ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾವ್ಯಾವ ಜಪಮಾಲೆಯಿಂದ ಜಪ ಮಾಡಿದ್ರೆ ಏನೇನು ಫಲ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ನಮ್ಮ ಜೀವನದಲ್ಲಿ ದೈವಿಕ ಅನುಗ್ರಹ ಪಡೆಯಲು ಜಪ ಒಂದು ವಿಶೇಷ ಮಾರ್ಗವಾಗಿದೆ. ಕಲಿಯುಗದಲ್ಲಿ ಇದು ಅತ್ಯಂತ ಪ್ರಮುಖವಾದ ಸಾಧನ. ಪೂಜೆ, ಹೋಮಗಳಂತಹ ಕಠಿಣ ವಿಧಿಗಳಿಗಿಂತ ಜಪ ಸುಲಭ ಮತ್ತು ಹೆಚ್ಚು ಫಲಕಾರಿ. ಭಗವಂತನಿಗೆ ಬೇಕಾಗಿರುವುದು ನಮ್ಮ ಪ್ರೀತಿ ಮತ್ತು ಭಕ್ತಿ ಮಾತ್ರ.
ಜಪ ಮಾಡಲು ಹಲವು ಮಾಲೆಗಳಿದ್ದರೂ, ಕಲಿಯುಗದಲ್ಲಿ ನಾಲ್ಕು ಮಾಲೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ: ತುಳಸಿ ಮಾಲೆ, ರುದ್ರಾಕ್ಷಿ ಮಾಲೆ, ಸ್ಪಟಿಕ ಮಾಲೆ, ಮತ್ತು ಕಮಲದ ಮಾಲೆ. ಈ ಮಾಲೆಗಳು ಏಕಾಗ್ರತೆಯನ್ನು ಹೆಚ್ಚಿಸಿ, ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ರುದ್ರಾಕ್ಷಿ ಮಾಲೆಯು ಶಿವನ ನೇರ ಅನುಗ್ರಹವನ್ನು ನೀಡಿ ಅಕಾಲ ಮೃತ್ಯುವನ್ನು ದೂರ ಮಾಡುತ್ತದೆ. ತುಳಸಿ ಮಾಲೆಯು ವಿಷ್ಣುವಿಗೆ ಪ್ರಿಯವಾಗಿದ್ದು, ಅದನ್ನು ಧಾರಣೆ ಮಾಡುವುದರಿಂದ ಅಶ್ವಮೇಧ ಯಜ್ಞದ ಫಲ ಸಿಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.