Horoscope Today 6​​th​​ March​: ಇಂದು ಈ ರಾಶಿಯವರ ಆಕಸ್ಮಿಕ ಪ್ರಯಾಣ ಯೋಗ – Kannada News | Daily Horoscope for March​ ​6​​th​​ 20​26: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 6​​, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ತದಿಗೆ, ಹಸ್ತಾ ನಕ್ಷತ್ರ, ಗಂಡ ಯೋಗ ಮತ್ತು ಭದ್ರಕರ್ಣದಿಂದ ಕೂಡಿದೆ.

ಬೆಳಗಿನ ಜಾವ 11:03 ರಿಂದ 12:30ರ ವರೆಗೆ ರಾಹುಕಾಲವಿದ್ದು, ಮಧ್ಯಾಹ್ನ 12:31 ರಿಂದ 2:02ರ ವರೆಗೆ ಸರ್ವ ಸಿದ್ದಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯಲ್ಲಿ ಹಸ್ತಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಇದು ಸಂಕಷ್ಟ ಚತುರ್ಥಿ ಇರತಕ್ಕಂತಹ ವಿಶೇಷ ದಿನವಾಗಿದೆ. ಜೊತೆಗೆ ಉಳ್ಳಾಲ ರಥ, ಕದನೂರಿನ ಉತ್ಸವ, ನವವೃಂದಾವನ ವ್ಯಾಸರಾಯ ತೀರ್ಥರ ಆರಾಧನೆ, ಕಳಲೆಯ ಜಾತ್ರೆ ಮಹೋತ್ಸವದಂತಹ ವಿಶೇಷ ಕಾರ್ಯಕ್ರಮಗಳ ದಿನವಾಗಿದೆ ಎಂದು ಗುರೂಜಿ ವಿವರಣೆ ನೀಡಿದ್ದಾರೆ.

 

 

 

Source link

Leave a Reply

Your email address will not be published. Required fields are marked *