ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಟೀಂ ಇಂಡಿಯಾ ಬೌಲರ್ಗಳ ಎದುರು ಏಕಾಂಗಿ ಹೋರಾಟ ನೀಡಿ ಸ್ಮರಣೀಯ ಶತಕ ಸಿಡಿಸಿದರು. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಶತಕ ಬಾರಿಸಿದ ಶಾಹಿದಿ ತಂಡವನ್ನು 200 ರನ್ಗಳ ಗಡಿ ದಾಟಿಸುವಲ್ಲು ಯಶಸ್ವಿಯಾದರು. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 126 ಎಸೆತಗಳನ್ನು ಎದುರಿಸಿದ ಶಾಹಿದಿ 13 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಸುಂದರ್ ಎಸೆದ 44ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಹಶ್ಮತುಲ್ಲಾ ಶಾಹಿದಿ ತಮ್ಮ ಶತಕದ ಗಡಿ ದಾಟಿದರು. ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಶಾಹಿದಿಗೆ ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕವೂ ಆಗಿದೆ.