ಭಾರತ ಹಾಗೂ ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಆದರೆ ಮಳೆಯಿಂದಾಗಿ ಎರಡನೇ ದಿನದಾಟದ ಮೊದಲ ಸೆಷನ್ ನಡೆಯಲಿಲ್ಲ. ಆದಾಗ್ಯೂ ಎರಡನೇ ಸೆಷನ್ ಶುರುವಾಗಿದ್ದು, ಪಡಿಕ್ಕಲ್ ಹಾಗೂ ಪಂತ್ ಬ್ಯಾಟಿಂಗ್ ಮುಂದುವರೆಸಿದ್ದಾರೆ(PC-PTI).
ಮೊದಲ ದಿನದಾಟದ ಅಂತ್ಯಕ್ಕೆ ದೇವದತ್ ಪಡಿಕ್ಕಲ್ 131 ರನ್ ಮತ್ತು ರಿಷಭ್ ಪಂತ್ 27 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯದ ಮೊದಲ ದಿನದಂದು ಪಂತ್ 36 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಈ ಒಂದೇ ಸಿಕ್ಸರ್ನೊಂದಿಗೆ, ಪಂತ್ ಜಾಕ್ವೆಸ್ ಕಾಲಿಸ್ ಅವರ ದಾಖಲೆಯನ್ನು ಮುರಿದು ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ಅವರ ದಾಖಲೆಗಳನ್ನು ಸಹ ಸರಿಗಟ್ಟಿದರು(PC-PTI).
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಂದು ಪಂತ್ ಏಕೈಕ ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದರು. ಜಾಕ್ವೆಸ್ ತಮ್ಮ ವೃತ್ತಿಜೀವನದಲ್ಲಿ 166 ಟೆಸ್ಟ್ ಪಂದ್ಯಗಳಲ್ಲಿ 97 ಸಿಕ್ಸರ್ಗಳನ್ನು ಬಾರಿಸಿದ್ದರೆ, ಪಂತ್ ಈಗ 51 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 98 ಸಿಕ್ಸರ್ಗಳನ್ನು ಬಾರಿಸಿದ್ದಾರೆ(PC-PTI).
ಇದರೊಂದಿಗೆ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಕ್ಕೇರಿದ್ದಾರೆ. ಆದಾಗ್ಯೂ, ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ತಲಾ 98 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಪಂತ್ಗೆ ಈಗ ಗೇಲ್ ಮತ್ತು ಸೌಥಿಯನ್ನು ಮೀರಿಸಲು ಉತ್ತಮ ಅವಕಾಶವಿದೆ(PC-PTI).
ರಿಷಭ್ ಪಂತ್ ಎರಡನೇ ದಿನದಂದು ಎರಡು ಸಿಕ್ಸರ್ಗಳನ್ನು ಬಾರಿಸಿದರೆ, ಅವರು ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಆಗುತ್ತಾರೆ. ಇದರೊಂದಿಗೆ ಆಡಮ್ ಗಿಲ್ಕ್ರಿಸ್ಟ್, ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮೂವರು ಟೆಸ್ಟ್ ಕ್ರಿಕೆಟ್ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳಾಗಿದ್ದಾರೆ(PC-PTI).
ಪಂತ್ 100 ಸಿಕ್ಸರ್ಗಳ ಗಡಿ ದಾಟಿದರೆ, ಟೆಸ್ಟ್ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಇಷ್ಟೆ ಅಲ್ಲದೆ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯನ್ನು ಮುರಿಯುವ ಅವಕಾಶವನ್ನೂ ಹೊಂದಿದ್ದಾರೆ. ಇದೇ ಲಯದಲ್ಲಿ ಮುಂದುವರೆದರೆ ಪಂತ್ ಭವಿಷ್ಯದಲ್ಲಿ ಆ ದಾಖಲೆಯನ್ನು ಮುರಿಯಬಹುದು(PC-PTI).





