ಗುರು ಪೂರ್ಣಿಮೆಯ ಶುಭಾಶಯಗಳುImage Credit source: vecteezy
ಗುರು ಪೂರ್ಣಿಮೆಯ (Guru Purnima) ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ನಮಗೆ ಸರಿಯಾದ ಮಾರ್ಗವನ್ನು ತೋರಿದ ಮತ್ತು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ದ ಎಲ್ಲಾ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ವಿಶೇಷ ಅವಕಾಶವನ್ನು ಒದಗಿಸುತ್ತದೆ. ಈ ದಿನವು ವಿದ್ಯೆ ನೀಡಿದ ಗುರುಗಳನ್ನು ಗೌರವಿಸಲು ಮಾತ್ರವಲ್ಲದೆ, ತಂದೆ ತಾಯಿ, ಹಿರಿಯರು ಸೇರಿದಂತೆ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಬದುಕಿನ ಪಾಠ ಕಲಿಸಿದ, ಜೀವನಕ್ಕೆ ದಾರಿ ದೀಪವಾಗಿ ನಿಂತ ಪ್ರತಿಯೊಬ್ಬರನ್ನು ಗೌರವಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಈ ಶುಭದಿನದಂದು ನಿಮ್ಮ ಜೀವನಕ್ಕೆ ದಾರಿದೀಪವಾಗಿ ನಿಂತ ಗುರುಗಳಿಗೆ ಈ ಅರ್ಥಪೂರ್ಣ ಸಂದೇಶಗಳನ್ನು ತಿಳಿಸುವ ಮೂಲಕ ಧನ್ಯವಾದಗಳನ್ನು ತಿಳಿಸಿ.
ಗುರು ಪೂರ್ಣಿಮೆಯ ಶುಭ ಸಂದೇಶಗಳು:
- ವಿದ್ಯೆ, ಬುದ್ಧಿ ಹೇಳಿಕೊಟ್ಟು, ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆಗೆ ದಾರಿ ತೋರಿದ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.
- ಗುರಿ ಮುಟ್ಟಲು ದಾರಿ ತೋರಿದ, ನಿಸ್ವಾರ್ಥ ಮನೋಭಾವದಿಂದ ದಾರಿದೀಪವಾದ ನನ್ನ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಜ್ಞಾನದ ದೀಪವನ್ನು ಬೆಳಗಿಸಿದ ನನ್ನ ಗುರುಗಳಿಗೆ ವಂದನೆಗಳು. ನಿಮ್ಮ ಆಶೀರ್ವಾದದಿಂದ ನಾನು ಇಡುವ ಪ್ರತಿಯೊಂದು ಹೆಜ್ಜೆಗೂ ಯಶಸ್ಸು ಸಿಗಲಿ.
ಈ ಗುರು ಪೂರ್ಣಿಮೆ ಸಂತೋಷವನ್ನು ತರಲಿ. ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. - ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ತಿಳಿದಿದ್ದೇನೆ, ನಿಮ್ಮನ್ನು ನನ್ನ ಗುರು ಎಂದು ಪರಿಗಣಿಸಿದ್ದೇನೆ, ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಕ್ಯದಂತೆ ನನ್ನ ಬದುಕನ್ನು ಬೆಳಗಿದ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ನನ್ನ ಜೀವನವನ್ನು ರೂಪಿಸಿದ, ಸರಿಯಾದ ಮಾರ್ಗದರ್ಶನವನ್ನು ನೀಡಿ ನನ್ನ ಜೀವನವನ್ನು ಬೆಳಗಿದ ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ನನ್ನ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ನಿಮಗೆ ಗುರುಪೂರ್ಣಿಮೆಯ ಶುಭಾಶಯಗಳು.
- ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಕಲಿಸಿದ ನನ್ನ ಪೂಜ್ಯ ಗುರುಗಳಿಗೆ ಕೋಟಿ ಕೋಟಿ ನಮನಗಳು.
- ಗುರು ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ: ಅಂದರೆ ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಿವ, ಗುರುವೇ ಪರಮ ಬ್ರಹ್ಮ, ದೇವರ ಸ್ಥಾನದಲ್ಲಿರುವ ನನ್ನ ಗುರುಗಳಿಗೆ ಕೋಟಿ ಕೋಟಿ ನಮನಗಳು.
- ಗುರುವಿನ ಪ್ರೀತಿ ಜ್ಞಾನದ ಸಾಗರ, ಅವರಿಲ್ಲದೆ ಜೀವನ ಅಪೂರ್ಣ. ಬದುಕಿನ ಪಾಠ ಕಲಿಸಿದ ನನ್ನೆಲ್ಲಾ ಗುರುಗಳಿಗೂ ಗುರು ಪೂರ್ಣಿಮೆಯ ಶುಭಾಶಯಗಳು.
- ಜ್ಞಾನ, ಉತ್ತಮ ನಡವಳಿಕೆ ಮತ್ತು ಮೌಲ್ಯಗಳನ್ನು ಕಲಿಸಿಕೊಟ್ಟ ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಜ್ಞಾನದ ಬೆಳಕು ಯಾವಾಗಲೂ ಉರಿಯಲಿ, ಗುರುಗಳ ಆಶೀರ್ವಾದ ನಿಮ್ಮ ಜೀವನದಲ್ಲಿ ನಿರಂತರವಾಗಿ ಬೆಳೆಯಲಿ. ನಿಮ್ಮ ಪ್ರತಿಯೊಂದು ಕನಸು ನನಸಾಗಲಿ. ಗುರು ಪೂರ್ಣಿಮೆಯ ಶುಭಾಶಯಗಳು.
- ಗುರುರ್ಬ್ರಹ್ಮ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರಃ.
ಗುರು: ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ. ಗುರು ಪೂರ್ಣಿಮೆಯ ಶುಭಾಶಯಗಳು. - ಗುರುಗಳು ನಮಗೆ ಕೇವಲ ಪುಸ್ತಕದ ಜ್ಞಾನವನ್ನು ಕಲಿಸುವುದಿಲ್ಲ, ಬದಲಿಗೆ ಜೀವನ ಪಾಥಗಳನ್ನು ಸಹ ಕಲಿಸುತ್ತಾರೆ. ಜೀವನಕ್ಕೆ ದಾರಿ ತೋರಿದ ಗುರುಗಳಿಗೆ ನಮನಗಳು.
- ನೀವು ಕೇವಲ ಪಾಠಗಳನ್ನು ಕಲಿಸಲಿಲ್ಲ, ಬದಲಾಗಿ, ಅದು ಜೀವನವನ್ನು ರೂಪಿಸುವ ಕಲೆಯನ್ನು ಕಲಿಸಿದ್ದೀರಿ, ನನ್ನೆಲ್ಲಾ ಸಾಧನೆಗಳಿಗೂ ನೀವೇ ಮೂಲ ಕಾರಣಕರ್ತರು. ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
