ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ, ಸತತ ನಾಲ್ಕನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 142 ರನ್ ಗಳಿಸಿತು, ಕೆಕೆಆರ್‌ಗೆ 143 ರನ್‌ಗಳ ಗುರಿಯನ್ನು ನೀಡಿತು. ಕೆಕೆಆರ್ 14.2 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸುವ ಮೂಲಕ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಡೆಲ್ಲಿ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುವುದು ಖಚಿತವಾಗಿದೆ. ಏಕೆಂದರೆ ಉಳಿದಿರುವ 3 ಪಂದ್ಯಗಳನ್ನು ಗೆದ್ದರೂ ಡೆಲ್ಲಿ ಬಳಿ ಕೇವಲ 14 ಅಂಕಗಳು ಇರಲಿವೆ. ಪ್ಲೇಆಫ್ಗೇರಲು ಇಷ್ಟು ಅಂಕಗಳು ಸಾಕಾಗುವುದಿಲ್ಲವಾಗಿರುವುದರಿಂದ ಡೆಲ್ಲಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
