ವರ್ಷದ ಆರನೇ ತಿಂಗಳಾದ ಜೂನ್ (June) ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುವ ತಿಂಗಳು. ಅಲ್ಲದೆ ಇದು ಅನೇಕ ಪ್ರಮುಖ ದಿನಗಳು ಮತ್ತು ಜಾಗತಿಕ ಆಚರಣೆಗಳಿಂದ ತುಂಬಿರುವ ತಿಂಗಳು. ಹೌದು ತಿಂಗಳಿನಲ್ಲಿ ಸಾಮಾಜಿಕ, ಆರೋಗ್ಯ, ಪರಿಸರ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನದಿಂದ ಹಿಡಿದು ಅಂತಾರಾಷ್ಟ್ರೀಯ ಯೋಗ ದಿನದವರೆಗೆ ಜೂನ್ ತಿಂಗಳಲ್ಲಿ ಯಾವೆಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ದಿನಾಚರಣೆಗಳ ಪಟ್ಟಿ:
- ಜೂನ್ 1 – ವಿಶ್ವ ಹಾಲು ದಿನ
- ಜೂನ್ 1 – ಜಾಗತಿಕ ಪೋಷಕರ ದಿನ
- ಜೂನ್ 2 – ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನ
- ಜೂನ್ 3 – ವಿಶ್ವ ಬೈಸಿಕಲ್ ದಿನ
- ಜೂನ್ 5 – ವಿಶ್ವ ಪರಿಸರ ದಿನ
- ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ
- ಜೂನ್ 8 – ವಿಶ್ವ ಸಾಗರ ದಿನ
- ಜೂನ್ 8 – ವಿಶ್ವ ಮಿದುಳಿನ ಗೆಡ್ಡೆ ದಿನ
- ಜೂನ್ 8 – ರಾಷ್ಟ್ರೀಯ ಆತ್ಮೀಯ ಸ್ನೇಹಿತರ ದಿನ
- ಜೂನ್ 12 – ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ
- ಜೂನ್ 14 – ವಿಶ್ವ ರಕ್ತದಾನಿಗಳ ದಿನ
- ಜೂನ್ 15 – ಜಾಗತಿಕ ಪವನ ದಿನ
- ಜೂನ್ 15 – ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ
- ಜೂನ್ 18 – ಅಂತರರಾಷ್ಟ್ರೀಯ ಪಿಕ್ನಿಕ್ ದಿನ
- ಜೂನ್ 20 – ವಿಶ್ವ ನಿರಾಶ್ರಿತರ ದಿನ
- ಜೂನ್ 21 – ಅಂತರರಾಷ್ಟ್ರೀಯ ಯೋಗ ದಿನ
- ಜೂನ್ 21 – ವಿಶ್ವ ಸಂಗೀತ
- ಜೂನ್ 21 – ವಿಶ್ವ ಹೈಡ್ರೋಗ್ರಫಿ ದಿನ
- ಜೂನ್ 21 – ತಂದೆಯಂದಿರ ದಿನ
- ಜೂನ್ 22 – ವಿಶ್ವ ಮಳೆಕಾಡು ದಿನ
- ಜೂನ್ 23 – ಅಂತರರಾಷ್ಟ್ರೀಯ ಒಲಿಂಪಿಕ್ ದಿನ
- ಜೂನ್ 23 – ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನ
- ಜೂನ್ 23 – ಅಂತರರಾಷ್ಟ್ರೀಯ ವಿಧವೆಯರ ದಿನ
- ಜೂನ್ 26 – ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ
- ಜೂನ್ 29 – ರಾಷ್ಟ್ರೀಯ ಅಂಕಿಅಂಶ ದಿನ
- ಜೂನ್ 29 – ಅಂತರರಾಷ್ಟ್ರೀಯ ಉಷ್ಣವಲಯದ ದಿನ
- ಜೂನ್ 30 – ವಿಶ್ವ ಕ್ಷುದ್ರಗ್ರಹ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
