Chanakya Niti: ಶ್ರೀಮಂತಿಕೆ ಗಳಿಸಲು ಬಯಸುವವರು ಈ ಗೋಲ್ಡನ್‌ ರೂಲ್ಸ್‌ಗಳನ್ನು ತಪ್ಪದೇ ಪಾಲಿಸಿ – Kannada News | Chanakya Niti: If you follow these three principles of Chanakya, you can become rich

ಜೀವನದಲ್ಲಿ ಯಶಸ್ಸನ್ನು  (Success) ಸಾಧಿಸಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು, ಸಮಾಜದಲ್ಲಿ ಗೌರವದಿಂದ ಬಾಳಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಅನೇಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅನೇಕರಿಗೆ ಕಷ್ಟಪಟ್ಟು ಕೆಲಸ ಮಾಡಿದರೂ ಸಾಕಷ್ಟು ಹಣ ಗಳಿಸಲು ಸಾಧ್ಯವಾಗುವುದೇ ಇಲ್ಲ. ನಿಮಗೂ  ಹೀಗೆ ಹಗಲಿರುಳು ಶ್ರಮಿಸಿದರೂ ಹೆಚ್ಚಿನ ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲವೇ, ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ಆಚಾರ್ಯ ಚಾಣಕ್ಯರು ತಿಳಿಸಿರುವ ಈ ಕೆಲವೊಂದು ಗೋಲ್ಡನ್‌ ರೂಲ್ಸ್‌ಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನ ಸಕಾರಾತ್ಮಕವಾಗಿ ಬದಲಾಗುತ್ತದೆ.

ಶ್ರೀಮಂತಿಕೆ ಗಳಿಸಲು ಈ ತತ್ವಗಳನ್ನು ಪಾಲಿಸಿ:

ಹಣ ವ್ಯರ್ಥ ಮಾಡುವುದನ್ನು ತಪ್ಪಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಹಣವನ್ನು ಉಳಿಸುವ ಬಗ್ಗೆ ಯೋಚಿಸಬೇಕು. ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವುದು ಬಡತನಕ್ಕೆ ಕಾರಣವಾಗಬಹುದು. ಆದ್ದರಿಂದ ಹಣವನ್ನು ಖರ್ಚು ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. ಹನಿ ಹನಿ ಕೂಡಿದರೆ ಹಳ್ಳ ಎಂಬ ಮಾತಿನಂತೆ, ಸಣ್ಣ ಮೊತ್ತದ ನಿರಂತರ ಉಳಿತಾಯದಿಂದಲೂ ಸಹ ಸಂಪತ್ತು ಹೆಚ್ಚಾಗುತ್ತದೆ ಮತ್ತು ಈ ಉಳಿತಾಯದ ಅಭ್ಯಾಸವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ, ಆ ಹಣವನ್ನು ಉಳಿತಾಯ ಮಾಡಿ. ಉಳಿತಾಯದ ಜೊತೆಗೆ ಜಾಣತನದಿಂದ ಹೂಡಿಕೆಯನ್ನೂ ಮಾಡಬೇಕು.

ಬಹು ಆದಾಯದ ಮೂಲಗಳನ್ನು ರಚಿಸಿ: ಆರ್ಥಿಕವಾಗಿ ಸ್ಥಿತಿವಂತರಾಗಲು, ಶ್ರೀಮಂತಿಕೆಯನ್ನು ಗಳಿಸಲು ಬಯಸುವವರು ಬಹು ಆದಾಯದ ಮೂಲಗಳನ್ನು ರಚಿಸಬೇಕು. ಒಂದೇ ಆದಾಯದ ಮೂಲದಿಂದ ಶ್ರೀಮಂತಿಕೆಯನ್ನು ಗಳಿಸಲು ಎಂದಿಗೂ ಸಾಧ್ಯವಿಲ್ಲ. ಆರ್ಥಿಕ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಬಹು ಆದಾಯದ ಮೂಲವನ್ನು ಅವಲಂಬಿಸುವುದು ಅತ್ಯಗತ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಚಿಕ್ಕ ವಯಸ್ಸಿನಿಂದಲೇ ಈ ದಿಕ್ಕಿನಲ್ಲಿ ಶ್ರಮಿಸುವವರು ಭವಿಷ್ಯದಲ್ಲಿ ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ.

ಇದನ್ನೂ ಓದಿ: ಶ್…‌ ನಿಮ್ಮ ವೈಯಕ್ತಿಕ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬೇಡಿ

ಸೋಮಾರಿತನವನ್ನು ಶಾಶ್ವತವಾಗಿ ತ್ಯಜಿಸಿ: ಚಾಣಕ್ಯ ತತ್ವದ ಪ್ರಕಾರ, ಶ್ರೀಮಂತನಾಗಲು, ಒಬ್ಬ ವ್ಯಕ್ತಿಯು ಸೋಮಾರಿತನವನ್ನು ತ್ಯಜಿಸಿ ಕಠಿಣ ಪರಿಶ್ರಮಿಯಾಗಿರಬೇಕು. ಏಕೆಂದರೆ ನೀವು ಸೋಮಾರಿತನವನ್ನು ಬಿಡದಿದ್ದರೆ, ನಿಮ್ಮ ಗುರಿಯನ್ನು ಸಮಯಕ್ಕೆ ತಲುಪಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಗುರಿಗಳನ್ನು ಸಾಧಿಸಲು ನೀವು ಶ್ರಮಿಸಬೇಕು. ಈ ಆಲೋಚನೆಯು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು.

ಕೆಟ್ಟ ಸಹವಾಸದಿಂದ ದೂರವಿರಿ: ಕೆಟ್ಟವರ ಸಹವಾಸ, ದುರಾಭ್ಯಾಸ ಇವೆರಡೂ ಸಹ ನೀವು ಶ್ರೀಮಂತರಾಗುವುದನ್ನು ತಡೆಯುತ್ತದೆ.  ಕೆಟ್ಟ ಸಹವಾಸದಿಂದ ದೂರವಿರಿ. ಚಾಣಕ್ಯ ನೀತಿಯ ಪ್ರಕಾರ, ಕೆಟ್ಟ ಸಹವಾಸವು ವಿನಾಶಕ್ಕೆ ಕಾರಣವಾಗುತ್ತದೆ ಮತ್ತು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನೀವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *