Category Archives: Blog

Your blog category

SMAT 2025: 33 ಸಿಕ್ಸರ್‌, 516 ರನ್..! ಇಶಾನ್ ಕಿಶನ್ ಭಾರತ ತಂಡಕ್ಕೆ ಎಂಟ್ರಿ ಯಾವಾಗ? – Kannada News | Ishan Kishan’s Record Century in Syed Mushtaq Ali Final: Is India Comeback Near?

ಜಾರ್ಖಂಡ್ ನಾಯಕ ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಕೇವಲ 45 ಎಸೆತಗಳಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ತಂಡವನ್ನು ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಶ್ರೇಯಸ್ ಅಯ್ಯರ್ ಕರ್ನಾಟಕ ವಿರುದ್ಧ ಅಜೇಯ 98 ರನ್ ಗಳಿಸುವ ಮೂಲಕ ನಾಯಕನಾಗಿ ಫೈನಲ್‌ನಲ್ಲಿ ಅತ್ಯಧಿಕ ಇನ್ನಿಂಗ್ಸ್‌ಗಳ ದಾಖಲೆಯನ್ನು ಹೊಂದಿದ್ದರು. ಕಿಶನ್ ಶತಕದ ಸಹಾಯದಿಂದ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡವು 262 ರನ್‌ಗಳ ದಾಖಲೆಯ ಸ್ಕೋರ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹರಿಯಾಣ ತಂಡವು ಕೇವಲ 193 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು.

ಈ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಶಾನ್ ಕಿಶನ್ ಬ್ಯಾಟ್ ಅಬ್ಬರಿಸಿದೆ. ಇಡೀ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಿಶನ್ ಬರೋಬ್ಬರಿ 516 ರನ್ ಕಲೆಹಾಕಿದರು. ಇದರಲ್ಲಿ ಎರಡು ಶತಕಗಳು ಸೇರಿವೆ. ಸರಿಸುಮಾರು 200 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಕಿಶನ್, 64.5 ರ ಸರಾಸರಿಯಲ್ಲಿ ಒಟ್ಟಾರೆಯಾಗಿ 33 ಸಿಕ್ಸರ್‌ಗಳು ಹಾಗೂ 50 ಕ್ಕೂ ಹೆಚ್ಚು ಬೌಂಡರಿಗಳನ್ನು ಬಾರಿಸಿದರು.

ಇಶಾನ್ ಕಿಶನ್ ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಅವರು ಕೊನೆಯ ಬಾರಿಗೆ ನವೆಂಬರ್ 28 ರಂದು ಗುವಾಹಟಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ ತಂಡದ ಪರ ಆಡಿದ್ದರು. ಅಂದಿನಿಂದ ತಂಡದಿಂದ ಹೊರಗಿದ್ದಾರೆ. 2023 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಿದ್ದ ಕಿಶನ್ ಅಂದಿನಿಂದ ತಂಡಕ್ಕೆ ಆಯ್ಕೆಯಾಗಿಲ್ಲ. ಈಗ ಇಶಾನ್ ಕಿಶನ್ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆದಾರರು ಅವರನ್ನು ಯಾವಾಗ ತಂಡಕ್ಕೆ ಮರಳಿ ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Yashasvi Jaiswal: ಯಶಸ್ವಿ ಜೈಸ್ವಾಲ್ ಆರೋಗ್ಯ ಹೇಗಿದೆ? ಹೊರಬಿತ್ತು ಬಿಗ್​ ಅಪ್​ಡೇಟ್

Source link

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಸಿಎಂ ನಿತೀಶ್ ಕುಮಾರ್​​ಗೆ ಪಾಕಿಸ್ತಾನದ ಗ್ಯಾಂಗ್​​ಸ್ಟರ್​​ನಿಂದ ಬೆದರಿಕೆ – Kannada News | Pakistan based gangster threatens Bihar CM Nitish Kumar for pulling down woman doctor’s hijab

ಪಾಟ್ನಾ, ಡಿಸೆಂಬರ್ 19: ಪ್ರಧಾನಿ ನರೇಂದ್ರ ಮೋದಿಯವರ (PM Modi) ಜೊತೆ ಬಹಳ ಆಪ್ತವಾಗಿ ಗುರುತಿಸಿಕೊಂಡಿರುವ, ಬಿಹಾರದಲ್ಲಿ ದಾಖಲೆಯ ಅವಧಿಗೆ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೇರಿರುವ ನಿತೀಶ್ ಕುಮಾರ್ (Nitish Kumar) ವಿವಾದದಲ್ಲಿ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯುವ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆಯುವ ಮೂಲಕ ಸಾರ್ವಜನಿಕ ವೇದಿಕೆಯಲ್ಲೇ ಆ ಮಹಿಳೆಗೆ ಮುಜುಗರ ತಂದಿದ್ದರು. ಈ ಘಟನೆಗೆ ವಿಪಕ್ಷವಾದ ಆರ್​​ಜೆಡಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇದುವರೆಗೂ ನಿತೀಶ್ ಕುಮಾರ್ ಈ ವಿಷಯದಲ್ಲಿ ಕ್ಷಮಾಪಣೆ ಕೇಳಿಲ್ಲ, ಸ್ಪಷ್ಟನೆಯನ್ನೂ ನೀಡಿಲ್ಲ.

ಇದೀಗ ಈ ಹಿಜಾಬ್ ವಿವಾದ ಪಾಕಿಸ್ತಾನದ ಅಂಗಳವನ್ನೂ ತಲುಪಿದೆ. ಮಹಿಳೆಯ ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.

ಇದನ್ನೂ ಓದಿ: Video: ಇದೇನ್ ಮಾಡಿದ್ರಿ? ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್

ಸರ್ಕಾರಿ ಸಮಾರಂಭವೊಂದರಲ್ಲಿ ಸಿಎಂ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಕಿತ್ತುಹಾಕುತ್ತಿರುವ ವಿಡಿಯೋ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ನಿತೀಶ್ ಕುಮಾರ್ ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯೆಗೆ ನೇಮಕಾತಿ ಪತ್ರವನ್ನು ನೀಡುವಾಗ ಅವರ ಮುಖದಿಂದ ‘ಹಿಜಾಬ್’ ಅನ್ನು ಎಳೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನದಿಂದ ಬೆದರಿಕೆ ಬಂದಿದೆ. ಹೀಗಾಗಿ, ಪಾಟ್ನಾ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ನಿತೀಶ್ ಕುಮಾರ್ ಅವರಿಗೆ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಎಂಬುವವರು ಇನ್‌ಸ್ಟಾಗ್ರಾಮ್​ನಲ್ಲಿ ಬಿಹಾರದ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Nitish Kumar Swearing-In: ಹತ್ತನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ, ಪ್ರಧಾನಿ ಮೋದಿ ಭಾಗಿ

ಹಿಜಾಬ್​​ಗೆ ಕೈಹಾಕಿದ ನೀವು ಅದಕ್ಕೆ ಸೂಕ್ತವಾದ ಬೆಲೆ ತೆರಬೇಕಾಗುತ್ತದೆ. ಮೊದಲೇ ಎಚ್ಚರಿಕೆ ನೀಡಲಿಲ್ಲ ಎನ್ನಬೇಡಿ. ಅದಕ್ಕಾಗಿಯೇ ಮೊದಲೇ ಹೇಳುತ್ತಿದ್ದೇನೆ. ಹಿಜಾಬ್ ಎಳೆದ ಆ ವ್ಯಕ್ತಿಗೆ ಆ ಮುಸ್ಲಿಂ ಯುವತಿಯ ಬಳಿ ಕ್ಷಮೆ ಯಾಚಿಸಲು ಇನ್ನೂ ಸಮಯವಿದೆ. ಮುಂದೆ ಏನಾದರೂ ತೊಂದರೆಯಾದರೆ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಬೇಡಿ ಎಂದು ಆ ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಕೊರಗಜ್ಜ’ ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್? ಕುತೂಹಲ ಮೂಡಿಸಿದ ಚಿತ್ರತಂಡ – Kannada News | Koragajja movie team to release 2nd song by Shreya Ghoshal and Armaan Malik

ಈಗಾಗಲೇ ‘ಕೊರಗಜ್ಜ’ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ. ಸುಧೀರ್ ಅತ್ತಾವರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಿಂದ 2ನೇ ಹಾಡಿನ ಬಿಡುಗಡೆಗೆ ತಯಾರಿ ನಡೆದಿದೆ. ಈ ಹಾಡನ್ನು ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಅವರು ಹಾಡಿದ್ದಾರೆ. ಇತ್ತೀಚೆಗೆ ಹಾಡಿನ ಸಾಹಿತ್ಯವನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಈಗ ಈ ಹಾಡಿನ‌ಲ್ಲಿ ಬರುವ ಮುಗ್ಧ ಪ್ರೇಮಿಗಳ ಪೋಸ್ಟರ್​ಗಳನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ‘ಕೊರಗಜ್ಜ’ (Koragajja) ಚಿತ್ರಕ್ಕೆ ಹೊಸ ಆಯಾಮ‌‌ ಇರುವುದನ್ನು ತೋರಿಸಿದೆ.

‘ಕೊರಗಜ್ಜ’ ಸಿನಿಮಾದಲ್ಲಿ ಪ್ರಣಯದ ಸನ್ನಿವೇಶವೇ ಎಂದು ಕೆಲವರು ಮೂಗು ಮುರಿಯಬಹುದು. ಸಿನಿಮಾ ಬಿಡುಗಡೆಗೊಂಡ ನಂತರ ಎಲ್ಲದಕ್ಕೂ ಉತ್ತರ ದೊರಕಲಿದೆ ಎಂದು ಚಿತ್ರತಂಡ ಹೇಳಿದೆ. ತ್ರಿವಿಕ್ರಮ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿದ್ಯಾಧರ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ‘ತ್ರಿವಿಕ್ರಮ‌ ಸಿನಿಮಾಸ್’ ಮತ್ತು ‘ಸಕ್ಸಸ್ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಕೊರಗಜ್ಜ’ ಸಿನಿಮಾ ಮೂಡಿಬರುತ್ತಿದೆ.

ಅತೀ ವಿನೂತನ ಸ್ಟ್ರಿಂಗ್ಸ್ ಮತ್ತು ವಾದ್ಯಗಳಿಂದ ಟ್ಯೂನ್ ಮಾಡಿರುವ ಎರಡನೆಯ ಹಾಡು ಹೊಸ ಹವಾ ಎಬ್ಬಿಸಲಿದೆ ಎಂಬ ನಂಬಿಕೆ ಚಿತ್ರತಂಡಕ್ಕೆ ಇದೆ. ಈ ಹಾಡು ಇನ್ನೇನು ಬಿಡುಗಡೆ ಆಗುತ್ತಿದೆ ಎನ್ನುವಾಗ ಚಿತ್ರತಂಡ ಮತ್ತೊಂದು ವಿಷಯ ಹಂಚಿಕೊಂಡಿದೆ. ಅಂತಾರಾಷ್ಟ್ರೀಯ ಫುಟ್ ಬಾಲ್ ತಾರೆ ಅರ್ಜಂಟೈನಾದ ಲಿಯೊನಲ್ ಮೆಸ್ಸಿ ಅವರ ಇತ್ತೀಚಿನ ಭಾರತ ಭೇಟಿಯ ಪ್ರಯಕ್ತ ವಿನ್ಯಾಸಗೊಳಿಸಿದ್ದ ಎಐ ಹಾಡಿನ ತಂಡವೇ ಕೊರಗಜ್ಜ ಚಿತ್ರದ 2ನೇ ಹಾಡಿನ ಹಿಂದೆ ಕೆಲಸ ಮಾಡಿದೆ.

ಶ್ರೇಯ ಘೋಷಾಲ್ ಮತ್ತು ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದಿಂದ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಸುಧೀರ್ ಅತ್ತಾವರ್ ಅವರು ‘ಗಾಳಿ ಗಂಧ…ತೀಡಿ ತಂದ..’ ಎಂಬ ಸಾಹಿತ್ಯ ಬರೆದಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಅವರು ಸುಮಧುರವಾಗಿ ಕಂಪೋಸ್ ಮಾಡಿದ್ದಾರೆ.

ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾದಿಂದ ಬಿಡುಗಡೆ ಆಯ್ತು ‘ಗುಳಿಗ ಗುಳಿಗ ಘೋರ ಗುಳಿಗ’ ಹಾಡು

ಈ ಹಾಡಿನ ಟ್ರ್ಯಾಕ್ ಕೇಳಿದ ಕೂಡಲೇ ಶ್ರೇಯಾ ಘೋಷಾಲ್ ಅವರು ಹಾಡಲು ಒಪ್ಪಿಕೊಂಡರು ಎಂದು ಚಿತ್ರತಂಡ ಹೇಳಿದೆ. ‘ಕೊರಗಜ್ಜ’ ಸಿನಿಮಾದ ಶೂಟಿಂಗ್ ವೇಳೆ ಚಿತ್ರತಂಡಕ್ಕೆ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಅವುಗಳನ್ನೆಲ್ಲ ನಿವಾರಿಸಿಕೊಂಡು ಚಿತ್ರತಂಡ ಇಲ್ಲಿಯತನಕ ಬಂದಿದೆ. ಭವ್ಯ, ಕಬೀರ್ ಬೇಡಿ, ಶ್ರುತಿ ಮುಂತಾದವರು ‘ಕೊರಗಜ್ಜ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಟವಾಡುತ್ತಿದ್ದ ಬಾಲಕನನ್ನು ಫುಟ್‌ಬಾಲ್‌ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು ಬಯಲು – Kannada News | A man kicked to child In Bengaluru: Reveled Accused gym trainer Ranjan Cases

ಬೆಂಗಳೂರು, (ಡಿಸೆಂಬರ್ 19): ಆಟವಾಡುತ್ತಿದ್ದ ಬಾಲಕನಿಗೆ ಕಾಲಿನಿಂದ ಒದ್ದು ದುರುಳನೊಬ್ಬ ಕ್ರೌರ್ಯ ಮರೆದಿರುವ ಘಟನೆ ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ನಡೆದಿದೆ. ತನ್ನ ಪಾಡಿಗೆ ತಾನು ಆಟವಾಡ್ತಿದ್ದ ಬಾಲಕನನ್ನ ರಂಜನ್​ ಎಂಬಾತ ಫುಟ್​ಬಾಲ್​ನಂತೆ ಒದ್ದು ವಿಕೃತಿ ಮೆರೆದಿದ್ದಾನೆ. ರಂಜನ್ ಹಲ್ಲೆಯಿಂದ ಬಾಲಕನ ಮೈ-ಕೈಗೆ ಗಾಯವಾಗಿದ್ದು, ಬಾಲಕನ ತಾಯಿ ದೂರು ಆಧರಿಸಿ ಬನಶಂಕರಿ ಪೊಲೀಸರು ಆರೋಪಿ ರಂಜನ್​ನನ್ನ ಬಂಧಿಸಿದ್ದಾರೆ.

ಹಲ್ಲೆ ಸಂಬಂಧ ಪೋಷಕರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರಸ್ತೆಯಲ್ಲಿನ ಸಿಸಿಟಿವಿ ಚೆಕ್ ಮಾಡಿದ್ದಾರೆ. ಈ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಗಳು ಬೆಳಕಿಗೆ ಬಂದಿವೆ. ಇಂತಹ ಕೃತ್ಯ ಇದೇ ಮೊದಲಲ್ಲ, ಈ ಹಿಂದೆಯೂ ಹಲವರಿಗೆ ಈ ಸೈಕೋ ರಂಜಿತ್‌ ಕಿರುಕುಳ ಕೊಟ್ಟಿದ್ದಾನೆ ಎಂಬುವುದು ತಿಳಿದುಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ನೋಡಿ; ಆಟವಾಡುತ್ತಿದ್ದ ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ

Source link

Bank of India Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ – Kannada News | Bank of India Recruitment 2025: 514 Credit Officer Jobs – Apply Now!

ಬ್ಯಾಂಕ್ ಆಫ್ ಇಂಡಿಯಾ ಬೃಹತ್​​ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತದ ತನ್ನ ಶಾಖೆಗಳಲ್ಲಿ ಜನರಲ್ ಬ್ಯಾಂಕಿಂಗ್ ಆಫೀಸರ್ ಸ್ಟ್ರೀಮ್‌ನಲ್ಲಿ ನಿಯಮಿತವಾಗಿ ಕ್ರೆಡಿಟ್ ಆಫೀಸರ್ (MMGS 3, MMGS 2, SMGS 4) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 20 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

  • ಕ್ರೆಡಿಟ್ ಆಫೀಸರ್ (SMGS 4) ಹುದ್ದೆಗಳು: 36
  • ಕ್ರೆಡಿಟ್ ಆಫೀಸರ್ (MMGS 3) ಹುದ್ದೆಗಳು: 60
  • ಕ್ರೆಡಿಟ್ ಆಫೀಸರ್ (MMGS 2) ಹುದ್ದೆಗಳು: 418

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ, ಎಂಬಿಎ, ಪಿಜಿಡಿಬಿಎಂ, ಪಿಜಿ, ಸಿಎ, ಸಿಎಂಎ ಪದವಿ ಪಡೆದಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜನವರಿ 5 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಶುಲ್ಕ ಮತ್ತು ಸಂಬಳದ ವಿವರ:

ಸಾಮಾನ್ಯ ಅಭ್ಯರ್ಥಿಗಳು 850 ರೂ., ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳು ತಲಾ 175 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಎಂಎಂಜಿಎಸ್ 2 ಹುದ್ದೆಗಳಿಗೆ ರೂ. 64,820 ರಿಂದ ರೂ. 93,960, ಎಸ್‌ಎಂಜಿಎಸ್ 4 ಹುದ್ದೆಗಳಿಗೆ ರೂ. 1,02,300 ರಿಂದ ರೂ. 1,20,940 ಮತ್ತು ಎಂಎಂಜಿಎಸ್ 3 ಹುದ್ದೆಗಳಿಗೆ ರೂ. 85,920 ರಿಂದ ರೂ. 1,05,280 ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:29 pm, Fri, 19 December 25

Source link

ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ – Kannada News | WEF annual meet at Davos, strong representation from India to include many CEOs, Chief Ministers, Union Ministers

ನವದೆಹಲಿ, ಡಿಸೆಂಬರ್ 19: ಮುಂದಿನ ತಿಂಗಳು ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ ಇರಲಿದೆ. ಪ್ರಬಲವಾದ ಒಂದು ದೊಡ್ಡ ನಿಯೋಗವೇ ಡಾವೋಸ್​ಗೆ ತೆರಳಲಿದೆ. 2026ರ ಜನವರಿ 18ರಿಂದ 24ರವರೆಗೆ ನಡೆಯಲಿರುವ ಡಬ್ಲ್ಯುಇಎಫ್ ಸಭೆಯಲ್ಲಿ ಬ್ಯುಸಿನೆಸ್ ಮತ್ತು ರಾಜಕೀಯ ಕ್ಷೇತ್ರದ ನಾಯಕರು ಭಾರತದ ನಿಯೋಗದಲ್ಲಿದ್ದಾರೆ.

ವರದಿ ಪ್ರಕಾರ, ಭಾರತದ ನಿಯೋಗದಲ್ಲಿ ನೂರಕ್ಕೂ ಹೆಚ್ಚು ಸಿಇಒಗಳು, ಮೂವರು ಹಿರಿಯ ಕೇಂದ್ರ ಸಚವರು, ಐದು ರಾಜ್ಯಗಳ ಮುಖ್ಯಮಂತ್ರಿಗಳು ಇರಲಿದ್ದಾರೆ. ಇವರ ಜೊತೆ ಹಿರಿಯ ಸರ್ಕಾರಿ ಅಧಿಕಾರಿಗಳು, ಎನ್​ಜಿಒ ಪ್ರತಿನಿಧಿಗಳು ಮೊದಲಾದವರು ಸ್ವಿಟ್ಜರ್​ಲ್ಯಾಂಡ್​ಗೆ ಹೋಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

ಉದ್ಯಮಿಗಳು ಮತ್ತು ಸಿಇಒಗಳ ಪೈಕಿ ರಿಲಾಯನ್ಸ್ ಛೇರ್ಮನ್ ಮುಕೇಶ್ ಅಂಬಾನಿ, ಟಾಟಾ ಗ್ರೂಪ್ ಛೇರ್ಮನ್ ಎನ್ ಚಂದ್ರಶೇಖರನ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮೊದಲಾದವರು ಇದ್ದಾರೆ.

ಇವರಷ್ಟೇ ಅಲ್ಲ, ಬಜಾಜ್ ಗ್ರೂಪ್​ನ ಸಂಜೀವ್ ಬಜಾಜ್, ಜುಬಿಲೆಂಟ್ ಭಾರ್ತಿಯಾ ಗ್ರೂಪ್​ನ ಹರಿ ಎಸ್ ಭಾರ್ತಿಯಾ, ಏರ್ಟೆಲ್​ನ ಸುನೀಲ್ ಭಾರ್ತಿ ಮಿಟ್ಟಲ್, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್, ವಿಪ್ರೋದ ರಿಷದ್ ಪ್ರೇಮ್​ಜಿ, ಎಸ್ಸಾರ್​ನ ಪ್ರಶಾಂತ್ ರುಯಾ, ಪೇಟಿಂನ ವಿಜಯ್ ಶೇಖರ್ ಶರ್ಮಾ, ರಿನ್ಯೂನ ಸುಮಂತ್ ಸಿನ್ಹಾ ಮೊದಲಾದವರೂ ಕೂಡ ಭಾರತದ ನಿಯೋಗದೊಂದಿಗೆ ಹೋಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ?

ಕೇಂದ್ರ ಸಚಿವರ ಪೈಕಿ ಪ್ರಲ್ಹಾದ್ ಜೋಷಿ, ಅಶ್ವಿನಿ ವೈಷ್ಣವ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ಡಾವೋಸ್ ಸಭೆಯಲ್ಲಿ ಇರಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಮತ್ತು ಮಧ್ಯಪ್ರದೇಶ ಮುಖ್ಯಂತ್ರಿ ಮೋಹನ್ ಯಾದವ್ ಅವರೂ ಭಾರತೀಯ ನಿಯೋಗದಲ್ಲಿದ್ದಾರೆ. ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದಲೂ ಪ್ರಾತಿನಿಧಿತ್ವ ಇರಲಿದೆ. ಬೇರೆ ರಾಜ್ಯಗಳೂ ಕೂಡ ಮುಖ್ಯಮಂತ್ರಿಯನ್ನೋ ಅಥವಾ ಹಣಕಾಸು ಸಚಿವರನ್ನೋ ಅಥವಾ ಇನ್ನಾರನ್ನಾದರೂ ಪ್ರತಿನಿಧಿಯನ್ನು ಕಳುಹಿಸಲು ಸ್ವತಂತ್ರವಾಗಿರುತ್ತವೆ. ಕರ್ನಾಟಕದಿಂದ ಇನ್ನೂ ನಿರ್ಧಾರ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಕರೇ ಮೇಸ್ತ್ರಿ, ವಿದ್ಯಾರ್ಥಿಗಳೇ ಕಾರ್ಮಿಕರು: ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು – Kannada News | Teachers Using Students to Swarna School building construction work In Hassan Video Goes Viral

ಹಾಸನ, (ಡಿಸೆಂಬರ್ 19): ಮಕ್ಕಳು ಓದಲು ಶಾಲೆಗೆ ಹೋಗುತ್ತಾರೆ. ಇನ್ನು ಪೋಷಕರು ಸಹ ಲಕ್ಷಾಂತರ ರೂಪಾಯಿ ಫೀ ಕಟ್ಟಿ ತಮ್ಮ ಮಕ್ಕಳು ನಾಲ್ಕು ಅಕ್ಷರ ಕಲಿತು ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಆದ್ರೆ, ಶಿಕ್ಷಕರೇ ಮಕ್ಕಳನ್ನ ಕಟ್ಟಡ ಕಾರ್ಮಿಕರಂತೆ ದುಡಿಸಿಕೊಂಡಿರುವ ಪ್ರಕರಣವೊಂದು ಹಾಸನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು…ಶಿಕ್ಷಕರು ಮೇಸ್ತ್ರಿಯಂತೆ ಮುಂದೆ ನಿಂತುಕೊಂಡು ಮಕ್ಕಳಿಂದ ಶಾಲೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸ್ವರ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ರೆಡಿಯಾಗಿ ಶಾಲೆಗೆ ಬಂದ ಮಕ್ಕಳಿಂದ ಗಾರೆ ಕೆಲಸ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಸಿಮೆಂಟ್ ಮತ್ತು ಇಟ್ಟಿಗೆ ಹೊತ್ತೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಇನ್ನು ಪುಟ್ಟ ಮಕ್ಕಳಿಂದ ಸಿಮೆಂಟ್ ಇಟ್ಟಿಗೆ ಸಾಗಿಸುವ ವಿಡಿಯೋ ನೋಡಿ ಸ್ಥಳೀಯರು ಆಕ್ರೋಶಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಿವುದು ವಿದ್ಯವಂತರಾಗಲೆಂದು. ನಾವೇ ಮಕ್ಕಳನ್ನು ಈ ರೀತಿಯ ಕೆಲಸ ಮಾಡಿಸಲ್ಲ.ಆದ್ರೆ, ಪ್ರಜ್ಞಾವಂತರಾಗಿರುವ ಶಿಕ್ಷಕರೇ ಮಕ್ಕಳಿಂದ ಸೀಮೆಂಟ್, ಇಟ್ಟಿಗೆ ಸಾಗಿಸುವ ಕೆಲಸ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಲಕ್ಷಾಂತರ ರೂಪಾಯಿ ಫೀ ಕಟ್ಟಿಸಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯ ಕಲಿಸುವ ಬದಲು ಗಾರೆ ಕೆಲಸ ಮಾಡಿಸುತ್ತಿರುವುದು ಎಷ್ಟು ಸರಿ?.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧ್ಯಾನ ಫ್ಯಾಷನ್ ಅಲ್ಲ, ಇಂದಿನ ಸಮಾಜದ ಅಗತ್ಯ; ಜಿನೀವಾದಲ್ಲಿ ರವಿಶಂಕರ್ ಗುರೂಜಿ ಅಭಿಮತ – Kannada News | Meditation Is Not Fashion It Is Need says Sri Sri Ravi Shankar Guruji in Geneva Ahead of World Meditation Day

ನವದೆಹಲಿ, ಡಿಸೆಂಬರ್ 19: ಡಿಸೆಂಬರ್ 21ರಂದು ಜಗತ್ತಿನಾದ್ಯಂತ ವಿಶ್ವ ಧ್ಯಾನ ದಿನವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಸಾಮಾಜಿಕ ಸ್ಥಿತಿಸ್ಥಾಪಕತ್ವ ಮತ್ತು ಅಂತಾರಾಷ್ಟ್ರೀಯ ಸಹಕಾರದ ಆಧಾರಸ್ತಂಭವಾಗಿ ಧ್ಯಾನವನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವು ಇದೀಗ ಜಾಗತಿಕ ಗಮನಕ್ಕೆ ಬರುತ್ತಿದೆ. 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ ನಿರ್ಣಯದ ನಂತರ ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವೆಂದು (World Meditation Day) ವಿಶ್ವಸಂಸ್ಥೆಯು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿನೀವಾದಲ್ಲಿ ಆರ್ಟ್ ಆಫ್ ಲಿವಿಂಗ್​ನ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ವಿಶ್ವ ಧ್ಯಾನ ದಿನಕ್ಕೂ ಮುನ್ನ ಭಾಷಣವನ್ನು ಮಾಡಿದ್ದಾರೆ.

ರವಿಶಂಕರ್ ಗುರೂಜಿ ಅವರು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿಯಲ್ಲಿ ಭಾಗವಹಿಸಿದ್ದು, ವಿಶ್ವ ಧ್ಯಾನ ದಿನದ ಪ್ರಯುಕ್ತ ಧ್ಯಾನ ತರಬೇತಿಯನ್ನು ಕೂಡ ನೀಡಿದ್ದಾರೆ. ಅಲ್ಲಿ ಅವರು ಸಮಕಾಲೀನ ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಧ್ಯಾನದಿಂದ ಯಾವ ರೀತಿಯ ಪರಿಹಾರವನ್ನು ಪಡೆಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಿನೀವಾದಲ್ಲಿ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ್ ಗುರೂಜಿ, ಸಮಾಜದಲ್ಲಿ ಹೆಚ್ಚುತ್ತಿರುವ ಒತ್ತಡ, ಒಂಟಿತನ ಮತ್ತು ಭಾವನಾತ್ಮಕ ಆಯಾಸಕ್ಕೆ ಧ್ಯಾನದ ಮೊರೆಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು. ಜಗತ್ತು ಧ್ಯಾನದ ಮಹತ್ವವನ್ನು ಗುರುತಿಸಿದೆ. ಧ್ಯಾನವೆಂಬುದು ಫ್ಯಾಷನ್ ಅಥವಾ ಐಷಾರಾಮಿ ಅಲ್ಲ, ಇದು ಇಂದಿನ ಸಮಾಜದ ಅಗತ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕೆಂದು ಅವರು ಕರೆನೀಡಿದ್ದಾರೆ.

ಇದನ್ನೂ ಓದಿ: ಅಂಗವಿಕಲರಿಗಾಗಿ ಮಿರಾಕಲ್ ಆಫ್ ಮೈಂಡ್ ಧ್ಯಾನ ಪರಿಚಯಿಸಿದ ಸದ್ಗುರುವಿನ ಇಶಾ ಫೌಂಡೇಷನ್​

ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ನಮ್ಮೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತಹ ಪ್ರಯತ್ನ ಮಾಡಬೇಕಾಗಿದೆ. ಅದು ನಮ್ಮ ಎಲ್ಲಾ ಒತ್ತಡವನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: World Meditation Day: ಡಿ. 21 ವಿಶ್ವ ಧ್ಯಾನ ದಿನ; ಅಶಾಂತ ಜಗತ್ತಿಗೆ ಧ್ಯಾನವೇ ಶಾಂತಿಯ ದಾರಿ: ರವಿಶಂಕರ್ ಗುರೂಜಿ

ನಮ್ಮ ಪ್ರಜ್ಞಾಪೂರ್ವಕ ಸ್ಥಿತಿಯು ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನವು ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯುತ್ತದೆ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಧ್ಯಾನ ಮಾಡುವುದು ಕಷ್ಟವೇನಲ್ಲ. ಕಂಪ್ಯೂಟರ್‌ನಲ್ಲಿ ಅನಾವಶ್ಯಕ ಫೈಲ್​ಗಳನ್ನು ತೆಗೆದುಹಾಕಲು ಡಿಲೀಟ್ ಬಟನ್‌ ಒತ್ತುವಂತೆ ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿರುವ ಅನವಶ್ಯಕ ವಿಷಯಗಳಿಂದ ಮುಕ್ತಿ ದೊರೆಯುತ್ತದೆ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.

ವಿಶ್ವ ಧ್ಯಾನ ದಿನದಂದು ಭಾರತದ ಪಾಲ್ಗೊಳ್ಳುವಿಕೆಯು ಸಾರ್ವಜನಿಕ ಆರೋಗ್ಯ ಆದ್ಯತೆಗಳು, ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಬಹುಪಕ್ಷೀಯ ಸಂವಾದದ ಒಮ್ಮುಖವನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಪಕ್ಷಗಳ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ – Kannada News | Speaker Om Birla holds all party meeting over Tea as Parliament winter session concludes

ನವದೆಹಲಿ, ಡಿಸೆಂಬರ್ 19: ಸಂಸತ್ತಿನ ಚಳಿಗಾಲದ ಅಧಿವೇಶನ (Parliament Session)  ಮುಕ್ತಾಯಗೊಳ್ಳುತ್ತಿದ್ದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಇಂದು ಸಂಸತ್ ಭವನದಲ್ಲಿ ಸರ್ವಪಕ್ಷ ಸಭೆ ನಡೆಸಿದ್ದಾರೆ. ಈ ಚಹಾ ಪಾರ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಮುಕ್ತಾಯಗೊಂಡ ಬಳಿಕ ಸಂಸತ್ ಭವನದ ಸ್ಪೀಕರ್ ಕೊಠಡಿಯಲ್ಲಿ ಸಭೆ ನಡೆಯಿತು. ಓಂ ಬಿರ್ಲಾ ಇಂದು 18ನೇ ಲೋಕಸಭೆಯ ಅಧಿವೇಶನವನ್ನು ಮುಕ್ತಾಯಗೊಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link