ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳುImage Credit source: magnific
ಆಗಸ್ಟ್ 15 ಭಾರತೀಯರ ಪಾಲಿಗೆ ವಿಶೇಷ ದಿನವಾಗಿದೆ. 1947 ರ ಈ ದಿನದಂದು, ಭಾರತವು ದೀರ್ಘ ಹೋರಾಟದ ನಂತರ ಬ್ರಿಟೀಷರನ್ನು ದೇಶ ಬಿಟ್ಟು ತೊಳಗಿಸಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ವೀರರನ್ನು ನಮಿಸಲು ಪ್ರತಿವರ್ಷ ದೇಶಾದ್ಯಂತ ಬಹಳ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲಾಗುತ್ತದೆ. ಬಾನೆತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. 80 ನೇ ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಸ್ವಾತಂತ್ರ್ಯೋತ್ಸವದ ಈ ಅರ್ಥಪೂರ್ಣ ಶುಭಾಶಯಗಳನ್ನು ಕಳುಹಿಸುವ ಮೂಲಕ ದೇಶಭಕ್ತಿಯ ಸಂದೇಶವನ್ನು ಹರಡಿ.
ಇಲ್ಲಿವೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶಗಳು:
- ನಾವು ಪಾಲಿಸುವ ಸ್ವಾತಂತ್ರ್ಯವನ್ನು ಮತ್ತು ಅದನ್ನು ಸಾಧ್ಯವಾಗಿಸಿದ ವೀರರನ್ನು ಗೌರವಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
- ಬಾನೆತ್ತರಲ್ಲಿ ಹಾರುತ್ತಿರುವ ತಿರಂಗ ಧ್ವಜವು ಸಾರುತಿದೆ ಇಂದು ಸ್ವಾತಂತ್ರ್ಯೋತ್ಸವವೆಂದು ಪ್ರತಿಯೊಬ್ಬ ಭಾರತೀಯನ ಮನೆಮನಗಳಲ್ಲಿ ಸಂಭ್ರಮಿಸುವ ದಿನವಿಂದು. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
- ದೇಶದ ಹಿತಕ್ಕಾಗಿ ದುಡಿಯೋಣ, ದೇಶದ ರಕ್ಷಣೆಗಾಗಿ ಮಡಿಯೋಣ, ದೇಶವನ್ನು ಹೆಮ್ಮೆ ಪಡುವಂತೆ ಮಾಡೋಣ, ಸ್ವಾತಂತ್ರ್ಯ ವೀರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
- ಹೆತ್ತ ತಾಯಿ ಹೊತ್ತ ಭೂಮಿ ನಮ್ಮ ಪಾಲಿನ ನಿಜವಾದ ದೇವರು. ಸ್ವಾತಂತ್ರ್ಯ ಹೋರಾಟಗಾರರಂತೆ ಭೂಮಿ ತಾಯಿಯ ರಕ್ಷಣೆಗಾಗಿ ಸದಾ ಸಿದ್ಧರಿರೋಣ. ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
- ಪ್ರತಿ ದಿನವೂ ನಮ್ಮ ರಾಷ್ಟ್ರವನ್ನು ಉತ್ತಮ ದೇಶವನ್ನಾಗಿ ಮಾಡಲು ಶ್ರಮಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
- ಈ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಮ್ಮ ಶ್ರೇಷ್ಠ ಭಾರತದ ಶಾಂತಿ ಮತ್ತು ಏಕತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
- ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗಗಳನ್ನು ನೆನಪಿಸಿಕೊಳ್ಳೋಣ ಮತ್ತು ಅವರಂತೆಯೇ ದೇಶ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗೋಣ. ನನ್ನೆಲ್ಲಾ ಮಿತ್ರರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
- ಸ್ವಾತಂತ್ರ್ಯ ಹೋರಾಟಗಾರರಂತೆ ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಗೆಳೆಯರೇ.
- ಇಂದು ನಾವು ಮಾತಾಡುವ ಮತ್ತು ಕೇಳುವ ಹಕ್ಕನ್ನು ಹೊಂದಿದ್ದೇವೆ ಎಂದರೆ, ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಪರಿಶ್ರಮ. ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ, ದೇಶ ರಕ್ಷಣೆಗಾಗಿ ಅವರ ಮಾರ್ಗದಲ್ಲಿಯೇ ಸಾಗೋಣ. 80 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
- ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಎಲ್ಲಾ ವೀರರಿಗೂ ನಮನಗಳನ್ನು ಸಲ್ಲಿಸೋಣ, ದೇಶದ ರಕ್ಷಣೆಗಾಗಿ ಅವರ ಹಾದಿಯಲ್ಲಿಯೇ ಸಾಗೋಣ. ನನ್ನೆಲ್ಲಾ ಸ್ನೇಹಿತರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
- ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಭಾರತ ನಮ್ಮ ಗುರುತು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
- ಹುತಾತ್ಮರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ತ್ಯಾಗಕ್ಕೆ ನಮಸ್ಕರಿಸುತ್ತಾ, ಸ್ವಾತಂತ್ರ್ಯ ದಿನದಂದು ನಾನು ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
- ಜಾತಿ ತಾರತಮ್ಯ ಅಥವಾ ಧರ್ಮದ ಅಡೆತಡೆಗಳಿಲ್ಲದೆ, ನಮ್ಮ ಭಾರತವು ಏಕತೆ ಮತ್ತು ಸಹೋದರತ್ವದಿಂದ ಬಲಗೊಳ್ಳಲಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
- ದೇಶದ ಸ್ವಾತಂತ್ರ್ಯಕ್ಕಾಗಿ ತಮಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರರಿಗೆ ನಮನಗಳು. ಜೈ ಹಿಂದ್, ಜೈ ಭಾರತ.
- ಸ್ವಾತಂತ್ರ್ಯ ಕೇವಲ ಮೂರಕ್ಷರದ ಪದವಲ್ಲ, ಅದು ಅಸಂಖ್ಯಾತ ವೀರರ ತ್ಯಾಗದ ಕಥೆ. ಈ ಸ್ವಾತಂತ್ರ್ಯ ದಿನದಂದು, ನಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಪ್ರತಿಜ್ಞೆ ಮಾಡೋಣ. ಜೈ ಹಿಂದ್.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
