ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ನ ಫೈನಲ್ಗೆ ಪ್ರವೇಶಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ತಂಡದ ಸಾಂಘಿಕ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಮೊದಲು ಬ್ಯಾಟಿಂಗ್ನಲ್ಲಿ ಬ್ಯಾಟ್ಸ್ಮನ್ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ, ಬೌಲರ್ಗಳು ಕೊಂಚ ದುಬಾರಿಯಾದರೂ ಕೊನೆಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಎರಡು ವಿಭಾಗದ ಜೊತೆಗೆ ತಂಡದ ಫಿಲ್ಡಿಂಗ್ ವಿಭಾಗವೂ ಗೆಲುವಿಗೆ ಪ್ರಮುಖ ಕೊಡುಗೆ ನೀಡಿತು. ಅದರಲ್ಲೂ ಎರಡು ಅತ್ಯದ್ಭುತ ಕ್ಯಾಚ್ಗಳನ್ನು ಹಿಡಿದ ಅಕ್ಷರ್ ಪಟೇಲ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.
ಅಕ್ಷರ್ ಪಟೇಲ್ ಹಿಡಿದ ಆ ಎರಡು ಕ್ಯಾಚ್ಗಳು ಟೀಂ ಇಂಡಿಯಾ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಸಂದರ್ಭಗಳನ್ನು ನೆನಪಿಸಿತು. ಮೊದಲನೆಯದಾಗಿ ಈ ಪಂದ್ಯದಲ್ಲಿ ಅಕ್ಷರ್ ಹಿಡಿದ ಮೊದಲ ಕ್ಯಾಚ್ 1983 ರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಅಂದಿನ ಭಾರತದ ನಾಯಕ ಕಪಿಲ್ ದೇವ್, ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ನೀಡಿದ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿದು ಭಾರತವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮಿಡ್ ಆನ್ನಲ್ಲಿ ನಿಂತಿದ್ದ ಕಪಿಲ್ ದೇವ್ ಮಿಡ್ ವಿಕೆಟ್ ಕಡೆ ಓಡಿ ಅತ್ಯದ್ಭುತ ಕ್ಯಾಚ್ ಹಿಡಿದಿದ್ದರು. ರಿಚರ್ಡ್ಸ್ ಅವರ ಈ ವಿಕೆಟ್ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿತ್ತು.
ಅದರಂತೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಅಕ್ಷರ್ ಪಟೇಲ್ ಅಂತಹದ್ದೇ ಕ್ಯಾಚ್ ಹಿಡಿದರು. ಬುಮ್ರಾ ಎಸೆದ ಇನ್ನಿಂಗ್ಸ್ನ ಐದನೇ ಓವರ್ನ ಮೊದಲ ಎಸೆತವನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕವರ್ಸ್ ದಿಕ್ಕಿನಲ್ಲಿ ಆಡಿದರು. ಇದೇ ವೇಳೆ ಎಕ್ಸ್ಟ್ರಾ ಕವರ್ಸ್ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಬೌಂಡರಿ ಗೆರೆಯತ್ತ ಓಡಿ ಅತ್ಯದ್ಭುತ ಕ್ಯಾಚ್ ತೆಗೆದುಕೊಂಡರು. ಅಕ್ಷರ್ ಹಿಡಿದ ಈ ಕ್ಯಾಚ್ 1983 ವಿಶ್ವಕಪ್ನಲ್ಲಿ ಕಪಿಲ್ ದೇವ್ ಹಿಡಿದಿದ್ದ ಕ್ಯಾಚ್ ನೆನಪಿಸಿತು.
ಬಾಪು ಭಾಯ್ ಬೆಂಕಿ ಕ್ಯಾಚ್ ಭಾಯ್!🫡🔥
ವೀಕ್ಷಿಸಿ | ICC Men’s #T20WorldCup 👉Semi-Final 2 | #INDvsENG | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.#JaspritBumrah #AxarPatel pic.twitter.com/OP2LGTzG88
— Star Sports Kannada (@StarSportsKan) March 5, 2026
ಹಾಗೆಯೇ ಅಕ್ಷರ್ ಹಿಡಿದ ಇನ್ನೊಂದು ಕ್ಯಾಚ್ 2024 ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದ 20ನೇ ಓವರ್ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಹಿಡಿದಿದ್ದ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅನ್ನು ನೆನಪಿಸಿತು. ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ 20 ನೇ ಓವರ್ನ ಮೊದಲ ಎಸೆತವನ್ನು ಮಿಲ್ಲರ್ ಲಾಂಗ್ ಆನ್ ದಿಕ್ಕಿನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲಿಯೇ ಫಿಲ್ಡಿಂಗ್ ಮಾಡುತ್ತಿದ್ದ ಸೂರ್ಯ, ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿದು ಭಾರತವನ್ನು ಚಾಂಪಿಯನ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
Ridiculous pic.twitter.com/XJ0WcXX39i
— simon hughes (@theanalyst) June 29, 2024
aXar- dUbe Beauty!🫂💯
ಇದು ಇದು ಆಕ್ಚುವಲ್ಲಿ ಚೆನ್ನಾಗಿರೋದು!🤌🏻🔥
ವೀಕ್ಷಿಸಿ | ICC Men’s #T20WorldCup 👉Semi-Final 2 | #INDvsENG | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.#AxarPatel #ShivamDube pic.twitter.com/aiFb6aWVEw
— Star Sports Kannada (@StarSportsKan) March 5, 2026
ಸೂರ್ಯಕುಮಾರ್ ಅವರಂತೆಯೇ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಎರಡನೇ ಅದ್ಭುತ ಕ್ಯಾಚ್ ಹಿಡಿದು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅರ್ಷದೀಪ್ ಸಿಂಗ್ ಬೌಲ್ ಮಾಡಿದ 14ನೇ ಓವರ್ನ ಕೊನೆಯ ಎಸೆತವನ್ನು ವಿಲ್ ಜ್ಯಾಕ್ಸ್ ಡೀಪ್ ಎಕ್ಸ್ಟ್ರಾ ಕವರ್ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಮತ್ತೊಮ್ಮೆ ಅದ್ಭುತ ಫಿಲ್ಡಿಂಗ್ ಮಾಡಿದ ಅಕ್ಷರ್ ಪಟೇಲ್ ವೇಗವಾಗಿ ಓಡಿ ಬಂದು ಚೆಂಡನ್ನು ಹಿಡಿದರು. ಆದರೆ ತಾನು ಬೌಂಡರಿ ಗೆರೆಯಿಂದ ಹೊರಹೋಗುತ್ತಿರುವುದನ್ನು ಗಮನಿಸಿದ ಅಕ್ಷರ್, ಚೆಂಡನ್ನು ಗಾಳಿಯಲ್ಲಿ ಎಸೆದರು. ಅಲ್ಲಿಯೇ ನಿಂತಿದ್ದ ದುಬೆ ಕ್ಯಾಚ್ ಅನ್ನು ಪೂರ್ಣಗೊಳಿಸುವ ಮೂಲಕ ಜ್ಯಾಕ್ಸ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಅಕ್ಷರ್ ಹಿಡಿದ ಈ ಎರಡು ಕ್ಯಾಚ್ಗಳು ಪಂದ್ಯದ ದಿಕ್ಕನೇ ಬದಲಿಸಿದವು.
Published On – 11:50 pm, Thu, 5 March 26
