IND vs SL: ಟೀಂ ಇಂಡಿಯಾಕ್ಕೆ 45 ಓವರ್‌ಗಳಲ್ಲಿ 207 ರನ್ ಗುರಿ – Kannada News | India vs SL XI Practice Match Day 3: Sri Lanka Sets 207 Target; Madushka Shines

ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ ಪೂರ್ಣ 45 ಓವರ್​ ಬ್ಯಾಟಿಂಗ್‌ ಮಾಡಿ 200 ರನ್ ಕಲೆಹಾಕಿದೆ. ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಪಡೆದುಕೊಂಡಿದ್ದ ಶ್ರೀಲಂಕಾ ಭಾರತದ ಗೆಲುವಿಗೆ 207 ರನ್​ಗಳ ಗುರಿ ನೀಡಿದೆ. ಉಳಿದಿರುವ 45 ಓವರ್​ಗಳಲ್ಲಿ ಭಾರತ ತಂಡ ಈ ಗುರಿಯನ್ನು ಬೆನ್ನಟ್ಟಬೇಕಿದೆ. ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ ಪರ ಆರಂಭಿಕ ನಿಶಾನ್ ಮಧುಷ್ಕ ಅತ್ಯಧಿಕ 63 ರನ್​ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಗುರ್ನೂರ್ ಬ್ರಾರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.

Source link

Leave a Reply

Your email address will not be published. Required fields are marked *