ಕೊಪ್ಪಳ, (ಜೂನ್ 25): ಮುನಿರಾಬಾದ್ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್ಗಳನ್ನು ಬದಲಾಯಿಸಿ ಹೊಸ ಗೇಟ್ಗಳನ್ ಅಳವಡಿಸಲಾಗಿದ್ದು, ಇಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ಇವತ್ತು ತುಂಗಭದ್ರಾ ಜಲಾಶಯ ಕಾಪಾಡಿದ್ದೇವೆ.ಹೀಗಾಗಿ ಇವತ್ತು ನಮಗೆ ಹೆಮ್ಮೆಯ ದಿನ, ನಾನು ಅತ್ಯಂತ ಖುಷಿಯಾಗಿದ್ದೇನೆ. 19ನೇ ಗೇಟ್ ಕೊಚ್ಚಿಕೊಂಡು ಹೋದಾಗ ನನಗೆ ಕರೆ ಮಾಡಿದ್ದರು. ಅಂದು ಬೆಳಗ್ಗೆ 8.30ಕ್ಕೆ ಡ್ಯಾಂ ಬಳಿ ಬಂದು ಪರಿಶೀಲನೆ ಮಾಡಿದ್ದೆ. ದಿಟ್ಟ ಪ್ರಯತ್ನದಿಂದ ಡ್ಯಾಂನ 19ನೇ ಗೇಟ್ ಬದಲಾವಣೆ ಮಾಡಿ ರೈತರ ಬೆಳೆಯನ್ನು ಉಳಿಸಿದ್ವಿ. ಈಗ 33 ಗೇಟ್ ಬದಲಾಯಿಸಲು ಭಗವಂತ ಆಶೀರ್ವಾದ ಮಾಡಿದ್ದಾನೆ. ನಾನು ನೀರಾವರಿ ಸಚಿವನಾಗಿದ್ದೆ, ಇವತ್ತು ಮುಖ್ಯಮಂತ್ರಿ ಆಗಿದ್ದೇನೆ. ಡ್ಯಾಂನ ಹೇಗೆ ರಕ್ಷಣೆ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. 3 ರಾಜ್ಯಗಳ ನೀರಾವರಿ ಸಮಸ್ಯೆಯನ್ನು ಒಮ್ಮತದಿಂದ ಬಗೆಹರಿಸೋಣ. ನಾವೆಲ್ಲ ಒಟ್ಟಾಗಿ ಹೋಗಬೇಕು ಅದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.
