Horoscope February 14: ಚಂದ್ರನ ಆಧಿಪತ್ಯದ ಈ ರಾಶಿಗೆ ಈ ತಿಂಗಳು ಯಾವ ಗ್ರಹದ ದಶೆ ಶುಭವನ್ನು ನೀಡುತ್ತದೆ? – Kannada News | Planetary Dasha Effects and Astrology Remedies for Cancer

ಭವಿಷ್ಯವನ್ನು ತಿಳಿಯಲು ಅನೇಕ ಮಾರ್ಗಗಳಿದ್ದರೂ ರಾಶಿ ಗ್ರಹಗಳ ಮೂಲಕ ನೋಡುವ ಕ್ರಮ ವಿಶೇಷವೂ ಮಹತ್ತ್ವದ್ದೂ ಆಗಿದೆ. ಕರ್ಕರಾಶಿಯವರಿಗೆ ಫೆಬ್ರವರಿ ತಿಂಗಳು ಹೇಗಿದೆ, ಮತ್ತು ಯಾವ ದಶೆ ಅವರಿಗೆ ಆಗಿಬರುವುದು‌ ಎಂದು ನೋಡಿದಾಗ ಮುಂದಿನ ಕ್ರಮಕ್ಕೆ ಅನುಕೂಲಕರವಾಗಲಿದೆ. ಗ್ರಹಗಳ ಕರ್ಕಾಟಕ ರಾಶಿಯ ಮೇಲೆ ಎಂತಹ ಶುಭಾಶುಭ ಫಲಗಳನ್ನು ನೀಡುತ್ತಾರೆ ಎನ್ನುವುದನ್ನು ಮನಗಾಣಬಹುದು. ಇದೇ ಉದ್ಯೋಗ, ವ್ಯವಹಾರ ವ್ಯಾಪಾರಕ್ಕೆ ವಿಶೇಷವಾದ ಮಾರ್ಗವನ್ನು ತೋರಿಸುತ್ತವೆ.

ಉತ್ತಮ ಫಲ

​ಶುಕ್ರ ದಶೆ :

ಶುಕ್ರನು ಎಂಟನೇ ಮನೆಯಲ್ಲಿದ್ದರೂ ಸೌಂದರ್ಯ ಮತ್ತು ಸುಖವನ್ನು ನೀಡುತ್ತಾನೆ. ಕೌಟುಂಬಿಕವಾಗಿ ಸಣ್ಣಪುಟ್ಟ ಸಂಭ್ರಮಗಳು ನಡೆಯುತ್ತವೆ.

​ಚಂದ್ರ ದಶೆ :

ರಾಶ್ಯಾಧಿಪತಿಯಾಗಿರುವುದರಿಂದ, ಎಷ್ಟೇ ಖರ್ಚು ಅಥವಾ ಒತ್ತಡವಿದ್ದರೂ ಮನಸ್ಸನ್ನು ಸ್ಥಿಮಿತದಲ್ಲಿಡಲು ಚಂದ್ರನು ಸಹಾಯ ಮಾಡುತ್ತಾನೆ.

​ಮಧ್ಯಮ ಫಲ

​ಗುರು ದಶೆ :

ಗುರುವು ಹನ್ನೆರಡನೇ ಮನೆಯಲ್ಲಿದ್ದರೆ ಅದು ಮಧ್ಯಮ ಫಲ. ದಾನ, ಧರ್ಮ, ಮದುವೆ ಅಥವಾ ತೀರ್ಥಯಾತ್ರೆ ಮುಂತಾದ ಶುಭ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಖರ್ಚು ಅಧಿಕವಾದರೂ ಅದು ಸಾರ್ಥಕ ಕೆಲಸಗಳಿಗೇ ಆಗುತ್ತದೆ. ಆಧ್ಯಾತ್ಮಿಕವಾಗಿ ನೀವು ಉನ್ನತ ಮಟ್ಟಕ್ಕೆ ಏರುತ್ತೀರಿ.

​ರಾಹು-ಕೇತು ದಶೆ:

ವಿದೇಶಿ ವ್ಯವಹಾರ ಅಥವಾ ದೂರದ ಪ್ರಯಾಣದಿಂದ ಲಾಭ ಸಿಗಬಹುದು. ಆದರೆ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ.

​ಅಧಮ ಫಲ :

​ಈ ತಿಂಗಳು ನಿಮಗೆ ಈ ಗ್ರಹಗಳ ಪ್ರಭಾವವು ಅತ್ಯಂತ ಕಠಿಣವಾಗಿರಲಿದೆ.

​ಶನಿ ದಶೆ :

ಶನಿಯು 8ನೇ ಮನೆಯಲ್ಲಿದ್ದು, ಗುರುವು ಹನ್ನೆರಡನೇ ಮನೆಯಲ್ಲಿದ್ದರೆ ಆರ್ಥಿಕವಾಗಿ ಹತೋಟಿ ಮೀರುವ ಸಾಧ್ಯತೆ ಇರುತ್ತದೆ. ಕೆಲಸದಲ್ಲಿ ವಿಳಂಬ ಮತ್ತು ಶತ್ರುಗಳ ಕಾಟ ಹೆಚ್ಚಾಗಬಹುದು.

​ಕುಜ ದಶೆ:

ಅಷ್ಟಮ ರಾಶಿಯಲ್ಲಿ ಮಂಗಳನಿರುವುದು ಅಪಘಾತ ಅಥವಾ ಸರ್ಜರಿಯ ಸೂಚನೆ ನೀಡುತ್ತದೆ. ತೀವ್ರವಾದ ಕೋಪ ಮತ್ತು ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತವೆ.

​ಸೂರ್ಯ ದಶೆ:

ಕಣ್ಣಿನ ಆರೋಗ್ಯ ಅಥವಾ ತಂದೆಯ ಆರೋಗ್ಯದ ಬಗ್ಗೆ ವ್ಯಯವಾಗಬಹುದು. ಅಧಿಕಾರಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.
​ಶುಕ್ರ, ಚಂದ್ರರಿಂದ ಸಮಾಧಾನಕರ ಬದುಕು, ಸಣ್ಣ ಲಾಭ. ಗುರು, ಬುಧ, ರಾಹುವಿನಿಂದ ಅಧಿಕ ಖರ್ಚು, ಆದರೆ ಸತ್ಕಾರ್ಯಕ್ಕೆ ಬಳಕೆ. ಶನಿ, ಮಂಗಳ, ಸೂರ್ಯನಿಂದ ದೈಹಿಕ ತೊಂದರೆ, ಮಾನಸಿಕ ಕ್ಲೇಶ, ಆರ್ಥಿಕ ಮುಗ್ಗಟ್ಟು.

ಗುರು ದ್ವಾದಶದಲ್ಲಿದ್ದಾಗ ಮಾಡಬೇಕಾದ ಪರಿಹಾರಗಳು ಹಳದಿ ಬಣ್ಣದ ಬಟ್ಟೆಯಲ್ಲಿ ಸ್ವಲ್ಪ ಕಡಲೆ ಬೇಳೆಯನ್ನು ಕಟ್ಟಿ ದೇವಸ್ಥಾನಕ್ಕೆ ದಾನ ಮಾಡಿ. ಇದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವೆ. ಪ್ರತಿದಿನ ಓಂ ನಮಃ ಶಿವಾಯ ಮಂತ್ರ ಪಠಿಸಿ. ಇದು ಅಷ್ಟಮ ಶನಿ ಮತ್ತು ದ್ವಾದಶದ ಗುರುವಿನ ದೋಷಕ್ಕೆ ಉತ್ತಮ ಮದ್ದು. ಗುರುವಾರ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸುವುದು ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

– ಲೋಹಿತ ಹೆಬ್ಬಾರ್

Source link

Leave a Reply

Your email address will not be published. Required fields are marked *