ಆನೇಕಲ್, ಏಪ್ರಿಲ್ 25: ಕರ್ತವ್ಯದಲಿದ್ದಾಗಲೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಬಿಎಂಟಿಸಿ ಡಿಪೋದಲ್ಲಿ ಸಹೋದ್ಯೋಗಿಗಳು ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಮೃತಪಟ್ಟ ಚಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿರುವ ನೌಕರರು, ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟಿಸಿದರು. ರಮೇಶ್ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಿಸಬೇಕು, ಇಲ್ಲವಾದರೆ ಡಿಪೋ ಮುಂದೆ ಶವವನ್ನಿಟ್ಟು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಐಪಿಎಲ್ 2026 ರ 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು. ವೈಭವ್ ಐಪಿಎಲ್‌ನಲ್ಲಿ ಆಡುವ ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ವೈಭವ್ 2 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ.
ಎಂದಿನಂತೆ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಕೇವಲ 15 ಎಸೆತಗಳಲ್ಲಿ ಮೂರನೇ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಹಾಗೆಯೇ ವೈಭವ್ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದರು.
ಇನ್ನು ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 50 ರನ್ಗಳ ಗಡಿ ದಾಟುವ ಮೂಲಕ ಟಿ20 ಕ್ರಿಕೆಟ್ನಲ್ಲಿ 1,000 ರನ್ ಸಹ ಪೂರೈಸಿದರು. ಈ ಮೂಲಕ ಟಿ20ಕ್ರಿಕೆಟ್ನಲ್ಲಿ 1,000 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಕೇವಲ 15 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ವಿಶ್ವದಾಖಲೆಯನ್ನು ಸೃಷ್ಟಿಸಿದರು.
ವೈಭವ್ ಸೂರ್ಯವಂಶಿ 1,000 ಟಿ20 ರನ್ಗಳನ್ನು ಪೂರೈಸಲು ಕೇವಲ 473 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಕೂಡ ವಿಶ್ವ ದಾಖಲೆಯಾಗಿದೆ. ಈ ಹಿಂದೆ, ಯಾವುದೇ ಬ್ಯಾಟ್ಸ್‌ಮನ್ 500 ಕ್ಕಿಂತ ಕಡಿಮೆ ಎಸೆತಗಳಲ್ಲಿ 1,000 ಟಿ20 ರನ್ಗಳನ್ನು ಪೂರೈಸಿರಲಿಲ್ಲ. ಇದಕ್ಕೂ ಮೊದಲು, ಮಿಚೆಲ್ ಓವನ್ 533 ಎಸೆತಗಳಲ್ಲಿ 1000 ರನ್ ಪೂರೈಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. ಇದೀಗ ಆ ದಾಖಲೆ ವೈಭವ್ ಪಾಲಾಗಿದೆ.
ಈ ಶತಕದ ಇನ್ನಿಂಗ್ಸ್‌ನಲ್ಲಿ ವೈಭವ್ ಬರೋಬ್ಬರಿ 12 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ವೈಭವ್ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿಗಾಹಿImage Credit source: tv9 kannada
ದಾವಣಗೆರೆ, ಏಪ್ರಿಲ್ 25: ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ಮಾಡಿದ ಘಟನೆ ದಾವಣಗೆರೆ (davanagere)ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹಲ್ಲೆಯ ತೀವ್ರತೆಗೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ನಾಗರಾಜ್(18) ಮತ್ತು ಬಾಳಪ್ಪ(40) ಹಲ್ಲೆಗೊಳಗಾದ ಕುರಿಗಾಹಿಗಳು. ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪರಿಂದ ದೂರು ನೀಡಲಾಗಿದೆ.
ದಾವಣಗೆರೆ ತಾಲೂಕಿನ ನಾಗರಸನಹಳ್ಳಿಯ ಅಡಕೆ ತೋಟದಲ್ಲಿ ಈ ಕೃತ್ಯ ನಡೆದಿದೆ. ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಕೇವಲ 4 ಕುರಿಗಳು ಅಕ್ಕಪಕ್ಕದ ಅಡಕೆ ತೋಟಕ್ಕೆ ನುಗ್ಗಿದ್ದವು. ಇದರಿಂದ ಕೆರಳಿದ ತೋಟದ ಮಾಲೀಕರು ಅಮಾನವೀಯವಾಗಿ ವರ್ತಿಸಿದ್ದಾರೆ.
ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.
ಜೆಸಿಬಿಯಿಂದ ಹೂತು ಹಾಕುವ ಬೆದರಿಕೆ
ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನವದೆಹಲಿ, ಏಪ್ರಿಲ್ 25: ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಒಂದು ದಿನದ ನಂತರ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹೊಗಳಿದ್ದಾರೆ. “ಅರವಿಂದ್ ಕೇಜ್ರಿವಾಲ್ ಮೊದಲೆಲ್ಲ ಹರಿದ ಪ್ಯಾಂಟ್ ಧರಿಸುತ್ತಿದ್ದರು, 2 ರೂ. ಪೆನ್ ಬಳಸುತ್ತಿದ್ದರು, ಸಿಕ್ಕ ಚಪ್ಪಲಿ ಹಾಕಿಕೊಂಡು ತೀರಾ ಸಾಮಾನ್ಯ ಜೀವನ ನಡೆಸುತ್ತಿದ್ದರು. ಅವರು ಆಮ್ ಆದ್ಮಿ ಪಕ್ಷ ಕಟ್ಟಿದಾಗ ನಮ್ಮ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ನಮಗಿತ್ತು. ಹೀಗಾಗಿಯೇ ಆ ಪಕ್ಷ ಸೇರಿದೆವು. ಆದರೆ, ಅವರು ದೆಹಲಿಯ ಸಿಎಂ ಆದನಂತರ 100 ಕೋಟಿ ರೂ. ಬೆಲೆಯ ಬಂಗಲೆ ಕಟ್ಟಿದರು, ಐಷಾರಾಮಿ ಜೀವನ ನಡೆಸತೊಡಗಿದರು” ಎಂದು ಸ್ವಾತಿ ಮಲಿವಾಲ್ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 (IPL 2026) ರ 36 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಶತಕವನ್ನು ಸಿಡಿಸಿದರು. ತಮ್ಮ ಈ ಶತಕದ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 12 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದ ವೈಭವ್ ಕೇವಲ ಬೌಂಡರಿಗಳಿಂದಲೇ 92 ರನ್ ಕಲೆಹಾಕಿದರು. ಅಂದರೆ ವೈಭವ್ ಕೇವಲ 17 ಎಸೆತಗಳಲ್ಲಿ ಬರೋಬ್ಬರಿ 92 ರನ್ ಚಚ್ಚಿದರು.
ವೈಭವ್ಗೆ ಆರೆಂಜ್ ಕ್ಯಾಪ್
ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, 37 ಎಸೆತಗಳಲ್ಲಿ 103 ರನ್ ಬಾರಿಸಿ ಔಟಾದರು. 36ನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ವೈಭವ್ ಶತಕ ಪೂರೈಸಿದ್ದು ವಿಶೇಷವಾಗಿತ್ತು. ಇದು ವೈಭವ್ ಅವರ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಮೊದಲನೇ ಸೀಸನ್ನಲ್ಲಿ ಶತಕ ಬಾರಿಸಿದ್ದ ಅವರು ಇದೀಗ ಎರಡನೇ ಸೀಸನ್ನಲ್ಲೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಶತಕದೊಂದಿಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವೈಭವ್ ಅಗ್ರಸ್ಥಾನಕ್ಕೇರಿದ್ದು, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
2 ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್
ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ಆವೃತ್ತಿಯಲ್ಲಿ 36 ಎಸೆತಗಳಲ್ಲಿ ಎರಡನೇ ಶತಕ ಬಾರಿಸುವ ಮೂಲಕ ವೈಭವ್, ಐಪಿಎಲ್ ಇತಿಹಾಸದಲ್ಲಿ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಕೊರಳೊಡ್ಡಿದ್ದಾರೆ.
ಐಪಿಎಲ್‌ನಲ್ಲಿ ಅತಿ ವೇಗದ ಶತಕ
30 ಎಸೆತಗಳು – ಕ್ರಿಸ್ ಗೇಲ್ (2013- ಪುಣೆ ವಾರಿಯರ್ಸ್)
35 ಎಸೆತಗಳು – ವೈಭವ್ ಸೂರ್ಯವಂಶಿ (2025- ಗುಜರಾತ್ ಟೈಟಾನ್ಸ್)
ಈ ಇನ್ನಿಂಗ್ಸ್‌ನಲ್ಲಿ ವೈಭವ್ ಸೂರ್ಯವಂಶಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮತ್ತೊಂದು ಪ್ರಮುಖ ದಾಖಲೆಯನ್ನು ನಿರ್ಮಿಸಿದರು. ಈ 12 ಸಿಕ್ಸರ್ಗಳ ಸಹಾಯದಿಂದ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ವೈಭವ್ ಪಾಲಾಗಿದೆ. ಈ ಹಿಂದೆ, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದ ಮುರಳಿ ವಿಜಯ್ ಈ ದಾಖಲೆಯನ್ನು ಹೊಂದಿದ್ದರು.
ಬೆಂಗಳೂರು, (ಏಪ್ರಿಲ್ 25): ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಈರುಳ್ಳಿ ವ್ಯಾಪಾರಿ (onion merchant) ಬರ್ಬರವಾಗಿ ಹತ್ಯೆಯಾಗಿದ್ದಾನೆ. ಬೆಂಗಳೂರಿನ (Bengaluru) ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ರಾಮಚಂದ್ರ ರೆಡ್ಡಿ ಕೊಲೆಯಾದ ವ್ಯಕ್ತಿ. ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಈರುಳ್ಳಿ ವ್ಯಾಪಾರಿಯಾಗಿದ್ದು (Tamil nadu onion merchant), ವ್ಯಾಪಾರಕ್ಕೆಂದು ಬೆಂಗಳೂರಿಗೆ ಮಹಿಳೆಯೊಬ್ಬರ ಪರಿಚಯವಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಬಳಿಕ ಬೆಂಗಳೂರಿಗೆ ಬಂದಾಗೆಲ್ಲಾ ಮಹಿಳೆಯ ಮನೆಗೆ ಹೋಗಿ ಬರ್ತಿದ್ದ. ಅದರಂತೆ ನಿನ್ನೆ(ಏಪ್ರಿಲ್ 25) ಸಹ ಮಹಿಳೆಯ ಮನೆಗೆ ತೆರಳಿದ್ದ ವೇಳೆ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮಹಿಳೆಯ ಹೊಸ ಪ್ರಿಯಕರ ಹರೀಶ್ , ಎನ್ನುವಾತನೇ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಈರುಳ್ಳಿ ವ್ಯಾಪಾರಿಯಾಗಿದ್ದ ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ, ವ್ಯಾಪಾರಕ್ಕೆಂದು ಬೆಂಗಳೂರಿಗೆ ಬರುತ್ತಿದ್ದ. ಆ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿಗೆ ಮಹಿಳೆಯೊಬ್ಬರ ಪರಿಚಯವಾಗಿದ್ದು, ಬಳಿಕ ಇಬ್ಬರ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಹೀಗಾಗಿ ಬೆಂಗಳೂರಿಗೆ ಬಂದಾಗೆಲ್ಲ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದ. ಈ ನಡುವೆ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಕೂಡ ಶುರು ಆಗಿದೆ. ಆದ್ರೆ ಇತ್ತೀಚೆಗೆ ರಾಮಚಂದ್ರ ರೆಡ್ಡಿ ಬಂದು ಹೋಗುವುದು ಹರೀಶ್ ಗೆ ಗೊತ್ತಾಗಿದ್ದು, ಪ್ರೇಯಸಿಯ ಸಂಬಂಧವನ್ನ ಸಹಿಸದೆ ಆಕ್ರೋಶಗೊಂಡಿದ್ದ. ಅಲ್ಲದೇ ಇದಕ್ಕೆ ಅಂತ್ಯಹಾಡಬೇಕೆಂದು ಪ್ಲ್ಯಾನ್ ಮಾಡಿದ್ದ.
ಈ ಸಂದರ್ಭದಲ್ಲಿ ರಾಮಚಂದ್ರ ರೆಡ್ಡಿ ಸಹ ನಿನ್ನೆ (ಏಪ್ರಿಲ್ 25) ಮಹಿಳೆಯ ಮನೆಗೆ ಬಂದಿದ್ದು, ಬಳಿಕ ಅಲ್ಲೇ ಇದ್ದ ದೇವಸ್ಥಾನವೊಂದರ ಬಳಿ ಮಲಗಿದ್ದ. ಇದೇ ಸಮಯಕ್ಕೆ ಮಹಿಳೆಯ ಪ್ರಿಯಕರ ಹರೀಶ್ ಬಂದು ರಾಮಚಂದ್ರ ರೆಡ್ಡಿ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು, ಹಂತಕ ಹರೀಶ್ನನ್ನು ಬಂಧಿಸಿದ್ದಾರೆ.
ಮಹಿಳೆಯರಲ್ಲಿ ಕೆಲವೊಮ್ಮೆ ಕೆಳ ಹೊಟ್ಟೆ ಭಾಗದಲ್ಲಿ ನೋವು (Lower Stomach Pain) ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಮಾಸಿಕ ಚಕ್ರದ (Periods) ಸಮಯದಲ್ಲಿ ಈ ನೋವು ಕಾಣಿಸಿಕೊಳ್ಳಬಹುದು. ಆದರೆ ಪೀರಿಯಡ್ಸ್ ಇಲ್ಲದ ಸಮಯದಲ್ಲೂ ನಿರಂತರವಾಗಿ ನೋವು ಕಾಣಿಸಿದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಹೌದು ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದು ಗಂಭೀರ ಕಾಯಿಲೆ ಬರುವ ಲಕ್ಷಣವಾಗಿರಬಹುದು. ಹಾಗಾಗಿ ಬಹಳ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಈ ರೀತಿಯಾಗುವುದು ಯಾವ ಕಾಯಿಲೆ ಬರುವ ಮುನ್ಸೂಚನೆ, ಈ ಆರೋಗ್ಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಕಾಯಿಲೆಗಳ ಸೂಚನೆ ಇರಬಹುದು?
ತಜ್ಞರ ಪ್ರಕಾರ, ಕೆಳ ಹೊಟ್ಟೆ ನೋವು ಹಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಪ್ರಮುಖವಾಗಿ ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID) ಎನ್ನುವ ಸೋಂಕಿನಿಂದ ಕೆಳ ಹೊಟ್ಟೆ ಮತ್ತು ನಾಭಿಯ ಸುತ್ತ ನೋವು ಕಾಣಿಸಬಹುದು. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ರೀತಿ, ಒವೆರಿಯನ್ ಸಿಸ್ಟ್ ಸಮಸ್ಯೆಯೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ವಿಶೇಷವಾಗಿ PCOD ಮತ್ತು PCOS ಇರುವವರಲ್ಲಿ ಈ ಸಮಸ್ಯೆ ಸಾಮಾನ್ಯ. ಇದರ ಪರಿಣಾಮವಾಗಿ ಕೆಳ ಹೊಟ್ಟೆ ಭಾಗದಲ್ಲಿ ನಿರಂತರ ನೋವು ಕಾಣಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರವಾಗಬಹುದು.
ಮತ್ತೊಂದು ಗಂಭೀರ ಸಮಸ್ಯೆ ಎಂಡೋಮೆಟ್ರಿಯೊಸಿಸ್. ಈ ಸ್ಥಿತಿಯಲ್ಲಿ ಗರ್ಭಾಶಯದ ಒಳಗಿನ ಪದರ ಹೊರಭಾಗದಲ್ಲೂ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಪೀರಿಯಡ್ಸ್ ಸಮಯದಲ್ಲಿ ತೀವ್ರ ನೋವು ಮತ್ತು ಕೆಳ ಹೊಟ್ಟೆಯಲ್ಲಿ ನಿರಂತರ ಅಸ್ವಸ್ಥತೆ ಉಂಟಾಗಬಹುದು. ಚಿಕಿತ್ಸೆ ವಿಳಂಬವಾದರೆ ಸಂತಾನಹೀನತೆಯ ಅಪಾಯವೂ ಹೆಚ್ಚುತ್ತದೆ.
ಉರಿಯೂತ, ಪದೇಪದೇ ಮೂತ್ರ ವಿಸರ್ಜನೆ ಮತ್ತು ಕೆಳ ಹೊಟ್ಟೆ ನೋವು ಯೂರಿನ್ ಇನ್ಫೆಕ್ಷನ್ ಲಕ್ಷಣಗಳಾಗಿರಬಹುದು. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ.
ಕೆಳ ಹೊಟ್ಟೆ ನೋವು ಹಲವು ದಿನಗಳವರೆಗೆ ಮುಂದುವರಿದರೆ, ನೋವು ತೀವ್ರವಾಗಿದ್ರೆ ಅಥವಾ ಜೊತೆಗೆ ಬೇರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಬೇಕು.
ತಡೆಗಟ್ಟುವ ಕ್ರಮಗಳು:
ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ
ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
ಯಾವುದೇ ನೋವನ್ನು ನಿರ್ಲಕ್ಷಿಸಬೇಡಿ
ತಜ್ಞರ ಅಭಿಪ್ರಾಯದಂತೆ, ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.
ಮೈಸೂರು, ಏಪ್ರಿಲ್ 25: ಮಗ ಅಂದರೆ ಹೆತ್ತ ತಾಯಿಗೆ ಪ್ರಾಣಕ್ಕಿಂತ ಮಿಗಿಲು. ಆದರೆ ಅದೇ ಮಗ ಕುಡಿತದ ಚಟಕ್ಕೆ ಬಿದ್ದು, ದಿನನಿತ್ಯ ಹೆತ್ತವಳಿಗೆ ನರಕಯಾತನೆ ನೀಡಿದರೆ ಏನಾಗಬಹುದು ಎಂಬುದಕ್ಕೆ ಮೈಸೂರಿನಲ್ಲಿ ನಡೆದ ಈ ಭೀಕರ ಘಟನೆಯೇ ಸಾಕ್ಷಿ. ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಾಯಿಯೇ (Mother) ಕಲ್ಲಿನಿಂದ ಹೊಡೆದು ಕೊಲೆ (kill)ಮಾಡಿದ ಘಟನೆ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ.
ಮೈಸೂರಿನ ಎನ್.ಆರ್. ಮೊಹಲ್ಲಾ ನಿವಾಸಿ ಮಂಜುಳಾ ಎಂಬುವವರ ಮಗ ರಮೇಶ (43) ಕೊಲೆಯಾದ ವ್ಯಕ್ತಿ. ಈತನನ್ನು ಕೊಲೆ ಮಾಡಿದ್ದು, ಹೆತ್ತ ತಾಯಿ ಮಂಜುಳಾ. ಬೇರೆಯವರ ಮನೆಯಲ್ಲಿ ಮಂಜುಳಾ ಕೆಲಸ ಮಾಡಿಕೊಂಡಿದ್ದರು. ಮಗ ರಮೇಶನಿಗೆ ಕುಡಿತದ ಚಟವಿತ್ತು. ಈತ ಕೆಲಸಕ್ಕೂ ಹೋಗದೆ ದಿನನಿತ್ಯ ಕುಡಿಯಲು ಹಣ ನೀಡುವಂತೆ ತಾಯಿಗೆ ಕಿರುಕುಳ ನೀಡುತ್ತಿದ್ದ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೊಲೆ
ಪ್ರತಿದಿನ ಮಗ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆ ಮಂಜುಳಾ ಅವರಿಗೆ ಅಸಹನೀಯವಾಗಿತ್ತು. ಕೊನೆಗೆ ಈ ಹಿಂಸೆಯಿಂದ ಮುಕ್ತಿ ಪಡೆಯಲು ತಾಯಿ ಒಂದು ಭೀಕರ ಪ್ಲ್ಯಾನ್ ಮಾಡಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿಗೆ ಮಗನನ್ನು ಕರೆದುಕೊಂಡು ಹೋಗಿದ್ದ ಮಂಜುಳಾ, ಅಲ್ಲಿ ಮಗನ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ, ಅಲ್ಲೇ ಇದ್ದ ಕಲ್ಲನ್ನು ಎತ್ತಿ ಮಗನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ರಮೇಶ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಾಯಿಬಿಟ್ಟ ತಾಯಿ
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಜರ್‌ಬಾದ್ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೊದಲು ಕೊಲೆಯ ಬಗ್ಗೆ ಚಿಕ್ಕ ಸುಳಿವು ಸಿಕ್ಕಿರಲಿಲ್ಲ. ನಂತರ ಪೊಲೀಸರು ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ. ಈ ವೇಳೆ ತಾಯಿ, ಮಗನನ್ನು ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋದ ದೃಶ್ಯ ಸೆರೆಯಾಗಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ತಾಯಿಯ ವಿಚಾರಣೆ ಮಾಡಿದ್ದು, ಆಗ ತಾಯಿ ಸತ್ಯ ಬಾಯಿ ಬಿಟ್ಟಿದ್ದಾರೆ.
‘ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾದ ಬಳಿಕ ಆದಿತ್ಯ ಧರ್ ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈ ಎರಡೂ ಸಿನಿಮಾಗಳನ್ನು ನಿರ್ದೇಶನ ಮಾಡಿರುವುದು ಮಾತ್ರವೇ ಅಲ್ಲದೆ ನಿರ್ಮಾಣವನ್ನೂ ಮಾಡಿದ್ದಾರೆ ಆದಿತ್ಯ ಧರ್. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಈ ವರೆಗೆ ಮೂರು ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಆದಿತ್ಯ ಧರ್ ಬಹುಷಃ ಬಾಲಿವುಡ್ನ ಶ್ರೀಮಂತ ನಿರ್ದೇಶಕರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಅಂದಹಾಗೆ ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಮುಂಬೈನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಮನೆಯಲ್ಲಿ ವಾಸವಿರುತ್ತಾರೆ. ಈ ಮನೆ ಆಧುನಿಕ ಲಕ್ಷುರಿಗಳ ಜೊತೆಗೆ ನೈಸರ್ಗಿಕ ಅಂಶಗಳನ್ನು ಸಹ ಒಳಗೊಂಡಿದೆ.
ಯಾಮಿ ಗೌತಮ್ ಹಾಗೂ ಆದಿತ್ಯ ಧರ್ 2021 ರಲ್ಲಿ ಸರಳವಾಗಿ ವಿವಾಹವಾದರು. ಅದಕ್ಕೆ ಮುನ್ನ ಆದಿತ್ಯ ಧರ್ ನಿರ್ದೇಶನದ ‘ಉರಿ’ ಸಿನಿಮಾನಲ್ಲಿ ಯಾಮಿ ನಟಿಸಿದ್ದರು. ಅಲ್ಲಿಂದಲೇ ಈ ಇಬ್ಬರ ನಡುವೆ ಪ್ರೀತಿ ಶುರುವಾಯ್ತು. ಯಾಮಿಯನ್ನು ಮದುವೆಯಾದ ಬಳಿಕ ಆದಿತ್ಯ ಅವರ ಅದೃಷ್ಟವೇ ಬದಲಾಯ್ತು. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ನೀಡಿದ್ದಾರೆ.
ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರು ಮುಂಬೈನ ಬಾಂದ್ರಾನಲ್ಲಿ ಹಲವು ಪ್ರತಿಷ್ಠಿತ ಸಿನಿಮಾ ಸೆಲೆಬ್ರಿಟಿಗಳು ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಅನ್ನು ಹೊಂದಿದ್ದು, ಅಲ್ಲಿಯೇ ವಾಸ ಮಾಡುತ್ತಾರೆ. ಅವರ ಮನೆಯ ಮೌಲ್ಯ ಸುಮಾರು 15 ರಿಂದ 20 ಕೋಟಿ ರೂಪಾಯಿಗಳಂತೆ. ಅವರ ಮನೆ ಸರಳವಾಗಿ, ಕಂಫರ್ಟ್ ಆಗಿ ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಸರಳವಾದ ಇಂಟೀರಿಯರ್ ಜೊತೆಗೆ ಹಲವು ಒಳಗಾಂಣದಲ್ಲಿ ಹಲವು ಗಿಡಗಳು, ಬಳ್ಳಿಗಳನ್ನು ಯಾಮಿ ಮತ್ತು ಆದಿತ್ಯ ಹೊಂದಿದ್ದಾರೆ.
ಮನೆಯ ಒಳಭಾಗದಲ್ಲಿ, ಬೆಳಕು-ನೆರಳಿನ ಕಾಂಬಿನೇಷನ್ಗಳು ಮತ್ತು ಮರದ ರೀತಿಯ ವಿನ್ಯಾಸಗಳು ಹೆಚ್ಚಿಗಿವೆ. ತಿಳಿ ಬಣ್ಣವನ್ನು ಒಳಾಂಗಣದಲ್ಲಿ ಹೆಚ್ಚು ಬಳಕೆ ಮಾಡಲಾಗಿದ್ದು, ಇದು ಶಾಂತ ಅನುಭವವನ್ನು ನೀಡುತ್ತದೆಯಂತೆ. ಬಹುತೇಕ ಒಳಾಂಗಣ ವಿನ್ಯಾಸವನ್ನು ನಟಿ ಯಾಮಿ ಗೌತಮ್ ಅವರೇ ಮಾಡಿದ್ದಾರೆ. ಆದಿತ್ಯ ಧರ್ ಅವರು ನಿಸರ್ಗ ಪ್ರೇಮಿಯಾಗಿದ್ದು, ಮನೆಯಲ್ಲಿ ಗಿಡಗಳು ಅವರದ್ದೇ ಐಡಿಯಾ ಅಂತೆ. ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಸರಳತೆಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಕಾರಣ, ಮನೆಯ ಒಳಾಂಗಣವನ್ನು ಸಹ ಸರಳವಾಗಿ ಮತ್ತು ಸುಂದರವಾಗಿರುವಂತೆ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಯಶಸ್ಸಿನ ಬಳಿಕ ಅಶ್ವತ್ಥಾಮ ಕುರಿತಾದ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಯಾಮಿ ಗೌತಮ್ ಅವರು ಪ್ರಸ್ತುತ ‘ನಯಿ ನವೇಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅವರು ‘ಧುರಂಧರ್ 2’ ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು.
ಇಸ್ಲಮಾಬಾದ್, ಏಪ್ರಿಲ್ 25: ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕದ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಪ್ರಮುಖ ಬೆಳವಣಿಗೆಯಲ್ಲಿ ಇರಾನ್ (Iran) ನಿಯೋಗವು ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಇಸ್ಲಮಾಬಾದ್ನ ಸುದ್ದಿ ಸಂಸ್ಥೆ ಹೇಳಿದೆ. ಪಾಕಿಸ್ತಾನದ (Pakistan) ಇಸ್ಲಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ವಿಫಲವಾಗುವಂತೆ ಕಂಡುಬರುತ್ತಿದೆ. ಟೆಹ್ರಾನ್ ಇನ್ನೂ ಪಾಕಿಸ್ತಾನಕ್ಕೆ ಭೇಟಿ ನೀಡುವ ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಹೇಳಿದೆ ಎನ್ನಲಾಗಿದೆ.
ಪಾಕಿಸ್ತಾನ ಮೂಲದ ಮಾಧ್ಯಮ ಸಂಸ್ಥೆ ARY ನ್ಯೂಸ್‌ನ ಅಧ್ಯಕ್ಷ ಕಮ್ರಾನ್ ಖಾನ್ ನೀಡಿರುವ ಮಾಹಿತಿ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ನಿಗದಿತ ಸಭೆಯ ಸುತ್ತ ಅನಿಶ್ಚಿತತೆ ತೀವ್ರಗೊಂಡಿದೆ. ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಎರಡನೇ ಸುತ್ತಿನ ಚರ್ಚೆಗಳ ನಿರೀಕ್ಷೆಗಳು ಮಂಕಾಗಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇಸ್ಲಮಾಬಾದ್‌ನಲ್ಲಿ ಇಂದು ಎರಡನೇ ಸುತ್ತಿನ ಯುಎಸ್-ಇರಾನ್ ಮಾತುಕತೆಗಳ ಪುನರಾರಂಭದ ನಿರೀಕ್ಷೆಗಳು ಮಸುಕಾಗುತ್ತಿವೆ. ಇರಾನ್ ಇನ್ನೂ ಅಮೆರಿಕದ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಟೆಹ್ರಾನ್ ಇನ್ನೂ ವಾಷಿಂಗ್ಟನ್‌ನಿಂದ ತಡರಾತ್ರಿ ಆಗಮಿಸುವ ನಿರೀಕ್ಷೆಯಿದ್ದ ಯುಎಸ್ ನಿಯೋಗವನ್ನು ಭೇಟಿ ಮಾಡಲು ಸಿದ್ಧವಾಗಿಲ್ಲ. ಎರಡನೇ ಸುತ್ತಿನ ಮಾತುಕತೆಗಳನ್ನು ತೆರೆಯಲು ಪೂರ್ವಭಾವಿ ಷರತ್ತಾಗಿ ಅಮೆರಿಕನ್ನರು ಹಾರ್ಮುಜ್ ಜಲಸಂಧಿಯ ದಿಗ್ಬಂಧನವನ್ನು ಕೊನೆಗೊಳಿಸಬೇಕೆಂದು ಇರಾನ್ ಒತ್ತಾಯಿಸುತ್ತಲೇ ಇದೆ ಎಂದು ಪಾಕಿಸ್ತಾನ ಮೂಲದ ಸುದ್ದಿ ಸಂಸ್ಥೆ ತಿಳಿಸಿದೆ.
Informed sources are saying:
Prospects for the resumption of the second round of U.S.-Iran talks in Islamabad today are rapidly fading, as Tehran is still not ready to meet the U.S. delegation, which was expected to arrive late tonight from Washington. Iran continues to insist…
ಪಾಕಿಸ್ತಾನದ ಪಿಎಂಒ ಎಕ್ಸ್‌ನಲ್ಲಿ ಇರಾನ್ ವಿದೇಶಾಂಗ ಸಚಿವರು ಮತ್ತು ಅವರ ನಿಯೋಗವು ನಿನ್ನೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗುವುದನ್ನು ತೋರಿಸುವ ಒಂದು ಸಣ್ಣ ವೀಡಿಯೊವನ್ನು ಪೋಸ್ಟ್ ಮಾಡಿದೆ. ಈ ಸಭೆಯಲ್ಲಿ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದಾರ್ ಮತ್ತು ಸೇನಾ ಮುಖ್ಯಸ್ಥ ಸೈಯದ್ ಅಸಿಮ್ ಮುನೀರ್ ಕೂಡ ಭಾಗವಹಿಸಿದ್ದರು. ಈ ಸಭೆಯ ಕುರಿತು ಹೆಚ್ಚಿನ ವಿವರಗಳನ್ನು ಪಾಕಿಸ್ತಾನ ಸರ್ಕಾರ ಹಂಚಿಕೊಂಡಿಲ್ಲ. ಆದರೆ, ಈ ಬಾರಿ ಯುಎಸ್-ಇರಾನ್ ನಡುವೆ ನೇರ ಮಾತುಕತೆ ಇರುವುದಿಲ್ಲ ಎಂದು ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ