Horoscope Today 24 February: ಇಂದು ಈ ರಾಶಿಯವರನ್ನು ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿ ತಪ್ಪಿಸಬಹುದು – Kannada News | Horoscope Today Feb 24: What Your Zodiac Sign Needs to Know About Money, Love and Career

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ ಮಂಗಳವಾರದಂದು ಅಲೆದಾಟ, ಕಷ್ಟದ ಕಾರ್ಯ, ಮರೆವು, ಹೊಸ ಸ್ನೇಹ, ಕೃಷಿ, ಆದಾಯಕ್ಕೆ ತಯಾರಿ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಐಂದ್ರ, ಕರಣ :ವಣಿಜ, ಸೂರ್ಯೋದಯ – 06 – 44 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭ ಕಾಲ : ರಾಹು 15:34 – 17:02, ಯಮಗಂಡ ಕಾಲ 09:41 – 11:10, ಗುಳಿಕ ಕಾಲ 12:38 – 14:06

ಮೇಷ ರಾಶಿ :

ಇಂದು ನಿಮ್ಮ ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಬೇರೆ ಬೇರೆ ಕ್ಷೇತ್ರಗಳ ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಕೆಲವರಿಂದ ದೂರವಿರುವ ಪ್ರಯತ್ನವನ್ನು ಮಾಡುವಿರಿ. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳಬಹುದು. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಯೋಗವೇ ಮದ್ದಾಗಲಿದೆ.

ವೃಷಭ ರಾಶಿ :

ಯಾರ ಜೊತೆಗೂ ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ದೈವದ ಮೇಲಿನ ನಂಬಿಕೆ ಸತ್ಯವಾಗುವುದು. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ಕೃಷಿ ಉತ್ಪನ್ನದ ಮಾರಾಟ. ಖರ್ಚು ಮತ್ತು ಆದಾಯ ಸಮಾಮವಾಗುವುದು. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮಿತಿಮೀರಿದ ಆಸೆಗೆ ಕಡಿವಾಣದ ಅಗತ್ಯವಿದೆ. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ.

ಮಿಥುನ ರಾಶಿ :

ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ವಿನಯಶೀಲತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸುಳ್ಳು ಮಾತುಗಳನ್ನು ಯಾರೂ ಕೇಳಲು ಇಷ್ಟ ಪಡರು.‌ ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ‌ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು.

ಕರ್ಕಾಟಕ ರಾಶಿ :

ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕ‌ವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ.‌ ಸದಾ ಯಾರ ಮೇಲಾದರೂ ಅನುಮಾನದಿಂದಲೇ ಇರುವಿರಿ.‌ ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೋಗಲು ಇಷ್ಟ ಪಡುವುದಿಲ್ಲ.‌

ಸಿಂಹ ರಾಶಿ :

ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ಸ್ನೇಹಿತರ ಜೊತೆಗೆ ಪ್ರವಾಸ ಸಂಭವ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ಮನಸ್ಸಿನ ಗುಯ್ದಾಟಕ್ಕೆ ಒಂದು ವಿರಾಮ ಬೇಕಿದೆ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೆ ಯಾರನ್ನೋ ದ್ವೇಷ‌ ಮಾಡುವುದು ಸರಿಯಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕು.

ಕನ್ಯಾ ರಾಶಿ :

ಯಾವ ಸಂದರ್ಭದಲ್ಲಿಯೂ ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧಾನ ಇರುವುದು. ಸಾಮಾಜಿಕ ಕಾರ್ಯವನ್ನೂ ಪರಿಚಿತರ ಜೊತೆ ಭಾಗವಹಿಸಿ ಮಾಡುವಿರಿ.

ತುಲಾ ರಾಶಿ :

ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ ಮುಂದುವರಿಯಿರಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌ ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ.

ವೃಶ್ಚಿಕ ರಾಶಿ :

ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ಇಷ್ಟವಿಲ್ಲದಿದ್ದರೂ ಬಂಧುಗಳ ಆಗಮನವಾಗಲಿದೆ. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ನೀವು ಮಾಡುವ ವೃತ್ತಿಯಲ್ಲಿ ಗೊಂದಲವಿದ್ದರೆ ಅನುಭವಗಳನ್ನು ಕೇಳಿ ಮಂದುವರೆಯಿರಿ. ಸಂಗಾತಿಯ ಕೆಲವು ಮಾತುಗಳಿಂದ ನಿಮಗೆ ಬೇಸರವಾಗುವುದು.

ಧನು ರಾಶಿ :

ಇಂದು ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಹೆಚ್ಚು ತಿರುಗಾಟ ಮಾಡಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಲಾಭವನ್ನು ಅರಿತು ಯೋಜನೆ ರೂಪಿಸುವಿರಿ. ನಿಮ್ಮ ಮನಸ್ಸಿಗೆ ಪೂರ್ಣವಾಗಿ ಒಪ್ಪಿಗೆ ಆದರೆ ಮಾತ್ರ ಯಾವ ಕೆಲಸಕ್ಕಾದರೂ ಮುಂದುವರಿಯಿರಿ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ.

ಮಕರ ರಾಶಿ :

ಇಂದು ಸ್ತ್ರೀಯರಿಗೆ ಮಾನಸಿಕವಾದ ಕಿರಿಕಿರಿ ಇರಲಿದ್ದು ತೊಂದರೆಯಾಗಬಹುದು. ಯಂತ್ರೋತ್ಪನ್ನಗಳ ತಯಾರಿಯಲ್ಲಿ ಹಿನ್ನಡೆಯಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ಚರಾಸ್ತಿಯ ರಕ್ಷಣೆ ಕಷ್ಟವಾಗಲಿದೆ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು. ಸಾರ್ವಜನಿಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ನಿಮಗೆ ಪರಿಚಿತರನ್ನು ಆಪ್ತರನದನಾಗಿ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆದೀತು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದ ಕಾರಣ ನಿಮ್ಮ ಮೇಲೆ ಕೋಪ‌.

ಕುಂಭ ರಾಶಿ :

ಮಕ್ಕಳಿಗೆ ಇರುವ ಗೊಂದಲವನ್ನು ದೂರ ಮಾಡುವಿರಿ.‌ ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ಕಾರ್ಯದ ಸ್ಥಳವು ಬದಲಾಗುವ ಸಾಧ್ಯತೆ ಇದೆ. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ಕೊಡುವುದು ಬೇಡ. ನಿಮ್ಮ ಕೋಪವು ವ್ಯರ್ಥ.

ಮೀನ ರಾಶಿ :

ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ನಿಮ್ಮ ದಾಂಪತ್ಯದ ಮೇಲೆ ಇತರರ ದೃಷ್ಟಿ ಬೀಳಬಹುದು. ಪಾಲುದಾರಿಕೆಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ಒತ್ತಾಯದ ಕಾರಣ ಸಮಾರಂಭಗಳಿಗೆ ಹೋಗುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

Leave a Reply

Your email address will not be published. Required fields are marked *