Headlines

IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ – Kannada News | Rishabh Pant Dropped From India ODI Squad, Loses Test Vice Captaincy vs AFG

ಐಪಿಎಲ್ (IPL 2026) ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ, ಅಫ್ಘಾನಿಸ್ತಾನದ (IND vs AFG) ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ತಂಡವನ್ನು ಸಹ ಪ್ರಕಟಿಸಿದೆ. ಈ ಎರಡು ತಂಡಗಳಲ್ಲಿ ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇತ್ತ ಹಿಂದಿನ ಸರಣಿಯಲ್ಲಿ ತಂಡದಲ್ಲಿದ್ದ ಹಲವು ಆಟಗಾರರಿಗೆ ಗೇಟ್ ಪಾಸ್ ನೀಡಿಲಾಗಿದೆ. ಅಂತಹ ಆಟಗಾರರಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant)​ ಕೂಡ ಒಬ್ಬರು. ಬಿಸಿಸಿಐ, ರಿಷಭ್ ಪಂತ್​ಗೆ ಒಂದಲ್ಲ ಅಂತಾ ಎರಡು ಆಘಾತಗಳನ್ನು ನೀಡಿದೆ. ರಿಷಭ್ ಪಂತ್ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದ ತೆಗೆದುಹಾಕುವುದರ ಜೊತೆಗೆ ಅವರನ್ನು ಏಕದಿನ ತಂಡದಿಂದಲೂ ಕೈಬಿಡಲಾಗಿದೆ.

ವಾಸ್ತವವಾಗಿ ಕಳೆದ ವರ್ಷ ಶುಭ್​ಮನ್ ಗಿಲ್ ಗಾಯಗೊಂಡ ನಂತರ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡರು. ಆ ಸರಣಿಯನ್ನು ಭಾರತ 0-2 ಅಂತರದಿಂದ ಸೋತಿತು. ಈಗ ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಟೆಸ್ಟ್‌ ತಂಡಕ್ಕೆ ಉಪನಾಯಕನಾಗಿ ನೇಮಿಸಲಾಗಿದೆ. ಇತ್ತ ಕಳೆದ ಎರಡು ವರ್ಷಗಳಿಂದ ಏಕದಿನ ತಂಡದ ಭಾಗವಾಗಿದ್ದ ಪಂತ್​ಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಏಕೆಂದರೆ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಿ ಕೆಎಲ್ ರಾಹುಲ್ ಇದ್ದರು. ಇದೀಗ ಪಂತ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದ್ದು, ಇಶಾನ್ ಕಿಶನ್​ಗೆ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿದೆ.

ಪಂತ್​ಗೆ ಏಕದಿನ ತಂಡದ ಬಾಗಿಲು ಬಂದ್?

ರಿಷಭ್ ಪಂತ್ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದು ಆಗಸ್ಟ್ 2024 ರಲ್ಲಿ. ಅದಕ್ಕೂ ಮೊದಲು, ಅಭ್ಯಾಸದ ಸಮಯದಲ್ಲಿ ಉಂಟಾದ ಗಾಯದಿಂದಾಗಿ ಜನವರಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇದುವರೆಗೆ ಪಂತ್ 31 ಏಕದಿನ ಪಂದ್ಯಗಳನ್ನು ಆಡಿದ್ದು, 27 ಇನ್ನಿಂಗ್ಸ್‌ಗಳಲ್ಲಿ 33.50 ಸರಾಸರಿ ಮತ್ತು 106.21 ಸ್ಟ್ರೈಕ್ ರೇಟ್‌ನಲ್ಲಿ 871 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.

LSG vs RCB: ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್

ಅಗರ್ಕರ್ ಹೇಳಿದ್ದೇನು?

ರಿಷಭ್ ಪಂತ್ ಅವರ ಕೈಬಿಟ್ಟ ಬಗ್ಗೆ ಮಾತನಾಡಿದ ಭಾರತದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ರಿಷಭ್ ಒಬ್ಬ ಅದ್ಭುತ ಟೆಸ್ಟ್ ಆಟಗಾರ. ಸ್ಪಷ್ಟವಾಗಿ ಹೇಳುವುದಾದರೆ, ಅವರು ಈಗ ಏಕದಿನ ತಂಡದ ಭಾಗವಾಗಿಲ್ಲ. ಅವರು ಯಾವಾಗಲೂ ಅತ್ಯುತ್ತಮ ಟೆಸ್ಟ್ ಆಟಗಾರನಾಗಬೇಕೆಂದು ನಾವು ಬಯಸುತ್ತೇವೆ. ಟೆಸ್ಟ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಆ ತಂಡದಲ್ಲಿ ಅವರು ನಮ್ಮ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಪ್ರಸ್ತುತ ನಮಗೆ ರಾಹುಲ್ ಮತ್ತು ಕಿಶನ್ ರೂಪದಲ್ಲಿ ಎರಡು ವಿಭಿನ್ನ ಆಯ್ಕೆಗಳಿವೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *