GT vs MI: W,W,W.. ಪವರ್‌ಪ್ಲೇನಲ್ಲೇ ಮುಂಬೈ ಪವರ್ ಕಸಿದ ಕಗಿಸೋ ರಬಾಡ – Kannada News | IPL 2026: Rabada’s Fiery Spell Decimates Mumbai Indians’ Top Order vs Gujarat Titans

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಎಂದಿನಂತೆ ಕಳಪೆ ಆರಂಭ ಸಿಕ್ಕಿತು. ಪವರ್‌ಪ್ಲೇನಲ್ಲಿಯೇ ತಂಡದ ಪ್ರಮುಖ 3 ವಿಕೆಟ್​ಗಳು ಪತನವಾದವು. ರಬಾಡ ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಟಾಪ್ ಆರ್ಡರ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿತು.

ವಾಸ್ತವವಾಗಿ ಈ ಪಂದ್ಯಕ್ಕೆ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿತ್ತು. ಅದರಂತೆ ರಿಯಾನ್ ರಿಕಲ್ಟನ್ ಬದಲಿಗೆ ಭಾರತದ ಯುವ ಆಟಗಾರ ಡ್ಯಾನಿಶ್ ಮಾಲೆವಾರ್ ಅವರಿಗೆ ಆಡುವ ಅವಕಾಶ ನೀಡಲಾಯಿತು. ಇದು ಡ್ಯಾನಿಶ್ ಮಾಲೆವಾರ್ ಅವರ ಚೊಚ್ಚಲ ಐಪಿಎಲ್ ಪಂದ್ಯವೂ ಆಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಎಡವಿದ ಮಾಲೆವಾರ್ 4 ಎಸೆತಗಳನ್ನು ಕೇವಲ 2 ರನ್ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ಇನ್ನು ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್ ಮೇಲೆ ಈ ಪಂದ್ಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ನಿರೀಕ್ಷೆ ಪೂರ್ಣಗೊಳಿಸುವಲ್ಲಿ ಎಡವಿದ ಡಿ ಕಾಕ್ ಕೂಡ ರಬಾಡ ಅವರ ಎರಡನೇ ಓವರ್​ನಲ್ಲಿ ಕ್ಯಾಚಿತ್ತು ಔಟಾದರು.

ಈ ಇಬ್ಬರು ಆರಂಭಿಕರು 25 ರನ್​​ಗಳಿಗೆ ಪೆವಿಲಿಯನ್ ಸೇರಿಕೊಂಡ ಬಳಿಕ ಅನುಭವಿ ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತು. ಅದರಂತೆ ಸೂರ್ಯ ಕೂಡ ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಆದರೆ ರಬಾಡ ಎಸೆದ ಅವರ ಖೋಟಾದ ಮೂರನೇ ಓವರ್​ನಲ್ಲಿ ಸೂರ್ಯ ಕ್ಲೀನ್ ಬೌಲ್ಡ್ ಆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *