Category Archives: Blog

Your blog category

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್: ಈ ಷರತ್ತುಗಳನ್ನು ಪಾಲಿಸಲೇಬೇಕು! – Kannada News | Cricket Gets Green Signal at Chinnaswamy Stadium: Bengaluru Police Issue 17 Point Safety Guidelines

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ, ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.

ಗೃಹ ಇಲಾಖೆ ಸಿದ್ಧಪಡಿಸಿರುವ ಈ ಷರತ್ತುಗಳ ಕುರಿತು ಕೆಎಸ್​​ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಕೆಎಸ್​​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಿದೆ. ಪೊಲೀಸ್ ಕಮಿಷನರ್ ಅವರು ನ್ಯಾ. ಮೈಕಲ್ ಡಿ‌ ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ 17 ಷರತ್ತುಗಳನ್ನು ವಿಧಿಸಿದ್ದಾರೆ. ಕೆಎಸ್​​ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆಗೆ ಎಲ್ಲವರೂ ಸರಿಯಾಗುವ ನಿರೀಕ್ಷೆ ಇದೆ.

17 ಅಂಶಗಳ ಮಾರ್ಗಸೂಚಿ ಬಿಡುಗಡೆ: ಏನೇನಿವೆ?

ಮಾರ್ಗಸೂಚಿಗಳಲ್ಲಿನ ಪ್ರಮುಖ ಅಂಶಗಳೆಂದರೆ, ಸ್ಟೇಡಿಯಂ ಒಳಗೆ ಮತ್ತು ಹೊರಗೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳ ಸುಧಾರಣೆ. ಪ್ರಸ್ತುತ, ಟಿಕೆಟ್ ವಿತರಣೆ ಮತ್ತು ಪ್ರೇಕ್ಷಕರ ಕ್ಯೂಗಳು ಫುಟ್​ಪಾತ್​​​ಗಳ ಮೇಲೆ ನಡೆಯುತ್ತಿದ್ದು, ಇದು ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಹಾಗೆಯೇ, ಸ್ಟೇಡಿಯಂನ ಎಲ್ಲಾ ಗೇಟ್‌ಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಿಸಬೇಕು. ಸದ್ಯದ ಕಿಕ್ಕಿರಿದ ಗೇಟ್‌ಗಳು ಮತ್ತು ಅಸಮವಾದ ಪ್ರವೇಶ ಮಾರ್ಗಗಳು ಅಪಾಯವನ್ನುಂಟುಮಾಡುತ್ತವೆ.

ಇದಲ್ಲದೆ, ಅಗ್ನಿಶಾಮಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಸ್ಟೇಡಿಯಂ ಒಳಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಟೇಡಿಯಂ ಒಳಗೆ ಪ್ರವೇಶಿಸುವ ಪ್ರೇಕ್ಷಕರ ನೈಜ-ಸಮಯದ ಸಂಖ್ಯೆಯನ್ನು (ರಿಯಲ್ ಟೈಮ್ ಕೌಂಟ್) ನಿಖರವಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಟಿಕೆಟ್‌ಗಳನ್ನು ಸ್ಟೇಡಿಯಂ ಒಳಗೆ ವಿತರಿಸಲು ಪ್ರತ್ಯೇಕ ಸ್ಥಳಗಳನ್ನು ಗೊತ್ತುಪಡಿಸಬೇಕು. ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್, ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆಗಳನ್ನು ಸುಧಾರಿಸಬೇಕು.

ಇದನ್ನೂ ಓದಿ: IPL 2026: ಕೊನೆಗೂ RCB ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

ಈ ಎಲ್ಲಾ ಬದಲಾವಣೆಗಳಿಗೆ ಗಣನೀಯ ಪ್ರಮಾಣದ ಕಾಮಗಾರಿಗಳನ್ನು ನಡೆಸಬೇಕಾದ ಅಗತ್ಯವಿದೆ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಎಲ್ಲಾ ಕೆಲಸಗಳು ಪೂರ್ಣಗೊಂಡರೆ, ಬಹುಶಃ ಮಾರ್ಚ್ ತಿಂಗಳ ವೇಳೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ಅವಕಾಶ ಸಿಗಲಿದೆ. ಇದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದು, ಸುರಕ್ಷಿತ ವಾತಾವರಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Fri, 19 December 25

Source link

ಚಪ್ಪಲಿ ಹೊರಗಡೆ ಬಿಡಿ ಅಂದಿದಷ್ಟೇ: ತಂದೆ-ಮಗನಿಂದ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ – Kannada News | Mysuru Doctor Attacked by Father and Son for Asking to Remove Footwear

ಮೈಸೂರು, ಡಿಸೆಂಬರ್​​ 19: ಕ್ಷುಲ್ಲಕ ಕಾರಣಕ್ಕೆ ವೈದ್ಯನ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದಕ್ಕೆ ಶಿಶು ಆಸ್ಪತ್ರೆಯ ವೈದ್ಯ ಡಾ.ಅನೂಪ್ ಮೇಲೆ ಹಲ್ಲೆ ನಡೆಸಲಾಗಿದೆ. ರುಬಿಯಾಜ್ ಷರೀಫ್, ಆತನ ತಂದೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ರುಬಿಯಾಜ್ ಷರೀಫ್​ರ 3 ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆಸ್ಪತ್ರೆಗೆ ಆತ ಬಂದಿದ್ದ. ಈ ವೇಳೆ ಚಪ್ಪಲಿ ಧರಿಸಿಯೇ ಒಳಬಂದ ಹಿನ್ನೆಲೆ ಅದನ್ನು ಹೊರಗೆ ಬಿಡುವಂತೆ ವೈದ್ಯ ಅನೂಪ್ ಮನವಿ ಮಾಡಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಅಂತಾ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ. ವೈದ್ಯ ಅನೂಪ್ ಮೇಲಿನ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ – Kannada News | Dharmendra’s Demise: Shobhaa De on Hema Malini’s Dignity Amidst Family Snub

ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ 45 ವರ್ಷಗಳ ಕಾಲ ಒಟ್ಟಿಗೆ ಇದ್ದವರು. ಧರ್ಮೇಂದ್ರ ನವೆಂಬರ್ 24 ರಂದು ಕೊನೆಯುಸಿರೆಳೆದರು. ನಂತರ ನವೆಂಬರ್ 27 ರಂದು, ಡಿಯೋಲ್ ಕುಟುಂಬವು ಹೇಮಾ ಮಾಲಿನಿಯನ್ನು ನಿರ್ಲಕ್ಷಿಸಿ ಸಂತಾಪ ಸೂಚಿಸುವ ಸಭೆಯನ್ನು ಆಯೋಜಿಸಿತು. ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸಹ ಸಂತಾಪ ಸೂಚಿಸುವ ಸಭೆಯಲ್ಲಿ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಅಂತ್ಯಕ್ರಿಯೆ ನಡೆಯುತ್ತಿರುವಾಗ ಹೇಮಾ ಮಾಲಿನಿ ನೇರವಾಗಿ ಸ್ಮಶಾನಕ್ಕೆ ತಲುಪಿದರು. ಧರ್ಮೇಂದ್ರ ಅವರ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿರುವುದಕ್ಕೆ ಇದಕ್ಕೆ ಕಾರಣ. ಈಗ ಬರಹಗಾರ್ತಿ ಶೋಭಾ ಡೇ ಈ ಬಗ್ಗೆ ಮಾತನಾಡಿದ್ದಾರೆ.

ಶೋಭಾ ಡೇ ಅವರು ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಡಿಯೋಲ್ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಶೋಭಾ. ‘ಈ ನಿರ್ಧಾರವು ತುಂಬಾ ಜಟಿಲ ಮತ್ತು ಕಷ್ಟಕರವಾಗಿದ್ದಿರಬೇಕು. ಧರ್ಮೇಂದ್ರ ಅವರ ಕುಟುಂಬವು ಹೇಮಾ ಮಾಲಿನಿಯನ್ನು ಎಲ್ಲದರಿಂದ ದೂರವಿಟ್ಟಿತು. ಹೇಮಾ ಮಾಲಿನಿ ತಮ್ಮ ಜೀವನದ 45 ವರ್ಷಗಳನ್ನು ಕಳೆದ ವ್ಯಕ್ತಿ. ಅವರು ಪ್ರೀತಿಸಿದ ವ್ಯಕ್ತಿ. ಅವರ ಜೀವನವನ್ನು ಶ್ರೀಮಂತಗೊಳಿಸಿದ ವ್ಯಕ್ತಿ. ಆದರೆ, ಈಗ ಹೇಮಾ ಮಾಲಿನಿ ಅವರನ್ನು ಡಿಯೋಲ್ ಕುಟುಂ ಎಲ್ಲದರಿಂದ ದೂರವಿಟ್ಟರು’ ಎಂದಿದ್ದಾರೆ ಶೋಭಾ.

‘ಧರ್ಮೇಂದ್ರ ಮತ್ತು ಹೇಮಾ ಮಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಡೀ ಪರಿಸ್ಥಿತಿ ಅವರಿಗೆ ತುಂಬಾ ಭಯಾನಕವಾಗಿದ್ದಿರಬೇಕು. ಆದರೆ ಅವರು ಎಲ್ಲವನ್ನೂ ತಮ್ಮ ಖಾಸಗಿ ಜೀವನದಲ್ಲಿಯೇ ಇಟ್ಟುಕೊಂಡಿದ್ದರು. ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡಿದಾಗಲೆಲ್ಲಾ, ಅವರು ಅದನ್ನು ಅತ್ಯಂತ ಘನತೆಯಿಂದ ಮಾಡಿದರು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ನಿಧನದ ನೋವು: ಭಾವುಕವಾಗಿ ಫೋಟೋ ಹಂಚಿಕೊಂಡ ಹೇಮಾ ಮಾಲಿನಿ

‘ಹೇಮಾ ಮಾಲಿನಿ ಸ್ವತಃ ಪ್ರಭಾವಿ ವ್ಯಕ್ತಿ, ಆದ್ದರಿಂದ ಸಾರ್ವಜನಿಕ ಪ್ರದರ್ಶನಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪ್ರದರ್ಶಿಸುವ ಬದಲು ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಅವರ ನಿರ್ಧಾರವು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ. ಧರ್ಮೇಂದ್ರ ಅವರ ಮರಣದ ನಂತರ, ಹೇಮಾ ಮಾಲಿನಿ ಸಿಂಪತಿ ತೆಗೆದುಕೊಳ್ಳುವ ಅವಕಾಶ ಇತ್ತು. ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಲು ಬಯಸಿದ್ದವು. ಆದರೆ ಅವರು ಯಾವಾಗಲೂ ಎಲ್ಲವನ್ನೂ ರಹಸ್ಯವಾಗಿಟ್ಟರು. ಅವರು ತಮ್ಮ ಘನತೆಯನ್ನು ಉಳಿಸಿಕೊಂಡರು’ ಎಂದು ಶೋಭಾ ಡೇ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ! – Kannada News | Bangalore Air Pollution Crisis: AQI Crosses 170, Breathing in Bengluru is like smoking 3 cigarettes a day

ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಸಮವಂತೆ!

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (Bengaluru Air Quality ಹೇಳುವಷ್ಟೇನು ಬದಲಾವಣೆ ಕಂಡಿಲ್ಲ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯಕ್ಕೂ ಕೊಡುಗೆ ನೀಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಉಸಿರಾಡುವ ಜನರು ದಿನಕ್ಕೆ 3.2 ಸಿಗರೇಟ್ ಸೇದಿದಷ್ಟೇ ಹಾನಿ ಅನುಭವಿಸುತ್ತಿದ್ದಾರೆ ಎಂದು AQI ತಿಳಿಸಿದೆ. ಇದು ಹೀಗೆ ಮುಂದುವರೆದರೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರನ್ನೂ ಮೀರಿಸಿದ ಬಳ್ಳಾರಿಯ ಕಳಪೆ ಏರ್ ಕ್ವಾಲಿಟಿ

ಕಳೆದ ಒಂದು ವಾರದಿಂದ ಹದಗೆಟ್ಟ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಈ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಗುಣಮಟ್ಟ 78 ಇದ್ದರೆ ಗರಿಷ್ಠ 200ರ ಗಡಿ ದಾಟಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿತ್ತು. ಇಂದು ಈ ಗಾಳಿಯ ಗುಣಮಟ್ಟ 173 ಇದ್ದು, ಸ್ವಲ್ಪ ಸುಧಾರಿಸಿಕೊಂಡಿದ್ದರೂ ಈ ಹಿಂದೆ ತಜ್ಞರು ಹೇಳಿದಂತೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರು ಮಾತ್ರವಲ್ಲದೇ ಇತರ ಶಹರದಲ್ಲಿಯೂ ಕಳಪೆ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಾಗಿದ್ದು, ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಏರ್ ಕ್ವಾಲಿಟಿ ಹಾಳಾಗಿತ್ತು. ಇಂದೂ 197ರಲ್ಲಿಯುವ ಬಳ್ಳಾರಿಯ ಗಾಳಿಯ ಗುಣಮಟ್ಟ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಜನರ ಆರೋಗ್ಯದ ಮೇಲೆ ನೇರ ಪರಿಣಾಮ

ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 87ಕ್ಕೆ ತಲುಪಿದ್ದು, PM10 ಪ್ರಮಾಣ 113ಕ್ಕೆ ಇಳಿದಿದೆ. ಈ ಎರಡರಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭಯ ಹೆಚ್ಚುತ್ತಿದ್ದು, ಜನರು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ ಬೆಂಗಳೂರಿಗರೇ ಮನೆಯಿಂದ ಹೊರ ಬರುವ ಮುನ್ನ ಎಚ್ಚರ! ಚಳಿಯ ಜೊತೆ ಕಳಪೆ ಏರ್ ಕ್ವಾಲಿಟಿ ನಿಮ್ಮ ಉಸಿರಿಗೆ ಮುಳುವಾದೀತು

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):

  • ಬೆಂಗಳೂರು – 173
  • ಮಂಗಳೂರು – 111
  • ಮೈಸೂರು – 126
  • ಬೆಳಗಾವಿ – 154
  • ಕಲಬುರ್ಗಿ – 68
  • ಶಿವಮೊಗ್ಗ – 81
  • ಬಳ್ಳಾರಿ – 197
  • ಹುಬ್ಬಳ್ಳಿ- 91
  • ಉಡುಪಿ – 88
  • ವಿಜಯಪುರ – 153

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ ಗುಣ ಮಟ್ಟದ ಗಾಳಿಯು- 0-50, ಮಧ್ಯಮ – 50-100, ಕಳಪೆ – 100-150, ಅನಾರೋಗ್ಯಕರ – 150-200, ಗಂಭೀರ – 200 – 300 ಹಾಗೂ ಅಪಾಯಕಾರಿ  ಗುಣ ಮಟ್ಟದ ಗಾಳಿಯು 300 -500+ ಇರುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್ – Kannada News | Darshan Thoogudeepa and His Son Vineesh in same look In a viral Photo which was taken during The Devil Shoot

ನಟ ದರ್ಶನ್ ಹಾಗೂ ಮಗ ವಿನೀಶ್ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಇದೆ. ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಗೆಳೆಯನ ರೀತಿ ವಿನೀಶ್​​ನ ದರ್ಶನ್ ಟ್ರೀಟ್ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ವೈರಲ್ ಆಗುತ್ತವೆ.

ಈಗ ದರ್ಶನ್ ಹಾಗೂ ವಿನೀಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿನೀಶ್ ಲುಕ್ ಹಾಗೂ ಖದರ್ ಒಂದೇ ರೀತಿ ಇದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

ವಿನೀಶ್ ಅವರಿಗೆ ಸ್ವಲ್ಪ ವಿಜಯಲಕ್ಷ್ಮೀ ಅವರ ಹೋಲಿಕೆ ಇದೆ. ಆದರೆ ಎತ್ತರ ಮಾತ್ರ ದರ್ಶನ್ ಅವರದ್ದೇ ಬಂದಿದೆ. ಅವರು ದರ್ಶನ್ ರೀತಿಯೇ ಕಟ್ಟುಮಸ್ತಾಗಿ ಕಾಣಿಸುತ್ತಿದ್ದಾರೆ. ಈ ಸಂದರ್ಭದ ಫೋಟೋನ ‘ಡೆವಿಲ್’ ತಂಡ ಹಂಚಿಕೊಂಡಿದೆ.

ಅಂದಹಾಗೆ, ಇದು ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತೆಗೆದ ಫೋಟೋ. ರಾಜಸ್ಥಾನದಲ್ಲಿ ತಂಡ ಬೀಡುಬಿಟ್ಟಾಗ ವಿನೀಶ್ ಕೂಡ ದರ್ಶನ್ ಜೊತೆ ತೆರಳಿದ್ದರು. ತಂದೆಯ ರೀತಿಯೇ ಶರ್ಟ್ ಧರಿಸಿ ಅವರು ಗಮನ ಸೆಳೆದಿದ್ದಾರೆ.

ದರ್ಶನ್ ಅವರಿಗೆ ಕುದುರೆ ಎಂದರೆ ಸಖತ್ ಇಷ್ಟ. ಅವರು ಕುದುರೆ ಸವಾರಿ ಮಾಡುತ್ತಾರೆ. ತಮ್ಮ ಫಾರ್ಮ್​​ಹೌಸ್​ನಲ್ಲಿ ಕುದುರೆಗಳನ್ನು ಅವರು ಸಾಕಿದ್ದಾರೆ. ವಿನೀಶ್ ಕೂಡ ಕುದುರೆ ಸವಾರಿ ಮಾಡಬಲ್ಲರು ಎಂಬುದು ವಿಶೇಷ. ಆ ಸಂದರ್ಭದ ಫೋಟೋನ ವಿನೀಶ್ ಈ ಮೊದಲು ಹಂಚಿಕೊಂಡಿದ್ದರು.

Published On – 10:22 am, Fri, 19 December 25

Source link

ಅಪ್ರಾಪ್ತೆ ಮೇಲೆ ಮ್ಯೂಸಿಕ್​​ ಮೈಲಾರಿ ಅತ್ಯಾಚಾರ ಕೇಸ್​​ಗೆ ಟ್ವಿಸ್ಟ್​​: ಸಂತ್ರಸ್ತೆ ವಿಡಿಯೋ ವೈರಲ್​​ – Kannada News | Twist in Music Mallari Assault Case, New Video of Minor Girl Goes Viral

ಬಾಗಲಕೋಟೆ, ಡಿಸೆಂಬರ್​​ 19: ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ಅತ್ಯಾಚಾರ ಪ್ರಕರಣ ಕೇಸ್​​ಗೆ ಟ್ವಿಸ್ಟ್​​ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ.

ಮ್ಯೂಸಿಕ್​​ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್​​ ರುಕ್ಕು ಬಗ್ಗೆ ನಾನು ಏನೇನೋ ಮಅತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ ಉದ್ದೇಶದಿಂದ ಆ ರೀತಿ ಹೇಳಿದ್ದು, ನನ್ನದು ತಪ್ಪಾಗಿದೆ. ನನ್ನ ಕ್ಷಮಿಸಿ ಎಂದು ಯುವತಿ ಕೈಮುಗಿದು ಹೇಳಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಪ್ರಾಪ್ತೆಯ ವಿರುದ್ದ ಮೈಲಾರಿ ಅಭಿಮಾನಿಗಳು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್​​ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ; ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್

ವಿಡಿಯೋ ಬಗ್ಗೆ ಅಪ್ರಾಪ್ತೆ ಸ್ಪಷ್ಟನೆ

ಇನ್ನು ಕ್ಷಮೆ ಕೇಳಿರುವ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯುವಕನೊಬ್ಬನ ಜೊತೆ ಇರುವ ಮತ್ತೂ ತಪ್ಪಾಯಿತು ಎಂದು ಹೇಳಿರುವ ವಿಡಿಯೋ ಈಗಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ಬಳಿಕ ಎರಡನೇ ದಿನ ಮಾಡಿರೋದು. ಬೆಂಕಿ ಲತಾ ಡ್ಯಾನ್ಸರ್, ರುಕ್ಕು ಸಿಂಗರ್, ಡಿಜೆ ಮಾಂತೇಶ್ ಗೋಕಾಕ್​​ ಅವರು ಬಂದು ನನಗೆ ಹೊಡೆದು ಆ ವಿಡಿಯೋ ವಿಡಿಯೋ ಮಾಡಿಸಿದ್ದರು. ಅದೇ ವಿಡಿಯೋವನ್ನೀಗ  ಕೆಲವರು ಇನ್​​ಸ್ಟಾಗ್ರಾಮ್​​ನಲ್ಲಿ ಎಡಿಟ್ ಮಾಡಿ ಹಾಕ್ತಿದಾರೆ. ಈ ರೀತಿ ವಿಡಿಯೋ ಸೇರ್​​ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುತ್ತೇನೆ. ನಾನೊಬ್ಬ ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು. ಆ ವಿಡಿಯೋ ಈಗಿನದ್ದು ಅಂತ ಯಾರು ತಿಳಿದುಕೊಳ್ಳಬೇಡಿ. ನನಗೆ ನ್ಯಾಯ ಕೊಡಿಸಿ, ಸಪೋರ್ಟ್ ಮಾಡಿ ಎಂದು ಯುವತಿ ಕೈ ಮುಗಿದು ಕೇಳಿಕೊಂಡಿದ್ದಾಳೆ.

ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮ್ಯೂಸಿಕ್​​ ಮೈಲಾರಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿದೆ. ಕೇಸ್​​ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದ. ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Silver Shivling Benefits: ಬೆಳ್ಳಿಯ ಶಿವಲಿಂಗ ಪೂಜಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳಿವು – Kannada News | Silver Shivling Benefits: Strengthen Venus and Moon, Attract Wealth and Peace

ನೀವು ಶಿವನ ಭಕ್ತರಾಗಿದ್ದರೆ, ನಿಮ್ಮ ಶುಕ್ರ ಮತ್ತು ಚಂದ್ರನನ್ನು ಬಲಪಡಿಸಲು ಯಾವ ಶಿವಲಿಂಗವನ್ನು ಮನೆಗೆ ತರಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಬೆಳ್ಳಿಯ ಶಿವಲಿಂಗವು ನಿಮ್ಮ ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಬೆಳ್ಳಿ ಶುಕ್ರ ಮತ್ತು ಚಂದ್ರನನ್ನು ಸಂಕೇತಿಸುತ್ತದೆ. ಬೆಳ್ಳಿಯ ಶಿವಲಿಂಗವು ಈ ಎರಡು ಶುಭ ಗ್ರಹಗಳ ಶಕ್ತಿಯನ್ನು ಸಂಕೇತಿಸುತ್ತದೆ. ನಿಯಮಿತ ಪೂಜೆಯು ಆಧ್ಯಾತ್ಮಿಕ ಪ್ರಯೋಜನಗಳನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಶಾಂತಿಯಂತಹ ಲೌಕಿಕ ಪ್ರಯೋಜನಗಳನ್ನು ಸಹ ನೀಡುತ್ತದೆ.

ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದಾಗುವ ಪ್ರಯೋಜನಗಳು:

ಶಿವಲಿಂಗದ ಪೂಜೆಯಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಬೆಳ್ಳಿಯನ್ನು ಪೂಜಿಸುವುದರಿಂದ ಅನೇಕ ಶುಭ ಫಲಿತಾಂಶಗಳು ದೊರೆಯುತ್ತವೆ:

  • ಸಂಪತ್ತು: ಬೆಳ್ಳಿ ಶುಕ್ರ ಮತ್ತು ಚಂದ್ರರನ್ನು ಸಂಕೇತಿಸುತ್ತದೆ, ಆದ್ದರಿಂದ ಬೆಳ್ಳಿಯ ಶಿವಲಿಂಗವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.
  • ಮಾನಸಿಕ ಶಾಂತಿ: ಬೆಳ್ಳಿ ಮನಸ್ಸನ್ನು ಶಾಂತಗೊಳಿಸುವ ಅದ್ಭುತ ಗುಣವನ್ನು ಹೊಂದಿದೆ. ಇದನ್ನು ಪೂಜಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ.
  • ಆರೋಗ್ಯ ಪರಿಹಾರ: ಬೆಳ್ಳಿ ಶಿವಲಿಂಗಕ್ಕೆ ನಿಯಮಿತವಾಗಿ ಅಭಿಷೇಕ ಮಾಡುವುದು ಮತ್ತು ಅದಕ್ಕೆ ತೀರ್ಥಯಾತ್ರೆಯಲ್ಲಿ ಭಾಗವಹಿಸುವುದರಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಬೆಳ್ಳಿ ಶಿವಲಿಂಗವನ್ನು ಯಾರು ಪೂಜಿಸಬೇಕು?

ಕೆಲವು ವಿಶೇಷ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ತ್ವರಿತ ಪರಿಹಾರ ಪಡೆಯಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

  • ಜಾತಕದಲ್ಲಿ ಚಂದ್ರ ದೋಷ: ಜಾತಕದಲ್ಲಿ ಚಂದ್ರ ದುರ್ಬಲವಾಗಿರುವವರು ತೀವ್ರ ಮಾನಸಿಕ ಒತ್ತಡ, ಆತಂಕ ಅಥವಾ ನಿದ್ರಾಹೀನತೆಯಿಂದ ಬಳಲುತ್ತಾರೆ. ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ಅವರ ಮನಸ್ಸು ಸ್ಥಿರಗೊಳ್ಳುತ್ತದೆ ಮತ್ತು ಚಂದ್ರ ದೋಷ ದೂರವಾಗುತ್ತದೆ.
  • ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳು: ಸಂತಾನ ಭಾಗ್ಯಕ್ಕಾಗಿ ದಂಪತಿಗಳು, ಪ್ರತಿ ಸೋಮವಾರ ಬೆಳ್ಳಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
  • ಆರ್ಥಿಕ ತೊಂದರೆಗಳು: ಭಾರೀ ಸಾಲದ ಹೊರೆಯಿಂದ ಬಳಲುತ್ತಿರುವವರು ಮತ್ತು ವ್ಯವಹಾರದಲ್ಲಿ ಆಗಾಗ್ಗೆ ನಷ್ಟವನ್ನು ಎದುರಿಸುತ್ತಿರುವವರು ಅಡೆತಡೆಗಳನ್ನು ತೆಗೆದುಹಾಕಿ ಮತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬೆಳ್ಳಿ ಶಿವಲಿಂಗವನ್ನು ಪೂಜಿಸಬಹುದು.
  • ಭಯ ಮತ್ತು ಆತಂಕ: ಅಪರಿಚಿತವಾದ ಯಾವುದೋ ವಿಷಯದ ಬಗ್ಗೆ ನಿರಂತರ ಭಯ ಅಥವಾ ಆತಂಕದಿಂದ ಬಳಲುತ್ತಿರುವವರು ಬೆಳ್ಳಿಯ ರೂಪದಲ್ಲಿ ಶಿವನನ್ನು ಪೂಜಿಸುವುದರಿಂದ ಅಪಾರ ಧೈರ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Peepal Tree: ಅರಳಿ ಮರ ಏಕೆ ಬಾಡುವುದಿಲ್ಲ? ಸೀತಾ ದೇವಿಯ ವರದಾನದ ಪೌರಾಣಿಕ ಕಥೆ ಇಲ್ಲಿದೆ – Kannada News | The Eternal Green: Unravelling the Mystery of the Peepal Tree

ಕಲಿಯುಗದಲ್ಲಿ ಎಂದಿಗೂ ಬಾಡದ ಅರಳಿ ವೃಕ್ಷದ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಮಹತ್ವವಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನುಡಿಯಂತೆ, ವೃಕ್ಷಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಪಾರಂಪರಿಕ ನಂಬಿಕೆ. ಪೂಜ್ಯನೀಯ ವೃಕ್ಷಗಳಲ್ಲಿ, ಆಯುರ್ವೇದ ಗುಣಗಳನ್ನು ಹೊಂದಿರುವ ಮರಗಳಲ್ಲಿ, ದೇವತಾ ವೃಕ್ಷಗಳಲ್ಲಿ ಅರಳಿ ಮರಕ್ಕೆ ಅಗ್ರಸ್ಥಾನವಿದೆ. ಅನೇಕ ದೇವರುಗಳಿಗೆ ಪ್ರತೀಕವಾಗಿ ವೃಕ್ಷಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ. ಆದರೆ, ಅರಳಿ ಮರ ಎಂದಿಗೂ ಬಾಡುವುದಿಲ್ಲ ಅಥವಾ ಒಣಗುವುದಿಲ್ಲ ಎಂಬ ಕುತೂಹಲಕಾರಿ ವಿಷಯಕ್ಕೆ ಒಂದು ಪೌರಾಣಿಕ ಹಿನ್ನೆಲೆಯಿದೆ.

ಈ ಪ್ರಶ್ನೆಗೆ ಇತಿಹಾಸವನ್ನು ಅವಲೋಕಿಸಿದಾಗ ಒಂದು ಸ್ವಾರಸ್ಯಕರ ಕಥೆ ಹೊರಬರುತ್ತದೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ದೇವಿ ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಫಲ್ಗುಣಿ ನದಿಯ ದಡದಲ್ಲಿ ಸೀತಾ ದೇವಿಯನ್ನು ಕೂರಿಸಿ, ರಾಮ ಮತ್ತು ಲಕ್ಷ್ಮಣರು ಆಹಾರ ಅರಸಿ ಕಾಡಿಗೆ ತೆರಳುತ್ತಾರೆ. ಆ ಸಮಯದಲ್ಲಿ, ಫಲ್ಗುಣಿ ನದಿಯಿಂದ ಒಂದು ಕೈ ಆಚೆಗೆ ಬಂದು ಆಹಾರಕ್ಕಾಗಿ ಕೇಳುತ್ತದೆ. ಸೀತಾ ದೇವಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ತನ್ನಲ್ಲಿ ಯಾವುದೇ ಆಹಾರವಿಲ್ಲದಿದ್ದಾಗ, ತನ್ನ ದೈವಿಕ ಶಕ್ತಿಯಿಂದ ನದಿಯ ದಡದಲ್ಲಿರುವ ಮಣ್ಣನ್ನೇ ಅನ್ನವನ್ನಾಗಿ ಪರಿವರ್ತಿಸಿ ಆ ಕೈಗೆ ನೀಡುತ್ತಾಳೆ. ಈ ಘಟನೆಗೆ ಸಾಕ್ಷಿಯಾಗಿ, ರಾಮ-ಲಕ್ಷ್ಮಣರು ಮರಳಿದಾಗ ಹೇಳಲು, ಸೀತಾ ದೇವಿ ಐದು ಅಂಶಗಳನ್ನು ಸಾಕ್ಷಿ ಹೇಳಲು ಕೇಳುತ್ತಾಳೆ. ಅವುಗಳಲ್ಲಿ ಫಲ್ಗುಣಿ ನದಿ, ಒಂದು ಹಸು, ತುಳಸಿ ಗಿಡ, ಅರಳಿ ಮರ, ಮತ್ತು ಅಗ್ನಿ ದೇವರು ಸೇರಿದ್ದರು.

ವಿಡಿಯೋ ಇಲ್ಲಿದೆ ನೋಡಿ:

ರಾಮ-ಲಕ್ಷ್ಮಣರು ಮರಳಿದಾಗ, ಸೀತಾ ದೇವಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಆದರೆ ರಾಮ-ಲಕ್ಷ್ಮಣರು ಇದನ್ನು ನಂಬುವುದಿಲ್ಲ. ಸತ್ಯವನ್ನು ಸಾಕ್ಷಿ ಹೇಳಲು ಕೇಳಿದಾಗ, ಫಲ್ಗುಣಿ ನದಿ ಮೌನ ವಹಿಸುತ್ತದೆ. ಆಗ ಸೀತಾ ದೇವಿ “ನಿನಗೆ ನೀರಿನ ಕೊರತೆ ಉಂಟಾಗಲಿ” ಎಂದು ಶಪಿಸುತ್ತಾಳೆ. ಇಂದಿಗೂ ಫಲ್ಗುಣಿ ನದಿ ಒಳಪ್ರವಾಹದಿಂದ ಹರಿಯುತ್ತದೆ. ನಂತರ ಹಸು ಸಾಕ್ಷಿ ಹೇಳಲು ಹಿಂದೇಟು ಹಾಕಿದಾಗ, ಸೀತಾ ದೇವಿ “ನೀನು ಜನರಿಗೆ ಆಹಾರವಾಗಿ ಮಾತ್ರ ಉಳಿಯಲಿ” ಎಂದು ಶಾಪ ನೀಡುತ್ತಾಳೆ. ಇಂದಿಗೂ ಗಯಾ ಕ್ಷೇತ್ರದಲ್ಲಿ ಪಿಂಡಗಳನ್ನು ಹಸುಗಳಿಗೆ ಆಹಾರವಾಗಿ ನೀಡುವ ಪದ್ಧತಿಯಿದೆ. ತುಳಸಿ ಗಿಡ ಕೂಡ ಸಾಕ್ಷಿ ಹೇಳಲು ಹಿಂಜರಿದಾಗ, “ನೀನು ಎಲ್ಲೆಂದರಲ್ಲಿ ಬೆಳೆದು ಬೆಳೆಯುವ ಗಿಡವಾಗಲಿ” ಎಂದು ಶಾಪ ನೀಡುತ್ತಾಳೆ. ಅಗ್ನಿ ದೇವರೂ ಕೂಡ ಸಾಕ್ಷಿ ನುಡಿಯಲಿಲ್ಲ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಆದರೆ, ಅರಳಿ ಮರ ಮಾತ್ರ ಸತ್ಯವನ್ನು ನಿಷ್ಠೆಯಿಂದ ನುಡಿಯುತ್ತದೆ. ಸೀತಾ ದೇವಿ ಪ್ರಸನ್ನಳಾಗಿ, ಅರಳಿ ಮರಕ್ಕೆ ಮಹಾನ್ ವರವನ್ನು ನೀಡುತ್ತಾಳೆ. “ಕಲಿಯುಗದಲ್ಲಿ ನೀನು ಎಂದಿಗೂ ಬಾಡದೆ, ಸದಾ ಹಸಿರಾಗಿ ಇರುವೆ. ನಿನ್ನಲ್ಲಿ ದೇವಾನುದೇವತೆಗಳು ನೆಲೆಸುವರು” ಎಂದು ಆಶೀರ್ವದಿಸುತ್ತಾಳೆ. ಅಂದಿನಿಂದ, ಅರಳಿ ಮರಕ್ಕೆ ಅಮರತ್ವದ ವರ ದೊರೆತು, ಅದು ಎಂದಿಗೂ ಬಾಡುವುದಿಲ್ಲ ಎಂಬ ನಂಬಿಕೆ ಇದೆ. ಅರಳಿ ಮರ 24 ಗಂಟೆಯೂ ಪ್ರಾಣವಾಯುವನ್ನು ಹೊರಸೂಸುತ್ತದೆ ಎಂದು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಇತಿಹಾಸದಲ್ಲಿ ಅನೇಕ ದೃಷ್ಟಾಂತ ಕಥೆಗಳ ಮುಖೇನ ಅರಳಿ ಮರದಲ್ಲಿ ದೇವತೆಗಳು ವಾಸವಾಗಿದ್ದಾರೆಂದು ಹೇಳಲಾಗುತ್ತದೆ. ಅರಳಿ ಮರವನ್ನು ಸ್ಪರ್ಶಿಸುವುದರಿಂದ ಅಥವಾ ಅದರ ಹತ್ತಿರ ಓಡಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚೇತರಿಕೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಇದು ಕೇವಲ ನಂಬಿಕೆಯಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಸಸ್ಯದ ಗುಣಧರ್ಮಗಳಲ್ಲೂ ಅಡಗಿದೆ. ಹೀಗೆ ಅರಳಿ ಮರ ಸದಾ ಹಸಿರಾಗಿರುವುದು ಇತಿಹಾಸ ಮತ್ತು ನಂಬಿಕೆಯ ಆಧಾರದ ಮೇಲೆ ನಿಂತಿದೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ – Kannada News | Optical illusion: Spot the 3 differences between these two pictures in 13 seconds.

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಕೆಲವೊಮ್ಮೆ ನೀವು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳುವುದು ಅತ್ಯಗತ್ಯ. ಹೀಗಾದಾಗ ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳತ್ತ ಗಮನ ಹರಿಸುವುದು ಉತ್ತಮ. ಈ ಚಿತ್ರಗಳಲ್ಲಿ ಕೆಲವೊಂದು ಟ್ರಿಕ್ಕಿ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದೆ. ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. ಇಲ್ಲಿ ನಿಮಗಿರುವ ಸವಾಲು ಎಂದರೆ ಆ ವ್ಯತ್ಯಾಸಗಳನ್ನು ಕಂಡುಹಿಡಿಯುವುದು. ಈ ಒಗಟು ಬಿಡಿಸಲು ನಿಮಗೆ 13 ಸೆಕೆಂಡುಗಳು ಮಾತ್ರ ಇವೆ.

ಈ ಚಿತ್ರದಲ್ಲಿ ಏನಿದೆ ಎಂದು ಸೂಕ್ಷ್ಮವಾಗಿ ಗಮನಿಸಿ

ಕಣ್ಣನ್ನು ಮೋಸಗೊಳಿಸಿ, ಮೆದುಳಿಗೆ ಕೆಲಸ ನೀಡುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಒಗಟಿನ ಚಿತ್ರ ಟ್ರಿಕ್ಕಿಯಾಗಿದೆ. ಈ ಬ್ಯಾರೆಲ್‌ನಲ್ಲಿ ಮೂರು ಸೇಬು ಹಣ್ಣುಗಳಂತೆ ಕಾಣುತ್ತದೆ. ಅದರ ಪಕ್ಕದಲ್ಲಿರುವ ಚಿತ್ರವೂ ಒಂದೇ ರೀತಿ ಇದೆ. ಆದರೆ ಎರಡು ಚಿತ್ರಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. 13 ಸೆಕೆಂಡುಗಳಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸುವ ಚಾಲೆಂಜ್ ನಿಮ್ಮ ಮುಂದಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅವಿತು ಕುಳಿತಿರುವ ಇಲಿಯನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಭ್ರಮೆಯನ್ನುಂಟು ಮಾಡಬಹುದು. ಮೊದಲ ನೋಟದಲ್ಲೇ ನಿಮ್ಮನ್ನು ಮೋಸಗೊಳಿಸಬಹುದು. ಇಲ್ಲಿ ನೀಡಲಾಗಿರುವ ಎರಡು ಚಿತ್ರಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಹೇಳಿದ್ದಷ್ಟು ಸುಲಭವಲ್ಲ. ಒಂದು ವೇಳೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ಚಿಂತಿಸ ಬೇಡಿ. ಈ ಕೆಳಗಿನ ಚಿತ್ರದಲ್ಲಿ ಮೂರು ವ್ಯತ್ಯಾಸಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:53 am, Fri, 19 December 25

Source link

ನಂಜನಗೂಡು ಬಳಿ ಕೆಎಸ್​​ಆರ್​ಟಿಸಿ ಬಸ್ ಬೆಂಕಿಗಾಹುತಿ​​: ಪ್ರಯಾಣಿಕರು ಪಾರಾಗಿದ್ದೇ ರೋಚಕ

ಮೈಸೂರು, ಡಿಸೆಂಬರ್​ 19: ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ ಮೈಸೂರಿನ ನಂಜನಗೂಡು ಹೊಸಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್​​ ಬಸ್​ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವ್​​ ಆಗಿದ್ದಾರೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬಸ್​​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿದ್ದು, ಎಚ್ಚೆತ್ತ ಚಾಲಕ ಹೊಸಳ್ಳಿ ಗೇಟ್ ಬಳಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿದ ಪರಿಣಾಮ, ಬೆಂಕಿಗೆ ಬಸ್​​ ಆಹುತಿಯಾಗಿದೆ. ಈ ಬಗ್ಗೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link