IND vs PAK: ವಿಮಾನ, ಹೋಟೆಲ್‌ ರೂಂ ಬೆಲೆ ದುಪ್ಪಟ್ಟು; ಕೊಲಂಬೊದಲ್ಲಿ ಜನ ಜಾತ್ರೆ – Kannada News | T20 World Cup Hype: India Pak Clash Drives Sky High Ad Rates, Flights and Hotel Costs

ಫೆಬ್ರವರಿ 15 ರಂದು ನಡೆಯುಲಿರುವ ಟಿ20 ವಿಶ್ವಕಪ್‌ (T20 World Cup) ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಈ ದಿನದಂದು ಭಾರತ ಮತ್ತು ಪಾಕಿಸ್ತಾನ (India vs Pakist) ನಡುವೆ ರೋಮಾಂಚಕಾರಿ ಪಂದ್ಯ ನಡೆಯಲಿದೆ. ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡೂ ದೇಶಗಳ ಕ್ರಿಕೆಟ್​ ಅಭಿಮಾನಿಗಳು ಇಲ್ಲಿಗೆ ಆಗಮಿಸಿದ್ದಾರೆ. ಇವರ ಜೊತೆಗೆ ಶ್ರೀಲಂಕಾದ ನಾಗರಿಕರು ಸಹ ಈ ಪಂದ್ಯವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಕೊಲಂಬೊಗೆ ತೆರಳುತ್ತಿರುವ ವಿಮಾನಗಳ ಟಿಕೆಟ್​ ಬೆಲೆ ದುಪ್ಪಟ್ಟಾಗಿದೆ. ಇದರ ಜೊತೆಗೆ ಕೊಲಂಬೊದಲ್ಲಿರುವ ಹೋಟೆಲ್​ಗಳ ರೂಂಗಳ ಬೆಲೆಯೂ ಗಗನಕ್ಕೇರಿದೆ.

ಹಾಗೆಯೇ ಜಾಹೀರಾತು ದರಗಳು ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಜಾಹೀರಾತು ಸ್ಲಾಟ್‌ಗಳನ್ನು ಪಡೆಯಲು ಕಂಪನಿಗಳು ಭಾರಿ ಹಣವನ್ನು ಪಾವತಿಸುತ್ತಿವೆ. ವರದಿಯ ಪ್ರಕಾರ, ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ 10 ಸೆಕೆಂಡುಗಳ ಟಿವಿ ಜಾಹೀರಾತು ಸ್ಲಾಟ್‌ಗೆ 30 ರಿಂದ 40 ಲಕ್ಷ ರೂ.ಗಳ ದರವನ್ನು ವಿಧಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜಾಹೀರಾತು ಸ್ಲಾಟ್‌ಗಳ ಬೆಲೆ ಶೇಕಡಾ 20 ರಿಂದ 25 ರಷ್ಟು ಹೆಚ್ಚಾಗಿದೆ. ಬ್ರಾಡ್‌ಕಾಸ್ಟರ್ ಜಿಯೋಸ್ಟಾರ್ ಇಡೀ ಪಂದ್ಯಾವಳಿಯಲ್ಲಿ ಜಾಹೀರಾತುಗಳಿಂದಲೇ ಸುಮಾರು 2000 ಕೋಟಿ ರೂ.ಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ಜಾಹೀರಾತು ಸ್ಲಾಟ್ ಪಡೆಯಲು ಹೋರಾಟ

ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಜಾಹೀರಾತು ದರಗಳು ಏರಿಕೆಯಾಗುತ್ತಿವೆ. ಇಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 15 ರಿಂದ 20 ಲಕ್ಷ ರೂ.ಗಳನ್ನು ತಲುಪಿದೆ. ಆಟೋಮೊಬೈಲ್, ಎಫ್‌ಎನ್‌ಸಿಜಿ, ಹಣಕಾಸು, ವಿಮೆ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಟಿ20 ವಿಶ್ವಕಪ್‌ನಲ್ಲಿ ಜಾಹೀರಾತು ನೀಡುವ ಕಂಪನಿಗಳಲ್ಲಿ ಎಮಿರೇಟ್ಸ್, ಅಮುಲ್, ಓಪನ್ ಎಐ, ಹುಂಡೈ, ಮಹೀಂದ್ರಾ & ಮಹೀಂದ್ರಾ ಮತ್ತು ಬ್ರಿಟಾನಿಯಾ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳು ಸೇರಿವೆ.

ವಿಮಾನ ಟಿಕೆಟ್​ಗಳು ದುಬಾರಿ

ಭಾರತದಿಂದ ಕೊಲಂಬೊಗೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ EaseMyTrip ಪ್ರಕಾರ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ರೌಂಡ್ ಟ್ರಿಪ್ ವಿಮಾನ ದರಗಳು ಶೇಕಡಾ 45 ರಿಂದ 50 ರಷ್ಟು ಹೆಚ್ಚಾಗಿದೆ. ಫೆಬ್ರವರಿ 15 ರ ವಾರಾಂತ್ಯದ ಕೊಲಂಬೊಗೆ ಬುಕಿಂಗ್‌ಗಳು ಮೂರು ದಿನಗಳಲ್ಲಿ ದ್ವಿಗುಣಗೊಂಡಿವೆ ಎಂದು ಮೇಕ್‌ಮೈಟ್ರಿಪ್ ಸ್ಪಷ್ಟಪಡಿಸಿದೆ. ಕ್ಲಿಯರ್ ಟ್ರಿಪ್ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದಿಂದಾಗಿ ಕೊಲಂಬೊಗೆ ಬುಕಿಂಗ್‌ಗಳು ಶೇಕಡಾ 65 ರಷ್ಟು ಹೆಚ್ಚಾಗಿದೆ.

IND vs PAK: ಸೂಪರ್ ಸಂಡೇಯಂದು ಭಾರತ-ಪಾಕ್ ನಡುವೆ ಎರಡೆರಡು ಪಂದ್ಯ

ಹೋಟೆಲ್ ಬೆಲೆ ಗಗನಕ್ಕೇರಿದೆ

ಕೊಲಂಬೊದಲ್ಲಿ ಹೋಟೆಲ್ ರೂಮ್​ಗಳ ಬೆಲೆಗಳು ಕೂಡ ಗಗನಕ್ಕೇರಿವೆ. ನಗರದ ಮಧ್ಯಭಾಗದಲ್ಲಿರುವ ನಾಲ್ಕು ಮತ್ತು ಐದು ಸ್ಟಾರ್ ಹೋಟೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದರ ಜೊತೆಗೆ ಪ್ರೀಮಿಯಂ ಹೋಟೆಲ್ ಕೊಠಡಿಗಳ ದರವೂ ಶೇಕಡಾ 20 ರಿಂದ 25 ರಷ್ಟು ದುಬಾರಿಯಾಗಿವೆ. ಪಂದ್ಯದ ಕಾರಣದಿಂದಾಗಿ ಕೊಲಂಬೊದ ಎಲ್ಲಾ ಹೋಟೆಲ್‌ಗಳು ಹೌಸ್‌ಫುಲ್ ಆಗಿವೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:53 pm, Sat, 14 February 26

Source link

Leave a Reply

Your email address will not be published. Required fields are marked *