ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 29, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ಮೂಲಾ ನಕ್ಷತ್ರ, ಭದ್ರ ಯೋಗ ಹಾಗೆ ಶುಕ್ಲ ಯೋಗ, ಭದ್ರ ಕರಣ ಈ ದಿನದ ಪ್ರಮುಖ ಪಂಚಾಂಗ ಅಂಶಗಳಾಗಿವೆ.
ಸೋಮವಾರದ ರಾಹುಕಾಲ ಬೆಳಗ್ಗೆ 7.32 ನಿಮಿಷದಿಂದ 9.08 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲವು 9.09 ನಿಮಿಷದಿಂದ 10.46 ನಿಮಿಷದ ತನಕ ಲಭ್ಯವಿದೆ. ಇದು ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಲು ವಿಶೇಷವಾಗಿ ಸೂಕ್ತವಾದ ಸಮಯವಾಗಿದೆ.
ಇದಲ್ಲದೆ, ಈ ದಿನವನ್ನು ಭೂಮಿ ಹುಣ್ಣಿಮೆ ಅಥವಾ ಕಾರ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸುವ ಪವಿತ್ರ ದಿನವೂ ಇದಾಗಿದೆ. ಜೇಷ್ಠ ಮಾಸದಲ್ಲಿ ಬರುವ ಸಂತ ಕಬೀರದಾಸರ ಜಯಂತ್ಯೋತ್ಸವವನ್ನೂ ಸಹ ಈ ದಿನದಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ತಮ್ಮ ರಾಶಿಗಳಿಗೆ ಅನುಗುಣವಾಗಿ ಶುಭ ಮತ್ತು ಅಶುಭ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರವಾಗಿ ತಿಳಿಸಿದ್ದಾರೆ.