IND vs ZIM: ಜಿಂಬಾಬ್ವೆ ವಿರುದ್ಧ ಸತತ 2ನೇ ಪಂದ್ಯದಲ್ಲೂ ಮುಗ್ಗರಿಸಿದ ಅಭಿಷೇಕ್ – Kannada News | Abhishek Sharma’s Poor Form Continues in IND vs ZIM 2nd T20

ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ಜುಲೈ 25 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡಕ್ಕೆ ಮತ್ತೊಮ್ಮೆ ಕಳಪೆ ಆರಂಭ ಸಿಕ್ಕಿದೆ(PC-PTI).

ಟೀಂ ಇಂಡಿಯಾ ಪರ ಎಂದಿನಂತೆ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದರು. ಅದರಂತೆ ಮೊದಲ ಓವರ್​ನಲ್ಲಿ ಅಭಿಷೇಕ್ ಶರ್ಮಾ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ಎರಡನೇ ಓವರ್​ನಲ್ಲೇ ಅಭಿಷೇಕ್ ಅವರ ಇನ್ನಿಂಗ್ಸ್ ಅಂತ್ಯವಾಯಿತು(PC-PTI).

ಬ್ಲೆಸ್ಸಿಂಗ್ ಮುಜರಬಾನಿ ಬೌಲ್ ಮಾಡಿದ ಎರಡನೇ ಓವರ್​ನ ಐದನೇ ಎಸೆತದಲ್ಲಿ ಅಭಿಷೇಕ್ ಪಾಯಿಂಟ್​ನಲ್ಲಿ ನಿಂತಿದ್ದ ಫಿಲ್ಡರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರೊಂದಿಗೆ ಅಭಿಷೇಕ್ ಅವರ ಕಳಪೆ ಫಾರ್ಮ್ ಜಿಂಬಾಬ್ವೆ ವಿರುದ್ಧವೂ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಕೇವಲ 1 ರನ್​ಗೆ ಔಟಾಗಿದ್ದ ಅಭಿಷೇಕ್ 2ನೇ ಪಂದ್ಯದಲ್ಲಿ 8 ರನ್​ಗಳಿಗೆ ಸುಸ್ತಾದರು(PC-PTI).

ಕೊನೆಯ ಐದು ಇನ್ನಿಂಗ್ಸ್​ಗಳಲ್ಲಿ ಅಭಿಷೇಕ್ ಅವರ ಬ್ಯಾಟ್​ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್​ನಲ್ಲಿ ನಡೆದ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಅಭಿಷೇಕ್ ಅವರ ಪ್ರದರ್ಶನ ಕಳಪೆಯಾಗಿತ್ತು. ಅಭಿಷೇಕ್ ಅವರ ಕಳೆದ ಐದು ಇನ್ನಿಂಗ್ಸ್​ಗಳ ಪ್ರದರ್ಶನವನ್ನು ನೋಡುವುದಾದರೆ.. ಕ್ರಮವಾಗಿ 8,1,3,16,10 ರನ್​ಗಳನ್ನು ಕಲೆಹಾಕಿದ್ದಾರೆ(PC-PTI).

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ 59 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಅವರ ಬ್ಯಾಟ್​ ಮೌನಕ್ಕೆ ಶರಣಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಅಭಿಷೇಕ್​ ಅವರನ್ನು ಮೂರನೇ ಪಂದ್ಯದಿಂದ ಹೊರಗಿಡುವ ಸಾಧ್ಯತೆಗಳಿದ್ದು ಅವರ ಬದಲಿಗೆ ಪ್ರಭ್​ಸಿಮ್ರಾನ್​ಗೆ ಅವಕಾಶ ನೀಡಬಹುದು(PC-PTI).

Published On – 4:55 pm, Sat, 25 July 26

Source link

Leave a Reply

Your email address will not be published. Required fields are marked *