ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆತಿಥೇಯ ಇಂಗ್ಲೆಂಡ್ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಈಗಾಗಲೇ ಅರ್ಧಶತಕ ಬಾರಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅನಾನುಭವಿ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸುತ್ತಿರುವ ಇಂಗ್ಲೆಂಡ್‌ನ ಆರಂಭಿಕರು ಮೈದಾನದಾದ್ಯಂತ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್ ತಂಡ 30 ಓವರ್ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 192 ರನ್‌ಗಳ ಜೊತೆಯಾಟವನ್ನಾಡಿದೆ.
