನಿಖರವಾದ ಮತ್ತು ವಿವರವಾದ ವಿಶ್ಲೇಷಣೆ ಇಲ್ಲಿದೆ. ​ಪ್ರಸ್ತುತ ಗ್ರಹಗಳ ಸ್ಥಿತಿ ಗಮನಿಸಿದರೆ, ನಿಮಗೆ ಸವಾಲುಗಳಿದ್ದರೂ ಕೆಲವು ಗ್ರಹಗಳು ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತಿವೆ.

​ಅಶುಭ ಫಲ ನೀಡುವ ಗ್ರಹಗಳು

​ಗುರು ದ್ವಾದಶ ಸ್ಥಾನದಲ್ಲಿ ಅಂದರೆ ವ್ಯಯ ಸ್ಥಾನ ಮಿಥುನ ರಾಶಿಯಲ್ಲಿದ್ದಾನೆ. ಇದು ಕರ್ಕಾಟಕಕ್ಕೆ 12ನೇ ಮನೆ. ಇದರಿಂದಾಗಿ ಶುಭ ಕಾರ್ಯಗಳಿಗಾಗಿ ಮದುವೆ, ಮನೆ ರಿಪೇರಿ, ಪ್ರವಾಹಗಳಿಗೆ ಹಣದ ವ್ಯಯ ಹೆಚ್ಚಾಗಲಿದೆ. ಆರೋಗ್ಯಕ್ಕಾಗಿ ಅನಿರೀಕ್ಷಿತ ಖರ್ಚುಗಳು ಬರಬಹುದು. ನಿದ್ರಾಹೀನತೆ ಉಂಟಾಗುವ ಸಂಭವವಿದೆ.

​ಶನಿ ದಶೆ :

ಶನಿಯು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ನಿಮಗೆ ನವಮ ಸ್ಥಾನ. ಇದು ಈ ತಿಂಗಳ ಪ್ರಮುಖ ಸವಾಲು. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಂದಗತಿ, ಮತ್ತು ಮಾನಸಿಕ ಅಶಾಂತಿ ನೀಡಬಹುದು. ಶನಿಯು ನಿಮ್ಮ ರಾಶಿಯ ಮೂರನೇ ರಾಶಿಯ ಮೇಲೆ ದೃಷ್ಟಿ ಬೀರುವುದರಿಂದ ಮಾತು ಕಠಿಣವಾಗಬಹುದು, ಇದರಿಂದ ಕುಟುಂಬದಲ್ಲಿ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳಿ.

​ರಾಹು ದಶೆ :

ಅಷ್ಟಮದ ಸ್ಥಾನದಲ್ಲಿರುವ ರಾಹು ಚಿಕಿತ್ಸೆ ಮತ್ತು ರೋಗಕ್ಕೆ ಸಂಬಂಧದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಸೃಷ್ಟಿ ಆಗಲಿದೆ. ವಿದೇಶ ಪ್ರಯಾಣದ ಪ್ರಯತ್ನದಲ್ಲಿದ್ದರೆ ಅಡೆತಡೆಗಳು ಎದುರಾಗಬಹುದು.

​ಶುಭ ಫಲ ನೀಡುವ ಗ್ರಹಗಳು

​ಕೇತು :

ಸಿಂಹ ರಾಶಿಯಲ್ಲಿರುವ ಕೇತು ನಿಮಗೆ ಅತ್ಯಂತ ಶುಭ ಫಲ ನೀಡುತ್ತಿದ್ದಾನೆ. ಇದು ನಿಮಗೆ ಧೈರ್ಯ, ಸ್ಥಿರತೆ ಮತ್ತು ಶತ್ರುಗಳ ಮೇಲೆ ಜಯ ನೀಡುತ್ತದೆ. ಕಿರಿಯ ಸಹೋದರರಿಂದ ಅಥವಾ ಮಿತ್ರರಿಂದ ಸಹಕಾರ ದೊರೆಯಲಿದೆ.

​ಕುಜ ದಶೆ :

ಮಂಗಳನು ನಿಮ್ಮ ರಾಶಿಯ ಹತ್ತನೇ ಅಥವಾ ಹನ್ನೊಂದನೇ ಮನೆಯ ಸ್ಥಿತಿಗತಿಗಳನ್ನು ಅವಲಂಬಿಸಿ ವೃತ್ತಿಯಲ್ಲಿ ಅಧಿಕಾರ ನೀಡುತ್ತಾನೆ. ಭೂಮಿ ಅಥವಾ ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಲಾಭದ ಸೂಚನೆ ಇದೆ.

​ಸೂರ್ಯ ದಶೆ :

ಸೂರ್ಯನು ಉಚ್ಚ ಮೇಷ ರಾಶಿಯಲ್ಲಿ ಇರುವುದರಿಂದ ಸರ್ಕಾರಿ ಕೆಲಸಗಳು ಅಥವಾ ಗೌರವ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಲಿದೆ.

​ಜೀವನದ ವಿವಿಧ ಆಯಾಮಗಳ ಮೇಲೆ ಪ್ರಭಾವ

ಆರ್ಥಿಕತೆ ಸಾಧಾರಣ ಹಣ ಬರುತ್ತದೆ, ಆದರೆ ಬಂದಷ್ಟೇ ವೇಗವಾಗಿ ವ್ಯಯವಾಗುತ್ತದೆ. ಹೂಡಿಕೆ ಮಾಡುವಾಗ ಎಚ್ಚರ.

ಆರೋಗ್ಯ ಗಮನ ಅಗತ್ಯ ನವಮ ಶನಿಯ ಪ್ರಭಾವವಿರುವುದರಿಂದ ಕಾಲು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಶ್ರಮಕ್ಕೆ ಅಧಿಕಾರಿಗಳಿಂದ ಮನ್ನಣೆ ಸಿಗಲಿದೆ.
ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದು ಹೋಗುತ್ತವೆ.

ಗುರುವು ವ್ಯಯದಲ್ಲಿರುವುದರಿಂದ ಅಶಕ್ತರಿಗೆ ಪುಸ್ತಕ ಅಥವಾ ಲೇಖನಿ ದಾನ ಮಾಡಿ. ಇದು ವ್ಯಯ ಸ್ಥಾನದ ದೋಷ ಕಡಿಮೆ ಮಾಡುತ್ತದೆ. ಗಣಪತಿಯ ಆರಾಧನೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

– ಲೋಹಿತ ಹೆಬ್ಬಾರ್

Source link

IPL 2026: ಆರ್​​ಸಿಬಿಗೆ ಆಘಾತ; ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಫಿಲ್ ಸಾಲ್ಟ್ ಅಲಭ್ಯ – Kannada News | RCB’s IPL 2026 Injury Woes Continue: Phil Salt Out for Delhi Match

2026 ರ ಐಪಿಎಲ್​ನಲ್ಲಿ (IPL 2026) ಆಟಗಾರರ ಗಾಯದಿಂದ ಹೆಚ್ಚು ತೊಂದರಿಗೀಡಾಗಾದ ತಂಡವೆಂದರೆ ಅದು ಆರ್​ಸಿಬಿ (RCB) ಎಂಬ ಮಾತಿತ್ತು. ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಜೋಶ್ ಹೇಜಲ್‌ವುಡ್ ಇಂಜುರಿಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದರು. ಅಂದಿನಿಂದ ತಂಡದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೀಗ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಓಪನರ್ ಫಿಲ್ ಸಾಲ್ಟ್ (Phil Salt ) ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿರಲಿಲ್ಲ. ಆದರೆ ಅವರು ಡೆಲ್ಲಿ ವಿರುದ್ಧದ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೀಗ ಅದು ಸುಳ್ಳಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡುವುದಿಲ್ಲ ಎಂದು ವರದಿಯಾಗಿದೆ.

ಸತತ 2ನೇ ಪಂದ್ಯಕ್ಕೆ ಸಾಲ್ಟ್ ಅಲಭ್ಯ

ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 27, ಸೋಮವಾರ ರಾಜಧಾನಿ ನವದೆಹಲಿಯಲ್ಲಿ ಆಡಲಿದೆ. ಈ ಪಂದ್ಯದಲ್ಲಿ, ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು, ಆತಿಥೇಯ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡ ಈ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದೆ. ಆದರೆ ಮೈದಾನಕ್ಕಿಳಿಯುವ ಮುನ್ನವೇ ತಂಡಕ್ಕೆ ಆಘಾತ ಎದುರಾಗಿದ್ದು, ಈ ಪಂದ್ಯದಲ್ಲಿ ಸಾಲ್ಟ್ ಆಡದಿರುವುದು ಖಚಿತವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇದನ್ನು ದೃಢಪಡಿಸಿದ್ದಾರೆ.

ಆರ್‌ಸಿಬಿ ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಪ್ರದರ್ಶನ ಈ ಆವೃತ್ತಿಯಲ್ಲಿ ಏರಿಳಿತಗಳಿಂದ ಕೂಡಿದೆ. ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದ ಸಾಲ್ಟ್, ಎರಡು ಪಂದ್ಯಗಳಲ್ಲಿ ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದಾರೆ. ಉಳಿದಂತೆ ಒಂದು ಪಂದ್ಯದಲ್ಲಿ 40 ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು ಆರು ಇನ್ನಿಂಗ್ಸ್‌ಗಳಲ್ಲಿ 168 ರ ಸ್ಟ್ರೈಕ್ ರೇಟ್​ನಲ್ಲಿ 202 ರನ್‌ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳು ಸೇರಿವೆ.

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು?

 ಯಾರಿಗೆ ಅವಕಾಶ?

ಫಿಲ್ ಸಾಲ್ಟ್ ಅಲಭ್ಯತೆ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದ್ದರೂ, ವಿರಾಟ್ ಕೊಹ್ಲಿ ತಂಡದಲ್ಲಿರುವುದು ತಂಡವನ್ನು ಕೊಂಚ ನಿರಾಳವಾಗಿಸಿದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಜಾಕೋಬ್ ಬೆಥೆಲ್,ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ವಿಫಲರಾಗಿದ್ದರೂ, ಬೆಥೆಲ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್ ಜೊತೆ ನಟಿಸಿದ ಅನುಭವ ಹಂಚಿಕೊಂಡ ನಟಿ ಮೇಘನಾ ರಾಜ್ – Kannada News | Meghana Raj talks about experience working with Rajinikanth

ಗೀತಪ್ರಿಯಾ ಅವರ ‘ಅಪರಿಚಿತೆ’ ಸಿನಿಮಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ಮೇಘನಾ ರಾಜ್ (Meghana Raj), ಮಹಿಳೆಯರ ಪ್ರಯತ್ನದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಬಳಿಕ ಅವರು ರಜನೀಕಾಂತ್ ಜೊತೆಗೆ ನಟಿಸುತ್ತಿರುವ ಅನುಭವದ ಬಗ್ಗೆಯೂ ಮಾಧ್ಯಗಳ ಜೊತೆಗೆ ಹಂಚಿಕೊಂಡರು. ಮೇಘನಾ ರಾಜ್ ಅವರು ‘ಜೈಲರ್ 2’ ಸಿನಿಮಾನಲ್ಲಿ ರಜನೀಕಾಂತ್ ಅವರೊಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲಾಗುವುದಿಲ್ಲ ಎಂದ ಮೇಘನಾ, ರಜನೀಕಾಂತ್ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಚುಟುಕಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್​​ಸಿಬಿ; ಎದುರಾಳಿ ಯಾರು? – Kannada News | IPL 2026: DC vs RCB Match 39 Preview – Date, Time, Venue and Where to Watch Live

ಐಪಿಎಲ್ 2026 ರ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ. ಈ ಮೊದಲು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಆರ್​​ಸಿಬಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿ ಆರ್​​ಸಿಬಿಗೆ ಸೇಡಿನ ಸಮರವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಆರ್​​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಡೆಲ್ಲಿ ತಂಡವನ್ನು ಮಣಿಸಲು ಸಜ್ಜಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಯಾವಾಗ ನಡೆಯಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಏಪ್ರಿಲ್ 27 ರಂದು ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಎಲ್ಲಿ ನಡೆಯಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​​ಸಿಬಿ ನಡುವಿನ ಐಪಿಎಲ್ 2026 ರ 39 ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್, ವಿಪ್ರಜ್ ನಿಗಮ್, ಅಶುತೋಷ್ ಶರ್ಮಾ, ಕರುಣ್ ನಾಯರ್, ಎಂ. ಅಜಯ್ ಜಾದವ್ ಮಂಡಲ್, ಪೃಥ್ವಿ ಶಾ, ತ್ರಿಪುರ ವಿಜಯ್, ಅಭಿಷೇಕ್ ಪೊರೆಲ್, ಸಾಹಿಲ್ ಪರಾಖ್, ಮಾಧವ್ ತಿವಾರಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಜಪಾನಿಗೆ ಹೋದ ಆಸಕ್ತಿಕರ ಕತೆ ಗೊತ್ತೆ? – Kannada News | The Story behind Animated movie Ramayana: The Legend of Prince Rama

ರಣ್​ಬೀರ್ ಕಪೂರ್, ಯಶ್ (Yash) ನಟಿಸಿರುವ ‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿರುವ ನಮಿತ್ ಮಲ್ಹೋತ್ರಾ, ‘ಭಾರತದ ಸಂಸ್ಕೃತಿಯನ್ನು, ಭಾರತದ ಧರ್ಮವನ್ನು ನಾವು ವಿಶ್ವಕ್ಕೆ ತಲುಪಿಸುತ್ತಿದ್ದೇವೆ’ ಎಂದಿದ್ದಾರೆ. ಅಸಲಿಗೆ ‘ರಾಮಾಯಣ’ ಕತೆಯನ್ನು ದಶಗಳ ಹಿಂದಿನಿಂದಲೂ ಹಲವು ರಾಷ್ಟ್ರಗಳಿಗೆ ಭಾರತೀಯರು ಪರಿಚಯಿಸಿದ್ದಾರೆ. ಹಲವಾರು ದೇಶಗಳಲ್ಲಿ ರಾಮಾಯಣದ ನಾಟಕ ಪ್ರದರ್ಶನಗಳಾಗಿವೆ. ರಾಮಾಯಣ ಕತೆಯ ತರ್ಜುಮೆಗಳನ್ನು ಮಾಡಲಾಗಿದೆ. ಆಸಕ್ತಿಕರ ಕತೆಯೆಂದರೆ ‘ರಾಮಾಯಣ’ ಕತೆ ಸಿನಿಮಾ ಆಗಿ ಜಪಾನ್​​ಗೆ ಹೋದ ಕತೆ.

ಜಪಾನಿಗೆ ‘ರಾಮಾಯಣ’ ಸಿನಿಮಾ ಆಗಿ ಹೋಗಿದ್ದು ಯುಗೊ ಸಾಕೊ ಎಂಬುವರ ಸತತ ಪ್ರಯತ್ನದಿಂದ. ಯುಗೊ ಸಾಕೊ ಜಪಾನಿನ ಜನಪ್ರಿಯ ಸಿನಿಮಾ ನಿರ್ದೇಶಕ, ಚಿತ್ರಕತೆ ಬರಹಗಾರ ಮತ್ತು ನಿರ್ಮಾಪಕ. 1970 ರಲ್ಲಿ ಮೊದಲ ಬಾರಿ ಭಾರತಕ್ಕೆ ಬಂದ ಯುಗೊ ಸಾಕೊ, ಭಾರತವನ್ನು ಬಹಳ ಇಷ್ಟಪಡುತ್ತಾರೆ. ಅದಾದ ಬಳಿಕ ಸುಮಾರು 40 ಬಾರಿ ಬೇರೆ ಬೇರೆ ಕಾರಣಗಳಿಗೆ ಅವರು ಭಾರತಕ್ಕೆ ಬರುತ್ತಾರೆ. ಆದರೆ 1983 ರಲ್ಲಿ ಅವರು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಡಾ ಬಿಬಿ ಲಾಲ್ ಅವರನ್ನು ಭೇಟಿ ಆಗುತ್ತಾರೆ. ಅವರೊಟ್ಟಿಗೆ ಸೇರಿ ರಾಮಾಯಣ ಕುರಿತಾದ ಡಾಕ್ಯುಮೆಂಟರಿ ಒಂದಕ್ಕೆ ಕೆಲಸ ಮಾಡುತ್ತಾರೆ. ಅವರ ಮೇಲೆ ‘ರಾಮಾಯಣ’ ಕತೆ ಬಹಳ ಪರಿಣಾಮ ಬೀರುತ್ತದೆ. ಅದನ್ನು ಜಪಾನಿನಲ್ಲಿ ಸಿನಿಮಾ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಜಪಾನಿನ ಅನಿಮೇಟೆಡ್ ಮಾದರಿ ಬಳಸಿ ‘ರಾಮಾಯಣ’ ಕತೆಯನ್ನು ಸಿನಿಮಾ ಮಾಡುವುದು ಅವರ ಆಸೆ ಆಗಿರುತ್ತದೆ. ಆದರೆ ‘ರಾಮಾಯಣ’ ದೇವರ ಕತೆಯಾಗಿದ್ದು ಅದನ್ನು ಕಾರ್ಟೂನ್ ಮಾದರಿಯಲ್ಲಿ ನಿರ್ಮಿಸಲು ಇಲ್ಲಿನ ಸಂಪ್ರದಾಯವಾದಿಗಳು ಒಪ್ಪುವುದಿಲ್ಲ. ವಿಶ್ವ ಹಿಂದೂ ಪರಿಷತ್ ಅಂದೂ ದೆಹಲಿಯ ಜಪಾನಿನ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸುತ್ತದೆ. ಆದರೆ ಯುಗೊ ಸಾಕೊ ತಮ್ಮ ಪ್ರಯತ್ನ ಬಿಡುವುದಿಲ್ಲ, ಅನಿಮೇಷನ್ ಎಂಬುದು ಜಪಾನಿನ ಬಹಳ ಪ್ರಬುದ್ಧ ಮತ್ತು ಜನಪ್ರಿಯ ಕಲೆ ಎಂಬುದನ್ನು ಮನದಟ್ಟು ಮಾಡಿ ಸರ್ಕಾರದಿಂದಲೂ ಅನುಮತಿ ಪಡೆದೇ ಬಿಡುತ್ತಾರೆ.

ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ಬಳಿಕ ಹಲವು ವರ್ಷಗಳ ಕಾಲ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಕತೆಯನ್ನು ಅನಿಮೇಷನ್ ಸಿನಿಮಾ ಮೇಲೆ ಕೆಲಸ ಮಾಡುತ್ತಾರೆ. ಈ ಸಿನಿಮಾಕ್ಕಾಗಿ ಹಲವು ಕಲಾವಿದರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡ್ರಾಯಿಂಗ್​​ಗಳನ್ನು ಮಾಡುತ್ತಾರೆ. ಈ ಡ್ರಾಯಿಂಗ್​​ಗಳನ್ನು ಪ್ರತಿದಿನ ಭಾರತಕ್ಕೆ ಕಳಿಸಿ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿರುತ್ತದೆ. ಹೀಗಾಗಿ ಸಿನಿಮಾದ ನಿರ್ಮಾಣಕ್ಕೆ ವರ್ಷಗಳೇ ಬೇಕಾಗುತ್ತದೆ. ಆದರೆ ಸಿನಿಮಾ ಮುಗಿಯುವ ವೇಳೆಗೆ ಭಾರತದಲ್ಲಿ ಬಾಬ್ರಿ ಮಸೀದಿ ಕುರಿತು ಹೋರಾಟ ಶುರು ಆಗಿರುತ್ತದೆ. ಮೊದಲು ಸಿನಿಮಾದ ಇಂಗ್ಲೀಷ್ ಆವೃತ್ತಿಯನ್ನು ಕೆಲ ಆಯ್ದ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಳಿಕ ಧೈರ್ಯ ಮಾಡಿ ಕಮಲ್ ಹಾಸನ್ ಅವರು ಸಿನಿಮಾದ ಬಿಡುಗಡೆ ಹಕ್ಕು ಖರೀದಿಸಿ ಬಿಡುಗಡೆ ಮಾಡುತ್ತಾರೆ. ಆದರೆ ರಾಮ ಜನ್ಮಭೂಮಿ ಚಳವಳಿ ಉತ್ಕೃಷ್ಟ ಸ್ಥಿತಿಯಲ್ಲಿದ್ದ ಆ ಸಮಯದಲ್ಲಿ ಸಿನಿಮಾ ಅಷ್ಟೇನೂ ಉತ್ತಮ ಪ್ರದರ್ಶನ ಕಾಣುವುದಿಲ್ಲ. ಹಲವು ಚಿತ್ರಮಂದಿರಗಳು ಸಿನಿಮಾವನ್ನು ಪ್ರದರ್ಶನ ಸಹ ಮಾಡುವುದಿಲ್ಲ, ಕೆಲವೆಡೆ ಸರ್ಕಾರಗಳೇ ಅನುಮತಿ ಕೊಟ್ಟಿರುವುದಿಲ್ಲ.

1997 ರಲ್ಲಿ ಜಪಾನಿನ ಯೊಕೊಹಾಮಾನಲ್ಲಿ ಈ ಸಿನಿಮಾ ಜಪಾನಿ ಭಾಷೆಯಲ್ಲಿ ಪ್ರದರ್ಶನ ಆಗುತ್ತದೆ. ಅಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಸಿನಿಮಾ ಪಡೆಯುತ್ತದೆ. 97ರ ಬಳಿಕ ಭಾರತದಲ್ಲಿ ಟಿವಿ ಬಳಕೆ ಹಾಗೂ ಸಿಡಿ ಪ್ಲೇಯರ್ ಬಳಕೆ ಹೆಚ್ಚಾದ ಸಮಯದಲ್ಲಿ ‘ರಾಮಾಯಣ’ ಅನಿಮೇಷನ್ ಸಿನಿಮಾಕ್ಕೆ ಮತ್ತೆ ಬೇಡಿಕೆ ಬರುತ್ತದೆ. ಸಿನಿಮಾವನ್ನು ಮಕ್ಕಳ ಚಾನೆಲ್​​ಗಳು ಪದೇ ಪದೇ ಪ್ರದರ್ಶಿಸುತ್ತವೆ, ಸಿಡಿ, ಡಿವಿಡಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟ ಆಗುತ್ತವೆ. ಅತ್ತ ಜಪಾನಿನಲ್ಲೂ ಸಹ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿಬಿಡುತ್ತದೆ. ತೀರ ಇತ್ತೀಚೆಗೆ 2018 ರಿಂದ 2019 ರ ವರೆಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಈ ಸಿನಿಮಾ ಜಪಾನಿನ ಮಿನಿ ಥಿಯೇಟರ್ ಸಿನಿಮಾ ನೊವ್​​ಸೆಂಟೊ ನಲ್ಲಿ ಪ್ರದರ್ಶನ ಕಾಣುತ್ತದೆ.

2022 ರಲ್ಲಿ ಭಾರತ ಮತ್ತು ಜಪಾನಿನ ಗೆಳೆತನದ 70ನೇ ವಾರ್ಷಿಕೋತ್ಸವ ಆಚರಣೆಯಾಯ್ತು. ಭಾರತದಲ್ಲಿ ಜಪಾನಿ ಸಿನಿಮಾ ಫೆಸ್ಟಿವಲ್ ಆಯೋಜಿಸಲಾಗಿತ್ತು. ಇದರಲ್ಲಿ ಮೊದಲು ಪ್ರದರ್ಶನವಾದ ಸಿನಿಮಾ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’. ಈ ಸಿನಿಮಾದ ಡಿಜಿಟಲ್ ಆವೃತ್ತಿಯನ್ನು ನರೇಂದ್ರ ಮೋದಿ ಅವರೇ ಬಿಡುಗಡೆ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Sun, 26 April 26

Source link