Chanakya Niti On Marriage: ಅಂದಚೆಂದವಲ್ಲ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ವಿಷಯಗಳನ್ನು ಅಗತ್ಯವಾಗಿ ಪರಿಗಣಿಸಿ – Kannada News | Chanakya Niti: Know these things when choosing a life partner

ಮದುವೆ (Marriage) ಎನ್ನುವುದು ಜೀವನದ ಪ್ರಮುಖ ಘಟ್ಟ. ಈ ವೈವಾಹಿಕ ಜೀವನ ಸುಂದರವಾಗಿರಬೇಕೆಂದರೆ ಸೂಕ್ತವಾದ ಜೀವನ ಸಂಗಾತಿಯನ್ನು ಆರಿಸುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಿಂದ ಜೀವನವೂ ಉತ್ತಮವಾಗಿರುತ್ತದೆ. ಇಂದಿನ ಈ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡಿದಾಗ ಮದುವೆ ಅನೇಕರು ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಹೇಗೆ, ಮದುವೆಯಾದರೆ ಜೀವನ ಹಾಳಾಗಬಹುದೇ ಎಂದು ತಲೆಕೊಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವ ಬದಲು ಜೀವನ ಸಂಗಾತಿಯ ಸ್ವಭಾವ, ನಡವಳಿಕೆ, ಸಂಸ್ಕಾರ ಹೇಗಿದೆ ಎಂಬುದನ್ನು ಪರಿಗಣಿಸಬೇಕು ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಲೈಫ್‌ ಪಾರ್ಟ್ನರ್‌ ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನು ಪರಿಗಣಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನು ಪರಿಗಣಿಸಬೇಕು?

ನೋಟವಲ್ಲ ಉತ್ತಮ ಸ್ವಭಾವವನ್ನು ಪರಿಗಣಿಸಿ:

ಕೇವಲ ಬಾಹ್ಯ ಸೌಂದರ್ಯವನ್ನು ಆಧರಿಸಿ ಮದುವೆಯಾಗಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.  ಆಕರ್ಷಣೆಯು ತಾತ್ಕಾಲಿಕ, ಆದರೆ ಉತ್ತಮ ಸ್ವಭಾವ, ತಿಳುವಳಿಕೆ ಮತ್ತು ಗೌರವವು ದೀರ್ಘಾವಧಿಯವರೆಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಉತ್ತಮ ಸ್ವಭಾವದ, ಕಷ್ಟಕಾಲದಲ್ಲಿ ನಿಮ್ಮ ಜೊತೆಯಾಗಿ ನಿಲ್ಲುವ ಉತ್ತಮ ಗುಣವಿರುವ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.

ಕೋಪದ ಸ್ವಭಾವದ ಬಗ್ಗೆ ಎಚ್ಚರದಿಂದಿರಿ:

ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಅಥವಾ ಕೆಟ್ಟ ಪದಗಳನ್ನು ಬಳಸಿ ಮಾತನಾಡುವ, ನಿರಂತರವಾಗಿ ಕಠಿಣ ಭಾಷೆಯನ್ನು ಬಳಸುವವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡುವುದರಿಂದ ಸಂಬಂಧಗಳಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಚಾಣಕ್ಯ.

ದುರಾಸೆಯ ಸ್ವಭಾವದವರ ಬಗ್ಗೆ ಎಚ್ಚರ ಇರಲಿ:

ಒಬ್ಬ ವ್ಯಕ್ತಿಯು ಸಂಬಂಧಕ್ಕಿಂತ ಹಣ, ಆಸ್ತಿ, ಅಂತಸ್ತಿಗೆ ಆದ್ಯತೆ ನೀಡಿದರೆ , ಅಂತಹ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಜೀವನದ ಸಂದರ್ಭಗಳು ಬದಲಾಗುತ್ತವೆ ಮತ್ತು ಕಷ್ಟದ ಸಮಯದಲ್ಲಿ, ಸಂಬಂಧಕ್ಕೆ ಆದ್ಯತೆ ನೀಡುವ ಸಂಗಾತಿ ಮಾತ್ರ ನಿಮ್ಮೊಂದಿಗೆ ಅಂಟಿಕೊಳ್ಳುತ್ತಾರೆ.

ಇದನ್ನೂ ಓದಿ: ಮಹಿಳೆಯರು ತಮ್ಮ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಗುಣಗಳನ್ನು ಪರಿಗಣಿಸಿ:

ಪ್ರಾಮಾಣಿಕತೆ, ಉತ್ತಮ ನಡವಳಿಕೆಯಿರುವ ವ್ಯಕ್ತಿಗಳನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡುವುದು ಉತ್ತಮ. ಸುಳ್ಳು ಹೇಳುವ, ಮೋಸ ಮಾಡುವ ಅಥವಾ ದುಶ್ಷಟಗಳಿಗೆ ದಾಸರಾಗಿರುವ ವ್ಯಕ್ತಿಯೊಂದಿಗೆ ಸಂಬಂಧವನ್ನು ಬೆಳೆಸಬಾರದು. ಇಂತಹವರಿಗೆ ಜೀವನ ಹಾಳಾಗುವ ಸಾಧ್ಯತೆ ಹೆಚ್ಚು.

ಸಂಸ್ಕಾರವಂತರನ್ನು ಆಯ್ಕೆ ಮಾಡಿ:

ಸಂಗಾತಿಯನ್ನು ಆಯ್ಕೆಮಾಡುವಾಗ, ಬಾಹ್ಯ ಸೌಂದರ್ಯವನ್ನು ನೋಡುವ ಬದಲು ವ್ಯಕ್ತಿಯ ಗುಣಗಳಿಗೆ ಪ್ರಾಮುಖ್ಯತೆ ನೀಡಬೇಕು, ಅವರ ಆಲೋಚನೆಗಳು ಮತ್ತು ಸಂಸ್ಕಾರಕ್ಕೆ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಸಂಸ್ಕಾರ ಹೊಂದಿರುವ ವ್ಯಕ್ತಿಯು ಮದುವೆಯ ನಂತರ ತನ್ನ ಸಂಗಾತಿಯನ್ನು  ಉತ್ತಮವಾಗಿ ನೋಡಿಕೊಳ್ಳುತ್ತಾರೆ, ಅವರು ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ, ಎಂತಹದ್ದೇ ಕೆಟ್ಟ ಪರಿಸ್ಥಿತಿಯನ್ನೂ ತನ್ನ ಸಂಗಾತಿಯನ್ನು ಬಿಟ್ಟು ಹೋಗುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *