ಫೆಬ್ರವರಿ 21 ರ ಶನಿವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತೆ ಮೊದಲು ಬ್ಯಾಟಿಂಗ್ ಮಾಡಿತು. ಹಿಂದಿನ ಪಂದ್ಯದಲ್ಲಿ ಮಂಧಾನಾ ಕೇವಲ 31 ರನ್ ಗಳಿಸಿದ್ದರು, ಆದರೆ ಈ ಬಾರಿ ಅಮೋಘ ಪ್ರದರ್ಶನ ನೀಡಿದ ಮಂಧಾನ ತಮ್ಮ 35ನೇ ಟಿ20 ಅರ್ಧಶತಕವನ್ನೂ ಪೂರ್ಣಗೊಳಿಸಿದರು. ಮಾತ್ರವಲ್ಲದೆ ಮಂಧಾನ, ಜೆಮಿಮಾ ರೊಡ್ರಿಗಸ್ ಜೊತೆಗೂಡಿ ಉತ್ತಮಜೊತೆಯಾಟವನ್ನು ಕಟ್ಟಿದರು.
