
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 25, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ವಣಿಕ ಕರಣಗಳನ್ನು ಒಳಗೊಂಡಿದೆ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾರೆ. ಸಂತಾನ ಸಪ್ತಮಿ, ಸೂರ್ಯ ದವನಾರ್ಪಣೆ, ಹಾಗೂ ನವಿಲೆ ಆಂಜನೇಯ ಸ್ವಾಮಿ, ಕಿಕ್ಕೇರಿ ಮಹಾಲಕ್ಷ್ಮಿ, ಸೂರತ್ಕಲ್ ಮಹಮ್ಮಾಯಿ ರಥೋತ್ಸವಗಳ ಪರ್ವ ದಿನವಾಗಿದೆ ಎಂದು ಬಸವರಜ ಗುರೂಜಿ ಹೇಳಿದ್ದಾರೆ.