Category Archives: Blog

Your blog category

ಕನ್ನಿಡಗರೇ ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸರಣಿಯನ್ನು ಮಿಸ್ ಮಾಡಲೇಬೇಡಿ; ಪ್ರತಿ ಹಂತದಲ್ಲೂ ಟ್ವಿಸ್ಟ್ – Kannada News | Pochamma Web Series Review Ratin And Cast: Kannada Produced Telugu Suspense Thriller Hits Aha OTT

ಒಟಿಟಿ ವ್ಯಾಪ್ತಿ ಹೆಚ್ಚಿದ ಬಳಿಕ ವೆಬ್ ಸೀರಿಸ್​ಗಳ ನಿರ್ಮಾಣ ಹೆಚ್ಚಿದೆ. ಹೊಸ ಹೊಸ ಸೀರಿಸ್​​ಗಳನ್ನು ಪ್ರೇಕ್ಷಕರ ಎದುರು ತರಲಾಗುತ್ತಿದೆ. ಸಸ್ಪೆನ್ಸ್​, ಥ್ರಿಲ್ಲರ್, ರೊಮ್ಯಾಂಟಿಕ್ ಸೇರಿದಂತೆ ಅನೇಕ ವೆಬ್​ ಸೀರಿಸ್​​ಗಳ ನಿರ್ಮಾಣ ಆಗಿದೆ. ಈಗ ‘ಅಯ್ಯನ ಮನೆ’ ತಂಡದವರು ತೆಲುಗಿನಲ್ಲಿ ‘ಪೋಚಮ್ಮ’ ಹೆಸರಿನ ವೆಬ್ ಸೀರಿಸ್ ಮಾಡಿದ್ದಾರೆ. ಈ ಸೀರಿಸ್ ಗಮನ ಸೆಳೆದಿದೆ. ಇದರ ಬಗ್ಗೆ ಪಾಸಿಟಿವ್ ವಿಮರ್ಶೆ ಸಿಕ್ಕಿದೆ.

ಪೋಚಮ್ಮ ಎಂದರೆ ಆಂಧ್ರ ಹಾಗೂ ತೆಲಂಗಾಣ ಭಾಗದಲ್ಲಿ ಆರಾಧಿಸುವ ಗ್ರಾಮದೇವತೆ. ಇಡೀ ಸರಣಿ ಇದರ ಸುತ್ತವೇ ಸಾಗುತ್ತದೆ. ಈ ಸರಣಿಯನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದರೆ ರಮೇಶ್ ಇಂದಿರ ನಿರ್ದೇಶನ ಮಾಡಿದ್ದಾರೆ. ರಮೇಶ್ ಇಂದಿರ, ಅರ್ಜುನ್, ಸ್ನೇಹಲ್ ಕಾಮತ್, ಅಚ್ಯುತ್ ಕುಮಾರ್ ಮೊದಲಾದವರು ಇದರಲ್ಲಿ ನಟಿಸಿದ್ದಾರೆ.

ಅದೊಂದು ದೊಡ್ಡದಾದ ಎಸ್ಟೇಟ್. ಕಾಫಿ ಗಿಡಗಳ ಮಧ್ಯೆ ಭವ್ಯವಾದ ಮನೆ. ಇದನ್ನು ಫ್ರೆಡ್ರಿಕ್ (ರಮೇಶ್ ಇಂದಿರ) ಖರೀದಿ ಮಾಡುತ್ತಾನೆ. ಆತ ಕ್ರೈಸ್ತ ಧರ್ಮಕ್ಕೆ ಸೇರಿದವನು. ಹೀಗಾಗಿ, ಮನೆಯ ಎದುರು ಇರುವ ಪೋಚಮ್ಮ ದೇವರ ಮೂರ್ತಿಯನ್ನು ಕಿತ್ತೆಸೆಯುತ್ತಾನೆ. ಇದನ್ನು ರಘುಪತಿ (ಅಚ್ಯುತ್ ಕುಮಾರ್) ತಡೆಯಲು ಪ್ರಯತ್ನಿಸುತ್ತಾನೆ. ಆ ಬಳಿಕ ಶುರುವಾಗುತ್ತದೆ ನೋಡಿ ತೊಂದರೆಗಳು. ಫ್ರೆಡ್ರಿಕ್ ಮಗಳು ಜೆಸ್ಸಿ (ಸ್ನೇಹಲ್ ಕಾಮತ್) ಸಾಯುತ್ತಾಳೆ. ಈ ರೀತಿಯ ಅನೇಕ ಸಮಸ್ಯೆ ಎದುರಾಗುತ್ತದೆ.

ಈ ವೆಬ್ ಸೀರಿಸ್​ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಕಥೆ ಸಾಗುವ ವೇಗ. ನಿರ್ದೇಶಕ ರಮೇಶ್ ಇಂದಿರಾ ಅವರು ಕಥೆಯನ್ನು ಆರಂಭದಿಂದಲೇ ಬಿಗಿಯಾಗಿ ಮತ್ತು ಆಸಕ್ತಿದಾಯಕವಾಗಿ ಹೇಳುತ್ತಾ ಹೋಗುತ್ತಾರೆ. ಅನಗತ್ಯ ನಿರೂಪಣೆ ಇಲ್ಲದೆ ಸರಣಿ ಸಾಗುತ್ತದೆ. ಕೆಲವು ವೆಬ್​ ಸೀರಿಸ್​​ಗಳಲ್ಲಿ ವೆಬ್ ಸರಣಿಯ ಅವಧಿ ಹೆಚ್ಚಿಸುವ ಉದ್ದೇಶದಿಂದ ಕಥೆಯನ್ನು ಎಳೆಯಲಾಗುತ್ತದೆ. ಆದರೆ, ಇಲ್ಲಿ ಅದಕ್ಕೆ ಜಾಗ ಇಲ್ಲ. 20-25 ನಿಮಿಷಗಳ ಕೇವಲ 5 ಎಪಿಸೋಡ್​​ಗಳು ಇದರಲ್ಲಿವೆ. ಇದು ಸರಣಿಯ ದೊಡ್ಡ ಪ್ಲಸ್ ಪಾಯಿಂಟ್. ಕೊನೆಯವರೆಗೂ ಕೌತುಕ ಹಾಗೆಯೇ ಇರುತ್ತದೆ. ಚಿತ್ರದ ಕೆಲವು ತಿರುವುಗಳನ್ನು ಸುಲಭವಾಗಿ ಊಹಿಸಬಹುದು. ಕೆಲವು ದೃಶ್ಯಗಳಿಗೆ ಸರಿಯಾದ ಸಮರ್ಥನೆ ಕೊಟ್ಟಿಲ್ಲ ಎನಿಸುತ್ತದೆ.

ಇದನ್ನೂ ಓದಿ: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್

ಅಂತಿಮವಾಗಿ ತಪ್ಪಿತಸ್ಥ ಯಾರು? ಈ ಪ್ರಕರಣದ ಕ್ಲೈಮ್ಯಾಕ್ಸ್​​ನಲ್ಲಿ ಏನಾಗುತ್ತದೆ ಎಂಬುದನ್ನು ನೋಡಲು ‘ಪೋಚಮ್ಮ’ ಸರಣಿ ನೋಡಿ. ‘ಆಹ’ ಒಟಿಟಿಯಲ್ಲಿ ಈ ಸರಣಿ ವೀಕ್ಷಣೆಗೆ ಲಭ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs DC ಪಂದ್ಯಕ್ಕೆ 6 ಆಟಗಾರರು ಅಲಭ್ಯ..! – Kannada News | Ipl 2026 unavailable players for rcb vs dc match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ 6 ಆಟಗಾರರು ಅಲಭ್ಯರಾಗಲಿದ್ದಾರೆ. ಅವರೆಂದರೆ…

Source link

ಕನ್ನಡಕ್ಕೆ ಎಂಟ್ರಿ ಕೊಡೋದಕ್ಕೂ ಮೊದಲೇ ಮದುವೆಯಾದ ನಟಿ ಮೆಹ್ರೀನ್ ಫಿರ್ಜಾದಾ – Kannada News | Mehreen Pirzada Married! Tollywood Actress Ties Knot with Weds Arsh Aulakh Before Kannada Film Debut

ಪಂಜಾಬ್ ಮೂಲದ ಮೆಹ್ರೀನ್, ನಾನಿ ನಾಯಕನಾಗಿ ನಟಿಸಿದ ‘ಕೃಷ್ಣಗಡಿ ವೀರಪ್ರೇಮಗಧ’ ಚಿತ್ರದ ಮೂಲಕ ದೊಡ್ಡ ಪರದೆಗೆ ಕಾಲಿಟ್ಟರು. ‘ಮಹಾನುಭಾವಡು’, ‘ರಾಜಾ ದಿ ಗ್ರೇಟ್’, ‘ಎಫ್2’, ‘ಎಫ್3’ ನಂತಹ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.

Source link

ಸಿಇಟಿ ಪರೀಕ್ಷೆ: ಜನಿವಾರ ತೆಗೆಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಒತ್ತಾಯ – Kannada News | Karnataka CET Row: Brahmin Mahasabha Demands Grace Marks for Students Forced to Remove Sacred Thread Janivara

ಜನಿವಾರ ವಿವಾದ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಸಿಇಟಿ (KCET) ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ (Janivara) ತೆಗೆಸಿರುವುದು ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಲು ‘ಗ್ರೇಸ್ ಮಾರ್ಕ್ಸ್’ ನೀಡಬೇಕು ಅಥವಾ ‘ಮರು ಪರೀಕ್ಷೆ’ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಿಇಟಿ ಪರೀಕ್ಷೆಯ ಮೊದಲ ದಿನವೇ ಭೌತಶಾಸ್ತ್ರ (Physics) ಪರೀಕ್ಷೆಯ ವೇಳೆ ಹಲವು ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಲಾಗಿದೆ. ಈ ಕೃತ್ಯವು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದೆ ಎಂದು ಬ್ರಾಹ್ಮಣ ಮಹಾಸಭಾ ಹೇಳಿದೆ.

ಜನಿವಾರ ತೆಗೆಸಿದ ಆಘಾತ ಮತ್ತು ಒತ್ತಡದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ. ಇದು ಅವರ ರ್ಯಾಂಕಿಂಗ್ ಮೇಲೆ ಹೊಡೆತ ಬೀಳಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮನವಿ ಸಲ್ಲಿಸಲಾಗಿದೆ.

ಶಾಸಕ ಸುರೇಶ್ ಕುಮಾರ್ ಬೇಸರ

ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ. ಜನಿವಾರ ಕತ್ತರಿಸುವುದು, ಕಿವಿಯೋಲೆ ತೆಗೆಸುವುದು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುತ್ತದೆ. ಕಳೆದ ವರ್ಷವೇ ಹೈಕೋರ್ಟ್‌ನಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಭರವಸೆ ನೀಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಜನಿವಾರದ ಬಗ್ಗೆ ಸ್ಪಷ್ಟವಾದ ಎಸ್‌ಒಪಿ (SOP) ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಗೆ ಸಜ್ಜಾದ ಬ್ರಾಹ್ಮಣ ಮಹಾಸಂಘ

ಜನಿವಾರ ತೆಗೆಸಿರುವುದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಹಕ್ಕು ಮತ್ತು ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ನಾಳೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಕೃಪಾಂಕ (Grace Marks) ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ! – Kannada News | Karnataka Weather Forecast: Heatwave in Coastal and Thunderstorm in North interior Karnataka

ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ!
Image Credit source: MediaForge AI

ಬೆಂಗಳೂರು, ಏಪ್ರಿಲ್ 27: ಇಂದು ಕರಾವಳಿಯಲ್ಲಿ ಎಂದಿನಂತೆ ಉಷ್ಣ ಅಲೆಯ ಆರ್ಭಟವಿರಲಿದ್ದು (Karnataka Weather)  ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆ ಸೇರಿದಂತೆ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣ ಅಲೆ

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ಅಧ್ಯಕ್ಷರ ಮೇಲೆ ಭೀಕರ ದಾಳಿಗೆ ಸ್ಕೆಚ್: ‘ಪ್ರಣಾಳಿಕೆ’ ಮೂಲಕ ಹೊರಬಿತ್ತು ಭಯಾನಕ ಸಂಚು – Kannada News | Trump Assassination Plot Foiled: White House Attack Plan Revealed in Manifesto

ವಾಷಿಂಗ್ಟನ್,ಏಪ್ರಿಲ್ 27: ಶ್ವೇತಭವನದ ವರದಿಗಾರರ ಭೋಜನಕೂಟ ನಡೆಯುತ್ತಿದ್ದ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸೇರಿದಂತೆ 2,500ಕ್ಕೂ ಹೆಚ್ಚು ಗಣ್ಯರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪಿಯನ್ನು ಭದ್ರತಾ ಪಡೆಗಳು ಬಂಧಿಸಿವೆ. ಕ್ಯಾಲಿಫೋರ್ನಿಯಾ ಮೂಲದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂಬಾತನೇ ಈ ಸಂಚಿನ ರೂವಾರಿ. ದಾಳಿ ನಡೆಸುವ ಕೇವಲ 10 ನಿಮಿಷಗಳ ಮೊದಲು ಆರೋಪಿ ಅಲೆನ್ ತನ್ನ ಕುಟುಂಬದವರಿಗೆ ಟ್ರಂಪ್ ವಿರೋಧಿ ಪ್ರಣಾಳಿಕೆ ಎಂಬ ದಾಖಲೆಯನ್ನು ಕಳುಹಿಸಿದ್ದ. ಇದರಲ್ಲಿ ಆತ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತದ ಹಿರಿಯ ಅಧಿಕಾರಿಗಳನ್ನು ಕ್ರಮಾನುಗತವಾಗಿ ಹತ್ಯೆ ಮಾಡುವ ಪಟ್ಟಿಯನ್ನು ಸಿದ್ಧಪಡಿಸಿದ್ದ. ಈ ದಾಖಲೆಯನ್ನು ಕಂಡ ತಕ್ಷಣವೇ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಅಲೆನ್ ತನ್ನ ಪ್ರಣಾಳಿಕೆಯಲ್ಲಿ ಅತ್ಯಂತ ಕ್ರೂರವಾದ ಮಾತುಗಳನ್ನು ಬರೆದಿದ್ದಾನೆ. ನಾನು ಹೋಟೆಲ್‌ಗೆ ಹಲವಾರು ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದ್ದೀನಿ. ನನ್ನ ಗುರಿಯನ್ನು ತಲುಪಲು ನಾನು ಯಾರನ್ನು ಬೇಕಾದರೂ ಕೊಲ್ಲಲು ಸಿದ್ಧನಿದ್ದೇನೆ ಎಂದು ಅದರಲ್ಲಿ ಬರೆದಿದ್ದ.

ದಾಳಿಕೋರ ಅಲೆನ್ ಹೋಟೆಲ್‌ನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಲೇವಡಿ ಮಾಡಿದ್ದಾನೆ. ನಾನು ಶಸ್ತ್ರಾಸ್ತ್ರಗಳೊಂದಿಗೆ ಒಳಗೆ ಬಂದಾಗ ಯಾರೂ ನನ್ನನ್ನು ಪ್ರಶ್ನಿಸಲಿಲ್ಲ. ಭದ್ರತಾ ಸಿಬ್ಬಂದಿಯ ಗಮನವೆಲ್ಲಾ ಹೊರಗಿನ ಪ್ರತಿಭಟನಾಕಾರರ ಮೇಲಿತ್ತೇ ಹೊರತು ಒಳಗಿರುವವರ ಮೇಲಲ್ಲ ಎಂದು ಆತ ತನ್ನ ಪ್ರಣಾಳಿಕೆಯಲ್ಲಿ ಬರೆದಿದ್ದ. ಒಂದು ದಿನ ಮುಂಚಿತವಾಗಿ ಹೋಟೆಲ್‌ಗೆ ಪ್ರವೇಶಿಸಿ ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಟ್ರಂಪ್ ಮತ್ತು ಅವರ ತಂಡವನ್ನು ಪಟ್ಟಿಯಲ್ಲಿ ಸೇರಿಸಿದ್ದ ಆತ, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಅವರನ್ನು ಮಾತ್ರ ಗುರಿಯಿಂದ ಹೊರಗಿಟ್ಟಿದ್ದ.

ಮತ್ತಷ್ಟು ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ

ಆರೋಪಿಯ ಸಹೋದರ ಕನೆಕ್ಟಿಕಟ್ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸೀಕ್ರೆಟ್ ಸರ್ವಿಸ್ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಅಧ್ಯಕ್ಷರು ಕುಳಿತಿದ್ದ ಬಾಲ್ ರೂಂ ತಲುಪುವ ಮೊದಲೇ ಭದ್ರತಾ ತಪಾಸಣಾ ಕೇಂದ್ರದಲ್ಲಿ ಅಲೆನ್‌ನನ್ನು ಸೆರೆಹಿಡಿಯಲಾಯಿತು. ಅದೃಷ್ಟವಶಾತ್ ಒಬ್ಬ ವ್ಯಕ್ತಿಯ ಕ್ರೂರ ಮನಸ್ಥಿತಿಯ ಫಲವಾಗಬೇಕಿದ್ದ ಭೀಕರ ದುರಂತವು ಸಮಯಕ್ಕೆ ಸರಿಯಾದ ಮಾಹಿತಿಯಿಂದ ತಪ್ಪಿದೆ. ಅಮೆರಿಕದ ಉನ್ನತ ನಾಯಕತ್ವದ ಭದ್ರತೆಯ ಬಗ್ಗೆ ಇದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಎಂಗೇಜ್​ಮೆಂಟ್ ಆದ ಮೇಲೆ ಮದುವೆ ಮುರಿದ್ರೆ ಏನರ್ಥ! – Kannada News | Spiritual: consequences of Breaking Engagement

ಎಂಗೇಜ್​ಮೆಂಟ್ ಆಗಿ ಮದುವೆಯಾಗದಿದ್ರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ನಾತನ ಸಂಸ್ಕೃತಿಯಲ್ಲಿ ವಿವಾಹವನ್ನು ಕೇವಲ ಎರಡು ವ್ಯಕ್ತಿಗಳ ನಡುವಿನ ಒಪ್ಪಂದವಾಗಿ ನೋಡಲಾಗುವುದಿಲ್ಲ, ಬದಲಿಗೆ ಎರಡು ಕುಟುಂಬಗಳನ್ನು, ಆತ್ಮಗಳನ್ನು ಬೆಸೆಯುವ ಪವಿತ್ರ ಸಂಸ್ಕಾರವಾಗಿ ಪರಿಗಣಿಸಲಾಗುತ್ತದೆ. ವಿವಾಹದ ಮೊದಲ ಹೆಜ್ಜೆಯಾದ ನಿಶ್ಚಿತಾರ್ಥ ಅಥವಾ ನಿಶ್ಚಯ ತಾಂಬೂಲಕ್ಕೆ ಅತೀವ ಮಹತ್ವವಿದೆ. ಈ ಸಮಯದಲ್ಲಿ ಭಗವಂತನನ್ನು, ಸರ್ವ ದೇವತೆಗಳನ್ನು, ಮಂಗಳಕರ ವಸ್ತುಗಳಾದ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಅರಿಶಿನ, ಕುಂಕುಮಗಳನ್ನು ಸಾಕ್ಷಿಯಾಗಿಟ್ಟು ವಾಗ್ದಾನ ಮಾಡಲಾಗುತ್ತದೆ. ಒಮ್ಮೆ ನಿಶ್ಚಯ ತಾಂಬೂಲವನ್ನು ಸ್ವೀಕರಿಸಿ, ನಂತರ ವಿವಿಧ ಕಾರಣಗಳಿಂದ ಅದನ್ನು ತಿರಸ್ಕರಿಸಿದರೆ, ಅದು ಮಹಾಪಾಪ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ದುಂದು ವೆಚ್ಚ ಮಾಡಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 27, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ದಶಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ಡಾ. ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೆ ನಿರ್ದಿಷ್ಟ ಗ್ರಹಗಳ ಶುಭಫಲ, ಆದಾಯ, ವ್ಯವಹಾರ, ಕೌಟುಂಬಿಕ ಜೀವನ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶನ ನೀಡಲಾಗಿದೆ. ರೈತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರಿಗೆ ಇಂದಿನ ದಿನದ ವಿಶೇಷತೆಗಳನ್ನು ತಿಳಿಸಲಾಗಿದೆ.

 

 

 

Source link

ಜಗತ್ತಿನ 100 ಬಿಸಿ ನಗರಗಳಲ್ಲಿ 95 ಭಾರತದ್ದೇ! ‘ಹಾಟ್ ಸ್ಪಾಟ್’ ಆದ ಕರ್ನಾಟಕದ 3 ಜಿಲ್ಲೆಗಳು – Kannada News | Global Heatwave Crisis: 95 of Top 100 Hottest Cities in India; Raichur, Bagalkot, and Yadgir Enter the List

ಬೆಂಗಳೂರು, ಏಪ್ರಿಲ್ 27: ಕರ್ನಾಟಕವೂ ಒಳಗೊಂಡಂತೆ ಭಾರತ ಈಗ ಅಕ್ಷರಶಃ ಕೆಂಡದಂತಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಬಿಸಿಲು ಇರುವ 100 ನಗರಗಳ ಪೈಕಿ 95 ನಗರಗಳು ಭಾರತದಲ್ಲೇ ಇರುವುದು ಈಗ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅಂದಹಾಗೆ, ಈ 95 ರಲ್ಲಿ ಕರ್ನಾಟಕದಲ್ಲೂ (Karnataka) 3 ಹಾಟ್​ಸ್ಪಾಟ್​ಗಳಿವೆ. ರಿಯಲ್ ಟೈಮ್ ಗ್ಲೋಬಲ್ ಟೆಂಪರೇಚರ್ (Real-time Global Temperature) ಅಂಕಿಅಂಶಗಳ ಪ್ರಕಾರ, ಏಪ್ರಿಲ್ ಅಂತ್ಯಕ್ಕೆ ಭಾರತವು ಜಗತ್ತಿನ ‘ಹಾಟ್ ಸೆಂಟರ್’ ಆಗಿ ಬದಲಾಗಿದೆ.

ಕರ್ನಾಟಕದ ಮೂರು ಜಿಲ್ಲೆಗಳಿಗೆ ಸ್ಥಾನ

ವಿಶ್ವದ ಅತ್ಯಂತ ಬಿಸಿಯಾದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸ್ಥಾನ ಪಡೆದಿದೆ. ಇದು ರಾಜ್ಯದಲ್ಲಿ ತಾಪಮಾನ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ:

  • ರಾಯಚೂರು: ಜಗತ್ತಿನಲ್ಲೇ 54ನೇ ಸ್ಥಾನ
  • ಬಾಗಲಕೋಟೆ: ಜಗತ್ತಿನಲ್ಲೇ 74ನೇ ಸ್ಥಾನ
  • ಯಾದಗಿರಿ: ಜಗತ್ತಿನಲ್ಲೇ 88ನೇ ಸ್ಥಾನ

ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಸೂರ್ಯನ ಪ್ರತಾಪ ಅತಿಯಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

ಕಾದ ಕೆಂಡವಾದ ಉತ್ತರ ಭಾರತ

ದೆಹಲಿಯಲ್ಲಿ ಭಾನುವಾರ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲ ಅಲೆಯ ತೀವ್ರತೆ (Heatwave) ಹೆಚ್ಚಾಗುತ್ತಿರುವ ಕಾರಣ ಹವಾಮಾನ ಇಲಾಖೆ ದೆಹಲಿಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ. ಕೇವಲ ಬಿಸಿಲು ಮಾತ್ರವಲ್ಲದೆ, ವಾಯು ಗುಣಮಟ್ಟವೂ ಕಳಪೆ ಮಟ್ಟಕ್ಕೆ ಕುಸಿದಿರುವುದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ದೇಶಾದ್ಯಂತ ಉಷ್ಣ ಅಲೆಯ ತಾಂಡವ

ದೆಹಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಲಕ್ನೋ, ಮಹಾರಾಷ್ಟ್ರದ ನಾಗ್ಪುರ ಮತ್ತು ಅಕೋಲಾ, ಒಡಿಶಾದ ಭುವನೇಶ್ವರ ಹಾಗೂ ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಹಲವು ನಗರಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 4 ರಿಂದ 5 ಡಿಗ್ರಿ ಹೆಚ್ಚಾಗಿದೆ. ಡಜನ್‌ಗಟ್ಟಲೆ ನಗರಗಳಲ್ಲಿ ತಾಪಮಾನ 40ರ ಗಡಿ ದಾಟಿದೆ. ಸಾರ್ವಜನಿಕರು ಅನಗತ್ಯವಾಗಿ ಮಧ್ಯಾಹ್ನ ವೇಳೆ ಹೊರಬರದಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವಂತೆ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಮತ್ತೊಂದು ಶಾಕ್: ಪ್ರತಿದಿನ ರಸ್ತೆಗೆ ಇಳಿಯುತ್ತಿವೆ 2866 ಹೊಸ ವಾಹನಗಳು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 27 April: ಈ ರಾಶಿಯವರಿಂದು ಜಾಗೃತರಾಗಿರಿ; ಅಪಹಾಸ್ಯಕ್ಕೆ ಒಳಗಾಗಬೇಕಾದೀತು

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದಶಮೀ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶೂಲಿ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:14, ಯಮಗಂಡ ಕಾಲ 10:48 – 12:22, ಗುಳಿಕ ಕಾಲ 13:56 – 15:30.

ಮೇಷ ರಾಶಿ: ನೀವು ಎಲ್ಲರಿಗಿಂತ ಉತ್ತಮವಾದ ಮಾರ್ಗದ ಅನ್ವೇಷಣೆಯಲ್ಲಿ ಇರುವಿರಿ. ಮುಖ್ಯಸ್ಥರನ್ನು ಖುಷಿಪಡಿಸಲು ಧಾರಾಳ ಖರ್ಚು ಮಾಡಬಹುದು. ಹಳೆಯ ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯ ವ್ಯವಸ್ಥೆಯ ದಾರಿ ಉಪಯುಕ್ತವಾಗಬಹುದು. ಇತರರ ಅಭಿಪ್ರಾಯವನ್ನೂ ಪರಿಗಣಿಸಿ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.

ವೃಷಭ ರಾಶಿ: ಇಂದು ತಂದೆಯ ಅನಾರೋಗ್ಯದ ಬಗ್ಗೆ ನಿಮ್ಮ ಅಧಿಕಾರದ ಗರ್ವವನ್ನು ಪಕ್ಕಕ್ಕಿರಿಸಿ. ಸಂಬಂಧ ಬಲವಾಗಿಸಲು ಪ್ರೀತಿಯವರಿಗೆ ಸಮಯ ಮೀಸಲಿಡಿ. ಕೆಲಸದ ಒತ್ತಡದಲ್ಲಿ ಸಹಜವಾಗಿ ದೂಡಲ್ಪಡುವಿರಿ. ಸಮಾರಂಭಗಳಿಗೆ ಆಹ್ವಾನ ಸಿಕ್ಕಿ ಸಂತಸ. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ‌ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ ರಾಶಿ: ನಿಮಗೆ ಎಂತಹ ಆರೋಪವನ್ನೂ ಗೆಲ್ಲುವುದೂ ಗೊತ್ತಾಗಲಿದೆ. ಉದ್ಯೋಗದಲ್ಲಿ ತೊಂದರೆ ಬಂದರೂ ನಿರೀಕ್ಷೆಯ ಬೆಳಕು ಕಾಣುವಿರಿ. ಸುತ್ತಲಿರುವ ಜನರಿಂದ ದೂರವಿರಿ, ಅವರ ಮಾತುಗಳಿಗೆ ಕಿವಿಗೊಡಬೇಡಿ. ಮೋಸದ ಆಟದಿಂದ ಎಚ್ಚರಿಕೆಯಿಂದಿರಿ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ.

ಕರ್ಕಾಟಕ ರಾಶಿ: ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಹಳೆಯ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಆಗಬಹುದು. ಈ ಬದಲಾವಣೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಅದೃಷ್ಟ ಸಹಾಯ ಮಾಡಲಿದೆ. ವಿಘ್ನನಿವಾರಕನಿಗೆ ನಮಸಿ ಹೊಸ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು.

ಸಿಂಹ ರಾಶಿ: ಆಪ್ತರ ಜೊತೆ ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ನಿಮ್ಮ ಕಷ್ಟಕ್ಕೆ ಆದವರೇ ಜೊತೆಯಲ್ಲಿ ಇರುವರು. ಸಂಬಂಧಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇತರರ ನಂಬಿಕೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ.

ಕನ್ಯಾ ರಾಶಿ: ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಹಣದ ವ್ಯವಹಾರ ಶುಭವಾಗುವ ದಿನ. ನಿಮ್ಮ ಮಾತುಗಳು ಗುಣಮಟ್ಟದ್ದಾಗಿರಲಿ.‌ ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮ ನಿಖರತೆ ನೀಡುತ್ತದೆ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ.

ತುಲಾ ರಾಶಿ: ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಂದ ಕೊಡುಗೆಯಾಗಿ ಸಿಗಲಿದೆ. ನಿಮ್ಮ ಸುತ್ತಮುತ್ತಲಿನವರ ಪ್ರಗತಿ ನಿಮಗೆ ಆಹ್ಲಾದವಾಗದು. ನಿಮ್ಮ ಕಲ್ಪನೆಯ ಪ್ರಪಂಚದಿಂದ ಹೊರಬರಲು ನಿಮಗೆ ನುರಿತ ವ್ಯಕ್ತಿಯ ಮಾರ್ಗದರ್ಶನ ಅಗತ್ಯವಿದೆ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು.

ವೃಶ್ಚಿಕ ರಾಶಿ: ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ರಚನಾತ್ಮಕ ನಿಮ್ಮ ಶೈಲಿ ಪ್ರೇರಣೆಯುಂಟುಮಾಡುತ್ತದೆ. ಹೊಸ ಯೋಜನೆಗಳಲ್ಲಿ ಶಕ್ತಿ ಹೂಡಲು ಇದು ಸೂಕ್ತ ಸಮಯ. ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮೆ ಕೇಳಿ. ಸತಿ ತಪ್ಪುಗಳ ಗೊಂದಲಕ್ಕೆ ಸಿಲುಕುವಿರಿ. ಇದು ನಿಮಗೆ ಸಮಾಧಾನ ಮತ್ತು ಸ್ವೀಕಾರ ನೀಡುತ್ತದೆ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು.

ಧನು ರಾಶಿ: ಮಕ್ಕಳಿಂದ ಬಂದ ಅಶುಭವಾರ್ತೆಯನ್ನು ಸಹಿಸಲಾಗದು. ನಿಮ್ಮ ನಿಷ್ಠೆಯಿಂದ ಬಂಧುಗಳು ಬೆಂಬಲ ನೀಡುತ್ತಾರೆ. ಅವರಿಂದ ಪ್ರೀತಿ ಹಾಗೂ ಸಹಾಯ ದೊರೆಯಲಿದೆ. ನಿಜವಾಗಿಯೂ ನೀವು ಬೆಲೆಬಾಳುವವರಾಗಿದ್ದೀರಿ ಎಂಬ ಅನುಭವ ಬರುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು.

ಮಕರ ರಾಶಿ: ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಕೌಶಲ್ಯಕ್ಕೆ ಯೋಗ್ಯವಾದ ಸ್ಥಳ ಸಿಗುವುದು. ಗಡುವಿಗೆ ಮುನ್ನ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ.

ಕುಂಭ ರಾಶಿ: ಕಳೆದ ವಸ್ತುಗಳ ಬಗ್ಗೆ ಅಧಿಕ ಚಿಂತೆ ಉಂಟಾಗಲಿದೆ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಶಸ್ಸಿಲ್ಲದ ಯೋಜನೆಯ ನೆನೆಪು ದಣಿವನ್ನು ಉಂಟುಮಾಡಬಹುದು. ನಿಮ್ಮ ಶಕ್ತಿಯನ್ನು ಹೊಸದಾಗಿ ಪ್ರೇರಣೆಯಾದ ಕೆಲಸಗಳಿಗೆ ತಿರುಗಿಸಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ.

ಮೀನ ರಾಶಿ: ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ಉದ್ಯೋಗದಲ್ಲಿ ಅಡಚಣೆಗಳಿರಬಹುದು, ಆದರೆ ಇವು ತಾತ್ಕಾಲಿಕ. ನಿಮ್ಮ ಸುತ್ತಲಿರುವ ಜನರಿಂದ ದೂರವಿರುವುದು ಒಳಿತು. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಇಂದು ಭೂಮಿಯ ಮಾರಾಟದಿಂದ ಕಲಹವಾಗುವುದು.

ಲೋಹಿತ ಹೆಬ್ಬಾರ್ – 8762924271 (what’s app only)

Source link