2026 ರ ಕಾಮನ್‌ವೆಲ್ತ್ ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದರು. ಈ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪ್ಯಾರಾ ಅಥ್ಲೀಟ್ ಶಿಲ್ಪಾ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಇದೀಗ ತವರಿಗೆ ಮರಳಿದ ಶಿಲ್ಪಾ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ವಿಮಾನ ನಿಲ್ದಾಣದಲ್ಲಿ ಡೋಲು-ಕುಣಿತ ಹೂವಿನ ಸುರಿಮಳೆ ಸುರಿಸಿ ಜಯಘೋಷದ ನಡುವೆ ಶಿಲ್ಪಾ ಅವರನ್ನು ಸ್ವಾಗತಿಸಲಾಯಿತು. ಶಿಲ್ಪಾರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರೆಲ್ಲರೂ ಶಿಲ್ವಾ ಅವರಿಗೆ ಹೂಗುಚ್ಛ ನೀಡಿ ಅದ್ದೂರಿ ಸ್ವಾಗತ ನೀಡಿದರು. ಹಾಗೆಯೇ ಶಿಲ್ಪಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
