ಭಾರತ ಹಾಗೂ ಶ್ರೀಲಂಕಾ ನಡುವೆ ಆಗಸ್ಟ್ 15 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಈ ಸರಣಿಗಾಗಿ ಶ್ರೀಲಂಕಾ ಆತಿಥ್ಯವಹಿಸುತ್ತಿದೆ. ಡಬ್ಲ್ಯೂಟಿಸಿ ಫೈನಲ್ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಉಭಯ ತಂಡಗಳಲ್ಲೂ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ(PC-PTI).
ಶ್ರೀಲಂಕಾಕ್ಕೆ ಹೊಲಿಸಿದರೆ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಟೀಂ ಇಂಡಿಯಾದ ಜೊತೆಗೆ ಶ್ರೀಲಂಕಾ ಕೂಡ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ಕುಸಲ್ ಮೆಂಡಿಸ್ ಮೊದಲ ಟೆಸ್ಟ್ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ(PC-PTI).
ಲಂಕಾ ತಂಡದ ಅನುಭವಿ ಬ್ಯಾಟ್ಸ್ಮನ್ ಕುಸಲ್ ಮೆಂಡಿಸ್ ಅವರ ಫಿಟ್ನೆಸ್ ತಂಡವನ್ನು ಚಿಂತೆಗೀಡುಮಾಡಿದೆ. ಪ್ರಸ್ತುತ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಕುಸಲ್ ಮೆಂಡಿಸ್, ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ಇನ್ನೂ ಚೇತರಿಸಿಕೊಂಡಿಲ್ಲ. ವರದಿ ಪ್ರಕಾರ, ಮೆಂಡಿಸ್ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಸಮಯಬೇಕಾಗುತ್ತದೆ ಎಂದು ವರದಿಯಾಗಿದೆ(PC-PTI).
ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ವಾರಕ್ಕಿಂತ ಹೆಚ್ಚು ಸಮಯವಿದ್ದರೂ, ಮೆಂಡಿಸ್ ಮೊದಲ ಟೆಸ್ಟ್ಗೆ ಫಿಟ್ ಆಗುವ ಸಾಧ್ಯತೆಯಿಲ್ಲ. ಪರಿಣಾಮವಾಗಿ, ಗಾಲೆ ಟೆಸ್ಟ್ನಿಂದ ಅವರನ್ನು ಹೊರಗಿಡುವುದು ಬಹುತೇಕ ಖಚಿತವಾಗಿದೆ. ಔಪಚಾರಿಕ ಘೋಷಣೆ ಬಾಕಿ ಇದೆ. ಆಗಸ್ಟ್ 23 ರಿಂದ ಕೊಲಂಬೊದಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ಗೆ ಮೆಂಡಿಸ್ ಫಿಟ್ ಆಗುವ ನಿರೀಕ್ಷೆಯಿದೆ(PC-PTI).
31 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕುಶಾಲ್ ಮೆಂಡಿಸ್ ಅವರ ಗಾಯವು ಶ್ರೀಲಂಕಾಕ್ಕೆ ದೊಡ್ಡ ಹೊಡೆತವಾಗಿದೆ. ಮೆಂಡಿಸ್ ಶ್ರೀಲಂಕಾ ಪರ 75 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 36 ಸರಾಸರಿಯಲ್ಲಿ 4836 ರನ್ ಗಳಿಸಿದ್ದಾರೆ ಮತ್ತು 10 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ನಾಲ್ಕು ಶತಕಗಳನ್ನು ಮೊದಲ ಟೆಸ್ಟ್ ನಡೆಯಲಿರುವ ಗಾಲೆಯಲ್ಲಿ ಬಾರಿಸಿದ್ದಾರೆ. ಹೀಗಾಗಿ ಈ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೆಂಡಿಸ್ ಅವರ ಅನುಪಸ್ಥಿತಿಯು ಶ್ರೀಲಂಕಾಕ್ಕೆ ಹಿನ್ನಡೆಯಾಗಿದೆ(PC-PTI).
