ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 24, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ ದಶಮಿ, ಚಿತ್ತಾ ನಕ್ಷತ್ರ, ಪರಿಗ ಯೋಗ ಮತ್ತು ತೈತಲಕರಣ ಇರಲಿದೆ.
ಇಂದು ಮಧ್ಯಾಹ್ನ 12:21 ರಿಂದ 1:57ರ ತನಕ ರಾಹುಕಾಲ ಇರಲಿದ್ದು, ಬೆಳಿಗ್ಗೆ 10:45 ರಿಂದ 12:21ರ ತನಕ ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಇರಲಿದೆ. ಇದು ಸಾಕ್ಷಾತ್ ವಿಷ್ಣು, ವಿನಾಯಕ ಮತ್ತು ಕಾಲಭೈರವನ ಲಹರಿಗಳಿರುವ ದಿನ. ದಶಪಾಪಹರ ದಶಮಿ ಎಂದೂ ಕರೆಯಲಾಗುವ ಈ ದಿನ, ಹೊಲಹೊಳಲು ಮತ್ತು ಕೊಳ್ಳೇಗಾಲದಲ್ಲಿ ವಿಶೇಷ ಉತ್ಸವಗಳು ನಡೆಯಲಿವೆ ಎಂದು ಗುರೂಜಿ ತಿಳಿಸಿದ್ದಾರೆ.
