ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ ಕೇವಲ 142 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ಆದರೆ ಮಿಚೆಲ್ ಸ್ಟಾರ್ಕ್ ಎಸೆದ 3ನೇ ಓವರ್ ಕೆಕೆಆರ್ ತಂಡಕ್ಕೆ ಆಘಾತ ನೀಡಿತು.
ಸ್ಟಾರ್ಕ್ ಎಸೆದ ಈ ಓವರ್ನ ಕೊನೆಯ ಎಸೆತವನ್ನು ಅಲೆನ್ ಸ್ಟ್ರೈಟ್ ಹಿಟ್ ಮಾಡಿದರು. ಹೀಗಾಗಿ ಬೌಲರ್ ಸ್ಟಾರ್ಕ್ ಅದನ್ನು ಕ್ಯಾಚ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಚೆಂಡು ಸ್ಟಾರ್ಕ್ ಅವರ ಕೈಗೆ ತಾಗಿ ನೇರವಾಗಿ ವಿಕೆಟ್ಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ರಹಾನೆ ರನ್ಗಾಗಿ ಓಡಲು ವಿಕೆಟ್ ಬಿಟ್ಟಿದ್ದರು. ಹೀಗಾಗಿ ರಹಾನೆ ರನೌಟ್ ಆಗಬೇಕಾಯಿತು.
ಈ ಓವರ್ ಮುಗಿದ ಮುಂದಿನ ಓವರ್ನಲ್ಲೇ ಅಂದರೆ 4ನೇ ಓವರ್ನಲ್ಲಿ ಅಂಗ್ಕ್ರೀಶ್ ರಘುವಂಶಿ ಸ್ಟ್ರೈಕ್ಗೆ ಬಂದರು. ಅಕ್ಷರ್ ಪಟೇಲ್ ಬೌಲ್ ಮಾಡಿದ ಈ ಓವರ್ನ 4ನೇ ಎಸೆತವನ್ನು ರಘುವಂಶಿ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಸಫಲರಾಗಲಿಲ್ಲ. ಹೀಗಾಗಿ ಚೆಂಡು ರಘುವಂಶಿ ಅವರ ಪ್ಯಾಡ್ಗೆ ತಗುಲಿ ನೆಲದಿಂದ ಪುಟಿದು ಸೀದ ವಿಕೆಟ್ಗೆ ಬಡಿಯಿತು. ಹೀಗಾಗಿ ರಹಾನೆ ಹಾಗೂ ರಘುವಂಶಿ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
