ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಎ ತಂಡ ಇದೀಗ ಅದೇ ಶ್ರೀಲಂಕಾದಲ್ಲಿ (India A vs Sri Lanka A) ಆತಿಥೇಯ ತಂಡದ ವಿರುದ್ಧ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇಂದಿನಿಂದ ಗಾಲೆಯಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಧೃವ್ ಜುರೇಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ (Sai Sudharsan) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಸುದರ್ಶನ್, ಇದೀಗ ಶ್ರೀಲಂಕಾ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದಾರೆ.
ಇನ್ನಿಂಗ್ಸ್ ಕಟ್ಟಿದ ಸುದರ್ಶನ್
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ ಹಾಗೂ ಆಯುಷ್ ಪಾಂಡೆ ಮೊದಲ ವಿಕೆಟ್ಗೆ 82 ರನ್ಗಳ ಜೊತೆಯಾಟ ನೀಡಿದರು. ಆಯುಷ್ 25 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಆ ಬಳಿಕ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ 12 ರನ್ಗಳಿಗೆ ಸುಸ್ತಾದರು. ಹೀಗಾಗಿ ಭಾರತ ಎ ತಂಡ ಕೇವಲ 14 ರನ್ಗಳ ಅಂತರದಲ್ಲಿ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ನಂತರ ರುತುರಾಜ್ ಜೊತೆಗೂಡಿ ತಂಡವನ್ನು 150 ರನ್ಗಳ ಗಡಿ ದಾಟಿಸಿದ ಸುದರ್ಶನ್ ತಮ್ಮ ಶತಕವನ್ನು ಸಹ ಪೂರೈಸಿದರು.
130 ಎಸೆತಗಳಲ್ಲಿ ಶತಕ ಪೂರ್ಣ
ಇಬ್ಬರ ಜೊತೆಯಾಟ ಶತಕ ಮುಟ್ಟುವ ಮೊದಲೆ ರುತುರಾಜ್ ಗಾಯಕ್ವಾಡ್ 22 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಹೀಗಾಗಿ ಟೀಂ ಇಂಡಿಯಾ 181 ರನ್ಗಳಿಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ನಂತರ ನಾಯಕನ ಜೊತೆ ಸೇರಿ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಸಾಯಿ ತಂಡವನ್ನು 200 ರನ್ಗಳ ಗಡಿ ದಾಟಿಸಿದ್ದಾರೆ. ಈ ಸುದ್ದಿ ಬರೆಯುವ ಹೊತ್ತಿಗೆ 161 ಎಸೆತಗಳಲ್ಲಿ 121 ರನ್ ಬಾರಿಸಿರುವ ಸುದರ್ಶನ್ 17 ಬೌಂಡರಿಗಳನ್ನು ಕಲೆಹಾಕಿದ್ದಾರೆ.
ನೆರೆಯ ದೇಶದ ವಿರುದ್ಧ ಟೆಸ್ಟ್ ಸರಣಿಯನ್ನಾಡಲಿದೆ ಭಾರತ; ಸ್ವಾತಂತ್ರ್ಯ ದಿನದಂದು ಮೊದಲ ಪಂದ್ಯ
ಉಭಯ ತಂಡಗಳು
ಭಾರತ ಎ ತಂಡ: ಸಾಯಿ ಸುದರ್ಶನ್, ಆಯುಷ್ ಪಾಂಡೆ, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಧ್ರುವ್ ಜುರೆಲ್ (ನಾಯಕ), ಶೇಕ್ ರಶೀದ್, ಹರ್ಷ ದುಬೆ, ಸರನ್ಶ್ ಜೈನ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್, ಆಕಿಬ್ ನಬಿ ದಾರ್.
ಶ್ರೀಲಂಕಾ ಎ ತಂಡ: ಪವಂತ ವೀರಸಿಂಗ್, ನಿರೋಶನ್ ಡಿಕ್ವೆಲ್ಲಾ, ನುವಾನಿಡು ಫೆರ್ನಾಂಡೋ, ಅಶೇನ್ ಬಂಡಾರ, ಸಹನ್ ಅರಚ್ಚಿಗೆ (ನಾಯಕ), ರವಿಂದು ಫೆರ್ನಾಂಡೋ, ಅಂಜಲಾ ಬಂಡಾರ, ಕವಿಂದು ಪತಿರತ್ನ, ದುಲಾಜ್ ಸಮುದಿತ, ಚಾಮಿಕಾ ಗುಣಶೇಖರ, ದಿಲುಂ ಸುದೀರ.
