IND vs ZIM ಪಂದ್ಯ ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ – Kannada News | India vs Zimbabwe T20I Series 2026: Schedule, Live Streaming details

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ನಾಳೆಯಿಂದ (ಜು.23) ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಸರಣಿಯ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಸೋತಿರುವ ಟೀಮ್ ಇಂಡಿಯಾ ಇದೀಗ ಒಂದು ಗೆಲುವನ್ನು ಎದುರು ನೋಡುತ್ತಿದೆ. ಅದರಲ್ಲೂ ಶ್ರೇಯಸ್ ಅಯ್ಯರ್ ನಾಯಕನಾದ ಬಳಿಕ ಭಾರತ ತಂಡ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಸರಣಿಯು ಅಯ್ಯರ್ ಪಾಲಿಗೆ ಅಗ್ನಿಪರೀಕ್ಷೆ ಎಂದೇ ಹೇಳಬಹುದು.

ಗುರುವಾರದಿಂದ ಆರಂಭವಾಗಲಿರುವ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ, ಸಮಯ ಮತ್ತು ನೇರಪ್ರಸಾರದ ವಿವರಗಳು ಈ ಕೆಳಗಿನಂತಿದೆ.

ಭಾರತ vs ಝಿಂಬಾಬ್ವೆ ಟಿ20 ಸರಣಿ ವೇಳಾಪಟ್ಟಿ:

  • ಜುಲೈ 23, 2026 (ಗುರುವಾರ): 1ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 25, 2026 (ಶನಿವಾರ): 2ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
  • ಜುಲೈ 26, 2026 (ಭಾನುವಾರ): 3ನೇ ಟಿ20 ಪಂದ್ಯ – ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30 ಕ್ಕೆ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಝಿಂಬಾಬ್ವೆ ಮತ್ತು ಭಾರತ ನಡುವಣ ಟಿ20 ಸರಣಿಯ ನೇರಪ್ರಸಾರವನ್ನು ಯುನೈಟೆಡ್​ ಸ್ಪೋರ್ಟ್ಸ್​ (Zee Entertainment)  ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.

ಇನ್ನು ಈ ಪಂದ್ಯದ  ಲೈವ್ ಸ್ಟ್ರೀಮಿಂಗ್ (ಮೊಬೈಲ್/ಲ್ಯಾಪ್‌ಟಾಪ್) ಅನ್ನು ಫ್ಯಾನ್​ಕೋಡ್ ಆ್ಯಪ್​ ಅಥವಾ ವೆಬ್‌ಸೈಟ್ ಮೂಲಕ ವೀಕ್ಷಿಸಬಹುದಾಗಿದೆ.

ಉಭಯ ತಂಡಗಳ ನಾಯಕರುಗಳು ಯಾರು?

  • ಝಿಂಬಾಬ್ವೆ: ಸಿಕಂದರ್ ರಾಝ
  • ಭಾರತ: ಶ್ರೇಯಸ್ ಅಯ್ಯರ್.

ಭಾರತ ಮತ್ತು ಝಿಂಬಾಬ್ವೆ ತಂಡಗಳು ಹೀಗಿವೆ:

ಝಿಂಬಾಬ್ವೆ ಟಿ20 ತಂಡ: ಸಿಕಂದರ್ ರಾಝ, ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ತನಕಾ ಚಿವಂಗಾ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಝರಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗಾರವಾ, ನ್ಯೂಮನ್ ನ್ಯಾಮೂರಿ, ಮಿಲ್ಟನ್ ಶುಂಬಾ, ತಫಾಡ್ಜ್ವಾ ತ್ಸೀಗಾ.

ಇದನ್ನೂ ಓದಿ: ‘ಸನ್​ರೈಸರ್ಸ್’ ಪರ ಕಣಕ್ಕಿಳಿದ ಪಾಕಿಸ್ತಾನ್ ಆಟಗಾರ..!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ , ಇಶಾನ್ ಕಿಶನ್ (ವಿಕೆಟ್ ಕೀಪರ್), ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಮಯಾಂಕ್ ಯಾದವ್.

Source link

Leave a Reply

Your email address will not be published. Required fields are marked *