ಭಾರತ ಹಾಗೂ ಐರ್ಲೆಂಡ್ (India vs Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಅಂದರೆ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಆದರೆ ಈ ಮೊದಲೇ ಹವಮಾನ ಇಲಾಖೆ ವರದಿಮಾಡಿರುವ ಪ್ರಕಾರ, ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಿರಂತರವಾಗಿ ಮಳೆ (Belfast weather forecast) ಸುರಿಯುತ್ತಿದೆ. ಇದರಿಂದಾಗಿ ಉಭಯ ತಂಡಗಳು ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಲಾಗಿದೆ. ಇದೀಗ ಮಳೆಯಿಂದಾಗಿ ಪಂದ್ಯ ರದ್ದಾದರೆ, ಟೀಂ ಇಂಡಿಯಾಕ್ಕೆ ಇದು ದೊಡ್ಡ ಆಘಾತವಾಗಲಿದೆ. ಏಕೆಂದರೆ ಭಾರತ ಈಗಾಗಲೇ ಮೊದಲ ಟಿ20 ಪಂದ್ಯವನ್ನು ಸೋತಿರುವ ಕಾರಣ ಈ ಪಂದ್ಯ ರದ್ದಾದರೆ ಸರಣಿಯನ್ನು ಕಳೆದುಕೊಳ್ಳಲಿದೆ.
ಮಳೆಯಿಂದ ಅಭ್ಯಾಸ ರದ್ದು
ಮಳೆಯಿಂದಾಗಿ ಬೆಲ್‌ಫಾಸ್ಟ್‌ನ ಸಂಪೂರ್ಣ ಮೈದಾನವು ಒದ್ದೆಯಾಗಿದ್ದ ಕಾರಣ ಶನಿವಾರದ ತರಬೇತಿ ಶಿಬಿರವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕಾಯಿತು. ಇದೀಗ ಪಂದ್ಯದ ದಿನವೂ ಮಳೆಯಾಗುವ ಸೂಚನೆ ಇದೆ. ಇದು ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಇಂದು ನಡೆಯಬೇಕಿದ್ದ ಎರಡನೇ ಪಂದ್ಯವೂ ಮಳೆಯಿಂದಾಗಿ ರದ್ದಾದರೆ, ಭಾರತ ತಂಡವು ಐರ್ಲೆಂಡ್ ವಿರುದ್ಧ 0-1 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಐರ್ಲೆಂಡ್‌ನಂತಹ ಸಣ್ಣ ತಂಡದ ವಿರುದ್ಧ ಸರಣಿಯನ್ನು ಕಳೆದುಕೊಳ್ಳುವುದು ಭಾರತಕ್ಕೆ ಕ್ರಿಕೆಟ್ ಇತಿಹಾಸದಲ್ಲಿ ಅನಿರೀಕ್ಷಿತ ಮತ್ತು ದೊಡ್ಡ ಹೊಡೆತವಾಗುತ್ತದೆ.
Team India has arrived at the Belfast for the 2nd T20I vs Ireland 🌧️
– It was raining last night and this morning but now it’s clear 🔥 pic.twitter.com/MyWqrQyMKA
— CineSports (@SportsCraft381) June 28, 2026
ಹವಾಮಾನ ವರದಿ
ಹವಾಮಾನ ವರದಿಯ ಪ್ರಕಾರ, ಪಂದ್ಯ ದಿನದಂದು ಬೆಲ್‌ಫಾಸ್ಟ್‌ನಲ್ಲಿ ಭಾರಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಿದೆ. ಆದರೆ ಟಾಸ್ ನಡೆಯುವುದಕ್ಕೂ ಮುನ್ನವೇ ಮಳೆ ಬೀಳಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5.30 ಕ್ಕೆ ಟಾಸ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 70 ರಷ್ಟು ಇದೆ. ಅದಕ್ಕೂ ಒಂದು ಗಂಟೆ ಮೊದಲು ಮಳೆಯಾಗುವ ಸಾಧ್ಯತೆ ಶೇ. 50 ರಷ್ಟು ಇದೆ. ಟಾಸ್ ನಂತರ ಒಂದು ಗಂಟೆಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ.
ರಾತ್ರಿ 8:30 ರ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಪಂದ್ಯವನ್ನು ಕಡಿಮೆ ಓವರ್‌ಗಳಿಗೆ ಸೀಮಿತಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ ಪಂದ್ಯವು ಮಳೆಯಿಂದ ರದ್ದಾದರೆ, ಐರ್ಲೆಂಡ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:09 pm, Sun, 28 June 26
