GT vs CSK: ಕೊನೆಯ ಲೀಗ್ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ – Kannada News | MS Dhoni Misses Entire IPL 2026 League Stage; CSK Fans Disappointed by Injury

ಐಪಿಎಲ್ 2026 (IPL 2026) ರ 66 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ 14 ನೇ ಮತ್ತು ಕೊನೆಯ ಪಂದ್ಯ ಇದಾಗಿದೆ. ಅಂದರೆ ಲೀಗ್ ಹಂತದಲ್ಲಿ ಈ ಎರಡು ತಂಡಗಳಿಗೆ ಯಾವುದೇ ಪಂದ್ಯ ಬಾಕಿ ಉಳಿದಿಲ್ಲ. ಇದರಲ್ಲಿ ಗುಜರಾತ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಸಿಎಸ್​ಕೆಗೆ ಪ್ಲೇಆಫ್‌ ಹಾದಿ ಭಾಗಶಃ ಮುಚ್ಚಿದೆ. ಇದರರ್ಥ ಸಿಎಸ್​ಕೆಗೆ ಈ ಸೀಸನ್​ನಲ್ಲಿ ಇದೇ ಕೊನೆಯ ಪಂದ್ಯ. ಹೀಗಾಗಿ ಈ ಪಂದ್ಯದಲ್ಲಾದರೂ ಎಂಎಸ್ ಧೋನಿ (MS Dhoni) ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಧೋನಿ ಈ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಇದಾದ ಬಳಿಕ ತಂಡದ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ರುತುರಾಜ್ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ ಎಂದರು. ಇದನ್ನು ಕೇಳಿದ ಫ್ಯಾನ್ಸ್ ಧೋನಿ ಈ ಪಂದ್ಯದಲ್ಲಿ ಆಡಬಹುದು ಎಂದುಕೊಂಡಿದ್ದರು. ಆದರೆ ಆ ಎರಡು ಬದಲಾವಣೆಗಳಲ್ಲಿ ಧೋನಿ ಹೆಸರು ಇರಲಿಲ್ಲ. ಹೀಗಾಗಿ ಈ ಸೀಸನ್​ನಲ್ಲಿ ಧೋನಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಧೋನಿ ಒಂದೇ ಒಂದು ಲೀಗ್ ಪಂದ್ಯವನ್ನು ಆಡದಿರುವುದು ಇದೇ ಮೊದಲು.

ಸೀಸನ್​ ಆರಂಭದಲ್ಲಿ ಗಾಯಗೊಂಡ ಧೋನಿ

ಸೀಸನ್ ಆರಂಭಕ್ಕೂ ಮುನ್ನವೇ ಧೋನಿ ಕಾಲಿನ ಗಾಯಕ್ಕೆ ಒಳಗಾದರು. ಆರಂಭದಲ್ಲಿ ಅವರು ಎರಡು ವಾರಗಳ ನಂತರ ತಂಡಕ್ಕೆ ಮರಳುತ್ತಾರೆ ಎಂದು ತಂಡದ ಆಡಳಿತ ಮಂಡಳಿ ಹೇಳಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಸತತ ಪ್ರಯತ್ನದ ಬಳಿಕವೂ ಧೋನಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಲೀಗ್ ಹಂತ ಮುಗಿಯುವ ಹಂತದಲ್ಲಿದ್ದಾಗ ಧೋನಿ ಮತ್ತೆ ಗಾಯಕ್ಕೆ ಒಳಗಾದರು. ಹೀಗಾಗಿ ಧೋನಿ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ತಂಡವನ್ನು ತೊರೆದು ರಾಂಚಿಗೆ ಮರಳಿದ್ದಾರೆ ಎಂದು ವರದಿಯಾಗಿತ್ತು. ಇಂದಿನ ಪಂದ್ಯದಲ್ಲಿ ಧೋನಿ ಆಡದಿರುವುದನ್ನು ನೋಡಿದರೆ ಅವರು ರಾಂಚಿಗೆ ಮರಳಿರುವುದು ಖಚಿತವೆನ್ನಲಾಗುತ್ತಿದೆ.

ಅಂಪೈರ್ ವೈಡ್ ನೀಡಿ; ಸಾಕ್ಷಿ ಧೋನಿ ರಿಯಾಕ್ಷನ್ ವೈರಲ್

ಒಂದು ಪಂದ್ಯವನ್ನು ಆಡಲಿಲ್ಲ

ಎಂಎಸ್ ಧೋನಿ ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಲ್ಲಿ ಒಬ್ಬರು. ಧೋನಿ ಪ್ರತಿ ಐಪಿಎಲ್ ಆವೃತ್ತಿಯಲ್ಲಿ 10 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಆದರೆ ಧೋನಿ ಒಂದೇ ಒಂದು ಲೀಗ್ ಪಂದ್ಯವನ್ನು ಆಡದೆ ಕೊನೆಗೊಂಡಿರುವುದು ಇದೇ ಮೊದಲು. ಧೋನಿ ಇದುವರೆಗೆ ಐಪಿಎಲ್‌ನಲ್ಲಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *