ನವದೆಹಲಿ, ಜೂನ್ 21: ಮೊನ್ನೆ ಗ್ರಾಮ್ಗೆ 355 ರೂನಷ್ಟು ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಈ ವಾರಾಂತ್ಯದಲ್ಲಿ ಅಲ್ಪ ಹೆಚ್ಚಳ ಪಡೆದಿದೆ. ಅಪರಂಜಿ ಚಿನ್ನದ ಬೆಲೆ 14,600 ರೂ ಗಡಿ ದಾಟಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಇಳಿಕೆಗೊಂಡಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದರ ಬೆಲೆ ಗ್ರಾಮ್ಗೆ 250-260 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,33,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,46,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,33,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 21ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,608 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,390 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,956 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,608 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,390 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,390 ರೂ
- ಚೆನ್ನೈ: 13,600 ರೂ
- ಮುಂಬೈ: 13,390 ರೂ
- ದೆಹಲಿ: 13,405 ರೂ
- ಕೋಲ್ಕತಾ: 13,390 ರೂ
- ಕೇರಳ: 13,390 ರೂ
- ಅಹ್ಮದಾಬಾದ್: 13,395 ರೂ
- ಜೈಪುರ್: 13,405 ರೂ
- ಲಕ್ನೋ: 13,405 ರೂ
- ಭುವನೇಶ್ವರ್: 13,390 ರೂ
ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 569 ರಿಂಗಿಟ್ (12,996 ರುಪಾಯಿ)
- ದುಬೈ: 500 ಡಿರಾಮ್ (12,846 ರುಪಾಯಿ)
- ಅಮೆರಿಕ: 137 ಡಾಲರ್ (12,928 ರುಪಾಯಿ)
- ಸಿಂಗಾಪುರ: 183.20 ಸಿಂಗಾಪುರ್ ಡಾಲರ್ (13,389 ರುಪಾಯಿ)
- ಕತಾರ್: 501.50 ಕತಾರಿ ರಿಯಾಲ್ (12,981 ರೂ)
- ಸೌದಿ ಅರೇಬಿಯಾ: 517 ಸೌದಿ ರಿಯಾಲ್ (12,997 ರುಪಾಯಿ)
- ಓಮನ್: 52.65 ಒಮಾನಿ ರಿಯಾಲ್ (12,905 ರುಪಾಯಿ)
- ಕುವೇತ್: 41.82 ಕುವೇತಿ ದಿನಾರ್ (12,842 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 250 ರೂ
- ಚೆನ್ನೈ: 260 ರೂ
- ಮುಂಬೈ: 250 ರೂ
- ದೆಹಲಿ: 250 ರೂ
- ಕೋಲ್ಕತಾ: 250 ರೂ
- ಕೇರಳ: 260 ರೂ
- ಅಹ್ಮದಾಬಾದ್: 250 ರೂ
- ಜೈಪುರ್: 250 ರೂ
- ಲಕ್ನೋ: 250 ರೂ
- ಭುವನೇಶ್ವರ್: 260 ರೂ
- ಪುಣೆ: 250
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
