CSK vs RR: ಸಿಎಸ್​ಕೆ ವಿರುದ್ಧ 15 ಎಸೆತಗಳಲ್ಲಿ 50 ರನ್ ಚಚ್ಚಿದ ವೈಭವ್ ಸೂರ್ಯವಂಶಿ

CSK vs RR: ಸಿಎಸ್​ಕೆ ವಿರುದ್ಧ 15 ಎಸೆತಗಳಲ್ಲಿ 50 ರನ್ ಚಚ್ಚಿದ ವೈಭವ್ ಸೂರ್ಯವಂಶಿ

ಗುವಾಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026 ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ ಕೇವಲ 127 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ ವೈಭವ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು.

ಜೇಮಿ ಓವರ್ಟನ್ ಎಸೆದ ಮೊದಲ ಓವರ್​ನಲ್ಲಿ ತಾನು ಎದುರಿಸಿದ ಮೊದಲ ಎಸೆತದಲ್ಲೇ ವೈಭವ್ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚ್ ನೀಡಿದ್ದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಕಾರ್ತಿಕ್ ಶರ್ಮಾ ಕೈಚೆಲ್ಲಿದರು. ಕ್ಯಾಚ್ ಬಿಟ್ಟಿದಲ್ಲದೆ ಬೌಂಡರಿಯನ್ನು ಬಿಟ್ಟುಕೊಟ್ಟರು. ಮೊದಲ ಎಸೆತದಲ್ಲೇ ಜೀವದಾನ ಪಡೆದ ವೈಭವ್ ನಂತರದ ಎಸೆತವನ್ನು ಸಿಕ್ಸರ್​ಗಟ್ಟಿದರು.

ಪ್ರತಿ ಓವರ್​ನಲ್ಲೂ ಬೌಂಡರಿ ಹಾಗೂ ಸಿಕ್ಸರ್​ ಬಾರಿಸಿದ ವೈಭವ್ ತಂಡವನ್ನು ಪವರ್ ಪ್ಲೇ ಮುಕ್ತಾಯಕ್ಕೆ 74 ರನ್​ಗಳಿಗೆ ಕೊಂಡೊಯ್ದರು. ಇದರಲ್ಲಿ ವೈಭವ್ ಅವರ ಬ್ಯಾಟ್​​ನಿಂದ ಸಿಡಿದಿದ್ದು ಬರೋಬ್ಬರಿ 50 ರನ್. ಇತ್ತ ಯಶಸ್ವಿ ಜೈಸ್ವಾಲ್ ಕಲೆಹಾಕಿದ್ದು, ಕೇವಲ 18 ರನ್. 6ನೇ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ವೈಭವ್ ಕೇವಲ 15 ಎಸೆತಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದರು.

ಆದಾಗ್ಯೂ ಅರ್ಧಶತಕ ಬಾರಿಸಿದ ಬಳಿಕ ವೈಭವ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ವೈಭವ್ ತಮ್ಮ ಇನ್ನಿಂಗ್ಸ್​ನಲ್ಲಿ 17 ಎಸೆತಗಳನ್ನು ಎದುರಿಸಿ 5 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 52 ರನ್ ಬಾರಿಸಿ ಔಟಾದರು. ಅಂದರೆ ವೈಭವ್ ಕಲೆಹಾಕಿದ 52 ರನ್​ಗಳಲ್ಲಿ 46 ರನ್​​ಗಳು ಕೇವಲ ಬೌಂಡರಿ, ಸಿಕ್ಸರ್​ಗಳಿಂದಲೇ ಬಂದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *