ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 288 ರನ್ ಕಲೆಹಾಕಿದೆ. ದಿನವಿಡೀ ಟೀಂ ಇಂಡಿಯಾ ಬ್ಯಾಟರ್ಗಳು ಶ್ರೀಲಂಕಾ (India vs Sri Lanka ) ಬೌಲರ್ಗಳನ್ನು ಕಾಡಿದರಾದರೂ ದಿನದಂತ್ಯಕ್ಕೆ 2 ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಒಂದು ವಿಕೆಟ್ ಅನ್ನು ಶ್ರೀಲಂಕಾ ಬೌಲರ್ಗಳು ಪಡೆದರು ಎನ್ನುವುದಕ್ಕಿಂತ ಟೀಂ ಇಂಡಿಯಾ ಬ್ಯಾಟರ್ಗಳು ಉಚಿತವಾಗಿ ನೀಡಿದರು ಎನ್ನಬಹುದು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ (KL Rahul) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ನಡುವಿನ ಸಂವಹನದ ಕೊರತೆಯಿಂದಾಗಿ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾಗಬೇಕಾಯಿತು.
5 ಬೌಂಡರಿಗಳ ಸಹಿತ 32 ರನ್
ಶ್ರೀಲಂಕಾ 11 ವಿರುದ್ಧದ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಫಾರ್ಮ್ಗೆ ಮರಳಿದ್ದ ಜೈಸ್ವಾಲ್ ಅದೇ ಫಾರ್ಮ್ ಅನ್ನು ಮೊದಲ ಟೆಸ್ಟ್ ಪಂದ್ಯದಲ್ಲೂ ಮುಂದುವರೆಸಿದರು. ಹೀಗಾಗಿ 37 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 32 ರನ್ ಬಾರಿಸಿದ್ದರು. ಆರಂಭದಲ್ಲೇ ಜೈಸ್ವಾಲ್ ಅಪಾಯಕಾರಿಯಾಗಿದ್ದು ಲಂಕಾ ತಂಡವನ್ನು ಚಿಂತೆಗೀಡುಮಾಡಿತ್ತು. ಆದರೆ ಪಂದ್ಯದ 11ನೇ ಓವರ್‌ನಲ್ಲಿ ನಡೆದ ಘಟನೆ ಲಂಕಾ ತಂಡವನ್ನು ನಿರಾಳಗೊಳಿಸಿತು.
ಜೈಸ್ವಾಲ್ಗೆ ಡಿಕ್ಕಿ ಹೊಡೆದ ಬೌಲರ್
ಭಾರತದ ಮೊದಲ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಪತನವಾಯಿತು. 11 ನೇ ಓವರ್‌ನಲ್ಲಿ, ಕೇಶರ ನುವಾಂತ ಅವರ ಬೌಲಿಂಗ್‌ನಲ್ಲಿ ಸ್ಟ್ರೈಕ್ನಲ್ಲಿದ್ದ ಕೆಎಲ್ ರಾಹುಲ್, ಮಿಡ್-ಆನ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಹೀಗಾಗಿ ಆ ಚೆಂಡನ್ನು ಬೌಲರ್ ಕೇಶರ ನುವಾಂತ ಅವರೇ ಹಿಡಿಯಲು ಮುಂದಾದರು. ಈ ಪ್ರಯತ್ನದಲ್ಲಿ, ನಾನ್-ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದ ಯಶಸ್ವಿಗೆ ನುವಾಂತ ಡಿಕ್ಕಿ ಹೊಡೆದರು.
ನುವಾಂತ ಡಿಕ್ಕಿ ಹೊಡೆದಿದ್ದರಿಂದ ರನ್ಗಾಗಿ ಓಡಲು ಯತ್ನಿಸುತ್ತಿದ್ದ ಯಶಸ್ವಿಗೆ ಓಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ರನ್ಗಾಗಿ ಓಡಲಾರಂಭಿಸಿದರು. ಆದರೆ ಜೈಸ್ವಾಲ್ ಸ್ಟ್ರೈಕರ್ ತುದಿಗೆ ಓಡುವ ಬದಲು ಮತ್ತೆ ನಾನ್-ಸ್ಟ್ರೈಕರ್ ತುದಿಗೆ ಹಿಂತಿರುಗಿದರು. ಏತನ್ಮಧ್ಯೆ, ಕೆಎಲ್ ರಾಹುಲ್ ಕೂಡ ನಾನ್-ಸ್ಟ್ರೈಕರ್ ತುದಿಗೆ ಓಡಿ ಬಂದರು. ಈ ನಡುವೆ ಪ್ರಭಾತ್ ಜಯಸೂರ್ಯ ಚೆಂಡನ್ನು ಫೀಲ್ಡಿಂಗ್ ಮಾಡಿ ವಿಕೆಟ್ ಕೀಪರ್ ಡಿಕ್ವೆಲ್ಲಾಗೆ ಪಾಸ್ ಮಾಡಿದರು. ಚೆಂಡನ್ನು ಹಿಡಿದ ವಿಕೆಟ್ ಕೀಪರ್ ಬೇಲ್ಸ್ ಎಗರಿಸಿದರು.
IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ
ಬೇಸರದಿಂದಲೇ ಹೆಜ್ಜೆಹಾಕಿದ ಜೈಸ್ವಾಲ್
ಹೀಗಾಗಿ ಜೈಸ್ವಾಲ್ ತನ್ನದಲ್ಲದ ತಪ್ಪಿಗೆ ರನ್ ಔಟ್ಗೆ ಬಲಿಯಾಗಬೇಕಾಯಿತು. ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್ ಭಾರವಾದ ಹೃದಯದಿಂದ ಕ್ರೀಸ್‌ನಿಂದ ಹೊರಹೋಗಬೇಕಾಯಿತು. ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುತ್ತಿದ್ದ ರೀತಿ ನೋಡಿದರೆ, ಅವರು ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕ ದಾಖಲಿಸುವ ಸಾಧ್ಯತೆಗಳಿದ್ದವು. ಆದರೆ ಅದು ಈ ದುರಾದೃಷ್ಟಕರ ರನೌಟ್ನಿಂದ ನೆರವೇರಲಿಲ್ಲ.
