ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಮಂಗಳವಾರದಂದು ಬಂದ ಅವಕಾಶದ ತ್ಯಾಗ, ಹಣದ ಕಾರಣ ಅತಿಯಾದ ಭೋಗ, ಕೊನೆಗೂ ಸಿಗದ ಆಸ್ತಿಯ ಭಾಗ, ಇದೆಲ್ಲ ಈ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಆಯುಷ್ಮಾನ್, ಕರಣ : ಗರಜ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:30 – 17:04, ಯಮಗಂಡ ಕಾಲ 09:24 – 10:50, ಗುಳಿಕ ಕಾಲ 12:23 – 13:57
ಮೇಷ ರಾಶಿ :
ಬಹಳ ದಿನಗಳಿಂದ ಯಾವುದೇ ನಿರ್ಧಾರ ನಿಮ್ಮಿಂದ ಆಗಿಲ್ಲ ಎಂದು ಸ್ತ್ರೀರಿಂದ ಅಗೌರವ ಆಗುವುದು. ಬರಬೇಕಾದ ಸಂಪತ್ತು ಬರಲಿದೆ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಯಾರನ್ನೂ ಅತಿಯಾಗಿ ಹತ್ತಿರ ಬಿಟ್ಟಕೊಳ್ಳಲಾರಿರಿ. ಸುಖದ ನಿರೀಕ್ಷೆಯು ನಿಮ್ಮನ್ನು ಸಂತೋಷದಿಂದ ಇಡುವುದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ.
ವೃಷಭ ರಾಶಿ :
ನಿಮ್ಮದಲ್ಲದ ವಸ್ತುವನ್ನು ಪಡೆಯುವ ಇಚ್ಛೆ ಹೆಚ್ಚಾಗುವುದು. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಗಳನ್ನು ಮಾಡಿರಿ. ಸಂತಸದ ವಾರ್ತೆ ನಿಮ್ಮನ್ನು ಅರಸಿ ಬರಬಹುದು. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.
ಮಿಥುನ ರಾಶಿ :
ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ :
ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಉನ್ನತ ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಆಕರ್ಷಣೆಗೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ.
ಸಿಂಹ ರಾಶಿ :
ಧಾರ್ಮಿಕ ಕಾರ್ಯಗಳಿಂದ ಆದಾಯ ಹೆಚ್ಚಾಗುವುದು. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು. ಮಣ್ಣಿನ ವಸ್ತುಗಳ ಮಾರಾಟದಿಂದ ಲಾಭ. ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು.
ಕನ್ಯಾ ರಾಶಿ :
ಭೂಮಿಗೆ ಸಂಬಂಧಿಸಿದ ಕಾರ್ಯವನ್ನು ಮಾಡಿಸುವಿರಿ. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಗಳಿಕೆ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.
ತುಲಾ ರಾಶಿ :
ತಂದೆಯಿಂದ ಧನಸಹಾಯ ಆಗಲಿದೆ. ನಿಮಗೆ ಸಹಾಯ ಮಾಡಿದವರ ಮೇಲೆ ಸಂದೇಹ ಬರಬಹುದು. ಸಂಗಾತಿಯ ಅನ್ವೇಷಣೆಯಲ್ಲಿ ನೀವು ತೊಡಗಿಕೊಳ್ಳುವಿರಿ. ಯಾರ ಮೇಲಾದರೂ ಪ್ರೀತಿಯು ಉಂಟಾಗಬಹುದು. ಹಣಕಾಸಿನ ವೆಚ್ಚಗಳ ಬಗ್ಗೆ ವಿಶೇಷವಾಗಿ ಕಾಳಜಿ ಬೇಕು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಉಪಕಾರ ಪ್ರಯೋಜನಕ್ಕೆ ಬಾರದು.
ವೃಶ್ಚಿಕ ರಾಶಿ :
ನಿಮ್ಮ ಮಾತನ್ನೇ ಎಲ್ಲರೂ ಪಾಲಿಸಬೇಕು ಎನ್ನುವ ನಿಮ್ಮ ಧೋರಣೆಯನ್ನು ಬದಲಿಸಿಕೊಳ್ಳಿ. ಅನಿವಾರ್ಯದ ಪ್ರಯಾಣವು ನಿಮ್ಮನ್ನು ಹೈರಾಣ ಮಾಡುವುದು. ವಿದೇಶದ ಜೊತೆಗೆ ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಸಹಾಯ ಮಾಡದಿರಲು ಒತ್ತಡ ಹೆಚ್ಚಾಗುವುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷಕ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮಕ್ಕಳ ಜೊತೆ ಚಿಂತೆಯನ್ನೆಲ್ಲ ಬಿಟ್ಟು ಸಂತೋಷದಿಂದ ಕಾಲವನ್ನು ಕಳೆಯುವಿರಿ.
ಧನು ರಾಶಿ :
ಬಂಧುಗಳ ಕಡೆಯಿಂದ ಅನಿರೀಕ್ಷಿತ ಸುದ್ದಿಯನ್ನು ನೀವು ಕೇಳಬೇಕಾಗಬಹುದು. ಬೀಳುತ್ತಾರೆ ಎಂದು ನಡೆದಾಡಲೇ ಇರಲು ಸಾಧ್ಯವೇ. ಕುಟುಂಬದವರ ಜೊತೆ ಪ್ರೀತಿಯಿಂದ ಮಾತನಾಡಿ. ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಹಿನ್ನಡೆಯ ಸಾಧ್ಯತೆ ಇದೆ. ಉತ್ತಮ ಮಾತುಗಳು ನಿಮ್ಮ ನೆಮ್ಮದಿಗೆ ಸಹಾಯಕವಾಗಲಿದೆ. ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು.
ಮಕರ ರಾಶಿ :
ನಿಮ್ಮ ಗಳಿಕೆಯ ಯಶಸ್ಸು ಇನ್ಮೊಬ್ಬರ ಪಾಲಾಗಬಹುದು. ನಿಮ್ಮ ಸಂತೋಷದ ವರ್ತನೆಯು ನಿಮ್ಮವರಿಗೆ ಸಂತೋಷವನ್ನು ಕೊಡುವುದು. ಪ್ರೀತಿಯ ವಿಷಯಗಳಲ್ಲಿ ತಪ್ಪು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಷ್ಕಾರಣ ಭೇಟಿಯೂ ಸಂಗತವಾಗುವುದು. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನಪಡುವ ದುರಭ್ಯಾಸವು ಬೆಳೆಯುವುದು.
ಕುಂಭ ರಾಶಿ :
ಇಂದು ಯಾರಿಗೂ ಸಲಹೆಯನ್ನು ಕೊಡಲು ಹೋಗಬೇಡಿ. ನಿಮ್ಮನ್ನೇ ಗುರಿಯಾಗಿಸಿಯಾರು. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ನಿಮ್ಮ ವರ್ತನೆಗಳು ಮನೆಯ ಹಿರಿಯರಿಗೆ ತೊಡಕು. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ :
ದೂರದವರ ಸಮಾರಂಭಗಳಿಗೆ ಹೋಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾಗಲಿದೆ. ಸ್ವಂತ ಉದ್ಯೋಗಿಗಳಿಗೆ ಶುಭವಾಗಲಿದೆ. ಕಛೇರಿ ಕೆಲಸದಿಂದ ನಿಮ್ಮ ಸ್ವಂತ ಕೆಲಸಕ್ಕೆ ತೊಂದರೆಯಾಗಬಹುದು. ಆತ್ಮಸಂತೋಷಕ್ಕಾದರೂ ಸಹಾಯ ಮಾಡಿ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)
