
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೋಷ ನಿವಾರಣೆಗೆ ಹೋಮಗಳನ್ನು ಮನೆಯಲ್ಲಿ ಮಾಡಬೇಕೇ, ದೇವಸ್ಥಾನದಲ್ಲಿ ಮಾಡಬೇಕೇ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ, ದಿಕ್ಕು ತೋಚದಾದಾಗ, ಸಾಡೇಸಾತಿ, ಅರ್ಧಾಷ್ಟಮ, ಕರ್ಮ ಫಲಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವಾಗ, ಅಥವಾ ಯಾವುದೇ ವೈಫಲ್ಯಗಳು ಕಾಡಿದಾಗ, ಮನುಷ್ಯ ದೈವಿಕ ಕಾರ್ಯಗಳತ್ತ ಮುಖ ಮಾಡುತ್ತಾನೆ. ಹೋಮ, ಹವನ, ಪೂಜೆಗಳು ಇದಕ್ಕೆ ಪರಿಹಾರ ಎಂಬ ನಂಬಿಕೆ ಇದೆ. ಆದರೆ, ಹೋಮಗಳನ್ನು ಮನೆಯಲ್ಲಿ ಮಾಡಿಸುವುದು ಉತ್ತಮವೇ ಅಥವಾ ದೇವಸ್ಥಾನಗಳಲ್ಲಿ ಮಾಡಿಸುವುದು ಶ್ರೇಷ್ಠವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಅಭಿವೃದ್ಧಿಗಾಗಿ, ಶ್ರೇಯಸ್ಸಿಗಾಗಿ, ಆರೋಗ್ಯಕ್ಕಾಗಿ ಅಥವಾ ಸಮೃದ್ಧಿಗಾಗಿ ಮಾಡುವ ಹೋಮಗಳನ್ನು ಮನೆಯಲ್ಲಿ ಮಾಡಿಸಿಕೊಳ್ಳುವುದು ಸೂಕ್ತ. ಉದಾಹರಣೆಗೆ, ವಾಸ್ತು ಪೂಜೆ, ಗಣಹೋಮ, ಸತ್ಯನಾರಾಯಣ ಸ್ವಾಮಿ ಹೋಮಗಳನ್ನು ಮನೆಯಲ್ಲಿ ಮಾಡಬಹುದು. ಆದರೆ, ಸರ್ಪದೋಷ, ಮೃತ್ಯುದೋಷ, ಗ್ರಹದೋಷಗಳಂತಹ ದೋಷ ನಿವಾರಣಾ ಹೋಮಗಳು ಮತ್ತು ಶಾಂತಿ ಪೂಜೆಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡಿಸುವುದು ಹೆಚ್ಚು ಫಲಪ್ರದ ಎಂಬುದು ಡಾ. ಬಸವರಾಜ್ ಗುರೂಜಿಯ ಸಲಹೆ.