CWG 2026: ಒಂದೇ ದಿನ 6 ಪದಕಗಳನ್ನು ಗೆದ್ದ ಭಾರತೀಯರು! – Kannada News | CWG 2026: Indians Clinch 6 Medals In A Single Day

ಸ್ಕಾಟ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026 ರ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಭೂತಪೂರ್ವ ಪ್ರದರ್ಶನ ಮುಂದುವರೆಸಿದ್ದಾರೆ. ಜುಲೈ 31ರ ಶುಕ್ರವಾರದ ದಿನವು ಭಾರತೀಯ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ದಿನಗಳಲ್ಲಿ ಒಂದಾಗಿ ದಾಖಲಾಗಿದೆ. ಜೂಡೋ ಮತ್ತು ಅಥ್ಲೆಟಿಕ್ಸ್‌ನಲ್ಲಿ ಕಮಾಲ್ ಮಾಡಿದ ಭಾರತೀಯರು , ಒಂದೇ ದಿನ 2 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪದಕಗಳ ವಿವರ ಈ ಕೆಳಗಿನಂತಿದೆ…

ಅಸ್ಮಿತಾ ಡೇ (ಚಿನ್ನ – ಜೂಡೋ): ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಹೆಡಿ ಕ್ವಾಚ್ ಅವರನ್ನು ಸೋಲಿಸಿ ಅಸ್ಮಿತಾ ಡೇ ಕಾಮನ್‌ವೆಲ್ತ್ ಗೇಮ್ಸ್ ಜೂಡೋದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ.

ಹರ್ಷ್ ಸಿಂಗ್ (ಚಿನ್ನ – ಜೂಡೋ): ಪುರುಷರ 60 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು ಸೋಲಿಸಿ ಹರ್ಷ್ ಸಿಂಗ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಜೂಡೋ ಆಟಗಾರ ಎನಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾ (ಬೆಳ್ಳಿ – ಜಾವೆಲಿನ್ ಥ್ರೋ): ಪುರುಷರ ಜಾವೆಲಿನ್ ಫೈನಲ್‌ನಲ್ಲಿ 85.83 ಮೀಟರ್ ದೂರ ಎಸೆದು ನೀರಜ್ ಚೋಪ್ರಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಯಾಮಿನಿ ಮೌರ್ಯ (ಬೆಳ್ಳಿ – ಜೂಡೋ): ಮಹಿಳೆಯರ 57 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್‌ನ ಅಸೆಲ್ಯಾ ಟೋಪ್ರಾಕ್ ವಿರುದ್ಧ ಕಠಿಣ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಾಮಿನಿ ಮೌರ್ಯ ಯಶಸ್ವಿಯಾಗಿದ್ದಾರೆ.

ಯಶ್ ವೀರ್ ಸಿಂಗ್ (ಕಂಚು – ಜಾವೆಲಿನ್ ಥ್ರೋ): ಜಾವೆಲಿನ್ ಫೈನಲ್‌ನಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ 85.41 ಮೀಟರ್ ಎಸೆದು ಯಶ್ ವೀರ್ ಸಿಂಗ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ತೇಜಸ್ವಿನ್ ಶಂಕರ್ (ಕಂಚು – ಡೆಕಾಥ್ಲಾನ್): ಡೆಕಾಥ್ಲಾನ್ ಸ್ಪರ್ಧೆಯಲ್ಲಿ 7,976 ಅಂಕಗಳನ್ನು ಗಳಿಸಿ ಕಾಮನ್‌ವೆಲ್ತ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಡೆಕಾಥ್ಲಾನ್ ಪದಕ ತಂದುಕೊಟ್ಟ ಕೀರ್ತಿಯನ್ನು ತೇಜಸ್ವಿನ್ ಶಂಕರ್ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ಈ ಆರು ಪದಕಗಳೊಂದಿಗೆ ಭಾರತ ಕಾಮನ್​ವೆಲ್ತ್ ಗೇಮ್ಸ್ ಮೆಡಲ್​ ಲಿಸ್ಟ್​ನಲ್ಲಿ 10ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇಂದು ಮತ್ತು ನಾಳೆ ನಡೆಯಲಿರುವ ಸ್ಪರ್ಧೆಗಳ ಮೂಲಕ ಭಾರತೀಯರು ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಈ ಮೂಲಕ ಟಾಪ್-10 ನಲ್ಲೇ ಉಳಿದುಕೊಳ್ಳುವ ನಿರೀಕ್ಷೆಯಿದೆ.

ಪದಕ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ (ಜುಲೈ 31ರ ತನಕ):

ಕ್ರ.ಸಂ. ಕ್ರೀಡಾಪಟು ಕ್ರೀಡೆ  ವಿಭಾಗ  ಪದಕ 
1 ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್ ಮಹಿಳೆಯರ 48 ಕೆಜಿ 🥇 ಚಿನ್ನ
2 ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪುಟ್ F57 🥇 ಚಿನ್ನ
3 ದಿಲೀಪ್ ಮಹಾದು ಗಾವಿತ್ ಪ್ಯಾರಾ ಅಥ್ಲೆಟಿಕ್ಸ್ ಪುರುಷರ 100 ಮೀಟರ್ T47 🥇 ಚಿನ್ನ
4 ಅಸ್ಮಿತಾ ಡೇ ಜೂಡೋ ಮಹಿಳೆಯರ 48 ಕೆಜಿ 🥇 ಚಿನ್ನ
5 ಹರ್ಷ್ ಸಿಂಗ್ ಜೂಡೋ ಪುರುಷರ 60 ಕೆಜಿ 🥇 ಚಿನ್ನ
6 ರಿಷಿಕಾಂತ ಸಿಂಗ್ ವೇಟ್‌ಲಿಫ್ಟಿಂಗ್ ಪುರುಷರ 60 ಕೆಜಿ 🥈 ಬೆಳ್ಳಿ
7 ರಾಜಾ ಮುತ್ತುಪಾಂಡಿ ವೇಟ್‌ಲಿಫ್ಟಿಂಗ್ ಪುರುಷರ 65 ಕೆಜಿ 🥈 ಬೆಳ್ಳಿ
8 ಜ್ಞಾನೇಶ್ವರ ಯಾದವ್ ವೇಟ್‌ಲಿಫ್ಟಿಂಗ್ ಮಹಿಳೆಯರ 53 ಕೆಜಿ 🥈 ಬೆಳ್ಳಿ
9 ವಲ್ಲೂರಿ ಅಜಯ್ ಬಾಬು ವೇಟ್‌ಲಿಫ್ಟಿಂಗ್ ಪುರುಷರ 79 ಕೆಜಿ 🥈 ಬೆಳ್ಳಿ
10 ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ ಮಹಿಳೆಯರ 69 ಕೆಜಿ 🥈 ಬೆಳ್ಳಿ
11 ಲವ್‌ಪ್ರೀತ್ ಸಿಂಗ್ ವೇಟ್‌ಲಿಫ್ಟಿಂಗ್ ಪುರುಷರ +110 ಕೆಜಿ 🥈 ಬೆಳ್ಳಿ
12 ಮೊಹಮ್ಮದ್ ಬಾಸಿಲ್ ಪ್ಯಾರಾ ಅಥ್ಲೆಟಿಕ್ಸ್ ಪುರುಷರ 100 ಮೀಟರ್ T47 🥈 ಬೆಳ್ಳಿ
13 ಸರ್ವೇಶ್ ಅನಿಲ್ ಕುಶಾರೆ ಅಥ್ಲೆಟಿಕ್ಸ್ ಪುರುಷರ ಹೈ ಜಂಪ್ 🥈 ಬೆಳ್ಳಿ
14 ಮುರಳಿ ಶ್ರೀಶಂಕರ್ ಅಥ್ಲೆಟಿಕ್ಸ್ ಪುರುಷರ ಲಾಂಗ್ ಜಂಪ್ 🥈 ಬೆಳ್ಳಿ
15 ಗುಲ್ವೀರ್ ಸಿಂಗ್ ಅಥ್ಲೆಟಿಕ್ಸ್ ಪುರುಷರ 10,000 ಮೀಟರ್ ಓಟ 🥈 ಬೆಳ್ಳಿ
16 ನೀರಜ್ ಚೋಪ್ರಾ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಥ್ರೋ 🥈 ಬೆಳ್ಳಿ
17 ಯಾಮಿನಿ ಮೌರ್ಯ ಜೂಡೋ ಮಹಿಳೆಯರ 57 ಕೆಜಿ 🥈 ಬೆಳ್ಳಿ
18 ಝಂಡು ಕುಮಾರ್ ಪ್ಯಾರಾ ಪವರ್‌ಲಿಫ್ಟಿಂಗ್ ಪುರುಷರ ಹೆವಿವೇಟ್ 🥉 ಕಂಚು
19 ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ ಮಹಿಳೆಯರ 58 ಕೆಜಿ 🥉 ಕಂಚು
20 ಶಿಲ್ಪಾ ಕೆ. ಶೈಲಾ ಪ್ಯಾರಾ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪುಟ್ F57 🥉 ಕಂಚು
21 ಸೀಮಾ ಕಲಿರಾಮ್ನಾ ಅಥ್ಲೆಟಿಕ್ಸ್ ಮಹಿಳೆಯರ ಡಿಸ್ಕಸ್ ಥ್ರೋ 🥉 ಕಂಚು
22 ತೇಜಸ್ವಿನ್ ಶಂಕರ್ ಅಥ್ಲೆಟಿಕ್ಸ್ ಪುರುಷರ ಡೆಕಾಥ್ಲಾನ್ 🥉 ಕಂಚು
23 ಯಶ್ ವೀರ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಥ್ರೋ 🥉 ಕಂಚು

Source link

Leave a Reply

Your email address will not be published. Required fields are marked *